सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

ಒಬ್ಬ ಮೌನ ತಪಸ್ವಿ ಬಾಳಸಾಹೇಬ ದೇಶಪಾಂಡೆ

ಜಶ್ಪುರ್ | ಛತ್ತೀಸಗಡ

parivartan-img

ಬನವಾಸಿಯ ಕಲ್ಯಾಣ ಆಶ್ರಮದ ಜನಕ ಬಾಳಸಾಹೇಬ ದೇಶಪಾಂಡೆ 

ಈಗ 74 ವರ್ಷಗಳ ಹಿಂದೆ 706 ಕಿಲೋಮೀಟರ್ ನ ದೂರವನ್ನು ಕ್ರಮಿಸಿ ಒಬ್ಬ ಯುವಕ ನಾಗಪುರದಿಂದ ಜಶ್ಪುರ್ ತಲುಪಿದ. ಇದೇನೂ ಸಾಮಾನ್ಯವಾದ ಯಾತ್ರೆ ಆಗಿರಲಿಲ್ಲ, ಇದು ಸಮೃದ್ಧ ಸಾಂಸ್ಕೃತಿಕ ಪರಿಸರದ ಪ್ರತೀಕವಾಗಿರುವ ನಾಗಪುರದಿಂದ, ಸಾಂಸ್ಕೃತಿಕ ಅಸ್ಮಿತೆಯನ್ನುವನ್ನು ಸಂಕಟವನ್ನು ಅನುಭಾವಗೊಂಡಿರುವ ಜಶಪುರದ ಕಡೆಗೆ ಹೋಗುತ್ತಿರುವ ಒಂದು ಐತಿಹಾಸಿಕ ಹೆಜ್ಜೆಯಾಗಿತ್ತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೊದಲ ಪೀಳಿಗೆಯ ಸ್ವಯಂಸೇವಕರಾದ ಬಾಳಸಾಹೇಬ ದೇಶಪಾಂಡೆ 1948ರಲ್ಲಿ ಅಂದಿನ ಮಧ್ಯಪ್ರಾಂತದ (ಇಂದಿನ ಛತ್ತೀಸಗಡ), ತಲುಪಲು ಅಸಾಧ್ಯವಾಗಿದ್ದ ಕ್ಷೇತ್ರ ಜಶಪುರದಲ್ಲಿ ಬನವಾಸಿಗಳನ್ನು ಶಿಕ್ಷಿತರನ್ನಾಗಿ ಮಾಡಿ ಅವರಿಗೆ ತಮ್ಮ ಸಂಸ್ಕೃತಿಯೊಂದಿಗೆ ಬೆಸೆಯಲು ಮತ್ತು ಅವರ ಆತ್ಮಗೌರವವನ್ನು ಮರಳಿಸುವುದಕ್ಕೋಸ್ಕರ ಅಲ್ಲಿಗೆ ಹೋದರು. ಜಶಪುರವನ್ನು ಕೇಂದ್ರವನ್ನಾಗಿಸಿ ಅವರು ಅರಾಷ್ಟ್ರೀಯ ತತ್ವಗಳ ಸವಾಲುಗಳ ಪರಿಧಿಯಲ್ಲೂ ಬನವಾಸಿ ಕಲ್ಯಾಣದ ಒಂದು ಮಹತ್ತರವಾದ ಕಾರ್ಯವನ್ನು ಸಂಪನ್ನಗೊಳಿಸಿದರು. ಮೊದಲಿಗೆ ಸರಕಾರದ ಜೊತೆಯಾಗಿ ಮತ್ತು ನಂತರ ಸ್ವತಂತ್ರವಾಗಿ ಬನವಾಸಿಗಳನ್ನು ಅವರ ಬೇರುಗಳೊಂದಿಗೆ ಬೆಸೆಯುವ ಈ ಅನವರತ ಕಾರ್ಯಸಾಧನೆಯ ಮಧ್ಯದಲ್ಲಿಯೇ 1952 ರಲ್ಲಿ ದೇಶದ ಅತ್ಯಂತ ದೊಡ್ಡ ಬನವಾಸಿ ಸಂಘಟನೆ "ಬನವಾಸಿ ಕಲ್ಯಾಣ ಆಶ್ರಮ" ವು ಜನ್ಮ ತಾಳಿತು. ಇಂದು ಇಡೀ ದೇಶದಲ್ಲಿ ಬನವಾಸಿಗಳಿಗೋಸ್ಕರ 19,398 ಸೇವಾಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಕಲ್ಯಾಣ ಆಶ್ರಮದ ಜನಕ ಬಾಳಸಾಹೇಬ ದೇಶಪಾಂಡೆಯವರು ಒಬ್ಬ ನಿಷ್ಕಾಮಯೋಗಿಯೇ ಆಗಿದ್ದರು.


 ಪಾ ಪು ಬಾಳಾಸಾಹೇಬ್ ದೇವರಸಾಜಿ, ರಾಜಾ ವಿಜಯಭೂಷಣ ಸಿಂಗ್, ಬಾಳಾಸಾಹೇಬ್, ಜುದೇವ್ಜಿ ಅವರೊಂದಿಗೆ.

ವೀಣೆಯ ಝೇಂಕಾರವು ಎಲ್ಲರನ್ನೂ ಮೋಹಿಸುವ ರೀತಿಯಲ್ಲಿದ್ದ ಈ ಪುಣ್ಯಾತ್ಮ ಬಾಳಾಸಾಹೇಬರ ಜನ್ಮ ಡಿಸೆಂಬರ್ 26, 1913ರಲ್ಲಿ ಅಮರಾವತಿಯಲ್ಲಿ ಆಯಿತು. ಶ್ರೀ ಕೇಶವ ದೇಶಪಾಂಡೆ ಮತ್ತು ಶ್ರೀಮತಿ ಲಕ್ಷ್ಮಿಬಾಯಿ ಅವರ ಸುಪುತ್ರರಾದ ರಮಾಕಾಂತ (ಬಾಳಾಸಾಹೇಬ) ಅವರ ಮಹತ್ಕಾರ್ಯ ಎಂತಹ ಇತಿಹಾಸವನ್ನು ಸೃಷ್ಟಿಸಿದೆ ಎಂದರೆ, ಆ ಇತಿಹಾಸವನ್ನು ಸಂಘದ ಮುಂಬರುವ ಅನೇಕ ಪೀಳಿಗೆಗಳು ತಮ್ಮ ಕಾರ್ಯ ರಚನೆಯ ಯೋಜನೆಯ ಆಧಾರವಾಗಿ ಇಟ್ಟುಕೊಳ್ಳಬಹುದು.

ರಮಾಕಾಂತರು ಚಿಕ್ಕಂದಿನಿಂದಲೇ ಮನಸ್ಸಿಟ್ಟು ಓದುತ್ತಿದ್ದರು. ನಾಗಪುರದಿಂದ ಎಂಎ, ಎಲ್‌ಎಲ್ಬಿ ಓದಿದ ನಂತರ ಅವರು ಪಡಿತರ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಆದರೆ ಒಂದು ಪ್ರಸಂಗದಲ್ಲಿ ಸರಕಾರದಿಂದ ಸರಿಯಾದ ನ್ಯಾಯ ಸಿಗದಿದ್ದಾಗ ಅವರು ನೊಂದು ಕೆಲಸ ತ್ಯಜಿಸಿ ರಾಮಟೇಕದಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ದೊಡ್ಡ ದೊಡ್ಡ ಕೆಲಸಗಳನ್ನು ಮಾಡುವವರ ಜೀವನ ಮಾಮೂಲಿನಂತೆ ಇರುವುದಿಲ್ಲ. ಹಾಗಾಗಿಯೇ ಬಹುಶ: ಭರಪೂರ ಚೆನ್ನಾಗಿ ನಡೆಯುತ್ತಿದ್ದ ತಮ್ಮ ವಕೀಲಿ ವೃತ್ತಿಯನ್ನು ಬಿಟ್ಟು ರಮಾಕಾಂತರು ಒಂದು ಸವಾಲನ್ನು ಸ್ವೀಕರಿಸಿದರು. ಪ್ರಸಿದ್ಧ ಸಮಾಜಸೇವಕ ವಣಿಕರ್ ಜೀ ಅವರ ಆಹ್ವಾನದ ಮೇರೆಗೆ ಮತ್ತು ಸಂಘದ ಅಂದಿನ


ರಾಷ್ಟ್ರೀಯ ಅರಣ್ಯ ನಿವಾಸಿ ಕೀಟ ಉತ್ಸವದಲ್ಲಿ ಬಾಳಾಸಾಹೇಬ್

ಸರಸಂಘಚಾಲಕರಾಗಿದ್ದ ಗೋಲವಲಕರ್ ಗುರೂಜಿ ಅವರ ಸಹಮತದೊಂದಿಗೆ ರಮಾಕಾಂತರು ಒಂದು ಮಹತ್ತಾದ ಉದ್ದೇಶವನ್ನು ಇಟ್ಟುಕೊಂಡು, ಜಶಪುರದಲ್ಲಿ ಬ್ಯಾಕ್ವರ್ಡ್ ಏರಿಯಾ ಡೆವಲಪ್ಮೆಂಟ್ ಆಫೀಸರ್ ಆಗಿ ಬ

ವನವಾಸಿ ಕಲ್ಯಾಣ ಆಶ್ರಮದ ಅಖಿಲ ಭಾರತೀಯ ಸಂಘಟನಾ ಮಂತ್ರಿಯಾಗಿದ್ದ ಗುಣವಂತಸಿಂಗ್ ಕೊಠಾರಿ ಹೇಳುತ್ತಾರೆ,

ರಮಾಕಾಂತರು ಜಶಪುರಕ್ಕೆ ಬಂದಾಗ ಅಲ್ಲಿನ ವನವಾಸಿ ಸಮಾಜ ತನ್ನ ಅಸ್ಮಿತೆ ಮತ್ತು ಅಸ್ತಿತ್ವದ ರಕ್ಷಣೆಗೋಸ್ಕರ ಹೋರಾಡುತ್ತಿತ್ತು. ನಕ್ಸಲವಾದಿ ತತ್ವಗಳ ಸಮಾನವಾಗಿ, ಪ್ರಜಾಸತ್ತೆಯ ಸ್ವಾತಂತ್ರ್ಯದ ನಂತರ ಹೊಸದಾಗಿ ನೇಮಿಸಲ್ಪಟ್ಟಿದ್ದ ಮುಖ್ಯಮಂತ್ರಿ ಪಂಡಿತ್ ರವಿಶಂಕರ್ ಶುಕ್ಲಾ ಅವರ ಸರಕಾರವೂ ವಿವಶವಾಗಿತ್ತು. ವನವಾಸಿ ಜನತೆ ತನ್ನ ಪರಂಪರೆಗಳನ್ನು ಮರೆತುಬಿಟ್ಟಿದ್ದರು, ದೇಶದ ವಿರುದ್ಧವಾದ ವಿದ್ರೋಹದ ಭಾವವೂ ಅವರಲ್ಲಿ ಮೆಲ್ಲದಾಗಿ ಹುಟ್ಟಿಕೊಳ್ಳುತ್ತಿತ್ತು. ಈ ಸಮಾಜವನ್ನು ತನ್ನ ಬೇರುಗಳೊಂದಿಗೆ


ಬೆಸೆಯುವುದಕ್ಕೋಸ್ಕರ, "ಸೇವೆಯ ಮಾಧ್ಯಮದಿಂದ ಅವರನ್ನು ತಮ್ಮವರನ್ನಾಗಿಸಿಕೊಂಡು ಅವರ ವಿಶ್ವಾಸವನ್ನು ಗೆಲ್ಲಬೇಕು" ಎಂಬ ಗುರೂಜಿ ಅವರ ಮಾತುಗಳನ್ನು ಜೀವನದ ಮಂತ್ರವನ್ನಾಗಿಸಿಕೊಂಡು ಬಾಳಸಾಹೇಬರು 1948 ರಲ್ಲಿ ಜಶಪುರದಲ್ಲಿ ಶಿಕ್ಷಣದ ಮಾಧ್ಯಮದಿಂದ ತಮ್ಮ ಕಾರ್ಯವನ್ನು ಆರಂಭಿಸಿದರು. ಪ್ರವಾಹದ ವಿರುದ್ಧ ಹೋರಾಡಿ ಈಜುವ ಬದಲು ಅವರು ಪ್ರವಾಹದ ದಿಕ್ಕನ್ನೇ ಬದಲಾಯಿ

ಈ ಯುವ ಕಾರ್ಯಕರ್ತರ ಅಸಲಿ ಪರೀಕ್ಷೆ ಶುರುವಾಗಿದ್ದು 1951 ರಲ್ಲಿ. ಮೊದಲ ಮಹಾ ಚುನಾವಣೆಯ ನಂತರ ಆಗಿನ ಸರಕಾರವು ಬನವಾಸಿಗಳ ಕಲ್ಯಾಣದ ವಿಷಯದಲ್ಲಿ ಸಂಪೂರ್ಣ ಉದಾಸೀನತೆ ತಾಳಿತು. ಬಾಳಸಾಹೇಬ ಅವರಿಗೆ ಯಾವುದೇ ಪ್ರಕಾರದ ಸಹಕಾರ ಸಿಗುವುದು ನಿಂತು ಹೋಗಿತ್ತು. ವಿಧಿ ಇಲ್ಲದೆ ನೌಕರಿಗೆ ರಾಜೀನಾಮೆ ನೀಡಿ ಅವರು ಪುನಃ ತಮ್ಮ ವಕೀಲಿ ವೃತ್ತಿಯನ್ನು ಆರಂಭಿಸುವ ನಿರ್ಣಯವನ್ನು ತೆಗೆದುಕೊಳ್ಳಬೇಕಾಯಿತು. ಆ ಸಮಯದಲ್ಲಿ ಬಾಳಾಸಾಹೇಬರು ನಾಗಪುರದಲ್ಲಿ ಪ ಪೂ ಗೋಲವಲಕರ ಅವರನ್ನು ಭೇಟಿ ಮಾಡಿದರು ಮತ್ತು ಆ ಭೇಟಿಯೇ ಅವರಿಗೆ ಮುಂದಿನ ಕಾರ್ಯಗಳಿಗೆ ದಿಕ್ಕನ್ನು ತೋರಿಸಿತು. ಸಾಮಾಜಿಕ ಕಾರ್ಯವು ಕೇವಲ ಸರಕಾರದ ಭರವಸೆಯಿಂದ ಮಾತ್ರ ನಡೆಯುವುದಿಲ್ಲ. ಸಂಸ್ಥೆಯ ನೋಂದಣಿ ಮಾಡಿ ಬನವಾಸಿ ಕಲ್ಯಾಣದ ಕಾರ್ಯವನ್ನು ಮುಂದುವರಿಸು ಎಂಬ ಗುರೂಜಿಯ ವಾಕ್ಯವನ್ನು ತಮ್ಮ ಜೀವನದ ಲಕ್ಷ್ಯವಾಗಿಟ್ಟುಕೊಂಡು ಅವರು ಪುನಃ ಜಶಪುರದ ಕಡೆಗೆ ಹೊರಟರು. ಈ ಬಾರಿ ಅವರು ಒಬ್ಬಂಟಿಯಾಗಿರಲಿಲ್ಲ. ಅವರ ಜೊತೆ  ಖಾಂಡವಾದ ವಿಭಾಗ ಪ್ರಚಾರಕರಾದ ಮೋರುಭಾವು ಕೇತ್ಕರ್ ಅವರು ಇದ್ದರು. ಇವರಿಬ್ಬರೂ ಆ ದಟ್ಟವಾದ ಕಾಡುಗಳಲ್ಲ

ಹಾಗೆ ನೋಡಿದರೆ ಸ್ವಚ್ಛಂದವಾಗಿದ್ದ ವನವಾಸಿ ಬಾಲಕರನ್ನು ಅನುಶಾಸನದಲ್ಲಿ ಬಂಧಿಸುವುದು ಕಷ್ಟವೇ ಆಗಿತ್ತು. ಆದರೆ ಸಹಜ ಆತ್ಮೀಯ ವ್ಯವಹಾರದಿಂದ ಬಾಳಾಸಾಹೇಬ ಮತ್ತು ಮೋರುಭಾವು ಅವರು ಬಾಲಕರಿಗೆ ವ್ಯವಸ್ಥಿತ ದಿನಚರಿ ಮತ್ತು ಸಂಸ್ಕರಿತ ಶಿಕ್ಷಣದ ಅಭ್ಯಾಸವನ್ನು ಮಾಡಿಸಿದರು. ನಿಧಾನವಾಗಿ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಯಿತು. ಈ ಕಠಿಣ ಯಾತ್ರೆಯಲ್ಲಿ ಬಾಳಾಸಾಹೇಬರ ಧರ್ಮಪತ್ನಿ ಪ್ರಭಾವತಿ ದೇವಿಯವರು ಅವರ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿದ್ದರು. ಬಾಳಾಸಾಹೇಬರ ಕಿರಿಯ ಪುತ್ರ ಸತೀಶ ಹೇಳುತ್ತಾರೆ, ಅವರ ಅಮ್ಮ ಪ್ರಭಾವತಿದೇವಿ ಅವರನ್ನು ಎಲ್ಲಾ ಮಕ್ಕಳು ಮತ್ತು ಕಾರ್ಯಕರ್ತರು "ಆಯೀ" ಎಂದು ಕರೆಯುತ್ತಿದ್ದರು.

ಪ್ರತಿದಿನವೂ ಬಾಳಾಸಾಹೇಬರ ವನವಾಸಿ ಕಲ್ಯಾಣದ ಸಂಕಲ್ಪವು ಮತ್ತೂ ಮತ್ತಷ್ಟು ದೃಢವಾಗುತ್ತಾ ಹೋಗುತ್ತಿತ್ತು. ಕಾರ್ಯವನ್ನು ಮುಂದುವರಿಸುವ ಸಲುವಾಗಿ ನಿರಂತರ ಪ್ರವಾಸ ಮತ್ತು ಹೊಸ ಕಾರ್ಯಕರ್ತರನ್ನು ನಿರ್ಮಿಸುವುದು ಅಗತ್ಯವಿತ್ತು. ಇದಕ್ಕಾಗಿ

ಬಾಳಸಾಹೇಬ ಮತ್ತು ಮೋರುಭಾವು ಅವರು ಯಾವುದೇ ವಾಹನವಿಲ್ಲದೆ, ವಿಷಪೂರಿತ ಪ್ರಾಣಿಗಳ ಮಧ್ಯೆಯ ಕಗ್ಗಾಡಿನಲ್ಲಿ, ಸೈಕಲಿನಲ್ಲಿ 25 ಕಿ.ಮೀ ಹೋಗುತ್ತಿದ್ದರು ಮತ್ತು ಅವರಿಗೆ ಈ ಕಾರ್ಯದ ಮಹತ್ವವನ್ನು ತಿಳಿಸಿ ಹೇಳುತ್ತಿದ್ದರು. 1956ರಲ್ಲಿ ವಿಧಿಪೂರ್ವಕವಾಗಿ ಕಲ್ಯಾಣ ಆಶ್ರಮದ ಸ್ಥಾಪನೆಯಾದಾಗ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಶ್ರಮದೊಂದಿಗೆ ಸೇರಿಕೊಂಡಿದ್ದರು, ಹೊಸ ಪಾಠಶಾಲೆಗಳೂ ತೆರೆದುಕೊಂಡಿದ್ದವು. ಆದರೆ, ವಿಧಿಯು ಒಂದು ದೊಡ್ಡ ಪರೀಕ್ಷೆ ನೀಡಿತು. 1962ರಲ್ಲಿ ಕಲ್ಯಾಣ ಆಶ್ರಮದ ಹಳೆಯ ಶಿಥಿಲವಾದ ಭವನ ಕುಸಿದುಬಿಟ್ಟಿತು. ಮತ್ತೆ ಈ ಬಾರಿಯೂ ಈಶ್ವರನ ರೂಪದಲ್ಲಿ ಮಹಾರಾಜಾ ವಿಜಯಭೂಷಣ ಸಿಂಗ್ ಜುದೇವ ಅವರು ಬಂದರು .ಅವರು ತಮ್ಮ ಆಸ್ತಿಯಲ್ಲಿ 4 ಎಕರೆ ಜಮೀನನ್ನು ವನವಾಸಿ ಕಲ್ಯಾಣ ಆಶ್ರಮಕೋಸ್ಕರ ದಾನ ಮಾಡಿಬಿಟ್ಟರು. ಇಲ್ಲಿ ಆಶ್ರಮದ ವಿಶಾಲ ಭವನವು ತಲೆಯೆತ್ತಿತು. ಇಂದಿಗೂ ಕಲ್ಯಾಣ ಆಶ್ರಮದ ಮುಖ್ಯ ಆಲಯವು ಇದಾಗಿದೆ.

ಈ ಭವನದಲ್ಲಿ ಆಯುರ್ವೇದ ಚಿಕಿತ್ಸಾಲಯದ ಆರಂಭದೊಂದಿಗೆ, ಬಾಳಾಸಾಹೇಬ ಅವರ "ಶಿಕ್ಷಣದ ಜೊತೆಗೆ ಸ್ವಾಸ್ಥ್ಯ" ಎನ್ನುವ ಧ್ಯೇಯವೂ ಈಡೇರಿತು. ವನವಾಸಿ ಸಮಾಜವನ್ನು ಒಂದಾಗಿಸಲು ಈ ಸಮಾಜದ ಸಂತರನ್ನು ಕಲ್ಯಾಣ ಆಶ್ರಮದೊಂದಿಗೆ ಬೆಸೆಯಬೇಕು ಎಂದು ಅವರಿಗೆ ತಿಳಿದಿತ್ತು. ಆದ್ದರಿಂದ ಅವರು ವನವಾಸಿ ಕಂವರ್ ಸಮಾಜದ ಸಂತ ಪೂಜ್ಯ ಗಹಿರಾ ಗುರೂಜಿ ಮಹಾರಾಜರ ಅಮೃತ ಹಸ್ತದಿಂದ ಈ ಭವ್ಯ ಭವನದ ಉದ್ಘಾಟನೆ ಮಾಡಿಸಿದರು ಮತ್ತು ಕಂವರ್ ಸಮಾಜವನ್ನು ಸ್ನೇಹ ಬಂಧದಿಂದ ಬೆಸೆದರು. ಕಲ್ಯಾಣ ಆಶ್ರಮದ ಅಖಿಲ ಭಾರತೀಯ ಸಂಘಟನಾ ಮಂತ್ರಿ ಅಟಲ್ ಜೀ ಹೇಳುತ್ತಾರೆ, ಕಲ್ಯಾಣ ಆಶ್ರಮದ ಯಾತ್ರೆಯಲ್ಲಿ ಏಳುಬೀಳುಗಳು ಬೇಕಾದಷ್ಟಿದ್ದವು, ಆದರೆ ಯಾತ್ರೆಯು ಲೋಕದ ಉದ್ಧಾರಕ್ಕೋಸ್ಕರ ಆಯಿತು. ಆದ್ದರಿಂದ ಕಾರ್ಯಕರ್ತರೂ ಒಂದಾದರು ಮತ್ತು ಕಾರ್ಯವೂ ಹೆಚ್ಚಾಗುತ್ತಾ ಹೋಯಿತು.

ದಕ್ಷಿಣ ಬಿಹಾರದ (ಜಾರ್ಖಂಡ್) ಲೋಹರದಗಾದಲ್ಲಿ, ಒಡಿಶಾದ ಬಾಲೇಶಂಕರಾದಲ್ಲಿ, ಮಧ್ಯಪ್ರದೇಶದ ಸೇಂಧವದಲ್ಲಿ, ಆಶ್ರಮದ ಹೊಸ ವಿದ್ಯಾರ್ಥಿ ನಿಲಯಗಳು ಆರಂಭವಾದವು. ಅವರು ಹೇಳುತ್ತಾರೆ, 1969ರವರೆಗೆ ಬಾಳಸಾಹೇಬರ ತಪಸ್ಸಿನ ಫಲ ಚೆನ್ನಾಗಿಯೇ ಫಲ ಕಂಡಿತ್ತು. ದೇಶದ 14 ಜಿಲ್ಲೆಗಳಲ್ಲಿ ಮತ್ತು 39 ಹಳ್ಳಿಗಳಲ್ಲಿ ಆಶ್ರಮದ ಬಗ್ಗೆ ಮಾಹಿತಿ ಇತ್ತು. ಮಧ್ಯಪ್ರದೇಶದಲ್ಲಿ ವನವಾಸಿ ಕಲ್ಯಾಣ ಪರಿಷತ್ತು ಕೂಡ ಸ್ಥಾಪಿತವಾಗಿತ್ತು.

ಕಾರ್ಯಗಳು ಹೆಚ್ಚಾದಂತೆ ಬಾಳಾಸಾಹೇಬರ ಪ್ರವಾಸವು ಹೆಚ್ಚುತ್ತಾ ಹೋಯಿತು. ಪ್ರತಿಯೊಂದು ಕೇಂದ್ರಕ್ಕೆ ಹೋಗಿ ಕಾರ್ಯಕರ್ತರ ಮನೋಸ್ಥೈರ್ಯವನ್ನು ಹೆಚ್ಚಿಸುವುದು ಮತ್ತು ನಿರಂತರ ಯೋಜನೆಗಳ ಬೈಟಕಗಳನ್ನು ಏರ್ಪಡಿಸುವುದು, ಇವೆಲ್ಲ ಅವರ ದಿನಚರಿಯ ಭಾಗವೇ ಆಗಿಬಿಟ್ಟಿತು. ಆಗ ಒಂದು ಆಪತ್ಕಾಲ ಬಂದಿತು.

ಸ್ವಾತಂತ್ರ್ಯದ ಹೋರಾಟದಲ್ಲಿ ಬ್ರಿಟಿಷ್ ಸರಕಾರದ ವಿರುದ್ಧ ರಾಮಟೇಕದಲ್ಲಿ ನಡೆದ ಬಾಂಬ್ ಸ್ಫೋಟದ ಮುಖ್ಯ ಆರೋಪಿಗಳಲ್ಲಿ ಒಬ್ಬರಾಗಿ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಂಡಿದ್ದ ಬಾಳಾಸಾಹೇಬರು ಆಪತ್ಕಾಲದಲ್ಲಿ ಜೈಲಿಗೆ ಹೋದರು. 1975ರಲ್ಲಿ ಅವರನ್ನು ದಸ್ತಗಿರಿ ಮಾಡಿ ಮೊದಲು ರಾಯಗಡ, ನಂತರ ರಾಯಪುರದ ಜೈಲಿನಲ್ಲಿ ಇರಿಸಲಾಯಿತು. ಅಲ್ಲಿ ಅವರು 19 ತಿಂಗಳು ಇದ್ದರು. ಆಗಿನ ಸರಕಾರದ ದಮನಕಾರಿ ನೀತಿಗಳು ಕಲ್ಯಾಣ ಆಶ್ರಮದ ಕಾರ್ಯಕರ್ತರನ್ನು ಜೈಲಿಗೆ ಹಾಕಿಯೂ, ಆಶ್ರಮದ ಜಮೀನನ್ನು ಲ್ಯಾಂಡ್ ಸೀಲಿಂಗ್ ಆಕ್ಟ್ ನಲ್ಲಿ ವಶಪಡಿಸಿಕೊಂಡಿತು. ಮತ್ತು ಆಶ್ರಮದ ಸಂಪತ್ತಿಗೂ ಸಾಕಷ್ಟು ಹಾನಿ ಉಂಟಾಯಿತು. ವಿದ್ಯಾರ್ಥಿ ನಿಲಯದ ಮಕ್ಕಳನ್ನು ಮನೆಗೆ ಕಳುಹಿಸಲಾಯಿತು. ಆದರೆ ಚಿನ್ನವು ಬೆಂಕಿಯ ಕುಲುಮೆಯಲ್ಲಿ ಕಾದು ನಳನಳಿಸಿ ಒಂದು ಚಿನ್ನದ ಗಟ್ಟಿಯಾದಂತೆ, ಬಾಳಾ ಸಾಹೇಬರು ಜೈಲಿನಿಂದ ವಾಪಸ್ ಬಂದಾಗ ಹೆಚ್ಚು ಜನಪ್ರಿಯರಾಗಿದ್ದರು.

ಆಪತ್ಕಾಲದ ನಂತರ ಸಂಘವು ರಾಯಭಾವು ಗೋಡಬೋಲೆ ಅವರಂಥ ಹಲವು ಪ್ರಚಾರಕರನ್ನು ಕಲ್ಯಾಣ ಆಶ್ರಮದ ಕಾರ್ಯ ವಿಸ್ತಾರದಲ್ಲಿ ತೊಡಗಿಸಿತು. ಬಾಳಾಸಾಹೇಬರು ದೇಶವಿಡೀ ಸಂಚಾರ ಮಾಡುತ್ತ ಈ ಕಾರ್ಯವನ್ನು ದೇಶವ್ಯಾಪಿಯಾಗಿಸಿದರು. ಅವರು ಪೂರ್ವೋತ್ತರ ರಾಜ್ಯಗಳ ಮಕ್ಕಳನ್ನು ದೇಶದ ಸಾಂಸ್ಕೃತಿಕ ಗೌರವದೊಂದಿಗೆ ಪರಿಚಿತರನ್ನಾಗಿ ಮಾಡುವುದು ಮತ್ತು ಅವರಲ್ಲಿ ರಾಷ್ಟ್ರಭಾವವನ್ನು ಜಾಗೃತಗೊಳಿಸುವುದಕ್ಕಾಗಿ ವಿದ್ಯಾರ್ಥಿ ನಿಲಯಗಳ ಸ್ಥಾಪನೆಯ ಶೃಂಖಲೆಯನ್ನು ಆರಂಭಿಸಿದರು.

ಆಶ್ರಮವು ತನ್ನ ಜನಕ ಬಾಳಸಾಹೇಬರ 71ನೇ ಜನ್ಮದಿನವನ್ನು ಇಡೀ ದೇಶದಲ್ಲಿ ಆಚರಿಸಲು ನಿರ್ಧರಿಸಿತು. ಅದರಲ್ಲಿ ನಿಧಿ ಸಂಗ್ರಹವೂ ಆಯಿತು. ಭವಿಷ್ಯದಲ್ಲಿ ಆಶ್ರಮದ ವಿಭಿನ್ನ ಕಾರ್ಯರೂಪಗಳಿಗೆ ಸಂಚಲನವೂ ದೊರೆತು ಈ ನಿಧಿಯನ್ನು ಬಳಸಲಾಯಿತು.

ವನವಾಸಿ ಪ್ರತಿಭೆಗಳನ್ನು ದೇಶದ ಮುನ್ನಡೆಗೆ ತರುವುದಕ್ಕಾಗಿ ಬಾಳಾಸಾಹೇಬರು ಏಕಲವ್ಯ ಕ್ರೀಡಾಯೋಜನೆಯನ್ನು ಸ್ಥಾಪಿಸಿದರು. ಈ ಮೂಲಕ ದೇಶಕ್ಕೆ ಹೆಸರಾಂತ ಬಿಲ್ಲುಗಾರರು ಮತ್ತು ಚಿನ್ನದ ಪದಕ ವಿಜೇತರು ದೊರೆತರು. ಸಂಘ ಸಂಸ್ಥಾಪಕ ಡಾಕ್ಟರ್ ಹೆಡಗೆವಾರರ

ಜನ್ಮಶತಾಬ್ದಿ ವರ್ಷದಲ್ಲಿ ಅವರ ನಿಷ್ಕಲ್ಮಶ ಕಾರ್ಯಗಳ ಸ್ವರೂಪವಾಗಿ ಛತ್ತೀಸ್ಗಡದಿಂದ ನಕ್ಷಲರ ಪ್ರಭಾವಿತರಾದ ಕ್ಷೇತ್ರದಲ್ಲಿ 30,000 ಬನವಾಸಿಗಳ ಬೃಹತ್ ಬನವಾಸಿ ಸಮ್ಮೇಳನ ನಡೆಯಿತು.

ಬಾಳಾಸಾಹೇಬರು ಹೇಳುತ್ತಿದ್ದರು, ಕಾರ್ಯದ ವಿಸ್ತರಣೆಗೋಸ್ಕರ ಮಹತ್ವಪೂರ್ಣ  ಯೋಜನೆ ಹೇಗಿರುತ್ತದೆಯೋ, ಅದಕ್ಕಿಂತ ಅಧಿಕ ಮಹತ್ವಪೂರ್ಣ ಯೋಜನೆಗೆ ವಾಯುಮಂಡಲವನ್ನು ಮೀರಿಸಿ ಶ್ರಮಿಸಬೇಕು ಎಂದು ಮತ್ತು ಅದನ್ನೇ ಅವರು ಜೀವನದುದ್ದಕ್ಕೂ ಮಾಡಿದರು.

ಶರೀರವು ಕ್ಷೀಣಿಸುತ್ತಿದ್ದು, ಆದರೂ 1979 ರಿಂದ 1993 ರವರೆಗೆ ದೇಶವಿಡೀ ಪ್ರತ್ಯೇಕ ಯೋಜನೆಗಳ ಉದ್ದೇಶದಿಂದ ಪ್ರವಾಸ ಮಾಡಿ ಅವರು ಕಾರ್ಯಕರ್ತರ ಬೈಠಕಗಳನ್ನು ನಡೆಸುತ್ತಿದ್ದರು. ಕಡೆಯ 20 ವರ್ಷಗಳಲ್ಲಿ ವನವಾಸಿ ಯುವಕನೊಬ್ಬನು ಇವರ ನೆರಳಿನಂತೆ ಬಾಳಾಸಾಹೇಬರ ಜೊತೆಯಲ್ಲಿ ದೇಶವಿಡೀ ಸಂಚರಿಸಿದನು. ಹೇಗಿದ್ದರೂ ಬಾಳಾಸಾಹೇಬರು ಈ ಕಲ್ಯಾಣದ ಮಹತ್ವಪೂರ್ಣ ಕಾರ್ಯವನ್ನು ಒಬ್ಬ ಬನವಾಸಿಗೇ ಹಸ್ತಾಂತರಿಸಬೇಕೆಂಬ ಆಸೆ ಹೊಂದಿದ್ದರಲ್ಲ|

1993ರಲ್ಲಿ ಆರೋಗ್ಯ ಬಿಗಡಾಯಿಸಿತು. ಕಟಕ್  ನಲ್ಲಿ ಸಂಪನ್ನಗೊಂಡ ಆಶ್ರಮದ ಅಖಿಲ ಭಾರತೀಯ ಸಮ್ಮೇಳನದಲ್ಲಿ ಜಗದೇವ ರಾಮ ಉರಾಂವ್ ಜೀ ಅವರಿಗೆ ಕಲ್ಯಾಣ ಆಶ್ರಮದ ನೇತೃತ್ವವನ್ನು ವಹಿಸಿ ಬಾಳ ಸಾಹೇಬರು ಸ್ವಯಂ ನೇಪಥ್ಯಕ್ಕೆ ಸರಿದರು.

1995ರ ಏಪ್ರಿಲ್ 21ರಂದು ಬಾಳಾಸಾಹೇಬರು ಇಹಲೋಕ ತ್ಯಜಿಸಿದರು ಮತ್ತು ಆ ಸಮಯದಲ್ಲಿ ಆ  ವನಯೋಗಿಯ ಕಣ್ಣುಗಳಲ್ಲಿ ಅಪೂರ್ವವಾದ ತೇಜಸ್ಸಿತ್ತು , ಶಾಂತಿ ಇತ್ತು. ಏಕೆಂದರೆ ಈಗ ಬೆಟ್ಟ ಪರ್ವತ ಹಾಗೂ ವನಗಳಲ್ಲಿ ಇರುವ  ವನವಾಸಿಯು ಜಾಗೃತಗೊಂಡಿದ್ದ. ಹಾಗೂ ಅವನ ಸಾಂಸ್ಕೃತಿಕ ಪರಿಚಯವು ಈಗ ಅವನಿಗೆ ಒಂದು ಹೆಮ್ಮೆಯ ವಿಷಯವಾಗಿತ್ತು.

386 Views
अगली कहानी