सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಇನ್ನು ಮುಂದೆ ನಿಮ್ಮ ಗ್ರಾಮವನ್ನು ತೊರೆಯಬೇಕಾಗಿಲ್ಲ. ಡಾ.ಹೆಡ್ಗೆವಾರ್ ಸೇವಾ ಸಮಿತಿ ವತಿಯಿಂದ ಬದಲಾದ ನಂದೂರ್ಬಾರ್ (ಮಹಾರಾಷ್ಟ್ರ) ಚಿತ್ರಣ.

ದಕ್ಷಿಣ

parivartan-img

 ಈಗ ಕೃಷಿಯೊಂದಿಗೆ ಬದುಕುವುದು ಕಷ್ಟ, ಮಕ್ಕಳ ಹೊಟ್ಟೆ ತುಂಬುವುದಿಲ್ಲ.ಈಗ ನೀವು ನಿಮ್ಮ ಹಳ್ಳಿಯನ್ನು ತೊರೆದು ಸಂಪಾದಿಸಲು ನಗರಕ್ಕೆ ಹೋಗಬೇಕು….ಈ ಕಥೆ ಒಬ್ಬ ರೈತನದಲ್ಲ, ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ನೂರಾರು ರೈತರ ಜೀವನದ ಕಹಿ ಸತ್ಯ. ಐದು ಸಾವಿರದ ಮೂವತ್ತೈದು ಕಿಲೋಮೀಟರ್‌ಗಳಲ್ಲಿ 67% ಬುಡಕಟ್ಟು ಜನಸಂಖ್ಯೆ ಹೊಂದಿರುವ ನಂದೂರ್ಬಾರ್‌ನ ರೈತರು ಹಸಿವಿನಿಂದ ಸಾಯಬೇಕಾಗುತ್ತಿತ್ತು. ಆದರೆ ಈಗ ತಮ್ಮ ಕೆಟ್ಟ ದಿನಗಳಿಂದ ಹೊರ ಬಂದು ಮೆಲ್ಲಮೆಲ್ಲನೆ ಅವರು ಪ್ರಗತಿಯ ಪಥದಲ್ಲಿ ಸಾಗುತ್ತಿದ್ದಾರೆ.


ಬಡತನ ಮತ್ತು ಅಪೌಷ್ಟಿಕತೆಯನ್ನು ನಿಧಾನವಾಗಿ ಹಿಮ್ಮೆಟ್ಟಿಸಲು ಬುಡಕಟ್ಟು ಸಮಾಜದವರು ಕಲಿತಿರುವರು. ಇದೆಲ್ಲವೂ ಸಾಧ್ಯವಾದುದು ಡಾ.ಹೆಡಗೇವಾರ್ ಸೇವಾ ಸಮಿತಿಯ ಅವಿರತ ಪ್ರಯತ್ನದಿಂದ. ಸಮಿತಿಯು ಕೃಷಿ ವಿಧಾನವನ್ನು ಬದಲಿಸಲು ರೈತರಿಗೆ ಪ್ರಶಿಕ್ಷಣ ನೀಡಿ ಅವರು ಬಡತನದ ಮನೋಭಾವದಿಂದ ಹೊರಬರಲು ಯಶಸ್ವೀ ಪ್ರಯತ್ನ ಮಾಡಿತಲ್ಲದೆ ಅವರ ಮಕ್ಕಳಿಗೆ ವಿದ್ಯಾಭ್ಯಾಸವನ್ನೂ ಮಾಡಿಸಿತು. ಡಾ. ಗಜಾನನ ಡಾಂಗೆ, ಲಲಿತ ಬಾಲಕೃಷ್ಣ ಪಾಠಕ್ , ರಂಗನಾಥ ರುಂಝಝಿ, ನವಲೆ ಮುಂತಾದ ಸ್ವಯಂಸೇವಕರ ಪ್ರಯತ್ನದಿಂದ 27 ವರ್ಷಗಳ ಹಿಂದೆ ರಚಿಸಲಾದ ಈ ಸಮಿತಿಯು 30 ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಆ ಗ್ರಾಮದ ಸ್ಥಿತಿಗತಿ ಮತ್ತು ದಿಕ್ಕನ್ನು ಪರಿವರ್ತಿಸಿತು.


ಒಂದು ಕಾಲದಲ್ಲಿ ಮಹಾರಾಷ್ಟ್ರದ ಅತ್ಯಂತ ಹಿಂದುಳಿದ ಜಿಲ್ಲೆಗಳಾದ ನವಾಪುರ ತಾಲೂಕಿನ ಖಾಂಡಬರಾ ವಿಕಾಸ ಕೇಂದ್ರದ 8 ಹಳ್ಳಿಗಳಲ್ಲಿ ನಬಾರ್ಡಿನ ಒಂದು ಯೋಜನೆಯ (Project) ಮೂಲಕ ಸೇವಾ ಸಮಿತಿಯು ಕೆಲಸ ಮಾಡಲು ಪ್ರಾರಂಭಿಸಿತು. 500 ಸಣ್ಣ ರೈತರೊಂದಿಗೆ ಸೇರಿ ಮಾವು ಮತ್ತು ನೆಲ್ಲಿ ಗಿಡಗಳನ್ನು ನೆಡಲಾಯಿತು. ರಾಷ್ಟ್ರೀಯ ಆವಿಷ್ಕಾರ ಪ್ರಕಲ್ಪದ ಅಡಿಯಲ್ಲಿ ಪರಸ್ಪರರ ಬಾವಿಯ ನೀರನ್ನು ಹಂಚಿಕೊಳ್ಳುವುದನ್ನು ಕಲಿಸಿಕೊಡಲಾಯಿತು.ಇಷ್ಟೇ ಅಲ್ಲದೆ, ಹೊಲಗಳ ಮಣ್ಣಿನ ಕೊರೆತವನ್ನು ತಡೆಗಟ್ಟಲು ಫಾರ್ಮ್ ಬಂಡಿಂಗ್ ಮಾಡಲಾಯಿತು. ಇದರ ಪ್ರಕಾರ ಹೊಲಗಳ ಇಳಿಜಾರಿನ ನದೀ ಮುಖಗಳಲ್ಲಿ ಆಳವಾದ ಹೊಂಡಗಳನ್ನು ತೋಡಿ ಮಣ್ಣಿನ ಹರಿವನ್ನು ತಡೆಯಲಾಯಿತು.


ರೈತರ ಮಕ್ಕಳಿಗೆ ಹತ್ತನೇ ತರಗತಿಯವರೆಗೆ ಕಲಿಸಲು ಸಮಿತಿಯು ನಿವಾಸಿ ಶಾಲೆಯನ್ನು ನಡೆಸುತ್ತಿದೆ. ಇದೀಗ ಬುಡಕಟ್ಟು ಜನಾಂಗದ 500ಮಕ್ಕಳು ಇಲ್ಲಿ ತಮ್ಮ ಭವಿಷ್ಯವನ್ನು ಹಸಿರಾಗಿಸಿಕೊಳ್ಳುತ್ತಿದ್ದಾರೆ. ನೀರಿನ ಬಗ್ಗೆ ಸರ್ಕಾರದ ಎದುರು ಕೈ ಚಾಚುವ ಬದಲು ಸಮಿತಿಯು ಅಣೆಕಟ್ಟುಗಳನ್ನು ನಿರ್ಮಿಸಲು ರೈತರನ್ನು ಪ್ರೇರೇಪಿಸಿತು. ನೇಸು ನದಿಯ ನೀರಿನ ಮೇಲೆ ಸಣ್ಣ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಎಂಟು ಗ್ರಾಮದ ರೈತರು ತಮ್ಮ ಹೊಲಗಳಿಗೆ ನದಿ ನೀರಿನಿಂದ ನೀರಾವರಿ ವ್ಯವಸ್ಥೆ ಮಾಡಿಕೊಂಡರು. ಪ್ರತಿ ವರ್ಷ ಈ ನದಿಯ ದಡದಲ್ಲಿ, ದಸರಾ ಮರುದಿನ, ನದಿ ಪೂಜೆಯ ಕಾರ್ಯಕ್ರಮವಿದೆ ಎಂದು ಸಮಿತಿಯ ಕಾರ್ಯದರ್ಶಿಯೂ, ನಿಕಟಪೂರ್ವ ಜಿಲ್ಲಾ ಕಾರ್ಯವಾಹರೂ ಆದ ನಿತಿನ್ ಜಿ ಹೇಳುತ್ತಾರೆ. ಇದರಲ್ಲಿ ನೂರಾರು ಗ್ರಾಮಸ್ಥರು ಭಾಗವಹಿಸುತ್ತಾರೆ.

ಈಗ ಸರ್ಕಾರ ಇಲ್ಲಿ 17 ಅಣೆಕಟ್ಟುಗಳನ್ನು ಸಹ ನಿರ್ಮಿಸಿದೆ. ಸಮಿತಿಯು ರೈತರ ಸಣ್ಣಪುಟ್ಟ ಅಗತ್ಯಗಳನ್ನು ನೋಡಿಕೊಂಡು ಅವುಗಳನ್ನು ಪೂರೈಸಿದೆ. ಭತ್ತದ ಸಿಪ್ಪೆಯನ್ನು ತೆಗೆದು ಅಕ್ಕಿ ಮಾಡಲು ರೈತರು ಗುಜರಾತಿಗೆ ಹೋಗಬೇಕಾಗಿರುವುದನ್ನು ಅವರು ಗಮನಿಸಿದರು. ಇದರಲ್ಲಿ ಸಾಕಷ್ಟು ಹಣ, ಶ್ರಮ ಮತ್ತು ಸಮಯ ವ್ಯಯವಾಗುತ್ತಿತ್ತು. ಆದ್ದರಿಂದ ಆಯಾಯಾ ಗ್ರಾಮದಲ್ಲಿಯೇ ಭತ್ತದ ಸಿಪ್ಪೆಯನ್ನು ತೆಗೆಯಲು 13 ಗ್ರಾಮಗಳಲ್ಲಿ 13 ಭತ್ತದ ಗಿರಣಿಗಳನ್ನು ತೆರೆಯಲಾಯಿತು. ರೈತರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಹಣವನ್ನು ಪಾವತಿಸಲು ಅವಕಾಶ ನೀಡಲಾಯಿತು.

ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವವರನ್ನು ಅಪೌಷ್ಟಿಕತೆಯಿಂದ ಪಾರುಮಾಡಲು ತಮ್ಮ ಮನೆಗಳಲ್ಲಿ ತರಕಾರಿಗಳನ್ನು ಬೆಳೆಸಲು ಕಲಿಸಲಾಯಿತು. ಒಂದೇ ಬೆಳೆಯಾಗಿರುವುದರಿಂದ ಮಣ್ಣಿನ ಸವೆತ ವ್ಯಾಪಕವಾಗಿತ್ತು. ಇದಕ್ಕಾಗಿ ಇಂಟರ್ಲಾಕ್ ಹಾಕಿದ ಸ್ಥಳದಲ್ಲಿಯೂ ತರಕಾರಿಗಳನ್ನು ಬೆಳೆಸಲಾಯಿತು ಮತ್ತು ಬೆಳೆ ಕ್ಯಾಲೆಂಡರ್ ತಯಾರಿಸಲಾಯಿತು.ಬನ್ನಿ ತೆತಿಬಾಯಿ ಕೌಶಲ್ ಪಾವ್ರಾ ಅವರನ್ನು ಭೇಟಿಯಾಗೋಣ. ಸಮಿತಿಯ ಸಹಯೋಗದೊಂದಿಗೆ ನಡೆಯುತ್ತಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ದೊರೆತ ತರಬೇತಿಯಿಂದ ಅತ್ಯುತ್ತಮ ತರಕಾರಿಗಳನ್ನು ಮಾರಾಟ ಮಾಡಿದ್ದಕ್ಕಾಗಿ ಈ ಮಹಿಳೆಗೆ N.I.C.R.A. ಸಂಸ್ಥೆಯು ಬಹುಮಾನ ನೀಡಿತು.ಪಶ್ಚಿಮ ಕ್ಷೇತ್ರದ ಸೇವಾ ಪ್ರಮುಖ್ ಉಪೇಂದ್ರ ಕುಲಕರ್ಣಿ ಅವರ ಪ್ರಕಾರ, ಇದು ರೈತರ ವಲಸೆ ಮತ್ತು ಆತ್ಮಹತ್ಯೆಯ ವಿರುದ್ಧ ಸಮಿತಿಯ ಹೋರಾಟವಾಗಿದ್ದು, ಇದರಿಂದ 12 ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸು ದೊರೆತಿದೆ.

ಸಂಪರ್ಕಿಸಿ:
ಡಾ.ನಿತಿನ್ ಪಂಚಭಾಯಿ 8888085005

721 Views
अगली कहानी