सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ದೇವರ ನಾಡಿನ ಸೇವಾವ್ರತಿಗಳು

ದಕ್ಷಿಣ

parivartan-img

ದೇವರ ನಾಡೆಂದೇ ಪ್ರಖ್ಯಾತವಾಗಿ ವರ್ಷಪೂರ್ತಿ ಸಸ್ಯಶ್ಯಾಮಲೆಯಾಗಿ ಪ್ರವಾಸಿಗರನ್ನು, ಚಾರಣಪ್ರಿಯರನ್ನುಪ್ರಕೃತಿ ಆರಾಧಕರನ್ನು, ತೀರ್ಥಯಾತ್ರಿಗಳನ್ನು, ಆಧ್ಯಾತ್ಮ ಸಾಧಕರನ್ನು ತನ್ನೆಡೆಗೆ ಸದಾಕಾಲ ಸೆಳೆಯುವ ಕೇರಳ ರಾಜ್ಯವು  2021ರ ಅಕ್ಟೋಬರ್ 16ರಂದು ವರುಣನ ಆರ್ಭಟಕ್ಕೆ ಸಿಲುಕಿ ನಲುಗಿ ಹೋಗಿತ್ತು.

ಅಂದು ಬೆಳಿಗ್ಗೆ 5 ಗಂಟೆಗೆ ಶುರುವಾದ ಭಾರಿ ಮಳೆಯಿಂದಾಗಿ ಪರಿಸ್ಥಿತಿ ಕೈಮೀರಿ ಹೋಗಿತ್ತು. ನೋಡು ನೋಡುತ್ತಿದ್ದಂತೆ ಮಳೆಯು ತನ್ನ ರಭಸವನ್ನು ಹೆಚ್ಚಿಸಿಕೊಂಡು ಮನೆಗಳನ್ನೇ  ಆಪೋಶನ ಪಡೆಯುತ್ತಿತ್ತು. ಸೇತುವೆಗಳು ನೀರಿನಲ್ಲಿ ಕೊಚ್ಚಿಹೋಗುತ್ತಿದ್ದವು, ಭೂಕುಸಿತದಿಂದ ಅನೇಕ ಮುಖ್ಯ ರಸ್ತೆಗಳು ಕುಸಿದು ಹೋಗಿದ್ದವು ಹಾಗೂ ಸರಿ ಇದ್ದ ರಸ್ತೆಗಳಲ್ಲಿ ಕಸದರಾಶಿ ಮತ್ತು ಕಲ್ಲುಗಳು ಮತ್ತು ದೊಡ್ಡ ಬಂಡೆಕಲ್ಲುಗಳು ತುಂಬಿಹೋಗಿದ್ದವು, ಮನುಷ್ಯರೂ ನೀರಿನಲ್ಲಿ ಕೊಚ್ಚಿಹೋಗಿದ್ದರು. ಬಾವಿಗಳಲ್ಲಿ ಮಣ್ಣು ತುಂಬಿತ್ತು, ದೇವಸ್ತಾನದ ಪ್ರಾಂಗಣಗಳೂ ಕೆಸರಿನಿಂದ ತುಂಬಿ ಹೋಗಿದ್ದವು, ಸರ್ಕಾರಿ ಕಛೇರಿಗಳಲ್ಲಿ, ಬ್ಯಾಂಕ್ ಗಳಲ್ಲಿ,ಅಂಗಡಿ ಮುಂಗಟ್ಟುಗಳಲ್ಲಿ, ವ್ಯಾಪಾರ ಮಾರುಕಟ್ಟೆಗಳಲ್ಲಿ ಕೆಸರು ತುಂಬಿಹೋಗಿತ್ತು, ಚರಂಡಿಗಳಲ್ಲಿ ಮಣ್ಣು ಮತ್ತು ಕಸ-ಕಡ್ಡಿಗಳು ತುಂಬಿ ಹೋಗಿದ್ದವು, ಹೀಗೆ ಕಣ್ಣು ಹಾಯಿಸಿದಲ್ಲೆಲ್ಲ ನೀರು ಮತ್ತು ಕೆಸರಿನ ರಾಶಿ. ಅಷ್ತೇ ಅಲ್ಲದೇ ಈ  ಪ್ರವಾಹವು 21 ಜನರನ್ನು ಬಲಿ ತೆಗೆದುಕೊಂಡಿತ್ತು. ಇದೆಲ್ಲವನ್ನು ನೋಡುತ್ತಿದ್ದ ಅಲ್ಲಿನ ಪೀಡಿತ ಜನತೆ ಅಸಾಹಾಯಕರಾಗಿ ಕುಳಿತಿದ್ದರು.


ದಿಡೀರೆಂದು ಎದುರಾದ ಇಂತಹ ಅವಘಡಗಳನ್ನು ನೋಡುತ್ತಿದ್ದ ಸರ್ಕಾರಿ ಅಧಿಕಾರಿಗಳಿಗೂ ಹಾಗೂ ಅಲ್ಲಿನ ನಿವಾಸಿಗಳಿಗೂ ತಾವು ಏನು ಮಾಡಬೇಕೆಂದು ತೋಚದಾದ ಸಂದರ್ಭದಲ್ಲಿ, ಜನರ ಸೇವೆಗಾಗಿ ರಾಷ್ಟ್ರೀಯ ಸೇವಾ ಭಾರತಿಯ ಕಾರ್ಯಕರ್ತರು ಪರಿಹಾರ ಕಾರ್ಯಕ್ಕೆ ಧುಮುಕಿದರು. ತಮ್ಮಲ್ಲೇ ಹಲವು ಗುಂಪುಗಳನ್ನು ಮಾಡಿಕೊಂಡು ಯಾರು ತಮ್ಮ ಮನೆಯನ್ನು ಕಳೆದುಕೊಂಡು ಸರ್ಕಾರಿ ಪರಿಹಾರ ಶಿಬಿರಗಳಲ್ಲಿ ಇದ್ದರೋ, ಅಂತವರ ಅವಶ್ಯಕತೆಗಳನ್ನು ಪೂರ್ತಿಮಾಡಲು ಯೋಜನೆಗಳನ್ನು ಮಾಡಿದರುಹೀಗೆ 20 ಶಿಬಿರಗಳಲ್ಲಿ ಇದ್ದ ನಿರಾಶ್ರಿತರ ಅವಶ್ಯಕತೆಗಳನ್ನು ತಿಳಿದುಕೊಂಡು, ಅವರಿಗೆ ಊಟ ಮತ್ತು ಬಟ್ಟೆಯ ವ್ಯವಸ್ಥೆಯನ್ನು ಮಾಡಿ ಪರಿಹಾರ ಕಾರ್ಯವನ್ನು ಪ್ರಾರಂಭಿಸಿದರು.

ಸೇವಾ ಭಾರತಿಯ ಪೂರ್ಣಾವಧಿ ಕಾರ್ಯಕರ್ತರಾದ ಜಿದಿನ್ ರಮೇಶ್ ಜೀ ಹೇಳುತ್ತಾರೆ; "450 ಕಟ್ಟಡಗಳು, 310 ಬಾವಿಗಳು ಮತ್ತು ಸಣ್ಣ ಕಾರ್ಖಾನೆಗಳ ಜೊತೆಗೆ ರಸ್ತೆಗಳಲ್ಲಿ ಹರಡಿಕೊಂಡಿದ್ದ ಮರಗಳನ್ನು ಹಾಗು ಬಂಡೆಕಲ್ಲುಗಳನ್ನು ಹೊರಹಾಕಿ ಆ ರಸ್ತೆಗಳನ್ನು ಸಂಚಾರ ಯೋಗ್ಯ ಮಾಡಲಾಯಿತು, ಸೇನೆಯ ಸೈನಿಕರಂತೆ ಸಂಘದ ಸ್ವಯಂಸೇವಕರು ಕೊಕ್ಕಯ್ಯಾರ್ ಗ್ರಾಮಸ್ತರ ಸಹಾಯದಿಂದ ಈ ಕಾರ್ಯವನ್ನು ಮಾಡಿ ಮುಗಿಸಿದರು ಎಂದು. ಖಾಕಿ ನಿಕ್ಕರ್ ಧರಿಸದ್ದ ಸಂಘದ ಸ್ವಯಂಸೇವಕರು ನಮ್ಮ ಗ್ರಾಮಕ್ಕೆ ಬಂದು ಮಳೆಯಲ್ಲಿ ಕೊಚ್ಚಿ ಹೋಗಿದ್ದ ಸೇತುವೆಯನ್ನು ನಿರ್ಮಿಸಿ ನಮ್ಮ ಗ್ರಾಮವನ್ನು ಹೊರ ಜಗತ್ತಿನೊಂದಿಗೆ ಜೋಡಿಸಿದರು ಎಂದು ಗ್ರಾಮ ಪಂಚಾಯಿತಿ ಸದಸ್ಯ ನಿಚೂರ್ ತಂಗಚ್ಚನ್  ಹೇಳುತ್ತಾರೆ”. ಹಗಲಿರುಳು ಶ್ರಮಿಸಿ ಮರದ ದಿಮ್ಮಿ, ಹಲಗೆ, ಹಾಗು ಇತರ ಸ್ಥಳೀಯ ಸಂಪನ್ಮೂಲಗಳಿಂದ 5ಅಡಿ ಅಗಲ ಹಾಗು 12ಮೀಟರ್ ಉದ್ದದ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಲಾಯಿತು ಎಂದು ನಿಚ್ಚೂರ್ ತಂಗಚ್ಚನ್ ಅವರು ಸೇವಾ ಭಾರತಿಯ ಈ ನಿರಂತರ ಸೇವಾಕಾರ್ಯಗಳನ್ನು ಶ್ಲಾಗಿಸುತ್ತಾ ಗ್ರಾಮ ಪಂಚಾಯತಿಯ ಉಪಕರಣಗಳಿಂದ ಈ ಸೇತುವೆ ನಿರ್ಮಾಣಗೊಂಡಿಲ್ಲ ಬದಲಾಗಿ ಇದು ಸೇವಾಭಾರತಿಯ ಸ್ವಯಂಸೇವಕರ ನಿರಂತರ ಶ್ರಮದಿಂದಾಗಿ ಪೂರ್ಣಗೊಂಡಿದೆಎಂದು ಹೇಳುತ್ತಾರೆ. ಶ್ರೀ ನಾರಾಯಣ ದರ್ಮ ಪರಿಪಾಲನ್ ಯೋಗಂ ಸಂಘಟನೆಯ ಸಾಧಕರಿಗೆ  ಕಾರ್ಯಕರ್ತರನ್ನು ಹೊಗಳಿದಷ್ಟು ಸಾಲದು, ಕಾರಣ, ದೇವಸ್ಥಾನದ ಸುತ್ತ ಮುತ್ತ 4 ಅಡಿಯಷ್ಟು ಕೆಸರು ಶೇಖರಣೆಗೊಂಡಿದ್ದ ಕಾರಣ ದೇವಸ್ಥಾನದ ಜೊತೆ ಜೊತೆಗೆ ಅಲ್ಲಿದ್ದ ಬಾವಿಯನ್ನೂ ಕಾರ್ಯಕರ್ತರು ಸ್ವಚ್ಛಗೊಳಿಸಿದ್ದರು.  ಈ ಸ್ವಚ್ಛತಾ ಕಾರ್ಯಗಳನ್ನು ನೋಡುತ್ತಿದ್ದ ಅಲ್ಲಿನ ಹಿರಿಯ ನಾಗರೀಕರಾದ ಪಾಲ್ಲಿಕಾತ್ಯಬುದ್ಧ ಅವರು ತಮ್ಮ ಬಳಿ ಇದ್ದ ಮೋಟರ್ ಪಂಪ್ ಹಾಗು ಕೆಲಸಗಾರರನ್ನು ಮತ್ತು ಇತರ ಸಂಪನ್ಮೂಲಗಳನ್ನು ನೀಡಿ ಬಾವಿಗಳ ಸ್ವಚ್ಛತೆಗೆ ಸಹಕರಿಸಿದರು.


ಸೇವಾ ಭಾರತಿಯ ಕಾರ್ಯಕರ್ತರ ಈ ಸೇವಾಯಾತ್ರೆ ಇಲ್ಲಿಗೇ ನಿಲ್ಲದೇ ,ಸಂತ್ರಸ್ತ ಕುಟುಂಬಗಳಿಗೆ ಪ್ರತಿನಿತ್ಯ 200 ರಿಂದ 250 ಮಂದಿಗೆ ಊಟದ ವ್ಯವಸ್ಥೆ ಹಾಗು ಪ್ರವಾಹದ ರಭಸಕ್ಕೆ ಎಲ್ಲವನ್ನು ಕಳೆದುಕೊಂದಿದ್ದ ಜನತೆಗೆ  ಹಾಸಿಗೆ, ಹೊದಿಕೆ, ಪಾತ್ರೆಗಳು,ಬಟ್ಟೆಗಳು, ಆಹಾರ ಪದಾರ್ಥಗಳು, ಗ್ಯಾಸ್ ಸ್ಟೌವ್, ಮಿಕ್ಸರ್, ಇತ್ಯಾದಿಗಳನ್ನು ವಿತರಿಸಿದರು.

ಜಾತಿ ಧರ್ಮಗಳನ್ನು ಮೀರಿ ಮನುಕುಲದ ಸೇವೆಯಲ್ಲಿ ನಿರತರಾಗಿರುವ ಕಾರ್ಯಕರ್ತರನ್ನು ಕಂಡ ಸೈಲಿ ಥಾಮಸ್ ಎಂಬ ಕ್ರೈಸ್ತ ಮಹಿಳೆ ಪರಿಹಾರ ಕಾರ್ಯಕ್ಕಾಗಿ ಕೇಂದ್ರವನ್ನಾಗಿ ಬಳಸಿಕೊಳ್ಳಲು ತಮ್ಮ ಮನೆಯನ್ನೇ ಬಿಟ್ಟು ಕೊಟ್ಟರು.

ರಸ್ತೆಗಳ ಮೇಲೆ ಬೃಹತ್ ಗಾತ್ರದ ಕಲ್ಲುಗಳು ಮತ್ತು ಮರಗಳು ಬಿದ್ದಿದ್ದರಿಂದ ಕೆಲವು ರಸ್ತೆಗಳು ಸಂಚಾರ ಯೋಗ್ಯವಾಗಿರಲಿಲ್ಲ , ಇದಕ್ಕಾಗಿ 600 ಜನ ಸ್ವಯಂ ಸೇವಕರು ಗುಂಪುಗಳನ್ನು ಮಾಡಿಕೊಂಡು ರಸ್ತೆಯನ್ನು ಸಹಜ ಸ್ಥಿತಿಗೆ ತರಲು ಪ್ರಯತ್ನಿಸಿದರು. ಇವರ ಅವಿರತ ಪ್ರಯತ್ನದಿಂದ 12 ರಸ್ತೆಗಳನ್ನು ಸರಿಪಡಿಸಲಾಯಿತು. ಹೀಗೆ ಸೇವಾ ಭಾರತಿಯ ಕಾರ್ಯಕರ್ತರ ನಿರಂತರ ಪ್ರಯತ್ನದಿಂದಾಗಿ ಹೆಚ್ಚು ಹಾನಿಗೊಳಗಾದ ಕೊಟ್ಟಾಯಂ, ಇಡುಕ್ಕಿ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿತು.

1170 Views
अगली कहानी