सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಸಫಲತೆಗಾಗಿ ಸಂಕಲ್ಪ. ಶ್ರೀಮತಿ ಮೇಘಾ ಪ್ರಮೋದ್.

ದಕ್ಷಿಣ

parivartan-img

 ಕೇರಳದ ಎರ್ನಾಕುಲಂ ಜಿಲ್ಲೆಯ ಪುಥೆನ್‌ಕ್ಕಾವು ಪಟ್ಟಣದಲ್ಲಿ ವಾಸಿಸುವ ಶಿಖಾ ಸುರೇಂದ್ರನ್ ರ ಪುಟ್ಟ-ಪುಟ್ಟ ಕಣ್ಣುಗಳಲ್ಲಿ ದೊಡ್ಡ-ದೊಡ್ಡ ಕನಸುಗಳಿತ್ತು. ತಂದೆ ಹಾಸಿಗೆ ಹಿಡಿದಿದ್ದರು ಹಾಗು ತಾಯಿ ಅಸಹಾಯಕಳಾಗಿದ್ದಳು. ಹೇಗೊ ಸಂಬಂಧಿಕರ ಸಹಾಯದಿಂದ ಎಂಜಿನಿಯರಿಂಗ್ ಪದವಿಯನ್ನು ಮುಗಿಸಿದ ಈ ಪ್ರತಿಭಾಶಾಲಿ ಹುಡುಗಿ ಐಎಎಸ್ ಮುಗಿಸಿ ದೇಶದ ಸೇವೆ ಮಾಡಲು ಬಯಸಿದ್ದಳು, ಆದರೆ ಹಣವಿಲ್ಲದೆ ದೆಹಲಿಯಲ್ಲಿದ್ದು ಕೋಚಿಂಗ್ ಪಡೆಯುವುದು ಹೇಗೆ ಸಾಧ್ಯವಾದೀತು. ಆಗ ಶಿಖಾ ಸಂಕಲ್ಪದ ಸಂಪರ್ಕಕ್ಕೆ ಬಂದರು.ಸಂಘದ ಪ್ರಚಾರಕರಾದ ಸಂತೋಷ್ ತನೇಜಾಜೀಯವರ ಪ್ರಯತ್ನದಿಂದ 1986ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೆಹಲಿಯಲ್ಲಿ ಸಿವಿಲ್ ಸರ್ವಿಸ್ ಗಾಗಿ  ತರಬೇತಿಯನ್ನು ನೀಡುತ್ತಿದೆ. ಇಲ್ಲಿ ಅತಿ ಕಡಿಮೆ ಮೊತ್ತದ ಶುಲ್ಕವನ್ನು ನೀಡಿ ತರಬೇತಿಯ ಜೊತೆಗೆ ಹಾಸ್ಟೆಲ್ ಸೌಲಭ್ಯವನ್ನೂ ಪಡೆದ ಶಿಖಾ ದಾಖಲೆ ನಿರ್ಮಿಸಿದ್ದಳು. 2017-18ರ ಬ್ಯಾಚಿನ ಶಿಖಾ ಸುರೇಂದ್ರನ್ ಐಎಎಸ್ ನಲ್ಲಿ ದೇಶದಲ್ಲೇ 16ನೇ ಸ್ಥಾನವನ್ನು ಪಡೆದರು.


ರಾಜಸ್ಥಾನದ ಅಲ್ವಾರ್ ಜಿಲ್ಲೆಯ ರೋನಿಜಾಜಾಟ್ ಹಳ್ಳಿಯ ರೈತ ಕುಟುಂಬದ ರಾಜೀವ್ ಕುಮಾರರದ್ದು ಇದೇ ರೀತಿಯ ಕಥೆ. ಅವರ ಕುಟುಂಬದಲ್ಲಿ ಯಾರೂ ಶಿಕ್ಷಿತರಿರಲಿಲ್ಲ. ಇಂದು ಇವರು ಸಿವಿಲ್ ಸೇವೆಗೆ ಆಯ್ಕೆಯಾಗಿ ಮಸ್ಸೂರಿಯಲ್ಲಿ ಐಎಎಸ್ ತರಬೇತಿ ಪಡೆಯುತ್ತಿದ್ದಾರೆ. ಹಾಗೆಯೆ ಅವರ ಈ ಯಶಸ್ಸಿಗೆ ಸಂಕಲ್ಪ ಪರಿವಾರವೆ ಕಾರಣ ಎನ್ನುತ್ತಾರೆ. ಹಣದ ಸಮಸ್ಯೆ ಯಾವ ವಿದ್ಯಾರ್ಥಿಗಳ ಪ್ರತಿಭೆಗೆ ತೊಡಕಾಗಿದೆಯೊ ಅಂತಹ  20 ವಿದ್ಯಾರ್ಥಿಗಳಿಗೆ ಸಂಕಲ್ಪ ಪರಿವಾರವು ಪ್ರತಿ ವರ್ಷ ಉಚಿತ ತರಬೇತಿಯನ್ನು ನೀಡುತ್ತಿದೆ.   ವಿಶೇಷವಾಗಿ ಬುಡಕಟ್ಟು ಜನಾಂಗ ಹಾಗು ಈಶಾನ್ಯ ಭಾಗದ ಬಡ ವಿದ್ಯಾರ್ಥಿಗಳಿಗೆ ಸಂಕಲ್ಪವು ಪಾಲಕರು ಹಾಗು ಗುರುವಿನ ಪಾತ್ರವನ್ನು ನಿರ್ವಹಿಸುವ ಕುಟುಂಬದಂತಿದೆ.


ಬೆಳಗ್ಗಿನ ಯೋಗಾಭ್ಯಾಸ, ಸಂಜೆಯ ಶಾಖೆಯಿಂದ ಹಿಡಿದು ರಾತ್ರಿಯ ಪ್ರಾರ್ಥನೆಯ ತನಕ ನಿಯಮಬದ್ಧವಾದ ಹಾಗು ಸಂಸ್ಕಾರಗಳಿಂದ ಕೂಡಿದ ದಿನಚರಿಯು ಸಂಕಲ್ಪವನ್ನು ಬೇರೆ ತರಬೇತಿ ಕೇಂದ್ರಗಳಿಗಿಂತ ಭಿನ್ನವಾಗಿಸುತ್ತದೆ. ವಿಶೇಷವಾದ ಉಪನ್ಯಾಸ ಸರಣಿಗಳಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳನ್ನು ಶಿಕ್ಷಣದೊಂದಿಗೆ ಜೋಡಿಸಬಲ್ಲ ಮೇಜರ್ ಜನರಲ್ ಪಿ.ಕೆ. ಸಹಗಲ್ ಹಾಗು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರಂತಹ ರಾಷ್ಟ್ರೀಯವಾದಿಗಳ ಅನುಭವ ವಿದ್ಯಾರ್ಥಿಗಳಲ್ಲಿ ದೇಶಕ್ಕಾಗಿ ಜವಾಬ್ದಾರಿಯುತರಾಗಿರಲು ಪ್ರೇರೇಪಿಸುತ್ತದೆ. ದೇಶಕ್ಕೆ ರಾಷ್ಟ್ರ‍ೀಯವಾದಿ ಆಡಳಿತಗಾರರನ್ನು ನೀಡುವ ಉದ್ದೇಶದಿಂದ 1986ರಲ್ಲಿ ಸಂಕಲ್ಪವನ್ನು ಸ್ಥಾಪಿಸಲಾಯಿತು ಎಂದು ಸಂಸ್ಥೆಯ ಸಂಸ್ಥಾಪಕರಾದ ಸಂತೋಷ್ ಜೀಯವರು ಹೇಳುತ್ತಾರೆ. 2015ರಲ್ಲಿ ಸಿವಿಲ್ ಸೇವೆಯಲ್ಲಿ ಯಶಸ್ವಿಯಾದ ಒಟ್ಟು 1256 ವಿದ್ಯಾರ್ಥಿಗಳಲ್ಲಿ 670 ವಿದ್ಯಾರ್ಥಿಗಳು ಸಂಕಲ್ಪದವರೆ ಆಗುವುದರೊಂದಿಗೆ ಸಂಕಲ್ಪವು ಸಫಲತೆಯ ಇತಿಹಾಸವನ್ನು ನಿರ್ಮಿಸಿದೆ. 


ಸಂಸ್ಥೆಯು ಪ್ರತಿ ವರ್ಷ ಆಯೋಜಿಸುವ ಗುರು ಸಮ್ಮಾನ್ ಕಾರ್ಯಕ್ರಮದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಗುರುಗಳೊಂದಿಗೆ ಸನ್ಮಾನಿಸಲಾಗುತ್ತದೆ. ಇಷ್ಟೆ ಅಲ್ಲದೆ, ಪ್ರತಿ ವರ್ಷ ಜಿಂಜೋಲಿಯಲ್ಲಿ ನಡೆಯುವ ದಿಶಾಬೋಧ  ಶಿಬಿರದಲ್ಲಿ ದೇಶದ 200 ಪದವೀದರರನ್ನು ಸಿವಿಲ್ ಸೇವೆಯ ಪರೀಕ್ಷೆಯ ತಯಾರಿಯ ಮೊದಲು ಅವರಿಗೆ ಓದುವ ವಿಧಾನವನ್ನು ಕಲಿಸಿ ದೇಶಕ್ಕಾಗಿ ತಮ್ಮ ಜವಾಬ್ದಾರಿಯನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ. ಈ ಶಿಬಿರದಲ್ಲಿ ಭಾಗವಹಿಸಿದವರಿಗೆ ಸಹ ಸರಕಾರ್ಯವಾಹರಾದ ಮಾನ್ಯ ಶ್ರೀ ಕೃಷ್ಣಗೋಪಾಲ್ ಜಿ ಸೇರಿದಂತೆ ಸಂಘದ ಹಿರಿಯ ಅಧಿಕಾರಿಗಳ ಮಾರ್ಗದರ್ಶನವೂ ದೊರೆಯುತ್ತಿದೆ. 


ಸಂಕಲ್ಪದ ವೈಶಿಷ್ಟ್ಯವೆಂದರೆ ಇಲ್ಲಿನ ಆತ್ಮೀಯ ವಾತಾವರಣದಲ್ಲಿ ದೆಹಲಿಯಂತಹ ಮಹಾನಗರದಲ್ಲಿ ಕೌಟುಂಬಿಕ ವಾತಾವರಣದ ಕೊರತೆ ಕಾಣಿಸುವುದಿಲ್ಲ ಎಂದು ಶಿಖಾ ಸುರೇಂದ್ರನ್ ಹೇಳುತ್ತಾರೆ. ಆಡಳಿತಾಧಿಕಾರಿಗಳನ್ನು ರಾಷ್ಟ್ರೀಯವಾದಿ ಚಿಂತನೆಗಳಿಗೆ ಜೋಡಿಸಲು ಪ್ರತಿ ವರ್ಷ 3 ದಿನಗಳ ಉಪನ್ಯಾಸ ಸರಣಿಗಳನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಸಮಾಜದ ಪ್ರಬುದ್ಧ ಚಿಂತಕರು ವಿವಿಧ ರಾಷ್ಟ್ರೀಯ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. 


ಸಂಪರ್ಕ:- ಸಂತೋಷ್ ತನೇಜಾ

ಮೊಬೈಲ್ ಸಂ:- 9711262285
738 Views
अगली कहानी