सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಮುಳುಗುತ್ತಿರುವ ಕೇರಳಕ್ಕೆ ಚುಕ್ಕಾಣಿಯಾದ ಸಂಘ.

ಶ್ರೀಮತಿ ಸಹನ ವಿಠ್ಠಲ್ ಕುಮಾರ್ | ದಕ್ಷಿಣ

parivartan-img

ಜುಲೈ 2018ರ ಮದ್ಯಭಾಗ. ಮುಂಗಾರು ಮಳೆ ಆಗಷ್ಟೇ ಪ್ರಾರಂಭವಾಗಿತ್ತು. ದೇಶದ ಉಳಿದ ಭಾಗಗಳಲ್ಲಿ ಮಳೆಯು ಸುಖದ ಸಿಂಪಡಿಕೆಯಾಗಿದ್ದರೆ, ಕೇರಳದಲ್ಲಿ ಯಾವುದೂ ಸರಿ ಇರಲಿಲ್ಲ. ಯಾವ ಕೇರಳವನ್ನು ದೇವತೆಗಳ ನಾಡು (Gods own Country) ಎಂದು ಸಹ ಕರೆಯಲಾಗುತ್ತದೋ ಅಲ್ಲಿ ಬಂದ ಮಳೆ ಹಿಂದಿನ ವರ್ಷದ ಎಲ್ಲಾ ದಾಖಲೆಗಳನ್ನೂ ಮುರಿದಿತ್ತು. ಹವಾಮಾನ ವಿಜ್ಞಾನಿಗಳಿಗೆ ಇದರ ಚಿಂತೆ ಆಗಿತ್ತು. 8 ಆಗಸ್ಟ್ 2018ರ ಸಂಜೆಯಾಗುತ್ತಿದ್ದಂತೆ ಕೇರಳದ 54 ಅಣೆಕಟ್ಟುಗಳ ನೀರಿನ ಮಟ್ಟ ಕೇರಳವನ್ನು ಆಪತ್ತಿನ ಅಂಚಿಗೆ ಸಿಲುಕಿಸಿತು. 24 ಗಂಟೆಗಳೊಳಗೆ ಇವುಗಳ ಪೈಕಿ 34 ಅಣೆಕಟ್ಟುಗಳ ಬಾಗಿಲುಗಳನ್ನು ತೆರೆಯಬೇಕಾಯಿತು. 26 ವರ್ಷದಲ್ಲಿ ಮೊದಲ ಬಾರಿ ಇಡ್ಕಿದು ಅಣೆಕಟ್ಟಿನ ಐದು ಬಾಗಿಲುಗಳನ್ನು ಒಟ್ಟಿಗೇ ತೆರೆಯಲಾಯಿತು. ಈಗ ಸುಮಾರಾಗಿ ಇಡೀ ಕೇರಳವು ಅಭೂತಪೂರ್ವ ಜಲಪ್ರಳಯದ ಅಂಚಿನಲ್ಲಿತ್ತು.


ಚೆಂಗನ್ನೂರು, ಪಡನ್ನಕಾಡ್, ಏರನಾಡು, ಅರಣಮುಲಾ, ಕೊಳಂಜೇರಿ, ಅರಿಯೂರ್, ರಾಣಿ, ಪಂದಳಂ, ಕುಟ್ಟನಾಡ್, ಆಲುವಾ, ಹಾಗೂ ಚಾಲಕ್ಕುಡಿಯಂತಹ ಪ್ರದೇಶಗಳಂತೂ ಕಣ್ಣಿಗೇ ಕಾಣುತ್ತಿರಲಿಲ್ಲ. ಎಲ್ಲಿ ನೋಡಿದರೂ ನೀರು, ನೀರು, ನೀರು. ಸುಮಾರು 380ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ದೇವಭೂಮಿ ಕೇರಳದ ಮೇಲೆ ಪ್ರವಾಹರೂಪಿ ಯಾವುದೋ ಒಂದು ವಿಚಿತ್ರ ದೈತ್ಯ ದಾಳಿ ಮಾಡಿದೆ ಎನಿಸುತ್ತಿತ್ತು. ಎಲ್ಲಾ ಕಡೆ ತ್ರಾಹಿಮಾಮ್, ವಿಧ್ವಂಸ, ಮೃತ್ಯು ಹಾಗೂ ಮಾನವೀಯ ಅಸಹಾಯಕತೆಯ ದೃಶ್ಯಗಳೇ ಕಾಣುತ್ತಿತ್ತು. ಈ ಸಂದರ್ಭದಲ್ಲಿ 'ವಾಸುಕೀ ' - ಯಾವುದನ್ನು ಪುರಾಣ ಕಥೆಯ ಪ್ರಕಾರ ಭಗವಾನ್ ವಿಷ್ಣುವಿನ ಆರನೇ ಅವತಾರ ಪರಶುರಾಮರ ಮೂಲಕ ದೇವಭೂಮಿ ಕೇರಳದ ರಕ್ಷಕನಾಗಿ ನಿಯುಕ್ತಿಗೊಳಿಸಲಾಗಿತ್ತೋ, ಅದೇರೀತಿ ಸಂಘದ ಸ್ವಯಂಸೇವಕರು ಈ ಅಭೂತಪೂರ್ವ ಪ್ರವಾಹದ ವಿರುದ್ಧ ಕೈ ಜೋಡಿಸಲು ಮೈದಾನಕ್ಕೆ ಜಿಗಿದರು.


ರಾಷ್ಟ್ರೀಯ ಸೇವಾ ಭಾರತಿಯ ಜೊತೆಯಲ್ಲಿ ಸಂಲಗ್ನವಾದ ಪ್ರದೇಶ ಸೇವಾ ಭಾರತಿಯ ಮಾರ್ಗದರ್ಶನದಲ್ಲಿ ಸಾವಿರಾರು ಸ್ವಯಂಸೇವಕರು ಹೆಗಲಿಗೆ ಹೆಗಲು ಕೊಟ್ಟು ಪರಿಹಾರ ಕಾರ್ಯದಲ್ಲಿ ಒಟ್ಟುಗೂಡಿದರು. ಚೆಂಗನ್ನೂರು ಜಿಲ್ಲೆಯ 24 ವರ್ಷದ 'ವಿಶಾಲ್ ನಾಯರ್' ಸಹ ಇವರಲ್ಲಿ ಒಬ್ಬನಾಗಿದ್ದ. ವಿಶಾಲ್ ಸಹೋದರ ಭಾವನೆಯ ಸಂಸ್ಕಾರವನ್ನು ಶಾಖೆಯಿಂದ ಕಲಿತಿದ್ದ. ಆ ಧೈರ್ಯಶಾಲಿ ಯುವಕ ಪ್ರವಾಹದಲ್ಲಿ ಮುಳುಗುತ್ತಿರುವ ಜನರನ್ನು ಹೊರತರಲು ಪ್ರಾಣದೊಂದಿಗೆ ಆಟವಾಡಿದ. ಕೇರಳದಲ್ಲಿ ಜಾರಿಯಾದ ಪರಿಹಾರ ಕಾರ್ಯದ ಸಂಚಾಲನೆ ಮಾಡುತ್ತಿದ್ದ ಸೇವಾಭಾರತಿಯ ತಿರುವನಂತಪುರಂ ಖಂಡದ ಮಂತ್ರಿ ಶ್ರೀ ಎಸ್.ಜಯಕೃಷ್ಣನ್'ಜೀ ಹೇಳುವಂತೆ ತಂದೆ ವೇಣುಗೋಪಾಲ್ ನಾಯರ್, ತಾಯಿ ಜಯಶ್ರೀ ಹಾಗೂ ತಂಗಿ ಅಥಿರಾ ನಾಯರ್'ಳನ್ನು ಸುರಕ್ಷಿತ ಸ್ಥಾನಕ್ಕೆ ತಲುಪಿಸಿದ ನಂತರ ಆಗಸ್ಟ್ 16ರಂದು ಬೆಳಿಗ್ಗೆ ಸುಮಾರು ನಾಲ್ಕು ಗಂಟೆಗೆ ವಿಶಾಲ್ ಪ್ರವಾಹದಲ್ಲಿ ಸಿಲುಕಿದ ಐವತ್ತು ಪರಿವಾರಗಳನ್ನು ರಕ್ಷಿಸಲು ನಡೆದಿರುವ ಪರಿಹಾರ ಕಾರ್ಯದ ಮುಂಚೂಣಿಯಲ್ಲಿ ಸ್ವಯಂಸೇವಕರೊಂದಿಗೆ ಸೇರಿಕೊಂಡಿದ್ದ. ಆಗಲೇ ಸಮೀಪದ ಮುರಿಯಪ್ಪ ಸೇತುವೆಯ ಆಚೆ ಅವನು ಒಬ್ಬ ವ್ಯಕ್ತಿ ಮುಳುಗುತ್ತಿರುವುದನ್ನು ಕಂಡ. ವಿಶಾಲ್ ವಿದ್ಯುತ್ ವೇಗದಿಂದ ಆ ಕಡೆ ಓಡಿದ ಹಾಗೂ ಏರುತ್ತಿದ್ದ ನೀರಿಗೆ ನೆಗೆದ. ಪ್ರತ್ಯಕ್ಷದರ್ಶಿಗಳ ಪ್ರಕಾರ ನೀರಿನ ವೇಗ ಎಷ್ಟಿತ್ತೆಂದರೆ ಅದು ವಿಶಾಲ್'ನನ್ನು ಸಹ ಬಿಗಿಯಾಗಿ ಹಿಡಿದಿತ್ತು. ಆ ಮುಳುಗುತ್ತಿದ್ದ ವ್ಯಕ್ತಿಯ ಜೀವವನ್ನು ಗ್ರಾಮಸ್ಥರು ಉಳಿಸಿದರು. ಆದರೆ ವಿಶಾಲ್'ನನ್ನು ಹೊರತೆಗೆಯಲಾಗಲಿಲ್ಲ. ಮೂರು ದಿನಗಳ ಬಳಿಕ ವಿಶಾಲ್'ನ ಶವ ಘಟನಾಸ್ಥಳದ ನೂರು ಮೀಟರ್ ದೂರದಲ್ಲಿ ಮುಳುಗಿಕೊಂಡಿತ್ತು. ವಿಶಾಲ್'ನ ತಂಗಿ ಅಥಿರಾ ನಾಯರ್ ಹೇಳುವಳು - "ನಿಸ್ಸಂದೇಹವಾಗಿ ನನ್ನ ಮುದಿ ತಂದೆ ತಾಯಿಯರು ತನ್ನ ಏಕಮಾತ್ರ ಪುತ್ರನನ್ನು ಕಳೆದುಕೊಂಡಿರುವರು. ಆದರೆ ವಿಶಾಲ್ ನಮ್ಮೆಲ್ಲರ ಹೃದಯಗಳಲ್ಲಿ ಎಂದೆಂದಿಗೂ ಜೀವಂತವಾಗಿರುವನು. ನಮಗೆ ಅವನ ಬಲಿದಾನದ ಬಗ್ಗೆ ಹೆಮ್ಮೆ ಇದೆ."

1167 Views
अगली कहानी