नियमित अपडेट के लिए सब्सक्राईब करें।
5 mins read
ದಕ್ಷಿಣ
ದಿನಗಳನ್ನು ಕಳೆಯುವುದು ಹೇಗೆಂದು ಅನುಭವ ಪಡೆಯಬೇಕೇ ಬನ್ನಿ \'ಆಸರಸಾ\'ಕ್ಕೆ. ಗುಜರಾತ್\'ನ ಸಮುದ್ರತೀರದಲ್ಲಿ ಮೀನುಗಾರರಿರುವ ಒಂದು ಸಾವಿರ ಜನಸಂಖ್ಯೆಯ ಸಣ್ಣ ಹಳ್ಳಿ -- \"ಆಸರಸಾ\". ಇಲ್ಲಿ ಕೆಲವರು ಬೇಸಾಯವನ್ನು ಸಹ ಮಾಡುತ್ತಿರುವರು. ಎಂಟನೇ ತರಗತಿಗಿಂತ ಹೆಚ್ಚು ಕಲಿತ ವ್ಯಕ್ತಿ ಸಿಗುವುದೇ ಕಷ್ಟ ಎಂಬ ಸ್ಥಿತಿ ಇಲ್ಲಿನದಾಗಿತ್ತು. ಹೆಚ್ಚಿನ ಮಕ್ಕಳು ಎಂಟನೇ ತರಗತಿ ತಲುಪುತ್ತಿದ್ದಂತೆಯೇ ಓದಿಗೆ ವಿದಾಯ ಹೇಳುತ್ತಿದ್ದರು.
ಓದಿನ ವಿಚಾರವಾಗಿ ಹಿರಿಯರ ವರ್ತನೆಯಲ್ಲಿಯೂ ಹೆಚ್ಚು ಕಡಿಮೆ ಉದಾಸೀನತೆಯೇ ಇತ್ತು. ಒಂದುವೇಳೆ 2004ರಲ್ಲಿ ಸಂಘದ ಸ್ವಯಂಸೇವಕ ಅಂಬಾಲಾಲ್ ಗೋಹಿಲ್\'ರ ಆಗಮನ ಈ ಹಳ್ಳಿಗೆ ಆಗದಿರುತ್ತಿದ್ದರೆ ಆಸರಸಾದಲ್ಲಿ ಎಲ್ಲವೂ ಹಾಗೆಯೇ ಇರುತ್ತಿತ್ತು. ಅಂಬಾಲಾಲ್\'ರು ಇಲ್ಲಿಗೆ ಬಂದ ನಂತರ ನೋಡನೋಡುತ್ತಿದ್ದಂತೆ ಹಳ್ಳಿಯ ಸಂಪೂರ್ಣ ಚಿತ್ರಣವೇ ಬದಲಾಯಿತು. ಈ ಹಳ್ಳಿಯಲ್ಲಿ ಸ್ಥಾನೀಯವಾಗಿ ಶೈಕ್ಷಣಿಕ ಕ್ರಾಂತಿಯಾಯಿತು ಎಂದೇನಾದರೂ ಹೇಳಿದರೂ ಅತಿಶಯೋಕ್ತಿಯಾಗಲಾರದು. ಅಂಬಾಲಾಲ್\'ಜೀ ಹಾಗೂ ಅವರ ಸಹಕಾರಿಗಳಾದ ಸ್ವಯಂಸೇವಕರು ಹಳ್ಳಿಯಲ್ಲಿ ಬ್ಯಾಂಕ್ ಆಫ್ ಬರೋಡಾದ ಸಹಯೋಗದಲ್ಲಿ ಮಕ್ಕಳ ಉಳಿತಾಯ ಬ್ಯಾಂಕ್ ಸ್ಥಾಪಿಸುವ ಒಂದು ಸೃಜನಶೀಲ ಕಲ್ಪನೆಯನ್ನು
ಸಾಕಾರಗೊಳಿಸಿದರು . ಬ್ಯಾಂಕ್\'ನಲ್ಲಿ ಉಳಿತಾಯ ಮಾಡಿದ ಪರಿಣಾಮವಾಗಿ ಹಳ್ಳಿಯ ಮಕ್ಕಳ ಓದಿನ ಸಣ್ಣಪುಟ್ಟ ಅವಶ್ಯಕತೆಗಳಿಗೆ ಹಣದ ಅಡಚಣೆಯಾಗಲಿಲ್ಲ. ಸಾಲದ ಹಣದಿಂದಲ್ಲ, ಆದರೆ ತಮ್ಮದೇ ಸ್ವಂತ ಹಣದಿಂದ. ತಮ್ಮ ಶಿಕ್ಷಣವನ್ನು ಸುಲಭಗೊಳಿಸುವ ಈ ಉಪಕ್ರಮವು ಇಂದು ಅವರಿಗೆ ಪ್ರೇರಣೆಯಾಗಿದೆ. ಬ್ಯಾಂಕ್ ಆಫ್ ಬರೋಡಾದ ಜಮ್ಮುಸರ್ ಶಾಖೆಯ ಬ್ಯಾಂಕ್ ಖಾತೆಯಲ್ಲಿ ಜಮಾ ಆಗಿರುವ ಒಟ್ಟು 3 ಲಕ್ಷ ರೂಪಾಯಿಯು ಆ ಹಳ್ಳಿಯ ಪ್ರತಿಯೊಬ್ಬರ ಒಂದು ರೂಪಾಯಿ ಉಳಿತಾಯದ ಒಟ್ಟು ಮೊತ್ತವಾಗಿದೆ.
ಪ್ರಸ್ತುತ ಐಐಟಿ ಕಲಿಯುತ್ತಿರುವ ಹಳ್ಳಿಯ ಒಬ್ಬ ಯುವಕ ಕಲ್ಪೇಶ್ ರತನ್ ಚಂದ್ರ ಹೇಳುವುದೇನೆಂದರೆ--- ಎರಡು ವರ್ಷ ಹಿಂದಿನವರೆಗೂ ಆಸರಸಾದಲ್ಲಿ ಹೈಸ್ಕೂಲ್ ಸಹ ಇರಲಿಲ್ಲ. 8ನೇ ತರಗತಿಗಿಂತ ಹೆಚ್ಚಿನ ಓದಿಗಾಗಿ 30 ಕಿಲೋಮೀಟರ್ ದೂರದ ಜಮ್ಮುಸರ್\'ಗೆ ಹೋಗಬೇಕಾಗಿತ್ತು. ಪ್ರತಿದಿನ ಹೋಗಿ ಬರುವುದು ಅಸಾಧ್ಯವಾಗಿತ್ತು ಹಾಗೂ ಹಾಸ್ಟೆಲ್\'ನ ಖರ್ಚನ್ನು ಭರಿಸುವುದು ತಂದೆ-ತಾಯಿಯರ ಶಕ್ತಿಯನ್ನು ಮೀರಿತ್ತು. ಆಗ ಬ್ಯಾಂಕ್\'ನಲ್ಲಿ ಮಾಡಿದ ಉಳಿತಾಯವು ತಾನು ಹಾಗೂ ತನ್ನಂತಹ ಇನ್ನೂ 60 ಮಕ್ಕಳು ಹಾಸ್ಟೆಲ್\'ನಲ್ಲಿದ್ದುಕೊಂಡು ಮುಂದಿನ ವಿದ್ಯಾಭ್ಯಾಸ ಮಾಡಲು ಸಾಧ್ಯವಾಯಿತು.
ಶಾಲೆಗೆ ಎರಡು ಹೊಸ ಕೊಠಡಿಯನ್ನು ಹಳ್ಳಿಯವರೆಲ್ಲ ಸೇರಿ ನಿರ್ಮಿಸಿರುವರೆಂದು ಆ ಹಳ್ಳಿಯ ಶಾಲೆಯಲ್ಲಿ ಶಿಕ್ಷಕರಾಗಿರುವ ದಿವ್ಯೇಶ್\'ಜೀಯವರು ಹೇಳುವರು. ವಿದ್ಯಾಲಯದಲ್ಲಿ ಪ್ರಾರಂಭವಾದ ಜೋಲಾ ಪುಸ್ತಕಾಲಯದ ಪುಸ್ತಕಗಳು ಮಕ್ಕಳಿಂದ ಹಳ್ಳಿಗರಿಗೆ ತಲುಪಿತು. ನಂತರ ಮೆಲ್ಲಮೆಲ್ಲನೆ ಹಳ್ಳಿಯ ಗೋಡೆಗಳು ಸದ್ವಿಚಾರಗಳಿಂದ ಶೋಭಿಸಿದವು. ಶಾಲೆಯ ಖೋಯಾಪಾಯಾ ವಿಭಾಗಕ್ಕೆ ಇಡೀ ಹಳ್ಳಿಯಲ್ಲಿ ಸಿಕ್ಕಿದ ವಸ್ತುಗಳನ್ನು ತಲುಪಿಸಲಾರಂಭಿಸಿದರೆ ಅದನ್ನು ಕಳೆದುಕೊಂಡವರು ಶಾಲೆಗೆ ಬಂದು ಪಡೆಯಲಾರಂಭಿಸಿರುವರು. ಸ್ವಯಂಸೇವಕರ ಪ್ರಯತ್ನದಿಂದ ಗಾಯತ್ರಿ ಪರಿವಾರವು ಆಸರಸಾಕ್ಕೆ ಬಂದು ವ್ಯಸನಮುಕ್ತಿ ಅಭಿಯಾನ ನಡೆಸಿ ಅನೇಕ ಗ್ರಾಮೀಣರನ್ನು ಈ ದುರಭ್ಯಾಸದಿಂದ ಮೇಲೆತ್ತಿತು.
ಆಸರಸಾದಲ್ಲಿ ಕೇವಲ ಶಿಕ್ಷಣ ಮಾತ್ರವಲ್ಲ ಅನ್ಯ ಸಂಗತಿಗಳೂ ಸಾಕಷ್ಟು ಬದಲಾಗಿದೆ. ಅಂಬಾಲಾಲ್\'ಜೀ ಹಾಗೂ ಸಂಘದ ಗ್ರಾಮವಿಕಾಸ ತಂಡವು ಇಲ್ಲಿಯ ಕೃಷಿ ಕ್ಷೇತ್ರವನ್ನೂ ಸಹ ಪರಿವರ್ತಿಸಿತು. ಸಮುದ್ರದ ಉಪ್ಪಿನಿಂದ ಪ್ರಭಾವಿತವಾಗಿರುವ ಇಲ್ಲಿಯ ಬಂಜರುಭೂಮಿ ಹಸುವಿನ ಸೆಗಣಿ ಹಾಗೂ ಗೋಮೂತ್ರದಿಂದ ಮಾಡಿದ ಗೊಬ್ಬರವನ್ನು ಬಳಸುವುದರಿಂದಾಗಿ ಫಲವತ್ತಾಗಿದೆ. ಇಡೀ ಹಳ್ಳಿಯಲ್ಲಿ ಹಚ್ಚಹಸಿರಾದ ಬೆಳೆಗಳು ನಳನಳಿಸುತ್ತಿವೆ. ಮನೆಮನೆಯಲ್ಲಿ ನೆಲ್ಲಿಕಾಯಿ, ಅಣಲೇಕಾಯಿ, ಮೊದಲಾದ ಹಸಿರು ಗಿಡಗಳನ್ನು ನೆಡಲಾಗಿದೆ. ಹಳ್ಳಿಯಲ್ಲಿ ಶಾಲೆಯ ಸ್ಥಾಪನೆ ಹಾಗೂ ಶಿಕ್ಷಣ ವಿಕಾಸದಿಂದ ಪ್ರಾರಂಭವಾದ ಈ ಸಣ್ಣ ಪರಿವರ್ತನೆಯು ಹಳ್ಳಿಯ ಜನಸಾಮಾನ್ಯರ ಕಠಿಣ ಪರಿಶ್ರಮದ ಜೀವನದಲ್ಲಿ ಪ್ರವೇಶಿಸಿ ಹೊಸದಿಕ್ಕನ್ನು ಯಾವಾಗ ಕೊಡಲಾರಂಭಿಸಿತು ಎಂಬುದು ಯಾರಿಗೂ ತಿಳಿಯಲೇ ಇಲ್ಲ.
नियमित अपडेट के लिए सब्सक्राईब करें।