सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಜೀವನಕ್ಕೆ ದೊರೆತ ಹೊಸ ದಿಕ್ಕು .

ಶ್ರೀ ಗಿರಿಧರ್ ಉದ್ಯಾವರ | ದಕ್ಷಿಣ

parivartan-img

2010 ರಲ್ಲಿ ಲಡಾಖ್‌ನ ಸುಂದರ ಕಣಿವೆಗಳಲ್ಲಿ ಮೋಡಗಳು ಸ್ಫೋಟಿಸಿದಾಗ ಅನೇಕ ಜನರ ಜೀವನಗಳು ಧ್ವಂಸವಾದವು. ಅವರಲ್ಲಿ ನೀರಜ್ ಕೂಡ ಒಬ್ಬನು. ಆ ಪ್ರವಾಹವು ಈ ಮುಗ್ಧರಿಂದ ಎಲ್ಲವನ್ನೂ ಕಸಿದುಕೊಂಡಿತು.

ಸೇವಾ ಭಾರತಿಯ ಕಾರ್ಯಕರ್ತರು ಅವನನ್ನು ದಿಶಾ ಹಾಸ್ಟೆಲ್‌ಗೆ ಕರೆತರದಿದ್ದರೆ ಆ ನೋವು ಬಹುಶಃ ನೀರಜ್ ನ ಮುಖದ ಮೇಲೆ ಜೀವನದುದ್ದಕ್ಕೂ ಇರುತ್ತಿತ್ತು. ಆದರೆ ಇಂದು ನೀರಜ್ ಹಿಂತಿರುಗಿ ನೋಡಲು ಬಯಸುವುದಿಲ್ಲ. ರಾಷ್ಟ್ರಮಟ್ಟದಲ್ಲಿ ಖೋ ಖೋ ಆಟ ಆಡಿದ ಪ್ರತಿಭಾವಂತ ಹುಡುಗ 10 ನೇ ತರಗತಿಯಲ್ಲಿ ಗಣಿತದಲ್ಲಿ 100 ಪ್ರತಿಶತ ಅಂಕಗಳನ್ನು ಗಳಿಸಿದ್ದ. ನೀರಜ್ ನಂತಹ 36 ಮಕ್ಕಳ ಜೀವನಕ್ಕೆ ವೆಲ್ಜಿ ವಿಶ್ರಾಮ್ ಪೊಪಾಟ್ ದಿಶಾ ಹಾಸ್ಟೆಲ್ ಹೊಸ ದಿಕ್ಕನ್ನು ನೀಡಿದೆ. ಇಲ್ಲಿ ಓದುತ್ತಿರುವವರಲ್ಲಿ ಹೆಚ್ಚಿನವರ ಪರಿವಾರವು ಭಯೋತ್ಪಾದಕರ ಕ್ರೂರತೆಗೆ ಬಲಿಯಾಗಿದೆ


ಸಂಘದ ಪ್ರಚಾರಕರು ಹಾಗು ರಾಷ್ಟ್ರೀಯ ಸೇವಾ ಭಾರತಿಯ ಉತ್ತರ ಕ್ಷೇತ್ರದ ಸಂಘಟನಾ ಸಚಿವರಾದ ಜಯದೇವಜೀಯವರ ಪ್ರಯತ್ನದಿಂದ 2005 ರಲ್ಲಿ 9 ಮಕ್ಕಳೊಂದಿಗೆ ಕೇವಲ 2 ಕೊಠಡಿಗಳಲ್ಲಿ ಈ ಹಾಸ್ಟೆಲ್ ನ್ನು ಪ್ರಾರಂಭಿಸಲಾಯಿತು. ಈಗ ಅಧ್ಯಯನದ ಜೊತೆಗೆ ಸಂಗೀತ, ಕಂಪ್ಯೂಟರ್ ಮತ್ತು ಚಿತ್ರಕಲೆಯನ್ನೂ ಸಹ ಇಲ್ಲಿಯ ಮಕ್ಕಳಿಗೆ ಕಲಿಸಲಾಗುತ್ತಿದೆ.



13 ವರ್ಷಗಳ ಹಿಂದೆ ದಿಶಾ ಪ್ರಾರಂಭವಾದಾಗ ಸೇವಾ ಭಾರತಿಯ ಬಳಿ ಮೂಲಸೌಕರ್ಯವಾಗಲಿ ಅಥವಾ ಸಹಕಾರಿಗಳಾಗಲಿ ಇರಲಿಲ್ಲ. ಮಕ್ಕಳ ಶಾಲಾ ಶುಲ್ಕ ಮತ್ತು ಆಹಾರದ ವೆಚ್ಚವನ್ನು ಬಹಳ ಕಷ್ಟದಿಂದ ಒದಗಿಸಲಾಗುತ್ತಿತ್ತು. ಆಗ ಬೋಸ್ಟನ್ ನಲ್ಲಿ ನೆಲೆಸಿದ್ದ ನರೇಂದ್ರ ಪೊಪಾಟ್ ಅವರು ಈ ಉದಾತ್ತ ಉದ್ದೇಶದಲ್ಲಿ ಭಾಗಿಯಾಗಲು ನಿರ್ಧರಿಸಿದರು. ಅವರ ತಂದೆ ವೆಲ್ಜಿ ವಿಶ್ರಾಮ್ ಪೊಪಾಟ್ ಅವರ ನೆನಪಿಗಾಗಿ, ಶ್ರೀ ಪೋಪಾಟ್ ಈ ಪ್ರಕಲ್ಪಕ್ಕೆ 22 ಲಕ್ಷ ರೂಪಾಯಿಗಳನ್ನು ನೀಡಿದರು.

ಜಮ್ಮು ಮತ್ತು ಕಾಶ್ಮೀರ ಸೇವಾ ಭಾರತಿಯ ಅಧ್ಯಕ್ಷ ಅನುಶ್ಯ ಖೋಸಾ ಅವರ ಪ್ರಕಾರ, ಇಲ್ಲಿ ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರ ನೀಡುವುದರ ಜೊತೆಗೆ ಕಠಿಣ ಶಿಸ್ತನ್ನು ಕೂಡ ಕಲಿಸಲಾಗುತ್ತಿದೆ. ಅದು ಹೂದೋಟದ ಸ್ವಚ್ಛತೆ ಆಗಿರಲಿ ಅಥವಾ ಹಾಸ್ಟೆಲ್ ನಿರ್ವಹಣೆ ಆಗಿರಲಿ, ಎಲ್ಲವನ್ನೂ ಮಕ್ಕಳೇ ಮಾಡುತ್ತಾರೆ.

ಇಂದು ಹಾಸ್ಟೆಲ್‌ನಲ್ಲಿ 5 ಕೋಣೆಗಳು, ಒಂದು ಕಂಪ್ಯೂಟರ್ ಕೊಠಡಿ, 4 ಅತಿಥಿ ಕೋಣೆ ಹಾಗೂ ಒಂದು ದೊಡ್ಡ ಪ್ರಾರ್ಥನಾ ಕೊಠಡಿ ಇದೆ. ಅಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಅಧ್ಯಯನ ಮಾಡುತ್ತಾರೆ. ಕೆಲವು ಹಿರಿಯ ಮಕ್ಕಳು ತಮ್ಮ ಆಸಕ್ತಿಯಿಂದ ಎಲೆಕ್ಟ್ರಿಷಿಯನ್, ಬಡಗಿ ಮತ್ತು ಸಾವಯವ ಕೃಷಿಯಂತಹ ಕೌಶಲ್ಯ-ಅಭಿವೃದ್ಧಿ ತರಬೇತಿಯನ್ನು ಸಹ ಪಡೆದುಕೊಳ್ಳುತ್ತಿದ್ದಾರೆ.


ಮಾತಾ ವೈಷ್ಣೋದೇವಿ ವಿರಾಜಮಾನಳಾಗಿರುವ ತ್ರಿಕುಟಾ ಪರ್ವತ ಬೆಟ್ಟಗಳ ತಗ್ಗು ಪ್ರದೇಶದಲ್ಲಿರುವ ಕಡ್ಮಾಲ್ ಗ್ರಾಮದಲ್ಲಿ ನೀರಿನ ಕೊರತೆಯು ಒಂದು ದೊಡ್ಡ ಸಮಸ್ಯೆಯಾಗಿತ್ತು. 300 ಅಡಿ ಆಳ ತೋಡಿದ ನಂತರವೂ ಸ್ವಲ್ಪ ನೀರು ದೊರೆಯುತ್ತಿತ್ತು. ಆ ನೀರಿನಿಂದ ವಿದ್ಯಾರ್ಥಿಗಳ ದೈನಂದಿನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ

ಆದರೆ ನೀರಿನ ನಿರ್ವಹಣೆಯ ಸಾಂಪ್ರದಾಯಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಹಾಸ್ಟೆಲ್ ನಿರ್ವಹಣೆಯ ದೈನಂದಿನ ನೀರಿನ ಟ್ಯಾಂಕರ್‌ಗಳ ವೆಚ್ಚ ಬಹುತೇಕ ಕಡಿಮೆಗೊಂಡಿದೆ‌. ನೀರಿನ ನಿರ್ವಹಣೆಗಾಗಿ ತಯಾರಿಸಲಾದ ಮೂರು ಟ್ಯಾಂಕ್‌ಗಳಿಂದಾಗಿ ಬೇಸಿಗೆಯಲ್ಲಿ ಹ್ಯಾಂಡ್‌ಪಂಪ್‌ಗಳು ಸಾಕಷ್ಟು ನೀರನ್ನು ಒದಗಿಸುತ್ತವೆ. ಪ್ರತಿ ನೀರಿನ ಹನಿಯು ಬಳಕೆಯಾಗಬೇಕೆಂದು ಬಟ್ಟೆ ತೊಳೆಯಲು ಬಳಸುವ ನೀರನ್ನೇ ಹೂದೊಟಕ್ಕೆ ಬಳಸಲಾಗುತ್ತಿದೆ.



ನೈಸರ್ಗಿಕ ವಿಪತ್ತು ಮತ್ತು ಭಯೋತ್ಪಾದನೆಯೊಂದಿಗೆ ಹೋರಾಡುತ್ತಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ದಿಶಾ ಹಾಸ್ಟೆಲ್ ನಂತಹ ಯೋಜನೆಗಳು ಹೊಸ ಭರವಸೆಯ ಕಿರಣಗಳಾಗಿ ಹೊರಹೊಮ್ಮಿವೆ.

ಸಂಪರ್ಕಿಸಿ:

ಸುರೇಂದ್ರ ತ್ಯಾಗಿ: 7051273549

601 Views
अगली कहानी