सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

ಹೊಸ ಭರವಸೆಗಳು - ಹೊಸ ಬೆಳಕು, ಕಿಶೋರಿ ವಿಕಾಸ ಕೇಂದ್ರ

ತೆಲಂಗಾಣ

parivartan-img

ಬೆಂಚಿನ ಮೇಲೆ ಹೆದರಿ ಭಯಭೀತಳಾಗಿ ಮುದುಡಿಕೊಂಡು ಕುಳಿತಿದ್ದ 15 ವರ್ಷದ ಒಬ್ಬ ಹುಡುಗಿ ಒಮ್ಮೆ ಹೆದರಿ ತನ್ನ ತಾಯಿಯ ಸೆರಗಿನಲ್ಲಿ ಅವಿತುಕೊಳ್ಳುತ್ತಿದ್ದರೆ ಮತ್ತೊಮ್ಮೆ ಬಿಕ್ಕಿ ಬಿಕ್ಕಿ ಅಳುತಿದ್ದಳು, ಆ ತಾಯಿಯ ಪರಿಸ್ಥಿತಿ ಇನ್ನೂ ಕೆಟ್ಟದಾಗಿತ್ತು, ಅವಳ ಕಣ್ಣುಗಳಲ್ಲಿ ಒಂದು ಅಸಹನೀಯವಾದ ವೇದನೆಯಿತ್ತು, ಅವಳ ಸರ್ವಸ್ವವೂ ಸೂರೆಗೊಂಡಿರುವ ಒಂದು ಭಾವ ಅವಳಲ್ಲಿ... ಹೈದರಾಬಾದಿನ  ಜನನಿಬಿಡ ರೈಲ್ವೆ ನಿಲ್ದಾಣಗಳಲ್ಲಿ ಒಂದಾದ ಅಮೀರ್ ಪೇಟ್ ರೈಲ್ವೆ ನಿಲ್ದಾಣದಲ್ಲಿ, ಇತರರೆಲ್ಲರೂ ತಮ್ಮ ತಮ್ಮ ಕೆಲಸದ ಒತ್ತಡಗಳನ್ನು ಹೊತ್ತುಕೊಂಡು ಇದೆಲ್ಲವನ್ನು ನೋಡಿಯೂ ನೋಡದಂತೆ  ಮುಂದೆ ಸಾಗುತ್ತಿದ್ದಾಗಒಬ್ಬ ಸುಶಿಕ್ಷಿತ ಮಹಿಳೆಗೆ ಇವಳ ವೇದನೆಯು  ಅರ್ಥವಾಯಿತು. ಆ ಮಹಿಳೆಯೇ ತೆಲಂಗಾಣದ ಸೇವಾಭಾರತಿಯ ಪ್ರಾಂತ  ಸಚಿವೆ ಜಯಪ್ರದ ಅಕ್ಕತಾಯಿ-ಮಗಳ ಬಾಯಿಂದ ಆ ಭಯಾನಕ ಅತ್ಯಾಚಾರದ ಬಗ್ಗೆ ಕೇಳಿದಾಗಲಂತೂ  ಆಕೆಯ ಕಿವಿಗಳಲ್ಲಿ ಕಾದ ಸೀಸವನ್ನು ಸುರಿದಂತಾಯಿತು. ಆ ಬಾಲಕಿಯನ್ನು ಒಬ್ಬ ಆಟೋ ಚಾಲಕ ಬಲವಂತವಾಗಿ ಎತ್ತಿಕೊಂಡು ಹೋಗಿದ್ದ.. ಮತ್ತು 2 ದಿನಗಳ ನಂತರ ಇಲ್ಲಿ ಬಿಟ್ಟು ಹೋಗಿದ್ದ.


ಇವರಿಗೆ ಹೇಗೆ ಸಹಾಯ ಮಾಡಲಿ? ಈ ಪ್ರಶ್ನೆಯ ಉತ್ತರವಾಗಿ ಜಯಪ್ರದಾ ಅಕ್ಕಾರ ಕಾಲುಗಳು ಅಪ್ರಯತ್ನವಾಗಿ ಸಂಘದ ಕಾರ್ಯಾಲಯದ ಕಡೆಗೆ ನಡೆದವು. ಸವಾಲು ಈ ಹುಡುಗಿಯದೊಂದೆ ಆಗಿರಲಿಲ್ಲ, ಕೊಳಗೇರಿಯಲ್ಲಿ ವಾಸಿಸುವ ಸಾವಿರಾರು ಹುಡುಗಿಯರದೂ ಆಗಿತ್ತು. ಅವರಿಗೆ ಶಿಕ್ಷಣ, ಬೆಳವಣಿಗೆಗಳ ಜೊತೆಜೊತೆಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಶಿಕ್ಷಣವೂ ಕೂಡ  ಮುಖ್ಯವಾಗಿತ್ತು. ಆಗ ಅಂದಿನ ಕಾರ್ಯಕರ್ತರು ಸೇವಾ ಬಸತಿಗಳಲ್ಲಿನ ಕಿಶೋರಿಯರ ಸಮಗ್ರ ವಿಕಾಸಕ್ಕಾಗಿ ಒಂದು ಹೊಸ ಆಯಾಮವನ್ನು ಪ್ರಾರಂಭಿಸುವ ಯೋಜನೆಯನ್ನು ಮಾಡಿದರು, ಅಂದಿನ ಕ್ಷೇತ್ರ ಸೇವಾ ಪ್ರಮುಖರಾಗಿದ್ದ ಪಟೋಲಾ ರಾಮರೆಡ್ಡಿ ಜೀ ಮತ್ತು ಪ್ರಾಂತ ಸಂಘಚಾಲಕರಗಿದ್ದ ದೇಶಮುಖ್ ಜೀ  ಈ ವಿಷಯದ ಗಂಭೀರತೆಯನ್ನು ಪರಿಗಣಿಸಿ, ಎಡೆಬಿಡದೆ ಪ್ರತಿ ವಾರವೂ ಬೈಠಕಗಳನ್ನು ನಡೆಸಿ ಕಿಶೋರಿ ವಿಕಾಸ ಕೇಂದ್ರದ ರೂಪರೇಷೆಯನ್ನು ರಚಿಸಿದರು .   

      

ಇದಕ್ಕೋಸ್ಕರ ಯಾವ ಸ್ಥಳಗಳಲ್ಲಿ ಬಾಲಕರ ಸಂಸ್ಕಾರ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದವೋ, ಅಲ್ಲಿ ಕಿಶೋರಿ ವಿಕಾಸ ಕೇಂದ್ರವನ್ನು ಪ್ರತಿದಿನವೂ ನಡೆಸುವ ನಿರ್ಣಯವನ್ನು ಕೈಗೊಳ್ಳಲಾಯಿತು. ಇದರ ಪರಿಣಾಮವಾಗಿ ಒಂದು ಹೊಸ ಸೇವಾಯಾತ್ರೆಯ  ಜನ್ಮವಾಯಿತು. ಈ ಯಾತ್ರೆಯಲ್ಲಿ ಹಣದ ಕೊರತೆಯಾಗದಂತೆ ನೋಡಿಕೊಳ್ಳಲು ಕಳೆದ 10 ವರ್ಷಗಳಿಂದ ಇದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದೇಹಿ ಚಾರಿಟೆಬಲ್ ಟ್ರಸ್ಟ್ ಮುಂದೆ ಬಂದಿತು. 2004ರಲ್ಲಿ ಭಾಗ್ಯನಗರದ ನಾಗೌಲ್ ಮತ್ತು ಇಬ್ರಾಹಂಪುರದಲ್ಲಿ 10 ಕಿಶೋರಿ ವಿಕಾಸ ಕೇಂದ್ರಗಳು ಶುರುವಾದವು. 2022ರಲ್ಲಿ ಈ ಕೇಂದ್ರಗಳ ಸಂಖ್ಯೆ 293 ಕ್ಕೆ ಏರಿದವು,  ಈ ಕೇಂದ್ರಗಳು ಕಳೆದ 18 ವರ್ಷಗಳಿಂದ ಸಾವಿರಾರು ಬಾಲಕಿಯರ ಸದೃಢ ಭವಿಷ್ಯವನ್ನು ರೂಪಿಸುತ್ತಿವೆ.


ಭಾಗ್ಯನಗರದ ಒಂದು ಸಣ್ಣ ಬಸತಿಯಲ್ಲಿ ವಾಸಿಸುತ್ತಿರುವ ಶರ್ವಾಣಿ ಚಿಕ್ಕಂದಿನಲ್ಲಿಯೇ ತನ್ನ ತಂದೆಯನ್ನು ಕಳೆದುಕೊಂಡಿದ್ದಳು. ಜೀವನಕ್ಕೋಸ್ಕರ ಎಷ್ಟು ಬೇಕೋ ಅಷ್ಟನ್ನು ತಾಯಿ ಸಂಪಾದಿಸುತ್ತಿದ್ದಳು. ಈ ಪ್ರತಿಭಾವಂತ ಹುಡುಗಿಯು ತನ್ನ ಬಸತಿಯಲ್ಲಿ ಪ್ರತಿದಿನ ಎರಡು ಗಂಟೆಗಳ ಕಾಲ ನಡೆಯುತ್ತಿದ್ದ ಕಿಶೋರಿ ವಿಕಾಸ ಕೇಂದ್ರದಲ್ಲಿ ಓದಿಲ್ಲವಾದರೆ ಬಹುಶಃ ಎಂದಿಗೂ ತನ್ನ ಶಿಕ್ಷಣವನ್ನುಪೂರ್ಣಗೊಳಿಸುತಿರಲಿಲ್ಲ. ಇಲ್ಲಿ ಕಲಿತು ಮೊದಲು ಅವಳು ತನ್ನ ಹನ್ನೆರಡನೇ ತರಗತಿಯ  ಪರೀಕ್ಷೆಯಲ್ಲಿ ತೇರ್ಗಡೆಯಗಿದ್ದೂ ಅಲ್ಲದೇ ತಾನೇ ಸ್ವತ: ಹಲವಾರು ವರ್ಷಗಳ ಕಾಲ ಕೇಂದ್ರದಲ್ಲಿ ಶಿಕ್ಷಕಿಯಾಗಿಯೂ ಕಾರ್ಯ ನಿರ್ವಹಿಸಿ ಬರುತ್ತಿದ್ದ ವೇತನದಿಂದ ಇಂಜಿನಿಯರಿಂಗ್ ಅನ್ನೂ ಓದಿ ಮುಗಿಸಿದಳು. ಈಗ ಶರ್ವಾಣಿ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ನೌಕರಿಯ ಜೊತೆಗೆ ಅವಳು ತೆಲಂಗಾಣಾದ ಸೇವಾಭಾರತಿಯ ಜೊತೆ ಕಿಶೋರಿ ವಿಕಾಸ ಕೇಂದ್ರದ ಕಾರ್ಯದಲ್ಲೂ ತನ್ನ ಸಹಕಾರವನ್ನು ನೀಡುತ್ತಿದ್ದಾಳೆ.ಈಗ ಕವಿತಾಳ ವಿಷಯಕ್ಕೆ ಬರೋಣ, ಕವಿತಾಳ ಕಥೆ ಯಾವುದೋ ಚಲನಚಿತ್ರದ ನಾಯಕಿಯ ಕಥೆಯಂತೆ ಆಸಕ್ತಿದಾಯಕವಾಗಿದೆ. ಕೇವಲ 12 ವರ್ಷ ವಯಸ್ಸಿನಲ್ಲಿ ಅವಳ ವಿವಾಹ ನಿಶ್ಚಯವಾಗಿತ್ತು. ಭಾಗ್ಯನಗರದ ಕೋರವಾನಿ  ತಾಂಡಾದಲ್ಲಿ ವಾಸಿಸುವ ಈ ಹುಡುಗಿ ಈ ಕ್ಷೇತ್ರದಲ್ಲಿ ವರ್ಷಗಟ್ಟಲೆಯಿಂದ ನಡೆದುಬರುತ್ತಿರುವ ಬಾಲ್ಯವಿವಾಹದ ಅನಿಷ್ಟ ಪದ್ಧತಿಗೆ ಬಹುಶಃ ಶಿಕಾರಿಯಾಗುತ್ತಿದ್ದಳು, ಆದರೆ ಸೇವಾಭಾರತಿಯ ಕಾರ್ಯಕರ್ತರು ಅವಳ ಕುಟುಂಬದವರೊಂದಿಗೆ ಮಾತನಾಡಿ ಅವಳನ್ನು ಮುಂದೆ ಓದಿಸುವಂತೆ ಅವರ ಮನವೊಲಿಸುವಲ್ಲಿ ಸಫಲರಾಗಿದ್ದರು. ಇಂದು ಹೈದರಾಬಾದ್ ನ ಒಂದು ಪ್ರತಿಷ್ಠಿತ ಶಾಲೆಯಲ್ಲಿ ಯೋಗ ಮತ್ತು ನೃತ್ಯ ಶಿಕ್ಷಕಿಯಾಗಿರುವ ಕವಿತಾ ಕಿಶೋರಿ ವಿಕಾಸ ಕೇಂದ್ರಗಳ ಸಂಯೋಜಕಿಯಾಗಿಯು ಸೇವೆ ಸಲ್ಲಿಸುತ್ತಾ ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಹಿಂದಿರುಗಿಸುತ್ತಿದ್ದಾಳೆ. 

ಇದು ಕೇವಲ ಕವಿತಾಳ ವಿಷಯ ಮಾತ್ರವಲ್ಲ, ಜಯಪ್ರದ ಅಕ್ಕ ಹೇಳುತ್ತಾರೆ, ಕಿಶೋರಿ ವಿಕಾಸ ಕೇಂದ್ರಗಳಲ್ಲಿ ಓದುವ ಬಾಲಕಿಯರು ಇತರ  ಬಾಲಕಿಯರ ಭವಿಷ್ಯವನ್ನು ರೂಪಿಸಲು ಬಸತಿಗಳಲ್ಲಿ ತರುಣಿ ವಿಕಾಸ ಕೇಂದ್ರವನ್ನು ಪ್ರಾರಂಭಿಸಿದರು. ಸೇವೆ ಎನ್ನುವುದು ಹೇಗೆ ಅವರ ಜೀವನದ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿದೆಯೆಂದರೆ, ಅವರೀಗ ಸೇವಾಭಾರತಿಯ ಮಾತೃಮಂಡಲದೊಂದಿಗೆ ಸೇರಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೋನಾ ಮಹಾಮಾರಿಯ ಸಮಯದಲ್ಲಿ ಇವರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪಡಿತರ ವಿತರಣೆ, ಸ್ವಚ್ಛತೆ, ಔಷಧಗಳ ವಿತರಣೆ, ಹೀಗೆ ಎಲ್ಲಾ ಕಾರ್ಯಗಳಲ್ಲೂ ತುಂಬುಹೃದಯದ ಸಹಯೋಗವನ್ನು ನೀಡಿದರು.


 ಕಿಶೋರಿ ವಿಕಾಸ ಕೇಂದ್ರ ಎಂದರೆ ಏನು? ಬನ್ನಿ ತಿಳಿಯೋಣ. ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರ ಸೇವಾ ಪ್ರಮುಖರಾದ ಚಂದ್ರಶೇಖರ ಎಕ್ಕಾ ಜೀ ಹೇಳುತ್ತಾರೆ, ಪ್ರತಿದಿನ ಎರಡು ಗಂಟೆಗಳ ಕಾಲ ನಡೆಯುವ ಈ ಕೇಂದ್ರಗಳಲ್ಲಿ ಶಾಲೆಯ ಹೋಂವರ್ಕ್ ಮಾಡಿಸುವ ಜೊತೆಜೊತೆಗೆ ಆರೋಗ್ಯದ ಜಾಗೃತಿ, ಸ್ವಯಂ ರಕ್ಷಣೆ, ಜೊತೆಗೆ ಆತ್ಮ ನಿರ್ಭರರನ್ನಾಗಿ ಮಾಡಲು ಹೊಲಿಗೆ, ಕಸೂತಿ ಮತ್ತು ಹಬ್ಬಗಳಲ್ಲಿ ಮೂರ್ತಿಗಳನ್ನು ನಿರ್ಮಿಸುವಂತಹ ವೃತ್ತಿಪರ ತರಬೇತಿಯನ್ನೂ ನೀಡಲಾಗುತ್ತದೆ. ಈ ಕೇಂದ್ರಗಳು ಕಿಶೋರಿಯರಿಗೆ ಜೀವನದ ಪ್ರತಿಯೊಂದು ಅಂಶಗಳ ಬಗ್ಗೆ ಅರಿವು ಮೂಡಿಸುತ್ತದೆ..  ಕುಟುಂಬದವರೂ ಕಲಿಸಲಾಗದಂತಹ  ಮುಖ್ಯ ಸಂಗತಿಗಳನ್ನು ಅವರಿಗೆ ಇಲ್ಲಿ ಕಲಿಸಲಾಗುತ್ತದೆ. ಒಳ್ಳೆಯ ಮತ್ತು ಕೆಟ್ಟ ಸ್ಪರ್ಷಗಳ ನಡುವೆ ಇರುವ ವ್ಯತ್ಯಾಸವನ್ನು ತಿಳಿಸಿಕೊಡಲಾಗುತ್ತದೆ, ಸಮಾಜದಲ್ಲಿ ಹೇಗೆ ಸಾಹಸದಿಂದ ಕಷ್ಟಗಳನ್ನು ಎದುರಿಸುವುದು, ಹೇಗೆ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುವುದು ಎನ್ನುವುದನ್ನೂ ಇಲ್ಲಿ ಹೇಳಿಕೊಡಲಾಗುತ್ತದೆ. ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರವನ್ನಷ್ಟೇ ಅಲ್ಲದೇಶಭಕ್ತಿಯ ಭಾವವನ್ನು ಜಾಗೃತಗೊಳಿಸಲಾಗುತ್ತದೆ.ಟ್ಯೂಷನ್ ಸೆಂಟರ್ ಗಳಂತೆ ಕಾಣುವ ಈ ಕೇಂದ್ರಗಳು ದೇಶ್ವನ್ನು ಪ್ರೀತಿಸುವ, ಸಮಾಜದ ಬಗ್ಗೆ ಕಾಳಜಿ ಇವಂತಹ ಧೀಮಂತ ಮಹಿಳೆಯರನ್ನು ಹುಟ್ಟುಹಾಕುತ್ತಿದೆ.

ಈ ಕೇಂದ್ರಗಳನ್ನು ನಡೆಸಲು ತಗಲುವ ಹಣವನ್ನು ವೈದೇಹಿ ಚಾರಿಟಬಲ್ ಟ್ರಸ್ಟ್ ಹಾಗೂ ಸಮಾಜದ ಸಹಯೋಗದಿಂದ ಸಂಗ್ರಹಿಸಲಾಗುತ್ತದೆ. ಇದಕ್ಕಾಗಿ ಹೈದರಾಬಾದಿನಲ್ಲಿ ಪ್ರತೀ ವರ್ಷ ನಡೆಸುವ ರನ್ ಫಾರ್ ಗರ್ಲ್ ಚೈಲ್ಡ್ ಎಂಬ ಹೆಸರಿನಲ್ಲಿ  ಬೃಹತ್ ಫಿಟ್‌ನೆಸ್ ಕಾರ್ಯಕ್ರಮವನ್ನು ಆಯೋಜಿಸಿ ಇಡೀ ಸಮಾಜಕ್ಕೆ ಈ ಕಿಶೋರಿಯರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ.

ರಮಾ, ಕಲ್ಪನಾ ಮತ್ತು ಮೀನಾರಂತಹ ಅಕ್ಕಂದಿರು ಈ ಕೇಂದ್ರಗಳನ್ನು ತಮ್ಮ ಎರಡನೇ ಮನೆ ಎಂದು ಪರಿಗಣಿಸುತ್ತಾರೆ. ಈ ತಂಡ ಕೊರವಾನಿ ತಾಂಡಾ ಒಂದರಲ್ಲೇ ೨೦ಕ್ಕೂ ಹೆಚ್ಚು ಹೆಣ್ಣು ಮಕ್ಕಳ ಬಾಲ್ಯವಿವಾಹ ನಿಲ್ಲಿಸಿದೆ. ಇದೀಗ ಸೇವಾ ಭಾರತಿಯ ನೆರವಿನಿಂದ ಈ ಬಾಲಕಿಯರಿಗೆ ಐಟಿ ತರಬೇತಿಯನ್ನೂ ನೀಡಲಾಗುತ್ತಿದೆ.

ಈ ಕೇಂದ್ರಗಳು ಕಾರ್ಯನಿರ್ವಹಿಸುವ ಬಸತಿಗಳಲ್ಲಿ ಬದಲಾವಣೆಯ ತಂಪಾದ ಗಾಳಿಯ ಅನುಭವವನ್ನು ಸ್ಪಷ್ಟವಾಗಿ ಪಡೆಯಬಹುದು. ಹೈದರಾಬಾದ್‌ನ ಮಹಾತ್ಮ ಗಾಂಧಿ ನಗರ ಇದಕ್ಕೆ ಜೀವಂತ ಉದಾಹರಣೆಯಾಗಿದೆ. ಜೂಜು ಮತ್ತು ಡ್ರಗ್ಸ್ ನ ಸಾಮ್ರಾಜ್ಯವಾಗಿದ್ದ ಈ ಬಡಾವಣೆಯಲ್ಲಿ ಹದಿಹರೆಯದ ಹೆಣ್ಣುಮಕ್ಕಳೊಂದಿಗೆ ಅನುಚಿತ ವರ್ತನೆಯ ಸುದ್ದಿಗಳು ಬಂದವು.

ಇಲ್ಲಿ ನಡೆಯುತ್ತಿರುವ ಕಿಶೋರಿ ವಿಕಾಸ ಕೇಂದ್ರ ಹೆಣ್ಣುಮಕ್ಕಳನ್ನು ಸಮರ್ಥ ಹಾಗೂ ಸ್ವಾವಲಂಬಿಗಳನ್ನಾಗಿ ಮಾಡಿದ್ದು ಮಾತ್ರವಲ್ಲದೇ ಇಡೀ ಬಸತಿಯ ಚಿಂತನೆಯನ್ನೇ ಬದಲಿಸಿದೆ. ಇಲ್ಲಿ ಅನೇಕ ಯುವಕರು ಮದ್ಯ ಮತ್ತು ಜೂಜಾಟವನ್ನು ತ್ಯಜಿಸಿದ್ದಾರೆ. ಒಂದು ಕಾಲದಲ್ಲಿ ಮದ್ಯದ ಅಮಲಿನಲ್ಲಿ ಮುಳುಗಿದ್ದ ಈ ಯುವಕರು ಇಂದು ತಾವೆ ಕೇಂದ್ರಕ್ಕೆ ಶೆಡ್ ನಿರ್ಮಿಸಲು ಮುಂದಾದರು, ಇದೀಗ ಇಲ್ಲಿ ದೇವಸ್ಥಾನದ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಈ ಕೇಂದ್ರದ ಯಶಸ್ಸಿನಿಂದ ಪ್ರಭಾವಿತರಾಗಿ ಆ ಪ್ರದೇಶದಲ್ಲಿ ಇನ್ನೂ ೮೦ ಕೇಂದ್ರಗಳನ್ನು ತೆರೆಯಲಾಗಿದೆ. ಕಿಶೋರಿ ವಿಕಾಸ ಕೇಂದ್ರದ ಈ ಸಮರ್ಥ ಕಿಶೋರಿಯರು ಬದುಕಿನಲ್ಲಿ ಹೊಸ ಭರವಸೆಯೊಂದಿಗೆ ದೇಶದಲ್ಲಿ ಹೊಸ ಬದಲಾವಣೆಯ ಕಹಳೆಯನ್ನು ಮೊಳಗಿಸುತ್ತಿದ್ದಾರೆ.

ಸಂಪರ್ಕ: ಜಯಪ್ರದಾ ದೇವಿ

ಮೊ.ನಂ : 9000755570

1854 Views
अगली कहानी