नियमित अपडेट के लिए सब्सक्राईब करें।
ತಮಿಳುನಾಡು
ಕೆಲವರು ಇತಿಹಾಸದ ಒಂದು ಭಾಗವಾಗಿ ಬಿಡುತ್ತಾರೆ, ಆದರೆ ಕೆಲವರು ತಾವೇ ಇತಿಹಾಸ ನಿರ್ಮಿಸುತ್ತಾರೆ. ಇದೂ ಒಂದು
ಅಂಥದ್ದೇ.. ದಕ್ಷಿಣ ಭಾರತದಲ್ಲಿ ವಿಷಮ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸುತ್ತಲೇ ಇತಿಹಾಸವನ್ನೇ
ರಚಿಸಿದ ಒಬ್ಬ ಯುವಕನ ರೋಮಾಂಚಕಾರಿ ಕಥೆ.
ಸಂಘದಲ್ಲಿ ಸೂರೂಜೀ ಎಂದೇ ಜನಪ್ರಿಯರಾಗಿರುವ ಸ್ವರ್ಗೀಯ ಸೂರ್ಯನಾರಾಯಣರಾವ್ ಜೀ ಅವರ ಜೀವನವು
ಸೇವೆಯ ಹೊಸ ಹೊಸ ಆಯಾಮಗಳಲ್ಲಿ ಸ್ವಯಂಸೇವಕರ ಕೆಲಸಗಳಿಗೆ ಸಂವೇದನೆಯನ್ನು ಜೋಡಿಸಿದ ಒಂದು ಯಾತ್ರೆಯ
ರೋಮಾಂಚಕಾರಿ ಕಥನ.
22ನೆಯ ವಯಸ್ಸಿನಲ್ಲಿಯೇ ಸಂಘದ ಪ್ರಚಾರಕರಾಗಿ ಹೊರಟ ಸೂರ್ಯನಾರಾಯಣರಾವ್ ಜೀ ಅವರು
ತಮಿಳುನಾಡಿನಲ್ಲಿ ಪ್ರತ್ಯೇಕತಾವಾದಿ ಶಕ್ತಿಗಳ ಪ್ರಯತ್ನಗಳನ್ನು ನಿಷ್ಫಲಗೊಳಿಸಿ ಸಾಮಾನ್ಯ
ಜನರಲ್ಲಿ ಸಾಮಾಜಿಕ ಸಾಮರಸ್ಯದ ಬೀಜವನ್ನು ಬಿತ್ತಿದರು. ಪ್ರತಿಯೊಂದು ಶಾಖೆಯು ಒಂದೊಂದು
ಸೇವಾಕಾರ್ಯದ ಜವಾಬ್ದಾರಿ ನಿರ್ವಹಿಸಲು ಪ್ರೇರಣೆ ನೀಡಿದ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ
ಸೇವಾ ವಿಭಾಗದ ಯೋಜನೆಯಲ್ಲಿ ಮಹತ್ವಪೂರ್ಣ ಪಾತ್ರವನ್ನು ನಿರ್ವಹಿಸಿದರು.
20ನೇ ಆಗಸ್ಟ್ 1924ರಲ್ಲಿ ಕರ್ನಾಟಕದ
ಮೈಸೂರಿನಲ್ಲಿ ಜನಿಸಿದ ಸೂರೂಜೀಯವರು ಸಂಘದ ಪ್ರಥಮ ಅಖಿಲ ಭಾರತೀಯ ಸೇವಾ ಪ್ರಮುಖರಾಗಿ ನಿರಂತರ 10 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂಸೇವಕರನ್ನು
ಸೇವೆಯೊಂದಿಗೆ ಜೋಡಿಸಿದ್ದೇ ಅಲ್ಲದೆ, ಇಡೀ ದೇಶದಲ್ಲಿ ಸೇವಾ
ಕಾರ್ಯಗಳ ಯೋಜನೆಗಳನ್ನು ತಯಾರಿಸಿದರು.
ಕರ್ನಾಟಕದಲ್ಲಿ ಮೈಸೂರು ಸಂಸ್ಥಾನದ ಮಂತ್ರಿಗಳಾಗಿದ್ದ ಕೊರಟಗೆರೆ ಕೃಷ್ಣಪ್ಪ ಅವರ ಪತ್ನಿ
ಸುಂದರಮ್ಮನವರು ತಮ್ಮ ಮೊದಲ ಸಂತಾನಕ್ಕೆ ಜನ್ಮವಿತ್ತಾಗ, ಈ ಬಾಲಕ ಮುಂದೆ ಇಷ್ಟೊಂದು ಯಶಸ್ವಿಯಾಗುತ್ತಾನೆ ಎನ್ನುವ ಕಲ್ಪನೆಯೂ
ಅವರಿಗೆ ಇರಲಿಲ್ಲ. ಸೂರೂಜೀ ಅವರಿಗೆ ಬಾಲ್ಯದಲ್ಲೇ ಸಂಘದ ದ್ವಿತೀಯ ಸರಸಂಘಚಾಲಕರಾದ ಗೋಳ್ವಲ್ಕರ್
ಗುರೂಜಿಯವರ ಸಾನ್ನಿಧ್ಯ ದೊರೆಯಿತು. ಗುರೂಜಿಯವರು ಪ್ರವಾಸದ ನಿಮಿತ್ತ ಕರ್ನಾಟಕಕ್ಕೆ ಯಾವಾಗ
ಬಂದರೂ ಇವರ ಮನೆಯಲ್ಲಿ ತಂಗುವುದು ಸಾಮಾನ್ಯವಾಗಿತ್ತು. ಇದು ರಾಷ್ಟ್ರಭಕ್ತ ತಂದೆ ತಾಯಿಯರ
ಸಂಸ್ಕಾರಗಳ ಪ್ರಭಾವವೇ ಸರಿ. ಸೂರೂಜಿಯವರು ಗಣಿತದಲ್ಲಿ ಆನರ್ಸ್ ಓದಿ, 22ನೇ ವಯಸ್ಸಿನಲ್ಲೇ ಪ್ರಚಾರಕರಾಗಿ ಸಮಾಜದ ಕಾರ್ಯದಲ್ಲಿ
ತೊಡಗಿಸಿಕೊಂಡರು. ತಮ್ಮ ಪ್ರಚಾರಕ ಜೀವನದಲ್ಲಿ ಸೂರೂಜೀಯವರು ಬೇರೆ ಬೇರೆ ಜವಾಬ್ದಾರಿಗಳನ್ನು
ನಿರ್ವಹಿಸಿದರು. ಆದರೆ ನಾವು ಇಲ್ಲಿ ಯಾವ ವಿಚಾರವನ್ನು ಚರ್ಚಿಸುತ್ತಿದ್ದೇವೆಯೋ, ಆ ವಿಷಯದಲ್ಲಿ ಅವರ ಸಂಘಟನಾ ಕೌಶಲ್ಯವು ಇಡೀ
ರಾಷ್ಟ್ರವನ್ನು ಲೋಹದಂತೆ ಆಕರ್ಷಿಸಿತ್ತು.
1972ರಲ್ಲಿ ಸೂರೂಜೀಯವರಿಗೆ ತಮಿಳುನಾಡು ಪ್ರಾಂತ ಪ್ರಚಾರಕ್
ಜವಾಬ್ದಾರಿಯನ್ನು ವಹಿಸಲಾಯಿತು. ಆಗ ಆ ಪ್ರಾಂತ್ಯದಲ್ಲಿ ಭಾಷಾ ಪ್ರತ್ಯೇಕತಾವಾದಗಳು
ಉತ್ತುಂಗದಲ್ಲಿದ್ದವು. ಅವರಿಗೆ ತಮಿಳು ಬರುತ್ತಿರಲಿಲ್ಲ, ಆದರೆ ಅವರು ತಮಿಳು ಭಾಷೆಯನ್ನು ಕಲಿತು ಸಮಾಜದ ಎಲ್ಲ ವರ್ಗಗಳನ್ನೂ ಸಂಘ
ಕಾರ್ಯದ ಜೊತೆ ಜೋಡಿಸಲು ಪಣತೊಟ್ಟರು. ನಿರಂತರವಾಗಿ 13 ವರ್ಷಗಳ ಕಾಲ ಅಂದರೆ 1984ರ ತನಕ ಅವರು ತಮಿಳುನಾಡಿನ ಪ್ರಾಂತ ಪ್ರಚಾರಕರಾಗಿ ಯುವಕರಲ್ಲಿ
ರಾಷ್ಟ್ರಭಕ್ತಿ, ಉತ್ಸಾಹವನ್ನು ತುಂಬುವುದರ
ಜೊತೆಗೆ, ಸಾಮಾಜಿಕ ಸಾಮರಸ್ಯವನ್ನು
ನಿರ್ಮಾಣ ಮಾಡಲು ಪ್ರಯತ್ನಿಸಿದರು.
ಅವರ ಬಗ್ಗೆ ಮಾತನಾಡುತ್ತಾ ಸಂಘದ 9 ವರ್ಷ
ಸಹಸರಕಾರ್ಯವಾಹಕರಾಗಿದ್ದ ಮಾನ್ಯ ಭೈಯ್ಯಾಜಿ ಜೋಶಿ ಹೇಳುತ್ತಾರೆ, ಸೂರೂಜಿ ಅವರು ಒಂದು ಕಡೆ ಸಮಾಜದಲ್ಲಿ ಆತ್ಮಗೌರವದ ಜಾಗೃತಿಯನ್ನು
ಮೂಡಿಸಲು ಪ್ರಯತ್ನಪಟ್ಟರು. ಇನ್ನೊಂದೆಡೆ ದಲಿತ ಪೂಜಾರಿಗಳಿಗೆ ತರಬೇತಿಯನ್ನು ನೀಡಿ ಮಂದಿರಗಳ
ದ್ವಾರಗಳನ್ನು ತೆರೆದು ಎಲ್ಲರಿಗೂ ಪ್ರವೇಶವನ್ನು ಮುಕ್ತವಾಗಿಸಿದರು. ಮೊದಲಿಗೆ ಸಮಾಜದಲ್ಲಿ ಯಾವ
ಅಂತರವಿತ್ತೋ, ಪೂಜಾರಿಗಳು ಮಂದಿರಗಳಲ್ಲಿ
ಪೂಜೆ ಮಾಲಾರಂಭಿಸಿದ ನಂತರ ಸಮಾಜದ ದೃಷ್ಟಿಯೇ
ಬದಲಾಯಿತು. ಪರಸ್ಪರ ಅಂತರ ಹೆಚ್ಚಾದಾಗ ವಾದ ವಿವಾದಗಳೂ ಹಾಗೇ ಮುಂದುವರಿಯುತ್ತವೆ. ಮಂದಿರಗಳು
ಎಲ್ಲರಿಗೂ ಮುಕ್ತವಾದಾಗ, ಉಂಟಾದ ಸೌಹಾರ್ದದ
ವಾತಾವರಣದಿಂದ ವಾದ ವಿವಾದಗಳ ಅಸ್ತಿತ್ವವೂ ದುರ್ಬಲವಾಯಿತು.
ಸೂರ್ಯನಾರಾಯಣರಾವ್ ಜೀ ಅವರೊಂದಿಗೆ ಅಖಿಲ ಭಾರತೀಯ ಸಹಸೇವಾ ಪ್ರಮುಖರಾಗಿದ್ದ ಭೈಯ್ಯಾಜಿ
ಜೋಶಿಯವರ ಅಭಿಪ್ರಾಯದಂತೆ ಸೂರೂಜೀ ಅವರ ಜೀವನದ ಮೇಲೆ ಸ್ವಾಮಿ ವಿವೇಕಾನಂದರ ವಿಚಾರಗಳು ಬಹಳ ಗಾಢ
ಪರಿಣಾಮ ಬೀರಿದ್ದವು. ವಿವೇಕಾನಂದರ ವಿಚಾರ "ನರಸೇವೆಯೇ ನಾರಾಯಣ ಸೇವೆ" ಎಂಬ ಧ್ಯೇಯ
ವಾಕ್ಯವನ್ನು ಮುಂದಿಟ್ಟುಕೊಂಡು ಅವರು ಸ್ವಯಂಸೇವಕರಿಗೆ ಹೇಳುತ್ತಿದ್ದರು… "ಯಾರಿಗಾದರೂ ಸರಿ ಭೌತಿಕ ಮಟ್ಟದಲ್ಲಿ ಅನುಕೂಲಗಳನ್ನು
ಮಾಡಿಕೊಡುವುದು ಒಂದು ಸಣ್ಣ ಮಟ್ಟದ ಸೇವೆಯೇ ಹೌದು. ಆದರೂ ಅವರಿಗೆ ಯೋಗ್ಯ ಗೌರವ ನೀಡಿ ಅವರು
ಭಗವಂತನೆಂದೇ ಭಾವಿಸಿ ಸೇವೆಯನ್ನು ಮಾಡುವುದೇ ಶ್ರೇಷ್ಠ. ಪ್ರತಿಯೊಬ್ಬ ಸ್ವಯಂಸೇವಕನೂ ತಾನು
ಸೇವೆಗೆಂದೇ ಮೀಸಲು ಎಂದು ಭಾವಿಸುವುದೇ ಒಂದು ನಿಜವಾದ ಸೇವೆಯಾಗಿದೆ.” ತನ್ನ ಸರಳ ಸ್ವಭಾವದಿಂದಾಗಿ
ಅವರು ಪ್ರತಿಯೊಬ್ಬ ಕಾರ್ಯಕರ್ತನಿಗೂ ಇವರು ತಮ್ಮವರೇ ಎನಿಸುತ್ತಿದ್ದರು. ಹಾಗಾಗಿಯೇ ಅವರ
ವಿಚಾರಗಳು ಸ್ವಯಂಸೇವಕರ ಮನಸ್ಸು, ಬುದ್ಧಿಗಳೆರಡರಲ್ಲೂ
ಉಳಿಯುವಂತಾಯಿತು.
1990ರಲ್ಲಿ ಸೂರ್ಯನಾರಾಯಣರಾವ್ ಅವರು ಪ್ರಥಮ ಅಖಿಲ ಭಾರತೀಯ ಸೇವಾ
ಪ್ರಮುಖರಾಗಿ ಜವಾಬ್ದಾರಿಯನ್ನು ವಹಿಸಿಕೊಂಡಾಗ ಸೇವಾ ವಿಭಾಗವು ಸಂಘದಲ್ಲಿ ಒಂದು ಹೊಸ
ಪ್ರಯೋಗವಾಗಿತ್ತು. ಯಾವುದೇ ವಿಷಯವೇ ಆಗಿರಲಿ, ಪ್ರಯೋಗಶೀಲತೆಯು ಒಂದು ಸವಾಲೇ ಆಗಿತ್ತು. ಆ ಸವಾಲನ್ನು ಸ್ವೀಕರಿಸಿ ಪೂರ್ಣಗೊಳಿಸುವ ಸ್ವಭಾವ
ಸೂರೂಜೀ ಅವರದಾಗಿತ್ತು. ಅವರು ಕಾರ್ಯಕರ್ತರಿಗೆ ಹೊಸ ಹೊಸ ಪ್ರಯೋಗಗಳನ್ನು ಮಾಡಲು
ಸ್ವಾತಂತ್ರ್ಯವನ್ನು ಕೊಟ್ಟರು. ಬಹುಶಃ ಹಾಗಾಗಿಯೇ ಸಂಘದ ಪ್ರಥಮ ಅಖಿಲ ಭಾರತೀಯ ಸೇವಾ ಪ್ರಮುಖರಾಗಿ
ಅವರ ಕಾಲದಲ್ಲಿ ಸೇವಾ ವಿಭಾಗದ ಕಾರ್ಯಗಳಿಗೆ ಒಂದು ವಿಶೇಷವಾದ ವೇಗವು ಸಿಕ್ಕಿತು. ಸಂಸ್ಕಾರ
ಕೇಂದ್ರವು ಸಂಪೂರ್ಣ ಸೇವಾಬಸ್ತಿಯ ಪರಿವರ್ತನೆಯ ವಾಹಕವಾಯಿತು. ಸೂರೂಜೀ ಅವರ ಪರಿಕಲ್ಪನೆಯೇ,
ಇಂದು ಇಡೀ ದೇಶದಲ್ಲಿ ನಡೆಸಲಾಗುತ್ತಿರುವ ಸಂಸ್ಕಾರ ಚಟುವಟಿಕೆಗಳು ಸಮಾಜದಲ್ಲಿ
ಸಕಾರಾತ್ಮಕ ಪರಿವರ್ತನೆಗೆ ಆಧಾರವಾಗಿದೆ.
ಸಂಘದ ನಡೆದಾಡುವ ಸಂಪನ್ಮೂಲ ಎಂದೇ ಪರಿಚಿತರಾಗಿರುವ ಸೂರ್ಯನಾರಾಯಣರಾವ್ ಜೀ ಅವರು ಒಬ್ಬ
ಪ್ರಖರವಾದ ವಿದ್ವಾಂಸರಾಗಿದ್ದರು. ಅವರ ಸಾನಿಧ್ಯದಲ್ಲಿ ಯಾರಿಗೆಲ್ಲ ವಿಕಾಸದ ಅನುಭವವಾಯಿತೋ,
ಅವರಲ್ಲಿ ಒಬ್ಬರಾದ ದಕ್ಷಿಣ ಕ್ಷೇತ್ರದ ಸಹ ಬೌದ್ಧಿಕ
ಪ್ರಮುಖ ಗೋವಿಂದ ಜೀ ಹೇಳುತ್ತಾರೆ, ಸೂರ್ಯನಾರಾಯಣರಾವ್ ಅವರಿಗೆ
ಹಿಂದಿ ಇಂಗ್ಲಿಷ್ ತಮಿಳು ಈ ಮೂರೂ ಭಾಷೆಗಳಲ್ಲಿ ಒಳ್ಳೆಯ ಹಿಡಿತವಿತ್ತು. ಎಲ್ಲಿಯಾದರೂ
ಬುದ್ಧಿಜೀವಿಗಳ ನಡುವೆ ಸಂಘದ ಕಾರ್ಯವನ್ನು ತಿಳಿಸುವ ಸಲುವಾಗಿ ಸೂರೂಜಿ ಹೋದಾಗ, ಅಲ್ಲಿ ಇಂಗ್ಲೀಷಿನಲ್ಲಿ ಅತ್ಯಂತ ಪ್ರಭಾವಿಯಾಗಿ
ವಿಷಯವನ್ನು ಮಂಡಿಸುತ್ತಾ ವಿದ್ವಾಂಸರುಗಳನ್ನು ಸಂಘಟನೆಯೊಂದಿಗೆ ಜೋಡಿಸುವಲ್ಲಿ ಬಹಳಷ್ಟು ಸಲ
ಸಫಲರಾಗಿದ್ದರು. ಅವರು ಮುಂದುವರಿದು ಹೇಳುತ್ತಾರೆ … ಸೂರೂಜೀ ಅವರು ತಮ್ಮ ನಿರಂತರ ಕಾರ್ಯಗಳ ಸಮಯದಲ್ಲಿ ವಾಲ್ಮೀಕಿ ಸಮಾಜದ
ಸ್ವಯಂಸೇವಕರ ಮನೆಗಳಲ್ಲಿ ಭೋಜನವನ್ನು ಮಾಡುತ್ತಿದ್ದರು. ವಿಶೇಷವಾಗಿ ಹಿಂದುಳಿದ ಸಮಾಜದ ಈ
ಜನರನ್ನು ಮಲ ಹೊರುವವರೆಂದು ಸಮಾಜವು ಯಾವಾಗಲೂ ಅಸ್ಪೃಶ್ಯರೆಂದು ಪರಿಗಣಿಸುತ್ತಿತ್ತು, ಆ ಮನೆಗಳಲ್ಲಿ ಅವರು ಬಹಳ ಪ್ರೀತಿಯಿಂದ ಭೋಜನವನ್ನು
ಮಾಡುತ್ತಿದ್ದರು. ಅವರು ಸ್ವಯಂಸೇವಕರೊಂದಿಗೆ ಹೇಳುತ್ತಿದ್ದರು.. ನಮ್ಮ ತಾಯಿ ನಾವು
ಚಿಕ್ಕವರಿದ್ದಾಗ ನಮ್ಮ ಹೊಲಸನ್ನು ಸ್ವಚ್ಛ ಮಾಡುತ್ತಿದ್ದಳಲ್ಲ. ಹಾಗೇ ಈ ವರ್ಗವು ನಮ್ಮ
ಮನೆಗಳನ್ನು ಸ್ವಚ್ಛವಾಗಿರಿಸುತ್ತದೆ. ಹಾಗೆಂದು ನಮ್ಮ ತಾಯಿಯನ್ನು ಅಸ್ಪೃಶ್ಯಳೆಂದು
ಭಾವಿಸುತ್ತೇವೆಯೇ? ಇಲ್ಲವಲ್ಲ ... ಬದಲಾಗಿ ನಾವು
ಈ ವರ್ಗದ ಜನರಲ್ಲಿ ಋಣಿಯಾಗಿರಬೇಕು. ಈ ವರ್ಗದ ಜನರಿಗೆ ಸಮಾಜದಲ್ಲಿ ಗೌರವದ ಸ್ಥಾನ ದೊರಕಿಸಲು
ಅವರು ಸಾಕಷ್ಟು ಪರಿಶ್ರಮಪಟ್ಟರು.
1989ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಆದ್ಯ ಸರಸಂಘಚಾಲಕ ಡಾ.
ಹೆಡಗೇವಾರರ ಜನ್ಮಶತಾಬ್ದಿಯನ್ನು ಆಚರಿಸಲು ಯೋಜನೆಯನ್ನು ರೂಪಿಸಿತು. ಆಗ ಮೊಟ್ಟಮೊದಲಿಗೆ ಈ ಬೃಹತ್ ಕಾರ್ಯಕ್ಕೋಸ್ಕರ ಆರ್ಥಿಕ
ವ್ಯವಸ್ಥೆಯನ್ನು ಮಾಡಬೇಕೆಂಬ ಅವಶ್ಯಕತೆಯ ಅರಿವಾಯಿತು. ಸೇವಾ ಕಾರ್ಯಗಳ ಕಾರ್ಯವಿಸ್ತಾರದ ಸಲುವಾಗಿ
ಆರ್ಥಿಕ ವ್ಯವಸ್ಥೆ ಮಾಡುವುದು, ಅದನ್ನು ಕಾನೂನಿನ
ಚೌಕಟ್ಟಿನಲ್ಲಿ ತರುವುದು, ಈ ಮಹತ್ಕಾರ್ಯಕ್ಕೋಸ್ಕರ ಒಂದು
ಟ್ರಸ್ಟ್ ಮಾಡಬೇಕು ಎಂದು ಸೂರೂಜಿಯವರ ಮನಸ್ಸಿನಲ್ಲಿ ಬಂದ ಕೂಡಲೇ 2003 ರಲ್ಲಿ ರಾಷ್ಟ್ರೀಯ ಸೇವಾ ಭಾರತೀ ಎಂಬ ಸಂಸ್ಥೆಯು ಜನ್ಮ ತಾಳಿತು. ಇಷ್ಟೇ ಅಲ್ಲ, ಈ ಹಣದ ಉಪಯೋಗ ಎಲ್ಲಿ ಹೇಗೆ ಆಗುತ್ತಿದೆ ಮತ್ತು ಅದರ
ಪರಿಣಾಮ ಏನು, ಈ ಮಾಹಿತಿಯನ್ನು ಇಡೀ
ಸಮಾಜಕ್ಕೆ ನೀಡಲು ಗುರೂಜಿಯವರ ಪ್ರೇರಣೆಯಿಂದಲೇ ಸೇವಾ-ದಿಶಾ ಪತ್ರಿಕೆಯ ಪ್ರಕಾಶನವು ಆರಂಭವಾಯಿತು.
ಅಖಿಲ ಭಾರತೀಯ ಸೇವಾ
ಪ್ರಮುಖರಾಗಿದ್ದುಕೊಂಡು 10 ವರ್ಷಗಳ ಕಾಲ ಅವರು ದೇಶದ
ಮೂಲೆ ಮೂಲೆಗೂ ನಿರಂತರವಾಗಿ ಪ್ರವಾಸ ಮಾಡಿ "ಸೇವೆಯೇ ಯಜ್ಞಕುಂಡ, ಸಮಿಧೆಯನ್ನು ನಾವು ಉರಿಸೋಣ" ಎಂಬ ಸಂದೇಶವನ್ನು ಎಲ್ಲ ಕಡೆಯೂ
ಪ್ರಸಾರ ಮಾಡಿದರು. ಕಾಲ ಕಳೆದಂತೆ ಸೇವಾ ವಿಭಾಗದ ಆಗುಹೋಗುಗಳನ್ನು ಮುಂದಿನ ಪೀಳಿಗೆಗೆ
ಹಸ್ತಾಂತರಿಸಬೇಕು ಎಂದು ನಂಬಿದವರು. ಸೂರೂಜೀಯವರು
ತಮ್ಮ 75 ನೇ ವಯಸ್ಸಿನಲ್ಲಿ ಸ್ವತ:
ಜವಾಬ್ದಾರಿಯಿಂದ ಮುಕ್ತರಾಗಲು ಬಯಸಿದರು, ಅದರಲ್ಲಿ ಯಶಸ್ವಿಯೂ ಆದರು.
ಒಬ್ಬ ಮಹಾನ್ ಸಂಘಟಕ, ಒಬ್ಬ ಶಕ್ತಿಶಾಲಿ ವಿಚಾರವಂತ,
ಒಬ್ಬ ಅಸಾಮಾನ್ಯ ಸಂಚಾರಿ ಮತ್ತು ಒಬ್ಬ ಪಕ್ವವಾದ
ಗುಂಪಿನ ನಾಯಕ, ಹೀಗೆ ಹಲವು ರೀತಿಯ
ವೈಶಿಷ್ಟ್ಯಗಳನ್ನು ಹೊಂದಿದ ಮಾನ್ಯ ಸೂರ್ಯನಾರಾಯಣರಾವ್ ಜೀ ಅವರು ಸಂಘದ ವಿವಿಧ ಜವಾಬ್ದಾರಿಗಳನ್ನು
ಸಮರ್ಪಕವಾಗಿ ನಿರ್ವಹಿಸಿದರು. ಅವರು ತಮ್ಮ ಸಾವಿನ ಕೆಲವೇ ಕೆಲವು ಹಿಂದಿನ ವರ್ಷಗಳ ತನಕವೂ ಅಖಿಲ
ಭಾರತೀಯ ಕಾರ್ಯಕಾರಿ ಮಂಡಳಿಯ ಟೋಳಿಯ ಸದಸ್ಯರಾಗಿದ್ದರು. ಆರೋಗ್ಯ ಸ್ಥಿರವಾಗಿರುವ ತನಕ ದಕ್ಷಿಣ
ಭಾರತದ ಪ್ರತಿಯೊಂದು ಸಂಘ ಶಿಕ್ಷಾ ವರ್ಗಗಳಿಗೆ ಹೋಗಿ ಸ್ವಯಂಸೇವಕರಿಗೆ ಮಾರ್ಗದರ್ಶನ
ಮಾಡುತ್ತಿದ್ದರು.
ಇವರು 2016ರ ನವೆಂಬರ್ 19 ರಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ತಮ್ಮ
ಕೊನೆಯುಸಿರನ್ನು ಎಳೆದರು. ಅದಕ್ಕೆ ಎರಡು ವಾರ ಹಿಂದೆಯೂ ಅವರು ಸ್ವಯಂಸೇವಕರನ್ನು ಭೇಟಿಯಾಗಿ,
ಸಂಘ ಕಾರ್ಯವನ್ನು ಮುಂದುವರೆಸುವ ವಿಚಾರದಲ್ಲಿ
ಚರ್ಚೆಯನ್ನು ಮಾಡಿದ್ದರು. ಅಂತಹ ಮಹಾನ್ ಚೇತನ ಮಾನ್ಯ ಸೂರ್ಯನಾರಾಯಣರಾವ್ ಸೂರೂಜೀಯವರು, ಸಂಘದ ಹೆಮ್ಮೆಯ ಸಾಧಕ.
नियमित अपडेट के लिए सब्सक्राईब करें।