सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಹಕ್ಕಿ ಹಾರಲಿ ಮೇಲೆ ಮೇಲಕ್ಕೆ ಏರಲಿ

ದಕ್ಷಿಣ

parivartan-img

ಬೇರೆಯವರನ್ನು ಬಿಡಿ, ಸ್ವತಃ ರೂಪಾಳಿಗೇ ನಂಬಲಾಗುತ್ತಿಲ್ಲ. ಅತ್ಯುತ್ತಮ ಐಟಿ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ಅವಳಿಗೆ ಅಪಾಯಿಂಟ್ಮೆಂಟ್ ಲೆಟರ್ ಕಳಿಸಿತ್ತು,

ತಾಯಿಯಿಲ್ಲದೇ ಬೆಳೆದ ರೂಪಾಳಿಗೆ ಇದು ಕನಸೋ-ನನಸೋ ತಿಳಿಯದಾಗಿತ್ತು. ತೆಲಂಗಾಣದ ವಾರಂಗಲ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯ ಈ ಹುಡುಗಿ, ಇಂದು ತನ್ನ ಹಳ್ಳಿಯಲ್ಲಿನ ಎಷ್ಟೋ ಹುಡುಗಿಯರಿಗೆ ಮೇಲ್ಪಂಕ್ತಿಯಾಗಿದ್ದಾಳೆ. ಸಮೀಪದ ಇಲೈಂದ ಹಳ್ಳಿಯ ವೂಲ್ಲಮ್ಮಾ ಸಹ ಎಂಜಿನಿಯರಿಂಗ್ ನಂತರ ಉತ್ತಮ ಉದ್ಯೋಗದಲ್ಲಿ ತೊಡಗಿದ್ದಾಳೆ.


ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಅವಶ್ಯಕತೆಯೇ ಇಲ್ಲವೆಂದು ಪರಿಗಣಿಸಲಾಗಿದ್ದ ಮತ್ತು ಶಿಕ್ಷಣದ ಕನಸು ಕೂಡಾ ಕಾಣಲು ಸಾಧ್ಯವಾಗದಂತಹ ತೆಲಂಗಾಣದ ವಾರಂಗಲ್ ಮತ್ತು ಮೆಹಬೂಬ್ ಜಿಲ್ಲೆಯ ಹಳ್ಳಿಗಳ ಆಶಯಗಳನ್ನೆಲ್ಲಾ ಈಡೇರಿಸಿದ್ದು, ಈ ವಂದೇ ಮಾತರಂ ಪ್ರತಿಷ್ಠಾನ. ಅಲ್ಲಿನ ಹೆಣ್ಣು ಮಕ್ಕಳೆಲ್ಲ ಓದಿ, ಉತ್ತಮ ಸ್ಥಾನಕ್ಕೇರಿದರು. ಇವರೆಲ್ಲರ ಈ ಸಾಧನೆಯ ಕನಸಿಗೆ ರೆಕ್ಕೆ ಕಟ್ಟಿದವರು ಸಂಘದ ಸ್ವಯಂಸೇವಕರಾದ ಕೆ. ರವೀಂದ್ರರಾವ್ ಹಾಗೂ ಅವರ ಸಹಚರರು.




ವಿದ್ಯಾಭ್ಯಾಸಕ್ಕಾಗಿ ತಮ್ಮ ಹೆಣ್ಣು ಮಕ್ಕಳನ್ನು ಹಳ್ಳಿಯಿಂದ ಹೊರಗೆ ಕಳಿಸುವಂತೆ ಅವರ ಷೋಷಕರ ಮನ ಒಲಿಸುವುದೇ ಫೌಂಡೇಶನ್ನಿನ ಕಾರ್ಯಕರ್ತರಿಗೆ ಎದುರಾದ ಅತಿ ದೊಡ್ಡ ಸವಾಲಾಗಿತ್ತು. ಹಲವು ವರ್ಷಗಳಿಂದ ಈ ಫೌಂಡೇಶನ್ನಿನೊಂದಿಗೆ ಸಂಪರ್ಕದಲ್ಲಿರುವ ಮಾಧವ ರೆಡ್ಡಿ ಹೇಳುವಂತೆ-ಪ್ರಾರಂಭದಲ್ಲಿ ಮಕ್ಕಳ ತಾಯ್ತಂದೆಯರು ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಹಳ್ಳಿಯಿಂದ ಹೊರಗೆ ಕಳಿಸಲು ಸುತಾರಾಂ ತಯಾರಿರಲಿಲ್ಲ. ಆದರೆ, ಹೇಗೋ ಕೆಲವರ ಮನವೊಲಿಸುವಲ್ಲಿ ಯಶಸ್ವಿಯಾದ ನಂತರ ಇದೇ ವಾಡಿಕೆಯಾಯಿತು.

ಶೈಕ್ಷಣಿಕವಾಗಿ ಹಿಂದುಳಿದ ಈ ಪ್ರದೇಶದಲ್ಲಿ, ವಂದೇಮಾತರಂ ಫೌಂಡೇಶನ್ನಿನ ಪರಿಶ್ರಮದ ಫಲವಾಗಿ ಇಂದು 398 ಯುವತಿಯರು ಎಂಜಿನಿಯರಿಂಗ್ ಮುಗಿಸಿದ್ದಾರೆ. ಎಲ್ಲಿ ಕೇವಲ 12% ಬಾಲಕಿಯರು ಮಾತ್ರ ಕಾಲೇಜು ತಲುಪಲು ಸಾಧ್ಯವಾಗಿತ್ತೋ, ಅಲ್ಲಿ ಇಂದು ಆ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಈವರೆಗೆ 1600 ಹೆಣ್ಣು ಮಕ್ಕಳು ಈ ಫೌಂಡೇಶನ್ನಿನ ದೆಸೆಯಿಂದ ಪದವಿ ಕೂಡ ಪೂರ್ಣಗೊಳಿಸಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಭಾಸ್ಕರ್ ರೆಡ್ಡಿ ಅವರ ಪ್ರಕಾರ, ಸ್ವಯಂಸೇವಕರು ಗ್ರಾಮೀಣ ಪ್ರದೇಶಗಳಿಗೆ ಹೋಗಿ

"ಶಿಕ್ಷಣ ಮುಗಿಯುವವರೆಗೂ ಮಗಳ ಮದುವೆ ಮಾಡುವುದಿಲ್ಲ" ಎಂದು ಬಾಲಕಿಯರ ಪೋಷಕರಿಂದ ಪ್ರತಿಜ್ಞೆ ಮಾಡಿಸುತ್ತಾರೆ. ಇಷ್ಟೇ ಅಲ್ಲ, ಆ ಹುಡುಗಿಯರ ಕಾಲೇಜು ಶುಲ್ಕದಿಂದ ಹಿಡಿದು ಅವರ ಸಾರಿಗೆ ವೆಚ್ಚದವರೆಗೆ ಎಲ್ಲವನ್ನೂ ಫೌಂಡೇಶನ್ನೇ ಭರಿಸುತ್ತದೆ.

ಮೂರು ತಿಂಗಳಿಗೊಮ್ಮೆ ವಿಶೇಷ ಕಾರ್ಯಾಗಾರವನ್ನು ಆಯೋಜಿಸಿ, ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆಗಳ ಬಗ್ಗೆ ನಿಖರ ಮಾಹಿತಿಯ ಜೊತೆಗೆ ಪ್ರಚಲಿತ ವಿದ್ಯಮಾನಗಳ ತಿಳುವಳಿಕೆಯನ್ನೂ ನೀಡಲಾಗುತ್ತದೆ.


ಹಳ್ಳಿಯ ಮಕ್ಕಳು ನಗರದ ಮಕ್ಕಳೊಂದಿಗೆ ಸ್ಪರ್ಧಿಸಲು ಶಕ್ತವಾಗುವಂತೆ ಮಾಡುವ ಸಲುವಾಗಿ ವರ್ಷಕ್ಕೊಮ್ಮೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 45 ದಿನಗಳ ಶಿಬಿರವನ್ನು ಆಯೋಜಿಸಲಾಗುತ್ತದೆ.

ಪ್ರತಿದಿನ ಬೆಳಿಗ್ಗೆ 4:30ಕ್ಕೆ ಆರಂಭವಾಗುವ ಈ ಶಿಬಿರದಲ್ಲಿ ಆಯಾ ವಿಷಯಗಳ ತಜ್ಞರು ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸುತ್ತಾರೆ.


ಬಾಲಕಿಯರ ಶಿಕ್ಷಣ ಕ್ಷೇತ್ರದಲ್ಲಿ, ವಂದೇಮಾತರಂ ಪ್ರತಿಷ್ಠಾನದ ಈ ಕಾರ್ಯವೀಗ ತೆಲಂಗಾಣದ ತುಂಬೆಲ್ಲ ಹಬ್ಬುತ್ತ ಒಂದು ಚಳವಳಿಯ ರೂಪವನ್ನು ಪಡೆಯುತ್ತಿದೆ. ಸಂಸ್ಥೆಯಿಂದ ಶಿಕ್ಷಣ ಪಡೆದ ವಿದ್ಯಾವಂತ ಬಾಲಕಿಯರು ತಮ್ಮ ಗ್ರಾಮಗಳಲ್ಲಿ ಶಾರದಾ ಸಂಸ್ಕಾರ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಸ್ತ್ರೀ ಭ್ರೂಣ ಹತ್ಯೆ, ಬಾಲ್ಯವಿವಾಹ, ಸ್ತ್ರೀ ಆರೋಗ್ಯ ಮತ್ತು ಶಿಕ್ಷಣದಂತಹ ವಿಷಯಗಳ ಬಗ್ಗೆ ಇತರರಿಗೂ ಅರಿವು ಮೂಡಿಸುತ್ತಿದ್ದಾರೆ.

919 Views
अगली कहानी