सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಒಂದಾಗಿ ಕೈ ಜೋಡಿಸೋಣ

ಶ್ರೀ ಗಿರಿಧರ್ ಉದ್ಯಾವರ | ದಕ್ಷಿಣ

parivartan-img

ದಿನ ಅವಳ ಕಂಬನಿಯ ಧಾರೆಗೆ ತಡೆಯೇ ಇರಲಿಲ್ಲ. ವಾಸ್ತವವಾಗಿ ಇದು ಸೀತೆಯ ಆನಂದದ ಪರಮಾವಧಿಯ ಸ್ಥಿತಿಯಾಗಿತ್ತು. ಅದೇ ಭಾವವು ಕಣ್ಣಿನಿಂದ ಹೊರಹೊಮ್ಮುತ್ತಿತ್ತು. ಸ್ವಲ್ಪವೇ ಹಣದ ಅವಶ್ಯಕತೆಗಾಗಿ 20 ವರ್ಷಗಳ ಹಿಂದೆ, ತಂದೆಯು ಸಾಹುಕಾರರಲ್ಲಿ ಗಿರವಿ ಇಟ್ಟಿದ್ದ ಜಮೀನನ್ನು, ಸೀತಾ ಬಡ್ಡಿ ಸಮೇತ 60,000 ರೂಪಾಯಿಗಳನ್ನು ನೀಡಿ ಚುಕ್ತಾ ಮಾಡಿ ಬಿಡಿಸಿಕೊಂಡ ಆನಂದದ ದಿನ.

ತಮಿಳುನಾಡಿನ ಒಂದು ಚಿಕ್ಕ ಹಳ್ಳಿ ಕಡಾಪೇರಿಯ ಸೀತೆಯ ಪರಿವಾರವು ಇದೀಗ ಸಾಲದ ಬೇಡಿಗಳಿಂದ ಮುಕ್ತವಾಗಿತ್ತು. "ಶ್ರೀ ಮಧುರಮ್ಮನ್" ಸ್ವಸಹಾಯ ಸಂಘದ ಸಹೋದರಿಯರು ಅವರ ನೆರವಿಗೆ ಬಾರದೇ ಇದ್ದಿದ್ದರೆ ಸಾಲದ ಹೊರೆ ಹಾಗೇ ಇರುತ್ತಿತ್ತು. ಸಂಘದ ಮುಖ್ಯ ಪ್ರಚಾರಕರಾದ ಸುಂದರ ಲಕ್ಷ್ಮಣ  ಅವರು ಹೇಳುತ್ತಾರೆ, 20 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಹಿಂದುಳಿದ ವನವಾಸಿ ಗ್ರಾಮಸ್ಥರ ಹಕ್ಕು ಸ್ಥಾಪನೆಗೋಸ್ಕರ ಸೇವಾಭಾರತಿಯು ಸ್ವಸಹಾಯ ಸಂಘಗಳನ್ನು ಪ್ರಾರಂಭಿಸಿತು. ಇದೀಗ ತಮಿಳುನಾಡಿನ ಉದ್ದಗಲಕ್ಕೂ ಸೇವಾಭಾರತಿಯ ವತಿಯಿಂದ ನಡೆಯುತ್ತಿರುವ ಸಂಘಗಳ ಸಂಖ್ಯೆ 4000 ಕ್ಕೂ ಅಧಿಕವಾಗಿದೆ. ಸ್ವಸಹಾಯ ಸಂಘವು ಆರ್ಥಿಕ ಸಬಲೀಕರಣದ ಜೊತೆಜೊತೆಗೆ ಸಮಾಜದಲ್ಲಿ ಪರಸ್ಪರ ಸಹಾಯ ನೀಡುವ ಮನಸ್ಥಿತಿಯನ್ನೂ ಉದ್ದೀಪನಗೊಳಿಸುತ್ತದೆ.




ಅಂಚುಕಂದರಾಯಿ ಗ್ರಾಮದ ರಾಜು ಬಗ್ಗೆ ಮಾತಾಡುವುದಾದರೆ, ಸ್ವಸಹಾಯ ಸಂಘ ಇಲ್ಲದಿರುತ್ತಿದ್ದರೆ, ಆತ ಜೀವಂತವಾಗಿ ಉಳಿಯುತ್ತಿದ್ದನೋ ಇಲ್ಲವೋ.. ಕೆಲ ವರ್ಷಗಳ ಹಿಂದೆ ಆತನಿಗೆ ಹೃದಯಾಘಾತವಾಗಿ, ತಕ್ಷಣ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಬಿದ್ದಾಗ, ಆತನ ಮಗಳಿಗೆ ಸ್ವಸಹಾಯ ಸಂಘಗಳ 10 ಸದಸ್ಯೆಯರು ಸೇರಿ ಧನಸಹಾಯ ನೀಡಿದ್ದರು. ಅಲ್ಲಿನ ಥಾಡೀಕ್ಕರಂಕೋನಾಮ್ ಗ್ರಾಮದಲ್ಲಿ ಒಬ್ಬ ವಿಧವೆಯ ಮನೆಯು ಬೆಂಕಿಗೆ ಆಹುತಿಯಾಗಿತ್ತು. ಆಗ ವೃದ್ಧ ಮಹಿಳೆಯ ಸಹಾಯಕ್ಕೆ ಸ್ವಸಹಾಯ ಗುಂಪಿನ ಎಲ್ಲರೂ ಸೇರಿ ಸಂಸಾರಕ್ಕೆ ಬೇಕಾದ ಅವಶ್ಯಕ ಸಾಮಗ್ರಿಗಳನ್ನು ಸಂಗ್ರಹಿಸಿ ಮಹಿಳೆಗೆ ಒಂದು ಒಳ್ಳೆಯ ಮನೆಯನ್ನೂ ನಿರ್ಮಿಸಿಕೊಟ್ಟಿದ್ದರು. ಈಗ ಇಡೀ ಭಾರತದಲ್ಲಿ ಇದೇ ರೀತಿಯ ಸ್ವಸಹಾಯ ಸಂಘಗಳನ್ನು ಪ್ರಾರಂಭಿಸಲು ಪ್ರವಾಸ ಮಾಡುತ್ತಿರುವ ಸಂಘದ ಪ್ರಚಾರಕ ಸುಂದರ ಲಕ್ಷ್ಮಣ ಅವರ ಪ್ರಕಾರ, ತಮಿಳುನಾಡಿನಲ್ಲಿ ಕನ್ಯಾಕುಮಾರಿ ಜಿಲ್ಲೆಯ ಥಿರಪರಪ್ಪೂ ಗ್ರಾಮದಲ್ಲಿ ಪಂಚಾಯ್ತಿಯಿಂದ ಜಾತಿಯ ಬಗ್ಗೆ ಭಿನ್ನಾಭಿಪ್ರಾಯ ಬಂದರೂ, ಸಂಘದ ಸದಸ್ಯೆಯರು ಧೃತಿಗೆಡಲಿಲ್ಲ. ಪಂಚಾಯ್ತಿಯಿಂದ ಗುಂಪಿನಲ್ಲಿರುವ ಹಿಂದುಳಿದ ಜಾತಿಯ ಮಹಿಳೆಯರನ್ನು ಹೊರಹಾಕಬೇಕೆಂದು ಫರ್ಮಾನು ಹೊರಡಿಸಿದಾಗ, ಮಹಿಳೆಯರು ತುಘಲಕ್ ಆದೇಶವನ್ನು ಪಾಲಿಸಲು ನಿರಾಕರಿಸಿಬಿಟ್ಟರು.

ವನವಾಸಿ ಕ್ಷೇತ್ರಗಳಲ್ಲಿರುವ ಸಾಹುಕಾರರ ಶೋಷಣೆ ಅಥವಾ ಜಾತಿ ಭೇದಭಾವದ ವಿರುದ್ಧ ಧ್ವನಿಯನ್ನು ಎತ್ತುವ ಸ್ವಸಹಾಯ ಸಂಘಗಳು ಮದ್ಯ ಮಾರಾಟದ ವಿರುದ್ಧವೂ ಹೋರಾಟ ಮಾಡಲು ಹಿಂದೇಟು ಹಾಕಲಿಲ್ಲ. ಥಾಟ್ಟೀಕೇರೆ ಗ್ರಾಮದಲ್ಲಿ ಮದ್ಯದಂಗಡಿಯನ್ನು ಎತ್ತಂಗಡಿ ಮಾಡಲು ಸ್ವಸಹಾಯ ಸಂಘದ ಮಹಿಳೆಯರು ಕಲೆಕ್ಟರ್ ವರೆಗೂ ತಮ್ಮ ಅಹವಾಲನ್ನು ತೆಗೆದುಕೊಂಡು ಹೋಗಿ, ಕೊನೆಗೂ ಸಫಲರಾದರು. ಇದೇ ರೀತಿ ಮುರುಥನ್ಕೋಡೆ ಗ್ರಾಮದಲ್ಲಿ ನಕಲಿ ಮದ್ಯ ತಯಾರಿಕೆಯ ಒಂದು ಫ್ಯಾಕ್ಟರಿಯನ್ನು ಮುಚ್ಚಿಸುವಲ್ಲಿ ಯಶಸ್ವಿಯಾದರು. ಇಲ್ಲಿ ಆಯುರ್ವೇದದ ಔಷಧಿಯಾದ ಅರಿಷ್ಟ ಎಂಬ ಹೆಸರಿನಲ್ಲಿ ನಕಲಿ ಮದ್ಯ ತಯಾರಿಸುವ ದಂಧೆ ನಡೆಯುತ್ತಿತ್ತು. ಎಷ್ಟೋ ಮಂದಿ ಇದನ್ನು ಕುಡಿದು ಮರಣವನ್ನೂ ಹೊಂದಿದ್ದರು. ಸ್ವಸಹಾಯ ಸಂಘದ ಸದಸ್ಯೆಯರು ಕಾನೂನಿನ ಪ್ರಕಾರ ಹೋರಾಟ ನಡೆಸಿ, ಫ್ಯಾಕ್ಟರಿಯ ಲೈಸೆನ್ಸನ್ನು ರದ್ದುಗೊಳಿಸಿದರು.

ಮಾನವೀಯ ಸಂವೇದನೆಗಳು ಶಿಥಿಲಗೊಳ್ಳುತ್ತಿರುವ ಸಮಯದಲ್ಲಿ ಸ್ವಸಹಾಯ ಸಂಘಗಳು ಮಾನವೀಯ ಸಹಯೋಗ ಮತ್ತು ಭ್ರಾತೃತ್ವದ ಹೊಸ ಅರಿವನ್ನು ಸೃಷ್ಟಿಸುವಲ್ಲಿ ಸಫಲವಾಗಿವೆ. ತಮಿಳುನಾಡಿನ ನಾಗರಕೋಯಿಲ್ ಪಟ್ಟಣದ ಹತ್ತಿರದ ಒಂದು ಗ್ರಾಮದಲ್ಲಿ ಸಂಘದ ಸದಸ್ಯೆಯರು ಭರತಕಲಿಯ 23 ವರ್ಷ ಪ್ರಾಯದ ವಿಧವಾ ಪುತ್ರಿ ಶಾಂತಿಯ ಪುನರ್ವಿವಾಹದ ಖರ್ಚನ್ನು ಭರಿಸಿದರು. ಇನ್ನೊಂದು ಗ್ರಾಮದಲ್ಲಿ ಕ್ಯಾನ್ಸರ್ ಪೀಡಿತ ಒಬ್ಬ ರೈತ ಮಹಿಳೆಯ ಸಾವಿನ ನಂತರ ಅಂತಿಮ ಸಂಸ್ಕಾರದಿಂದ ಹಿಡಿದು, ಅವಳ ಅನಾಥ ಮಕ್ಕಳಾದ ಅನಿತಾ ಹಾಗೂ ಕಲಾ ಇಬ್ಬರ ವಿವಾಹ ಪೂರೈಸುವ ತನಕವೂ ಪ್ರತೀ ಹಂತದಲ್ಲೂ ಸಹಾಯಹಸ್ತ ಚಾಚಿದ್ದರು.

ಇಡೀ ಭಾರತದಲ್ಲಿ ಪ್ರಚಲಿತವಾಗಿರುವ "ವೈಭವಶ್ರೀ" ಹೆಸರಿನಿಂದ ರೀತಿಯ ಸ್ವಸಹಾಯ ಸಂಘಗಳು ತಲೆ ಎತ್ತಿ ನಿಂತಿವೆ. ಇವುಗಳ ಉದ್ದೇಶ ಸ್ವಸಹಾಯ, ಸ್ವಾವಲಂಬನೆ, ಸ್ವಾಭಿಮಾನ ಮತ್ತು ಪರಸ್ಪರ ವಿಶ್ವಾಸದಿಂದ ಕಾರ್ಯ ನಿರ್ವಹಿಸಿ, ಎಲ್ಲರ ಶುಭವನ್ನೂ, ಎಲ್ಲರ ವಿಕಾಸವನ್ನೂ ಬಯಸುವುದಾಗಿದೆ. ಇದರಿಂದ ಹಿಂದುಳಿದ, ದುರ್ಬಲ ಅಥವಾ ವಂಚಿತ ವರ್ಗಗಳಲ್ಲಿ ಆತ್ಮವಿಶ್ವಾಸ ಮತ್ತು ಆತ್ಮಸಮ್ಮಾನದ ಭಾವವು ವೃದ್ಧಿಯಾಗುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಸಂಪರ್ಕ - ಸುಂದರ ಲಕ್ಷ್ಮಣ

ಮೊಬೈಲ್ – 09443749595

1170 Views
अगली कहानी