सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

ಸೇವಾಗಂಗೆಯಲ್ಲಿ ಮಿಂದೆದ್ದ ಸೇವಿಕೆಯರು

ಗುಜರಾತ್

parivartan-img

ಬದುಕು ಕ್ಷಣಿಕ, ಸಾವು ನಿಶ್ಚಿತ ಸತ್ಯ. ಹೆಚ್ಚಾಗಿ ನಮಗೆ ಸ್ಮಶಾನವನ್ನು ಕಂಡಾಗ ಈ ಸತ್ಯದ ಅರಿವು ಉಂಟಾಗುತ್ತದೆ. ಸ್ವಲ್ಪ ಸಮಯದ ಹಿಂದೆ ನಮ್ಮೆಲ್ಲರ ನಡುವೆ ಇದ್ದ ವ್ಯಕ್ತಿಯನ್ನು ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ ಕಳುಹಿಸುವುದು ಎಷ್ಟು ಕಷ್ಟಕರ ಸಂಗತಿ ಅಲ್ಲವೇ..? ಹೆಣ್ಣಿನ ಮೃದು ಸ್ವಭಾವವು ಈ ದುಃಖವನ್ನು ಸಹಿಸಲಾರದು ಎಂದು, ಹಿಂದೂ ಸಂಸ್ಕೃತಿಯಲ್ಲಿ ಹೆಣ್ಣುಮಕ್ಕಳು ಸ್ಮಶಾನಕ್ಕೆ ಹೋಗದಿರುವ ಪದ್ಧತಿ ಇರುವುದು ನಮಗೆಲ್ಲ ಗೊತ್ತೇ ಇದೆ. ಆದರೆ ಇಲ್ಲಿ ಕೆಲವು ಹೆಣ್ಣು ಮಕ್ಕಳು ಕರೋನಾ ಸಮಯದಲ್ಲಿ ತಾವೆ ಮುಂದೆ ಬಂದು ಸ್ಮಶಾನದಲ್ಲಿ ನಿಂತು ಮೃತ ದೇಹಗಳ ಅಂತಿಮ ಸಂಸ್ಕಾರವನ್ನೂ ಮಾಡಿದ್ದಾರೆ. ಇಂದು ಆ ಕಥೆಯ ಮೂಲಕ ರಾಷ್ಟ್ರ ಸೇವಿಕಾ ಸಮಿತಿಯ ಆ ದಿಟ್ಟ ಸೇವಿಕೆಯರನ್ನು ಪರಿಚಯ ಮಾಡಿಕೊಳ್ಳೋಣ.

ಅದು ಏಪ್ರಿಲ್ 2021ರ ಸಮಯ. ಕೋವಿಡ್ ನ ಎರಡನೇ ಅಲೆಯಿಂದಾಗಿ ಎಲ್ಲೆಲ್ಲಿಯೂ ಹಾಹಾಕಾರ. ಸೋಂಕಿನ ಭೀತಿಯಿಂದಾಗಿ ಜನರು ಮನೆಯಲ್ಲೇ ಭಯಭೀತರಾಗಿ ಕುಳಿತಿದ್ದ ಸಮಯ. ಕೊರೋನಾಗೆ ತುತ್ತಾಗಿ  ಮೃತ ಹೊಂದಿದ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಅವರ ಕುಟುಂಬದವರೇ ಸಿದ್ಧರಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಗುಜರಾತಿನ ಕಚ್ ನ ಸುಖಪಾರ್ ಗ್ರಾಮದ ಹೀನಾ ವೆಲಾನಿ, ರಿಂಕು ವೆಕರಿಯಾ, ಸುಮಿತಾ ಭುಡಿಯಾ, ತುಳಸಿ ವೆಲಾನಿ ಸೇರಿದಂತೆ ರಾಷ್ಟ್ರ ಸೇವಿಕಾ ಸಮಿತಿಯ 10 ಸಹೋದರಿಯರು ಸ್ಮಶಾನವನ್ನು ಸ್ವಚ್ಛಗೊಳಿಸುವ, ಅಂತ್ಯಕ್ರಿಯೆಯ ಚಿತಾಗಾರವನ್ನು ಸಜ್ಜುಗೊಳಿಸುವುದರಿಂದ ಹಿಡಿದು ಪಿಪಿಇ ಕಿಟ್ ಧರಿಸಿ ಅಂತಿಮ ವಿಧಾಯ ಹೇಳುವವರೆಗೂ ಕಾರ್ಯ ನಿರ್ವಹಿಸುವ ಅದ್ಭುತ ಧೈರ್ಯವನ್ನು ತೋರಿದರು.


ಕುಟುಂಬಸ್ತರೂ ತಯಾರಿಲ್ಲದ ಹಾಗೂ ಸರ್ಕಾರಿ ನೌಕರರು ಹೆಚ್ಚು ಇಲ್ಲದ ಕಾರಣ, ಸರ್ಕಾರಿ ಆಸ್ಪತ್ರೆಯಲ್ಲಿ ಅಂತಿಮಯಾತ್ರೆಗೆ ಹೊರಡಲು ಸಿದ್ಧವಿದ್ದ ಮೃತ ದೇಹಗಳ ಅಂತ್ಯ ಕ್ರಿಯೆ ನಡೆಸುವ ನಿಟ್ಟಿನಿಂದ, 15 ಏಪ್ರಿಲ್ 2021 ರ ಸಂಜೆ  ಸಂಘದ ಸ್ವಯಂಸೇವಕರಾದ ರಾಮ್ ಜೀ ವೆಲಾನಿ ಅವರಿಗೆ ಸ್ವಯಂಸೇವಕರ ಸಹಾಯ ಬೇಕಿದೆ ಎಂದು, ಭುಜ್ ತಾಲೂಕಿನ ಅಭಿವೃದ್ಧಿ ಅಧಿಕಾರಿಯಿಂದ ದೂರವಾಣಿ ಕರೆ ಬಂದಾಗ ಈ ಪ್ರಕ್ರಿಯೆ ಪ್ರಾರಂಭವಾಯಿತು. ಇಂತಹ ಬಿಕ್ಕಟ್ಟಿನ ಸಂದರ್ಭವನ್ನು ಕಂಡು ಅಲ್ಲಿನ ಸಂಘದ ಕಾರ್ಯಕರ್ತರೆಲ್ಲ ಸೇರಿ ಒಂದು ತಂಡವನ್ನು ಮಾಡಿಕೊಂಡಾಗ ರಾಮ್ ಜೀ ವೆಲಾನಿ ಅವರ ಮಗಳಾದ ಹೀನಾ, ತಾನೂ ಕೂಡ ಈ ಕಾರ್ಯದಲ್ಲಿ ಕೈ ಜೋಡಿಸುವ ಆಸಕ್ತಿ ತೋರಿಸಿದಳು. ತಂದೆಯ ಮನಸ್ಸು ಸ್ವಲ್ಪ ಆತಂಕಗೊಂಡಿತ್ತು, ಆದರೆ ಹೀನಾಳ ಜೊತೆಗೆ ರಾಷ್ಟ್ರ ಸೇವಿಕಾ ಸಮಿತಿಯ ಇನ್ನೂ 9 ಜನ ಸೇವಿಕೆಯರು ಬಂದಿದ್ದು ಆ ತಂದೆಯ ಅನಿಸಿಕೆಯನ್ನು ಸುಳ್ಳು ಮಾಡಿತ್ತು.

ರಾಷ್ಟ್ರ ಸೇವಿಕಾ ಸಮಿತಿ ಸೌರಾಷ್ಟ್ರ ಪ್ರಾಂತದ  ಪ್ರಾಂತ ಪ್ರಚಾರ ಪ್ರಮುಖರಾದ ಹೀನಾ ದೀದಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ನಾವು 3-3ಜನರ ಟೋಳಿ ಮಾಡಿಕೊಂಡೆವು. ನಿಯಮಿತವಾಗಿ ಸ್ಮಶಾನ ಘಾಟ್ ಅನ್ನು ಸ್ವಚ್ಛಗೊಳಿಸಿವುದರಿಂದ ಹಿಡಿದು, ಸುಡುವ ಬಿಸಿಲಿನಲ್ಲಿ PPE ಕಿಟ್ ಧರಿಸಿ ಅಂತಿಮ ಸಂಸ್ಕಾರ ಮಾಡುವ ವರೆಗೆ ಯಾವ ತೊಂದರೆಯು ಆಗಲಿಲ್ಲ. ಹಳ್ಳಿಯ ಜನರ ಸಹಕಾರವೂ ಸಂಪೂರ್ಣವಾಗಿ ದೊರೆಯಿತು. ಯಾರ ಮನೆಯಲ್ಲಿ ಕಟ್ಟಿಗೆಗಳಿದ್ದವೋ ಅವರು ಕಟ್ಟಿಗೆಯನ್ನು ಒದಗಿಸಿದರು. ಕೆಲವರು ತುಪ್ಪವನ್ನು ಒದಗಿಸಿದರೆ ಮತ್ತೆ ಕೆಲವರು ಕರ್ಪೂರವನ್ನು ಒದಗಿಸಿದರು. 

ಅದು ಲಾಕ್‌ಡೌನಿನ  ಸಮಯವಾಗಿತ್ತು, ಭುಜ್‌ನ ಆಸ್ಪತ್ರೆ ಮತ್ತು ಹತ್ತಿರದ ಹಳ್ಳಿಗಳ ಎಲ್ಲಾ ಮೃತ ದೇಹಗಳ ಅಂತಿಮ ವಿಧಿಗಳನ್ನು ನಮ್ಮ ಗ್ರಾಮವಾದ ಸುಖ್‌ಪರ್‌ನ ಸ್ಮಶಾನದಲ್ಲೇ ಮಾಡಲಾಗುತ್ತಿತ್ತು. ಸುಮಾರು 45 ದಿನಗಳ ಕಾಲ ನಡೆದ ಈ ಅಭಿಯಾನದಲ್ಲಿ 450ಕ್ಕೂ ಹೆಚ್ಚು ಮೃತ ದೇಹಗಳನ್ನು ಸ್ವಯಂಸೇವಕರ ಬಳಗ ಹಾಗೂ ಸಮಿತಿಯ ಸಹೋದರಿಯರು ಗೌರವಯುತವಾಗಿ ಬೀಳ್ಕೊಟ್ಟರು.


ಯಾವಾಗ ಕೆಲಸ ನಿಧಾನವಾಗಿ ಸಾಗತೊಡಗಿತೋ, ಆಗ ಹಲವು ಯುವಕರು ಈ ಕಾರ್ಯದೊಂದಿಗೆ ಕೈ ಜೋಡಿಸಿದರು. ಆಗ ಈ ಎಲ್ಲಾ ಸ್ವಯಂಸೇವಿಕೆಯರು ಅನ್ನಪೂರ್ಣೆಯರಾದರು. ಕ್ವಾರಂಟೈನ್ ನಲ್ಲಿದ್ದ ಜನರಿಗೆ ಊಟದ ವ್ಯವಸ್ಥೆಯ ಜವಬ್ದಾರಿ ವಹಿಸಿಕೊಂಡರು. ಒಂಟಿಯಾಗಿದ್ದ ಅಸಹಾಯಕ ವೃದ್ಧರ ಮನೆಗೆ ಹಣ್ಣು-ಹಂಪಲು, ಊಟದ ವ್ಯವಸ್ಥೆಯಿಂದ ಹಿಡಿದು ಅವರಿಗೆ ಔಷಧಿಗಳನ್ನು ಒದಗಿಸುವ ಕೆಲಸವನ್ನೂ ಮಾಡಿದರು. ಸಾನಿಟೈಸರ್ ನ ಜೊತೆಗೆ ಮಾಸ್ಕ್'ಗಳನ್ನೂ ತಯಾರು ಮಾಡಿ ಮನೆ ಮನೆಗೆ ತೆಗೆದುಕೊಂಡು ಹೋಗಿ ವಿತರಿಸಿದರು. ಇದರ ಜೊತೆಯಲ್ಲೇ ಪೋಲಿಸರಿಗೆ ಎಲ್ಲಾ ರೀತಿಯ ನೆರವು ನೀಡುವುದರಿಂದ ಹಿಡಿದು  ಕೊರೊನಾ ಸಮಯದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಈ ಭಗಿನಿಯರು ಮಾಡದ ಸೇವಾ ಕಾರ್ಯಗಳೇ ಇರಲಿಲ್ಲ.

ಇದೆಲ್ಲ ಹೇಗೆ ಸಾಧ್ಯವಾಯಿತು ಎಂದು ಕೇಳಿದರೆ ಸಂಘದಲ್ಲಿ ದೊರೆಯುವ ಕೌಟುಂಬಿಕ ಸಂಸ್ಕಾರಗಳು ಹಾಗೂ ಸಮಿತಿಯ ಪ್ರಶಿಕ್ಷಣ ವರ್ಗದಿಂದ ದೊರೆತ ಶಿಕ್ಷಣದಿಂದಾಗಿ ಎಲ್ಲವೂ ಸಾಧ್ಯವಾಗಿದೆ ಎಂಬ ಒಂದೇ ಉತ್ತರವಿತ್ತು. ಅದಕ್ಕಾಗಿಯೇ " ಸಂಘೇ ಶಕ್ತಿಃ ಕಲೌ ಯುಗೇ " ಎಂದು ಹೇಳಲಾಗುತ್ತದೆ.

977 Views
अगली कहानी