सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಹಳ್ಳಿಗಳಿಗೆ ಅಭಿವೃದ್ಧಿಯ ದಾರಿಯನ್ನು ತೋರಿಸುತ್ತಿರುವ “ಗೌಮುಖಿ ಸೇವಾಧಾಮ” (ಛತ್ತೀಸ್ಗಢ)

ಶ್ರೀಮತಿ ಮೇಘ ಪ್ರಮೋದ್ | ದಕ್ಷಿಣ

parivartan-img

ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಿಂದ 60 ಕಿಲೋಮಿಟರ್ ದೂರದಲ್ಲಿರುವ ಒಂದು ಪುಟ್ಟ ಹಳ್ಳಿ ದೇವಪಹರಿ. ಹದಿನೆಂಟು ವರ್ಷಗಳ ಹಿಂದೆ ದೇವಪಹರಿಗೆ ಹೋಗುವುದೆಂದರೆ ಹಿಮಾಲಯವನ್ನು ಏರಿದಷ್ಟೆ ಕಷ್ಟವಾಗುತ್ತಿತ್ತು. ಹಳ್ಳಿಯನ್ನು ತಲುಪಲು ಮೂರು-ಮೂರು ಕಣಿವೆಗಳನ್ನು ದಾಟಬೇಕಾಗಿತ್ತು. ಕೆಲವೊಮ್ಮೆ ಇದನ್ನು ದಾಟಲು ಎರಡು ದಿನಗಳೇ ಬೇಕಾಗುತ್ತಿತ್ತು. ದೇವಪಹರಿ ಮಾತ್ರವಲ್ಲ ಲೆಮರು, ಡೀಡಾಸರಾಯ್, ಜತಾಡಾಡ್ ಸೇರಿದಂತೆ ಕೋರ್ಬಾ ಜಿಲ್ಲೆಯ ಈ 40 ಹಳ್ಳಿಗಳನ್ನು ತಲುಪಲು ರಸ್ತೆಯಾಗಲಿ ಸರ್ಕಾರಿ ವಾಹನಗಳಾಗಲಿ ಇರಲಿಲ್ಲ. ಶಿಕ್ಷಣಕ್ಕಾಗಿ ಶಾಲೆಗಳೂ ಇರಲಿಲ್ಲ, ಚಿಕಿತ್ಸೆಗಾಗಿ ಯಾವುದೇ ವೈದ್ಯರೂ ಇರಲಿಲ್ಲ. ವಿದ್ಯುಚ್ಛಕ್ತಿ ತಲುಪಿಸುವ ಪ್ರಕ್ರಿಯೆಯು ಇನ್ನೂ ನಡೆಯುತ್ತಿದೆ. ಅರಣ್ಯ ಉತ್ಪನ್ನಗಳನ್ನು ಅವಲಂಬಿಸಿ ಕಾಡುಗಳ ಸಹಾಯದಿಂದ ಜೀವನ ನಡೆಸುತ್ತಿರುವ ಪಾಂಡೊ, ಬಿರ್ಹೋರ್, ಕೊರ್ವಾ ಮತ್ತು ಕಂವರ್ ಜನಾಂಗದ ಈ ವನವಾಸಿ ಸಮಾಜದ ರೋಗಿಗಳಂತು ಭಗವಂತನನ್ನು ನಂಬಿ ಬದುಕುತ್ತಿದ್ದಾರೆ. 




ಇದೆಲ್ಲದರ ಮಧ್ಯೆ ನಕ್ಸಲರ ಭಯವು ಜೀವನವನ್ನು ಕಷ್ಟಕರವಾಗಿಸಿತ್ತು. ಬೆಳೆದ ಬೆಳೆಗಳನ್ನು ಕಿತ್ತುಕೊಳ್ಳುತ್ತಿದ್ದರು. ಇಂತಹ ವಿಚಿತ್ರ ಪರಿಸ್ಥಿತಿ ಎದುರು ಹೋರಾಡುತ್ತಿರುವ ಈ ವನವಾಸಿಗಳನ್ನು ಸಮಾಜದ ಮುಖ್ಯವಾಹಿನಿಯೊಂದಿಗೆ ಜೋಡಿಸುವ ಪಣ ತೊಟ್ಟವರು ಸಂಘದ ಸ್ಥಾನೀಯ ಸ್ವಯಂಸೇವಕರು. 

ಇಂದಿಗೆ 20ವರ್ಷಗಳ ಹಿಂದೆ 15 ಸೆಪ್ಟೆಂಬರ್ 2000 ಇಸವಿಯಲ್ಲಿ ನಾನಾಜಿ ದೇಶಮುಖ್ ಜೀಯವರ ಪ್ರೇರಣೆಯಿಂದ ದೇವಪಹರಿಯಲ್ಲಿ ಗೌಮುಖಿ ಸೇವಾಧಾಮದ ಸ್ಥಾಪನೆಯಾಯಿತು. ದೇವಪಹರಿಯನ್ನು ಕೇಂದ್ರೀಕರಿಸಿ ಸುತ್ತಮುತ್ತಲಿನ 40ಹಳ್ಳಿಗಳ ಅಭಿವೃದ್ಧಿ ಯೋಜನೆ ಮಾಡಲಾಯಿತು.




ಬನವಾರಿ ಲಾಲ್ ಅಗರ್ವಾಲ್, ಕಿಶೋರ್ ಬುಟೋಲಿಯಾ, ಡಾ. ಧೃವ ಬ್ಯಾನರ್ಜಿ, ಪಿ.ಎನ್. ಶರ್ಮಾರಂತಹ ಸಂಘದ ಸ್ವಯಂಸೇವಕರು ಹಾಗು ಇಂದೂ ದೀದಿಯವರಂತಹ ಸೇವಾ ಮನೋಭಾವದ ಮಹಿಳೆಯರು ತಮ್ಮ ಜೀವನದ ಕೆಲವು ವರ್ಷಗಳನ್ನು ಇಲ್ಲಿಗೆ ನೀಡುವುದರೊಂದಿಗೆ 40 ಹಳ್ಳಿಗಳ ಅಭಿವೃದ್ಧಿ ಕಾರ್ಯಗಳನ್ನು ನೆಲೆಗೊಳಿಸಿದರು. ಜೂಮ್ ಕೃಷಿಯನ್ನೇ ಅವಲಂಬಿಸಿದ್ದ ಈ ವನವಾಸಿಗಳಿಗೆ ಸಂಸ್ಥೆಯು ಉನ್ನತ ಮಟ್ಟದ ಕೃಷಿಯನ್ನು ತಿಳಿಸಿಕೊಟ್ಟಿದ್ದಲ್ಲದೆ ಅವರ ಆದಾಯವನ್ನು ಹೆಚ್ಚಿಸಲು ಎಲ್ಲಾ ಕ್ರಮಗಳನ್ನೂ ತೆಗೆದುಕೊಂಡಿತು. ಇವರ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಯನ್ನು ತೆರೆದರು ಹಾಗು ಅನಾರೋಗ್ಯ ಪೀಡಿತರಿಗೆ ಆಸ್ಪತ್ರೆಯನ್ನೂ ಆರಂಭಿಸಿದರು. ಯುವಕರಿಗೆ ಉದ್ಯೋಗದ ತರಬೇತಿಯನ್ನು ನೀಡಿದರೆ, ಮಹಿಳೆಯರಿಗೆ ಸ್ವಾಭಿಮಾನದಿಂದ ಜೀವನ ನಡೆಸಲು ಕಲಿಸಿದರು. ಜತಾಡಾಡ್ ನ ಸರಪಂಚರಾದ ಅಮೃತ್ ಲಾಲ್ ರಾಠಿಯವರ ಹಲವು ಪ್ರಯತ್ನಗಳ ನಂತರವು ತಮ್ಮ ಹಳ್ಳಿಯಲ್ಲಿ ಒಂದು ಪ್ರಾಥಮಿಕ ಶಾಲೆಯನ್ನು ತೆರೆಯಲು ಸಾಧ್ಯವಾಗಲಿಲ್ಲ. ಪಕ್ಕದ ಹಳ್ಳಿಯಲ್ಲಿದ್ದ ಸರ್ಕಾರಿ ಶಾಲೆಯಲ್ಲಂತೂ ಶಿಕ್ಷಕರ ದರ್ಶನವೆ ದುರ್ಲಭವಾಗಿತ್ತು.




ಆದರೆ ಅವರ ಮಗ ಜ್ಞಾನರಾಠಿ ಯಾವಾಗ ರಾಯಪುರದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿದನೋ ಆಗ ಅವರು  ಗೌಮುಖಿಯ ಕಾರ್ಯಾಲಯಕ್ಕೆ ಸಿಹಿಯನ್ನು ತೆಗೆದುಕೊಂಡು ಬಂದರು. ಅಮೃತ್ ಲಾಲ್ ಜೀಯವರು ಸೇವಾಧಾಮ ಕಾರ್ಯಾಲಯಕ್ಕೆ ತೀವ್ರ ತೊಂದರೆಗಳ ನಡುವೆಯೂ ಅಪಾರ ಸಮರ್ಪಣೆಯೊಂದಿಗೆ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರಲ್ಲಿ ಒಬ್ಬರು. ಸೇವಾಧಾಮದ ಮೂಲಕ ನಡೆಯುತ್ತಿರುವ ಪ್ರೌಢಶಾಲೆ ಏಕಲವ್ಯ ವಿದ್ಯಾ ಮಂದಿರವು ಜ್ಞಾನಿಯಂತಹ ನೂರಾರು ಬುಡಕಟ್ಟು ಜನಾಂಗದ ಮಕ್ಕಳನ್ನು ಓದಿಸಿ ಬೆಳೆಸುತ್ತಿದೆ. ವಿದ್ಯಾಲಯದ ವಿದ್ಯಾರ್ಥಿ ನಿಲಯ ಮಮತ್ವ ಮಂದಿರದಲ್ಲಿ ಈಗಲೂ 300 ಮಕ್ಕಳು ಓದುತ್ತಿದ್ದಾರೆ. ವಿದ್ಯಾಲಯದಲ್ಲಿ ಇಲ್ಲಿಯ ತನಕ ಅಧ್ಯಯನ ಮಾಡುತ್ತಿರುವವರ ಸಂಖ್ಯೆ 1000ಕ್ಕಿಂತಲು ಹೆಚ್ಚು. ಈ ಸಂಸ್ಥೆಯು ಇಲ್ಲಿ ಓದುತ್ತಿರುವ ಮಕ್ಕಳಲ್ಲಿ ಸೇವಾ ಭಾವವನ್ನು ಜಾಗೃತಗೊಳಿಸುತ್ತಿದೆ. ಇಲ್ಲೇ ಇದ್ದು ಓದಿದ ಪುರುಷೋತ್ತಮ ಉರಾವ್ ಈಗ ಇಲ್ಲಿಯ ಪ್ರಾಂಶುಪಾಲರಾಗಿದ್ದಾರೆ. ತಮ್ಮಂತಹ ಮಕ್ಕಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ.




ಬನ್ನಿ, ಈಗ ಅಲ್ಲಿನ ಜನರು ತಮ್ಮ ದೇವರೆಂದು ಪರಿಗಣಿಸಿರುವ ಡಾ.ದೇವಾಶಿಶ್ ಮಿಶ್ರಾ ಹಾಗು ಅವರ ಪತ್ನಿ ಡಾ.ಸರಿತಾ ಅವರನ್ನು ಭೇಟಿಯಾಗೋಣ. ಕಳೆದ 18 ವರ್ಷಗಳಿಂದ ಈ ವೈದ್ಯ ದಂಪತಿಗಳು ದಟ್ಟವಾದ ಕಾಡುಗಳ ಮಧ್ಯೆ ಇರುವ ಚಿಕ್ಕ ಆಸ್ಪತ್ರೆ ಆರೋಗ್ಯ ಮಂದಿರದಲ್ಲಿ ನೂರಾರು ಜನರಿಗೆ ಜೀವನ ದಾನ ಮಾಡಿದ್ದಾರೆ. ಈ ಆಸ್ಪತ್ರೆಯಿಂದ ಪ್ರತಿ ವರ್ಷ ಲಕ್ಷಗಟ್ಟಲೆ ಮೌಲ್ಯದ  ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತದೆ.

 ಸಂಸ್ಥೆಯ ಕಾರ್ಯದರ್ಶಿ ಹಾಗು ಸಂಘದ ಸ್ವಯಂಸೇವಕರಾದ ಗೋಪಾಲ್ ಅಗರ್ವಾಲ್ ಹೇಳುತ್ತಾರೆ-  ಜನರು ಮೊದಲು ರೋಗಿಯನ್ನು ಮಂಚ ಅಥವ ಸೈಕಲ್ ಮೇಲೆ ಕರೆತರುತ್ತಿದ್ದರು. ಈಗ ಆಸ್ಪತ್ರೆಯ ಆಂಬುಲೆನ್ಸ್ 24ಗಂಟೆಗಳ ಕಾಲ ಲಭ್ಯವಿದೆ. ಅಷ್ಟೇ ಅಲ್ಲ, ಈಗ ಪ್ರತೀ 15 ದಿನಕ್ಕೊಮ್ಮೆ ಈ ಪ್ರದೇಶದ ಹಳ್ಳಿಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸಲಾಗುತ್ತಿದೆ. ಇದು ಅಪೌಷ್ಟಿಕತೆಯ ಸಮಸ್ಯೆಯನ್ನು ಪರಿಹರಿಸುವುದಲ್ಲದೆ ಇದರಿಂದ ತಾಯಿ-ಮಗುವಿನ ಮರಣ ಪ್ರಮಾಣವು ತಗ್ಗಿದೆ.

ಗೌಮುಖಿ ಸೇವಾ ಧಾಮದ ದೊಡ್ಡ ವಿಶೇಷತೆ ಎಂದರೆ ಇದು ತನ್ನದೆ ಆದ ವಿದ್ಯುತ್ ಘಟಕವನ್ನು ಹೊಂದಿದೆ. ಚೋರ್ನಯಿ ನದಿಗೆ ಚಿಕ್ಕದಾದ ಅಣೇಕಟ್ಟನ್ನು ನಿರ್ಮಿಸಿ ಹೈಡ್ರೊ-ಎಲೆಕ್ಟ್ರಿಸಿಟಿಯ ಮೂಲಕ ಪ್ರತಿದಿನ 5 ಕಿ.ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿ ನಿಲಯ ಹಾಗು ಆಸ್ಪತ್ರೆ ಸೇರಿದಂತೆ ಪೂರ್ಣಾವಧಿಯ ಕಾರ್ಯಕರ್ತರ ಮನೆಗಳನ್ನು ಬೆಳಗಿಸಲಾಗುತ್ತಿದೆ. ಇನ್ನು ಪರಿಸ್ಥಿತಿಗಳಿಂದ ಚಿಂತಿತರಾಗಿ ಯಾವ ಜನರು ನಕ್ಸಲವಾದದ ದಾರಿಯನ್ನು ಹಿಡಿದಿದ್ದರೊ, ಅವರಿಗೆ ನೆಮ್ಮದಿಯ ಹಾಗು ಆತ್ಮನಿರ್ಭರ ಜೀವನವನ್ನು ನೀಡಿ ಸೇವಾಧಾಮವು ಕೋರ್ಬಾ ಜಿಲ್ಲೆಯನ್ನು ನಕ್ಸಲರ ಭದ್ರಕೋಟೆಯಿಂದ ರಕ್ಷಿಸಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಇಂದೂ ದೀದಿಯವರು ಹೇಳುತ್ತಾರೆ.



ಸಂಪರ್ಕಿಸಿ: 

ಗೋಪಾಲ್ ಅಗರ್ವಾಲ್: 7000670863
865 Views
अगली कहानी