सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಸಾಗುತಿರಲಿ ಸಾಧನೆ ನಿರಂತರ - ಕಾತ್ರೆ ಗುರೂಜಿ

ಶ್ರೀಮತಿ ಮೇಘ ಪ್ರಮೋದ್ | ದಕ್ಷಿಣ

parivartan-img

ಕುಷ್ಠರೋಗದ ಕಲ್ಪನೆಯೆ ಮನಸ್ಸನ್ನು ತಳಮಳಗೊಳಿಸುತ್ತದೆ, ಊದಿದ ಕೈ ಕಾಲುಗಳು, ಗಾಯಗಳಿಂದ ಸುರಿಯುವ ಕೀವುಗಳು, ಸುತ್ತಲು ಹಾರಾಡುವ ನೊಣಗಳು, ಸಮಾಜದ ಬಹಿಷ್ಕಾರ ಹಾಗೂ ದ್ವೇಷಕ್ಕೆ ಪಾತ್ರರಾಗಿ ನರಕಮಯ ಜೀವನ ನಡೆಸುವ ರೋಗಿಗಳು. ಇಂದಿಗೆ 50 ವರ್ಷಗಳ ಹಿಂದೆ ಈ ರೋಗಿಗಳ ಬಂಧುಗಳೇ ಇವರನ್ನು ಅಭಿಶಾಪವೆಂದು ತಿಳಿದು ಇವರನ್ನು ತ್ಯಜಿಸುತ್ತಿದ್ದರು. ಆಗ ಈ ರೋಗಿಗಳಿಗೆ ಯಾರಾದರೂ ತಮ್ಮ ಸ್ನೇಹ ಹಸ್ತವನ್ನು ಚಾಚಿ ಇವರ ನೋವುಗಳನ್ನೆಲ್ಲ ಅರಿತು ಇವರ ಗಾಯಗಳಿಗೆ ಆತ್ಮೀಯತೆಯ ಲೇಪವನ್ನು ಲೇಪಿಸಿ ಅವರನ್ನು ಸಕ್ಷಮ ಮತ್ತು ಸಮರ್ಥರನ್ನಾಗಿಸಿ ಸ್ವಾಭಿಮಾನೀ ಜೀವನವನ್ನು ನಡೆಸುವ ದಾರಿಯನ್ನು ತೋರಿಸಿದ್ದರೆ ಅದು ಸ್ವಯಂ ಕುಷ್ಠರೋಗಿಯಾದ ಚಾಪ (ಮಧ್ಯಪ್ರದೇಶ)ದಲ್ಲಿ ದೊಡ್ಡ ಲೆಪ್ರಸಿ ಕೇಂದ್ರಕ್ಕೆ ಅಡಿಪಾಯ ಹಾಕಿದವರಾದ ಸದಾಶಿವ್ ಗೋವಿಂದರಾವ್ ಕಾತ್ರೆಯವರು. ಸಂಘದಲ್ಲಿ ಇವರನ್ನು ಕಾತ್ರೆ ಗುರೂಜಿ ಎಂದು ಗುರುತಿಸಲಾಗುತ್ತದೆ. ತಮ್ಮ ವಕ್ರವಾದ ಕೈ ಕಾಲುಗಳ ಸಹಾಯದಿಂದ ಗಂಟೆಗಟ್ಟಲೆ ಸೈಕಲ್ ತುಳಿದು




ಹಳ್ಳಿ ಹಳ್ಳಿಗಳಲ್ಲಿ ಅಲೆದಾಡಿ ಕುಷ್ಠರೋಗಿಗಳಿಗಾಗಿ ಮುಷ್ಟಿಯಷ್ಟು ಧಾನ್ಯಗಳನ್ನು ಸಂಗ್ರಹಿಸಿ ಈ ಸೇವಾ ಕಾರ್ಯವನ್ನು ಇವರು ಪ್ರಾರಂಭಿಸಿದರು. ಗೋಳ್ವಾಲ್ಕರ್ ಗುರೂಜಿಯವರ ಪ್ರೇರಣೆಯಿಂದ ಈ ಶಾಪಗ್ರಸ್ಥ ಕುಷ್ಠರೋಗಿಯ ಜೀವನವು ಸೇವೆಯ ಒಂದು ದೀಪವಾಗಿ ಹಲವಾರು ತಲೆಮಾರುಗಳು ಪ್ರಜ್ವಲಿಸತೊಡಗಿತು. ಇಂದು ಚಾಪಾದ ಕುಷ್ಠರೋಗ ನಿವಾರಣಾ ಸಂಘ ಕುಷ್ಠರೋಗಿಗಳಿಗೆ ಸ್ವರ್ಗವೆಂದು ಪರಿಗಣಿಸಲ್ಪಡುತ್ತದೆ. ಇಲ್ಲಿ ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಆತ್ಮೀಯ ಸ್ನೇಹ ಮತ್ತು ಸಂಸ್ಕಾರಯುಕ್ತ ವಾತಾವರಣವೂ ದೊರೆಯುತ್ತದೆ. ಮೇಣದಬತ್ತಿ ತಯಾರಿಸುವುದು, ಮ್ಯಾಟ್ ನೇಯುವುದು, ಹಗ್ಗ ನೇಯುವುದು, ಚಾಕ್ ಪೀಸ್ ತಯಾರಿಸುವುದು ಇನ್ನೂ ಇಂತಹ ಹಲವಾರು ಕೆಲಸಗಳನ್ನು ಮಾಡುವುದರ ಮೂಲಕ ಈ ರೋಗಿಗಳು ಸ್ವಾಭಿಮಾನದಿಂದ ಬದುಕುತ್ತಾರೆ. ಈ 300 ಜನ ರೋಗಿಗಳ ಮಕ್ಕಳ ಶಿಕ್ಷಣಕ್ಕಾಗಿ ಇಲ್ಲಿ ಸುಶೀಲ ವಿದ್ಯಾಲಯ ಹಾಗೂ ಹಾಸ್ಟೆಲ್ ವ್ಯವಸ್ಥೆ ಕೂಡ ಇದೆ.




ಮಧ್ಯಪ್ರದೇಶದ ಗುನಾ ಜಿಲ್ಲೆಯ ಅರೋನ್ ಪಟ್ಟಣದಲ್ಲಿ ವಾಸಿಸುತ್ತಿರುವ ಗೋವಿಂದ್ ಕಾತ್ರೆ ಮತ್ತು ರಾಧಾ ಬಾಯಿಯವರ ಸಂತಾನವಾದ ಈ ಸದಾಶಿವ್, ಮೂವರು ಸಹೋದರಿಯರು ಹಾಗೂ ಒಬ್ಬ ಗಂಡು ಮಗು. ಕೇವಲ 8 ವರ್ಷದವರಿದ್ದಾಗ ತಂದೆಯನ್ನು ಕಳೆದುಕೊಂಡ ನಂತರ ಇವರದು ಹೋರಾಟದ ಬದುಕು. ಪ್ರಾಥಮಿಕ ಶಿಕ್ಷಣದ ನಂತರ ರೈಲ್ವೇಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಇವರು ಸಂಘದ ಸಂಪರ್ಕಕ್ಕೆ ಬಂದರು ಮತ್ತು 1948 ರಲ್ಲಿ ಸಂಘವನ್ನು ನಿಷೇಧಿಸಿದ ಸಮಯದಲ್ಲಿ ಆರು ತಿಂಗಳು ಜೈಲಿಗೂ ಹೋದರು. ಹಾಗೆಯೇ ಜೀವನವು ಇವರನ್ನು ಅನೇಕ ಪರೀಕ್ಷೆಗಳಿಗೆ ಒಳಪಡಿಸಿತು, ಇವರ ಧರ್ಮಪತ್ನಿ ಚಿಕ್ಕವಯಸ್ಸಿನಲ್ಲೇ ತೀರಿಕೊಂಡರು. ಸಹೋದರಿಯರ ಸುಪರ್ದಿಯಲ್ಲಿದ್ದ ಇವರ ಆಸ್ತಿ ಮತ್ತು ಒಡವೆಗಳನ್ನು ಅವರು ಹಿಂದಿರುಗಿಸಲಿಲ್ಲ. ಕುಷ್ಠರೋಗದ ಕಾರಣದಿಂದಾಗಿ ದೇಹ ಜರ್ಜರಿತವಾಗಿತ್ತು, ಅವರ ಬಳಿ ಹಣವೂ ಇರಲಿಲ್ಲ ತಮ್ಮವರು ಎಂಬುವವರೂ ಯಾರೂ ಇರಲಿಲ್ಲ, ಯಾವ ಕ್ರಿಶ್ಚಿಯನ್ ಮಿಷನರಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರೊ ಅಲ್ಲಿ ಸೇವೆಯ ಸೋಗಿನಲ್ಲಿ ನಡೆಯುತ್ತಿದ್ದ ಮತಾಂತರದ ವಿರುದ್ಧ ಹೋರಾಡಿದ್ದಕ್ಕಾಗಿ ಅಲ್ಲಿಂದ ಹೊರಹಾಕಲ್ಪಟ್ಟರು. ಹೀಗೆ ಯಾವಾಗ ಎಲ್ಲಾ ದಾರಿಗಳು ಮುಚ್ಚಲ್ಪಟ್ಟವೊ ಆಗ ಗುರೂಜಿಯವರೊಂದಿಗೆ ಇವರ ಭೇಟಿಯಾಯಿತು ಹಾಗೂ ಅವರಿಂದ ಪ್ರೇರಣೆಯನ್ನು ಪಡೆದು ತಮ್ಮಂತೆ ಸಮಾಜದಿಂದ ಬಹಿಷ್ಕೃತಗೊಂಡ ಹಾಗು ಬದುಕಿದ್ದು ನರಕವನ್ನು ಅನುಭವಿಸುತ್ತಿರುವ ರೋಗಿಗಳ ಜೀವನವನ್ನು ಸರಿಪಡಿಸುವ ಸಂಕಲ್ಪವನ್ನು ತೊಟ್ಟರು




ಸೌಂತಿ ಬಳಿಯ ಘೋಗ್ರಾ ನಲಾದ ಕುಷ್ಠರೋಗ ಬಸ್ತಿ ಬಳಿಯ ಒಂದು ಸಣ್ಣ ಗುಡಿಸಲಿನಲ್ಲಿ ಕಾತ್ರೆಜಿ ರೋಗಿಗಳ ಶುಶ್ರುಷೆ ಮತ್ತು ಊಟದ ವ್ಯವಸ್ಥೆಯನ್ನು ಇಬ್ಬರು ರೋಗಿಗಳಿಂದ ಪ್ರಾರಂಭಿಸಿದರು. ಕಾಲುಗಳಲ್ಲಿ ಗಾಯಗಳಿದ್ದ ಕಾರಣ ಅವರಿಗೆ ನಡೆಯಲಾಗುತ್ತಿರಲಿಲ್ಲ, ಹಾಗಾಗಿ ಅವರು ತಮ್ಮ 60ನೇ ವಯಸ್ಸಿನಲ್ಲಿ ಸೈಕಲ್ ಓಡಿಸಲು ಕಲಿತರು, ಒಂದು ಕಟ್ಟೆಯ ಸಹಾಯವನ್ನು ಪಡೆದು ಸೈಕಲ್ ಹತ್ತುತ್ತಿದ್ದರು ಹಾಗೂ ಅಫ್ರಿ, ಲಾರ್ಖುರಿ, ಬಿರ್ರಾ ಮುಂತಾದ ಹಳ್ಳಿಗಳಿಗೆ 20-20 ಕಿಲೋಮೀಟರ್ ಸೈಕಲ್ ತುಳಿದು ರೋಗಿಗಳಿಗಾಗಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಹಿಂದಿರುಗಿ ಗುಡಿಸಲಿಗೆ ಬಂದು ತಾವೆ ಅಡಿಗೆ ಮಾಡಿ ರೋಗಿಗಳಿಗೆ ಬಡಿಸಿ ಮತ್ತೆ ಅವರ ಶುಶ್ರುಷೆ ಮಾಡುತ್ತಿದ್ದರು. ಕೆಲವೊಮ್ಮೆ ಹೋದಲ್ಲೆಲ್ಲ ಅಪಮಾನ ದ್ವೇಷಗಳನ್ನು ಎದುರಿಸಬೇಕಾಗಿತ್ತು, ಕುಡಿಯಲು ಒಂದು ಲೋಟ ನೀರೂ ಸಿಗುತ್ತಿರಲಿಲ್ಲ ಆದರೆ ಇವರು ಸೋಲನ್ನೊಪ್ಪಲಿಲ್ಲ, ರೋಗಿಗಳ ಸಂಖ್ಯೆ ಹೆಚ್ಚಾದಂತೆ ಸದಾಶಿವ್ ಜಿ ಅವರ ಪ್ರಯತ್ನಕ್ಕೆ ಕೆಲವು ಸಹವರ್ತಿಗಳು ಸಿಕ್ಕರು. ಯಾವಾಗ ಚಾಪದಲ್ಲಿ ಆಶ್ರಮಕ್ಕಾಗಿ ಭೂಮಿ ದಾನವಾಗಿ ದೊರಕಿತೋ ಇವರು ರೈಲ್ವೇ ಕೆಲಸವನ್ನು ಬಿಟ್ಟಾಗ ಬಂದ ಹಣದಿಂದ ಅಲ್ಲಿ ನಾಲ್ಕು ಕೋಣೆಗಳನ್ನು ನಿರ್ಮಿಸಿದರು, ಕ್ರಮೇಣ ಆಶ್ರಮದಲ್ಲಿ ವಸತಿ ಮತ್ತು ಒಂದು ಸಣ್ಣ ಗೋಶಾಲೆಯು ಸಿದ್ಧವಾಯಿತು.

ಇಂದು ಚಾಪದಲ್ಲಿ 85 ಎಕರೆ ಭೂಮಿಯಲ್ಲಿ ಸ್ಥಾಪಿತವಾಗಿರುವ ಭಾರತೀಯ ಕುಷ್ಠ ನಿವಾರಣಾ ಸಂಘದಲ್ಲಿ 300ಕ್ಕೂ ಹೆಚ್ಚು ರೋಗಿಗಳು ಕೇಂದ್ರೀಯ ಕೃಷಿ ನಡೆಸುತ್ತಿದ್ದಾರೆ. ಇದು ಎಂತಹ ಆತ್ಮನಿರ್ಭರ ಸೇವಾ ಪ್ರಕಲ್ಪವೆಂದರೆ ಇಲ್ಲಿ 150 ಗೋಬರ್ ಗ್ಯಾಸ್ ನ ಘಟಕಗಳಿದ್ದು, ಕೃಷಿಯ ಮೂಲಕ ಸುಮಾರು 1000 ಮೂಟೆಗಳಷ್ಟು ಬೇಳೆ, ಅಕ್ಕಿ ಹಾಗೂ ಇನ್ನಿತರ ಅವಶ್ಯಕ ಬೆಳೆಗಳನ್ನು ಬೆಳೆಯಲಾಗುತ್ತದೆ, ಹತ್ತಿರದಲ್ಲೇ ಇರುವ ಮಾಧವ ಸಾಗರ್ ಕೆರೆಯಿಂದ ನೀರಾವರಿ ವ್ಯವಸ್ಥೆಯನ್ನು ಮಾಡಲಾಗಿದೆ.

ಇಲ್ಲಿಯ ಪ್ರಾಂಗಣದಲ್ಲಿ ನಿರ್ಮಿಸಲಾಗಿರುವ ಕಾತ್ರೆಜೀಯವರ ಮೂರ್ತಿಗೆ ನಮಿಸುತ್ತಾ ಇಲ್ಲಿಯ ಪ್ರಬಂಧಕರಾದ ದಾಮೋದರ್ ಬಾಪಟ್ ಹೇಳುತ್ತಾರೆ ಯಾವ ತಂದೆಯನ್ನು ತನ್ನ ಒಬ್ಬಳೇ ಮಗಳ ಮನೆಯವರಿಂದ ಅವಮಾನಿತರಾಗಿ ಹೊರಹಾಕಲ್ಪಟ್ಟರೋ ಅವರು ಹಲವಾರು ರೋಗಿಗಳ ಮಾನವನ್ನು ರಕ್ಷಿಸಿದ್ದಲ್ಲದೆ ಮೌಲ್ಯಯುತ ಜೀವನವನ್ನು ಕಟ್ಟಿಕೊಟ್ಟರು, ಇಂದು ಕಾತ್ರೆಜಿ ನಮ್ಮೊಂದಿಗಿಲ್ಲ, ಆದರೆ ಚಾಪದಲ್ಲಿ ಅವರು ಬೆಳಗಿಸಿದ ಸೇವೆಯ ಜ್ಯೋತಿ ಅಂಧಕಾರಮಯವಾದ ಜೀವನಗಳಿಗೆ ಬೆಳಕು ಹರಿಸುತ್ತಿರುತ್ತದೆ.

1044 Views
अगली कहानी