सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

ಮನೆ-ಮನೆಗಳಲ್ಲಿ ಆಡಿದ ಬಾಲ ಗೋಪಾಲ, ಶಬರಿ ಸೇವಾ ಸಮಿತಿ

ಶ್ರೀಮತಿ ಮೇಘ ಪ್ರಮೋದ್ | ಮಹಾರಾಷ್ಟ್ರ

parivartan-img

ಕೇವಲ 6 ಕೇಜಿ ತೂಕ ತೂಗುತ್ತಿದ್ದ ಎರಡೂವರೆ ವರ್ಷದ ಮಗುವನ್ನು ನೋಡಿ ಕಣ್ಣುಗಳು ಚಲಿಸಲೇ ಇಲ್ಲ,  ಆ ಮಗುವನ್ನು ರಕ್ಷಿಸು ಎಂದು ಹೃದಯವು ಭಗವಂತನನ್ನು ಪ್ರಾರ್ಥಿಸುತ್ತಿತ್ತು, ಆದರೆ ಬುದ್ಧಿಗೆ ಮಾತ್ರ ವಿಷಯ ತಿಳಿದಿತ್ತು. ರಾತ್ರಿ ಆಗುತ್ತಿದ್ದಂತೆ ಆ ಪುಟ್ಟ ಜೀವವು ಈ ಜಗತ್ತನ್ನು ತೊರೆದಿತ್ತೆಂಬ ಸುದ್ದಿ ಬಂದಿತ್ತು. ಇದು ಕೇವಲ ಒಂದು ಮಗುವಿನ ವಿಷಯವಾಗಿರಲಿಲ್ಲ, ಬದಲಾಗಿ ಮಹಾರಾಷ್ಟ್ರದ ಕರ್ಜತ್ ತಾಲೂಕಿನ ವನವಾಸಿ ಕ್ಷೇತ್ರದಲ್ಲಿ ಪ್ರತೀ ವರ್ಷ 70 ರಿಂದ 80 ಮಕ್ಕಳು ಅಪೌಷ್ಟಿಕತೆಗೆ ಬಲಿಯಾಗುತ್ತಿದ್ದರು. ಇಂತಹ  ಮಕ್ಕಳನ್ನು ಪೋಷಿಸಿ ದೇಶದ ಭವಿಷ್ಯವನ್ನು ಉಳಿಸುವುದು ಹೇಗೆ? ಈ ಪ್ರಶ್ನೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಾಲ್ಯದಿಂದಲೇ ಸ್ವಯಂಸೇವಕರಾಗಿದ್ದ ಪ್ರಮೋದ್ ವಸಂತ್ ಜೀ ಅವರನ್ನು ಎಷ್ಟು ವಿಚಲಿತಗೊಳಿಸಿತ್ತು ಎಂದರೆ ಅವರು ಈ ವಿಷಯದ ಬಗ್ಗೆ ಗಂಭೀರವಾಗಿ ಕಾರ್ಯ ಪ್ರವೃತ್ತರಾಗಲು ತೀರ್ಮಾನಿಸಿದರು. ಹಲವು ವರ್ಷಗಳ ಕಾಲ ಕಲ್ಯಾಣ ಆಶ್ರಮದಲ್ಲಿ ಪೂರ್ಣಕಾಲಿಕರಾಗಿದ್ದ ಪ್ರಮೋದ್ ಜೀ ಅವರು ಆಶ್ರಮದ ಮೂಲಕ ವನವಾಸಿ ಕ್ಷೇತ್ರಗಳ ಪರಿಸ್ಥಿತಿಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಅಪೌಷ್ಟಿಕತೆಯ ಬಗ್ಗೆ ಸ್ವತಂತ್ರವಾಗಿ  ಕಾರ್ಯ ನಿರ್ವಹಿಸುವ ಸಲುವಾಗಿ ಅವರು 2003ರಲ್ಲಿ  ಶಬರಿ ಸೇವಾ ಸಮಿತಿಗೆ ಅಡಿಪಾಯ ಹಾಕಿದರು. ತಮ್ಮ ಧರ್ಮಪತ್ನಿಯಾದ ಶ್ರೀಮತಿ ರಂಜನಾ ಪ್ರಮೋದ್ ಅವರೊಂದಿಗೆ ಕರ್ಜತ್ ಜಿಲ್ಲೆಯ ಕೆಲವು ಗ್ರಾಮಗಳಿಂದ 2ತಿಂಗಳಿನಿಂದ ಹಿಡಿದು 5 ವರ್ಷದ ವರೆಗಿನ ಸುಮಾರು 700 ಅಪೌಷ್ಟಿಕತೆ ಇರುವ ಮಕ್ಕಳನ್ನು ಗುರುತಿಸಿದರು. ಆ ಎಲ್ಲಾ ಮಕ್ಕಳನ್ನು ಸ್ವಚ್ಛಗೊಳಿಸಿ, ನಿಯಮಿತ ವೈದ್ಯಕೀಯ ತಪಾಸಣೆ, ಪೌಷ್ಟಿಕ ಆಹಾರ( ಬೇಳೆಕಾಳುಗಳು, ಶೇಂಗಾ, ರಾಗಿ ಕೊಬ್ಬರಿ ಎಣ್ಣೆ, ದೇಸಿ ತುಪ್ಪ ಇತ್ಯಾದಿ)ಗಳನ್ನು ಉಚಿತವಾಗಿ ವಿತರಿಸಿದರು. ಇದರೊಂದಿಗೆ ಗರ್ಭಿಣಿ ಸ್ತ್ರೀಯರ ಪೌಷ್ಟಿಕತೆಯ ಬಗ್ಗೆಯೂ ಗಮನ ಹರಿಸಿದ್ದರು. ಜೊತೆಗೆ ಮಕ್ಕಳ ಪೋಷಕರನ್ನು ಶಿಕ್ಷಿತರನ್ನಾಗಿಸಿದರು.ಆಶ್ಚರ್ಯದ ವಿಷಯವೆಂದರೆ 2002ರ ತನಕ ಈ ತಾಲೂಕಿನಲ್ಲಿ ಎಲ್ಲಿ 70-80 ಮಕ್ಕಳು ಅಪೌಷ್ಟಿಕತೆಯಿಂದಾಗಿ ಸಾವನ್ನಪ್ಪುತ್ತಿದ್ದರೋ ಅಲ್ಲಿ 2008ರ ಹೊತ್ತಿಗೆ ಈ ಸಾವಿನ ಸಂಖ್ಯೆ 3-4ಕ್ಕೆ ಇಳಿಯಿತು, ಅಂದರೆ ಇಲ್ಲಿಯ ತನಕ 20,000 ಮಕ್ಕಳ ಪ್ರಾಣವನ್ನು ಉಳಿಸಲಾಗಿದೆ.

ರಾಯಗಡ, ಪಾಲ್ಘರ್, ಠಾಣೆ, ನಂದೂರಬಾರ್, ಧುಲೆ, ಜಲಗಾಂವ್, ಸೇಂಧ್ವಾ, ದಾದರ್  ನಾಗರ್ ಹವೇಲಿ (ಕೇಂದ್ರಾಡಳಿತ ಪ್ರದೇಶ) 8 ಜಿಲ್ಲೆಗಳ ವನವಾಸಿ ಕ್ಷೇತ್ರಗಳಲ್ಲಿ ಗ್ರಾಮವಾಸಿಗಳ ಸಹಾಯಮಾಡುತ್ತಿರುವ ಶಬರಿ ಸೇವಾ ಸಮಿತಿಯ ಕಾರ್ಯವು 1600 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನಡೆಯುತ್ತಿದೆ, ಇದರಲ್ಲಿ ವನವಾಸಿ ಕ್ಷೇತ್ರದ 47 ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ.


ಜೀವನದೊಂದಿಗೆ ಸಮಸ್ಯೆಗಳೂ ನಿರಂತರವಾಗಿ ಸಾಗುತ್ತಲೇ ಇರುತ್ತದೆ. ವನವಾಸಿ ಕ್ಷೇತ್ರಗಳಲ್ಲಿ ತಂದೆ ತಾಯಿಯರು ಹಗಲಿರುಳು ಹೊಲಗಳಲ್ಲಿ ದುಡಿದು ಮಕ್ಕಳನ್ನೇನೋ ಪೋಷಿಸುತ್ತಿದ್ದರು ಆದರೆ ಆ ಮಕ್ಕಳನ್ನು ಶಿಕ್ಷಿತರನ್ನಾಗಿಸುವಲ್ಲಿ ಅವರಿಗೆ ಯಾವುದೇ ಆಸಕ್ತಿ ಇರಲಿಲ್ಲ. ಶಬರಿ ಸೇವಾ ಸಮಿತಿಯು 2006ರಲ್ಲಿ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಹಾಗೂ ಗ್ರಾಮಗಳಲ್ಲಿ ಅನೇಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಪ್ರತೀ ಜನ್ಮಾಷ್ಟಮಿಯಂದು ಮೊಸರು ಕುಡಿಕೆಯ ರೀತಿಯಲ್ಲಿ ಪುಸ್ತಕ ಹಾಂಡಿ ಉತ್ಸವವನ್ನು ಪ್ರಾರಂಭಿಸಿದರು. ಇದರ ಆಶ್ರಯದಲ್ಲಿ ಮಕ್ಕಳಿಗೆ ರಾಮಾಯಣ, ಮಹಾಭಾರತ ಹಾಗು ನೈತಿಕ ಶಿಕ್ಷಣದ ಅನೇಕ ಪುಸ್ತಗಳನ್ನು ಉಚಿತವಾಗಿ ನೀಡಲಾಗುತ್ತಿದೆ. 


ಕರ್ಜತ್ ತಾಲೂಕಿನ ಕಶೆಲೆ ಗ್ರಾಮದಲ್ಲಿ ಉಚಿತ ವಿದ್ಯಾರ್ಥಿ ನಿಲಯವಿದ್ದು ಇಲ್ಲಿ 35 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ, ಅಷ್ಟೇ ಅಲ್ಲ ಹೆಣ್ಣುಮಕ್ಕಳಿಗಾಗಿ ಶೈಕ್ಷಣಿಕ ಶಿಬಿರಗಳು ಹಾಗೂ ಮಕ್ಕಳ ಜೊತೆಗೆ ಮಾತೆಯರಿಗೂ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಳ್ಳಿಗಳಲ್ಲಿ 10 ಉಚಿತ ಗ್ರಂಥಾಲಯವನ್ನೂ ಪ್ರಾರಂಭಿಸಲಾಗಿದೆ. 

ವನವಾಸಿ ಕಲ್ಯಾಣ ಆಶ್ರಮದ ಅಖಿಲ ಭಾರತೀಯ ಸಹ ಮಹಿಳಾ ಪ್ರಮುಖರಾಗಿದ್ದ ಶ್ರೀಮತಿ ರಂಜನಾ ಜೀ ಹೇಳುತ್ತಾರೆ, ಎರಡು ಕಾಲುಗಳೂ ಸರಿ ಇಲ್ಲದ ವಿಕಲಾಂಗರಾಗಿದ್ದ ನಿರ್ಮಲಾಳ ಮದುವೆ ಆಗುವುದು ಕಷ್ಟಕರವಾಗಿತ್ತು. ಆದರೆ ಹೊಲಿಗೆ ಕೇಂದ್ರದಿಂದ ತರಬೇತಿ ಪಡೆದು ತನ್ನ ಕಾಲಮೇಲೆ ತಾನು ನಿಂತಾಗ ಆಕೆಯ ಮದುವೆಯೂ ಆಯಿತು. ಇಂದು ಆಕೆಯು ಮನೆಯ ಖರ್ಚಿನ ವಿಷಯದಲ್ಲಿ ತನ್ನ ಗಂಡನಿಗೆ ಬೆಂಬಲವಾಗಿಯೂ ನಿಂತಿದ್ದಾಳೆ ಎಂದು.


ಶುರ್ವಾಣಿ ಎಂಬ ಗ್ರಾಮದ ಕವಿತಾ ತರಬೇತಿಯನ್ನು ಪಡೆದು ತನ್ನ ಸ್ವಂತದ ಅಂಗಡಿ ತೆರದದ್ದಷ್ಟೇ ಅಲ್ಲ ತನ್ನ ತಂದೆಯು ಹೊಸ ಟ್ಯಾಕ್ಸಿ ಉದ್ಯೋಗ ಪ್ರಾರಂಭಿಸಲು ತಾನು ಉಳಿಸಿದ್ದ 35,000 ರೂಪಾಯಿಗಳನ್ನು ಬ್ಯಾಂಕ್ ನಲ್ಲಿ ಇಟ್ಟಿದ್ದಳು.ಇಂತಹದೇ ಒಂದು ಕಥೆ ಅಂಜಲಿಯದ್ದೂ ಕೂಡ. 6ವರ್ಷಗಳ ಹಿಂದೆ ಪತಿಯ ಸಾವು ಸಂಭವಿಸಿದಾಗ ಅಂಜಲಿ ಹೊಲಿಗೆ ಕೇಂದ್ರದಲ್ಲಿ ತರಬೇತಿ ಪಡೆದು ಇಂದು ಅದೇ ತರಬೇತಿ ಕೇಂದ್ರದಲ್ಲಿ ಮಹಿಳೆಯರಿಗೆ ತರಬೇತಿ ನೀಡುತ್ತಿದ್ದಾಳೆ ...ಅದರೊಂದಿಗೆ ತನ್ನ ಬೂಟೀಕ್ ಅನ್ನೂ ನಡೆಸುತ್ತಿದ್ದಾಳೆ.ಹೀಗೆ ಸುಮಾರು 10 ಹೊಲಿಗೆ ಕೇಂದ್ರಗಳು ನಡೆಯುತ್ತಿದ್ದು, ಇದರಲ್ಲಿ 750 ಮಹಿಳೆಯರು ತರಬೇತಿ ಪಡೆದಿದ್ದು 480 ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ.


ಅಸಹಾಯಕರಿಗೆ ನೀಡುವ ಒಂದು ಸಣ್ಣ ಆಸರೆಯೂ ಸಹ ಅವರನ್ನು ಸ್ವಾಭಿಮಾನದಿಂದ ಗಟ್ಟಿಯಾಗಿ ನಿಲ್ಲುವಲ್ಲಿ ಸಹಕಾರಿಯಾಗುತ್ತದೆ. ಎರಡೂ ಕೈಗಳೂ ಸರಿ ಇಲ್ಲದ ವಿಕಲಾಂಗನಾದ ಸುರೇಶ್ ಪಾಡವಿಗೆ ತನ್ನ ಖರ್ಚನ್ನು ನಿಭಾಯಿಸುವುದೂ ಕಷ್ಟವಾಗಿತ್ತು. ಆದರೆ ಇಂದು ಅವರು ತನ್ನ ಜೊತೆಗೆ ಇಡೀ ಕುಟುಂಬವನ್ನೂ ನೋಡಿಕೊಳ್ಳುತ್ತಿದ್ದಾರೆ. 4 ವರ್ಷಗಳ ಹಿಂದೆ ಶಬರಿ ಸೇವಾ ಸಮಿತಿಯ ಸಹಯೋಗದಿಂದ ದೊರೆತ ಒಂದು ಸಣ್ಣ ದಿನಸಿ ಅಂಗಡಿಯು ಇಂದು ಅವರ ಜೀವನದ ಆಧಾರವಾಗಿದೆ. ಈ ರೀತಿ 460 ವಿಕಲಾಂಗರಿಗೆ ಹಾಗು ನೇತ್ರಹೀನರಿಗೆ ಶಬರಿ ಸೇವಾ ಸಮಿತಿಯ ಮೂಲಕ ಹಲವು ರೀತಿಯ ಸಹಾಯ ದೊರೆಯುತ್ತಿದೆ.


ವನವಾಸಿ ಗುಡ್ಡಗಾಡು ಪ್ರದೇಶಗಳಲ್ಲಿ ಅಲ್ಲಿನ ಜನರು ಸಾಮಾನ್ಯವಾಗಿ ಕೃಷಿಯನ್ನು ಅವಲಂಬಿಸಿರುತ್ತಾರೆ, ಆದರೆ ನೀರಿನ ಸಮಸ್ಯೆಯು ಅವರ ಜೀವನದ ಅತಿ ದೊಡ್ಡ ಸಂಕಟವಾಗಿ ಎದುರಾಗುತ್ತದೆ. ಸಮಿತಿಯ ಎಲ್ಲಾ ಕಾರ್ಯಕರ್ತರ ಸಹಯೋಗದಿಂದ ಈ ಕ್ಷೇತ್ರದಲ್ಲೂ ಜಾಣ್ಮೆಯಿಂದ ಹಾಗೂ ಯೋಜನಾಬದ್ಧವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿದೆ. ಪಾಲ್ಘರ್, ಸತ್ಪುರದಂತಹ ಹಲವು ಪ್ರದೇಶಗಳನ್ನು ಒಳಗೊಂಡಂತೆ ಶಬರಿ ಸೇವಾ ಸಮಿತಿಯಿಂದ ಸುಮಾರು 950 ಎಕರೆ ಭೂಮಿಯಲ್ಲಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಗಿಡಗಳನ್ನು ನೆಡಲು ಪ್ರೇರೇಪಿಸುವ ಮೂಲಕ ಧಡಗಾಂವ್, ಜವ್ಹಾರ್, ಅಕ್ಕಲಕುವ ತಾಲೂಕುಗಳಲ್ಲಿ ಸುಮಾರು 20,000 ಮಾವು ಹಾಗು ಇತರೆ ಹಣ್ಣುಗಳ ಮರಗಳನ್ನು ಹಾಗು 50,000 ಸಾಗುವಾನಿಯ ಮರಗಳನ್ನು ನೆಡುವ ಮೂಲಕ ಅಲ್ಲಿನ ಪರಿವಾರಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಪ್ರೇರೇಪಿಸುತ್ತಿದೆ. ನೀರಾವರಿ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಮನಗಂಡು ಹಳ್ಳಿಯವರೊಂದಿಗೆ ಸೇರಿ 32 ಬಾವಿಗಳನ್ನು, ಹಲವು ಬೋರ್ ವೆಲ್ ಗಳನ್ನು, ಹಲವು ಕುಡಿಯುವ ನೀರಿನ ಟ್ಯಾಂಕ್ ಗಳನ್ನು ಹಾಗೂ  ಕಾಂಕ್ರೀಟ್ ಅಣೇಕಟ್ಟುಗಳನ್ನು ನಿರ್ಮಿಸಲಾಗಿದೆ. ಈ ರೀತಿ ಸೇವಾ ಸಮಿತಿಯ ಮೂಲಕ ನೀರಾವರಿ, ಕೃಷಿ, ಹಣ್ಣು, ತೋಟ ಇತ್ಯಾದಿಗಳ ಮೂಲಕ ಸುಮಾರು 5000 ಪರಿವಾರಗಳು ಉದ್ಯೋಗ ಪಡೆದುಕೊಂಡು ಸ್ವಾವಲಂಬಿಯಾಗುವ ಮುಂಚೂಣಿಯಲ್ಲಿದ್ದಾರೆ.

ತಮಗಾಗಿ ಪ್ರತಿಯೊಬ್ಬರೂ ಬದುಕುತ್ತಾರೆ ಆದರೆ ದೇಶವಾಸಿಗಳಿಗಾಗಿ ತಮ್ಮ ಇಡೀ ಜಿವನವನ್ನೇ ಸಮರ್ಪಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಶಬರಿ ಸೇವಾ ಸಮಿತಿಯು ವನವಾಸಿ ಕ್ಷೇತ್ರದ ಜನರಿಗಾಗಿ ಸಮರ್ಪಿತವಾಗಿದ್ದು ಅವರ ಜೀವನವನ್ನು ಸುಗಮಗೊಳಿಸುತ್ತಾ ಅವರನ್ನು ದೇಶದ ಮುಖ್ಯವಾಹಿನಿಯೊಂದಿಗೆ ಜೋಡಿಸುತ್ತಿರುವ  ಕಾರ್ಯ ನಿಜವಾಗಿಯೂ ಸ್ಫೂರ್ತಿದಾಯಕವಾಗಿದೆ.

1082 Views
अगली कहानी