नियमित अपडेट के लिए सब्सक्राईब करें।
5 mins read
ಶ್ರೀ ಗಿರಿಧರ್ ಉದ್ಯಾವರ | ದಕ್ಷಿಣ
ಪುಣೆಯ ಮಲಿನ ಸೇವಾಬಸ್ತಿಗಳ ಕೊಳೆಗೇರಿಯಲ್ಲಿ ಬೆಳೆದ ಕಣ್ಣಿಲ್ಲದ ಚಂದ್ರಕಾಂತನು ಇಂದು ತಾನು ಓದಿ ಶಿಕ್ಷಣ ಪಡೆದ ಅಂಧರ ಶಾಲೆಗೆ ಪ್ರಾಂಶುಪಾಲನಾಗಿದ್ದಾನೆ.
ಇದೇ ರೀತಿಯ ಕಥೆ ಸಂತೋಷನದ್ದು ಕೂಡ. ಮಲ್ಲಕಂಬದಲ್ಲಿ ರಾಷ್ಟ್ರೀಯ ಮಟ್ಟದ ಆಟಗಾರನಾಗಿದ್ದು ಹಾಗು ಪುಣೆಯಲ್ಲಿ ಪೋಲೀಸ್ ಪೇದೆಯಾಗಿರುವ ಸಂತೋಷ್ ಅವರು ಬಾಲ್ಯದಲ್ಲೇ ಸ್ವರೂಪವರ್ಧಿನಿಯ ಸಂಪರ್ಕಕ್ಕೆ ಬರದಿದ್ದರೆ ಅವರ ಬಾಲ್ಯವು ತೀವ್ರ ಬಡತನ ಹಾಗು ಅಭಾವಗಳಿಂದ ಕೂಡಿರುತ್ತಿತ್ತು. ಅಷ್ಟೇ ಅಲ್ಲದೆ ಸಂಪ್ರದಾಯಸ್ಥ ವಾತಾವರಣದಲ್ಲಿ ಹೆಣ್ಣಾಗಿ ಜನಿಸಿ ಹಲವು ಬಂಧನಗಳ ವಿರುದ್ಧ ಹೋರಾಡಿದ ಪುಣೆಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಳೆದ 16 ವರ್ಷಗಳಲ್ಲಿ 3000 ಹೆಣ್ಣು ಮಕ್ಕಳು ದಾದಿಯರಾಗಿ (ನರ್ಸ್) ಆತ್ಮನಿರ್ಭರರಾಗಿ ಗೌರವಾನ್ವಿತ ಜೀವನವನ್ನು ನಡೆಸುತ್ತಿದ್ದಾರೆ.
ಪುಣೆಯ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಈ ಸಾಮಾಜಿಕ ಪರಿವರ್ತನೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಸೇವಾಭಾರತಿಗೆ ಸಂಬಂಧಿಸಿದ ಬಹು ಆಯಾಮಗಳುಳ್ಳ ’ಸ್ವ-ರೂಪವರ್ಧಿನಿ’ ಪ್ರಕಲ್ಪವನ್ನು ತಿಳಿಯಬೇಕು. ಸಂಘದ ಸ್ವಯಂಸೇವಕರಾದ ಸ್ವರ್ಗೀಯ ಕಿಶಾಭಾವು ಪಟವರ್ಧನ್ ರವರು ಬಡ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಕನಸನ್ನು 1970ರಲ್ಲಿ ಸ್ವರೂಪವರ್ಧಿನಿಯ ರೂಪದಲ್ಲಿ ಕಂಡಿದ್ದರು. ಇಂದು 200 ಜನ ಮೊದಲನೆ ಹಾಗು ಎರಡನೇ ಶ್ರೇಣಿಯ ಆಫೀಸರ್ ಗಳಾಗುವ ಮೂಲಕ ಆ ಕನಸು ಈಡೇರಿದೆ.
ಈಗ ಚಂದ್ರಕಾಂತ್ ಬೋಂಸ್ಲೆಯವರ ಬಗ್ಗೆ ಮಾತಾಡೋಣ. ಅವರು ಸ್ವ-ರೂಪವರ್ಧಿನಿಯ ಶೈಕ್ಷಣಿಕ ಶಾಖೆಗೆ ಹಾಗು ಶಾಲೆಗೆ ಹೋಗಲಾಗದ ಆ ದಿನಗಳನ್ನು ಇಂದಿಗೂ ಮರೆತಿಲ್ಲ. ಹಾಗೆಯೆ, ಆಗ ತಮ್ಮ ಕಲಿಯುವಿಕೆಯನ್ನು ಮುಂದುವರೆಸಲು ಸ್ವ.ಕಿಶಾಭಾವು ಜೀ ಅವರ ಪ್ರೇರಣೆಯಿಂದ ಶುಲ್ಕರಹಿತ ಕೋಚಿಂಗ್ ಸೆಂಟರ್ ಗೆ ಬರುತ್ತಿದ್ದ 11ನೇ ತರಗತಿಯ ವಿಶ್ವಾಸ್ ಎಂಬ ಒಬ್ಬ ಮೇಧಾವಿ ವಿಧ್ಯಾರ್ಥಿ ತನ್ನ ಬಿಡುವಿನ ಸಮಯದಲ್ಲಿ ಭೀಮನಗರದ ಸೇವಾಬಸ್ತಿಗೆ ಬಂದು ಕೆಲವು ವರ್ಷಗಳಕಾಲ ಪಾಠ ಹೇಳಿಕೊಟ್ಟಿದ್ದರು. ವಿಶ್ವಾಸ್ ರ ಪರಿಶ್ರಮ ಫಲ ನೀಡಿತ್ತು, ಹೈಸ್ಕೂಲ್ ನಲ್ಲಿ ಚಂದ್ರಕಾಂತ್ 70% ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರು. ವಿಶ್ವಾಸ್ ತಮ್ಮ ಎಂಜಿನಿಯರಿಂಗ್ ವ್ಯಾಸಂಗದ ನಡುವೆಯೂ ಚಂದ್ರಕಾಂತರಿಗೆ ಪಾಠ ಹೇಳಿಕೊಡುವುದನ್ನು ಮುಂದುವರಿಸಿದರು. ಇದರ ನಂತರ ಚಂದ್ರಕಾಂತ್ ಹಿಂತಿರುಗಿ ನೋಡಲಿಲ್ಲ. ಬಿ.ಎ, ಎಮ್.ಎ ಹಾಗು ಎಮ್.ಎಡ್ ವ್ಯಾಸಂಗವನ್ನು ಮುಗಿಸಿದ ಅವರು ಹಿಂದೆ ಯಾವ ಅಂಧರ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದರೋ ಅದೇ ಶಾಲೆಗೆ ಪ್ರಾಂಶುಪಾಲರಾದರು.
ಇದೇ ತರಹ, ಸೇವಾಬಸ್ತಿಯ ಅತ್ಯಂತ ತುಂಟ ಸಂತೋಷ್ ಓದಿಗಿಂತ ಆಟದ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದ್ದನು. ಒಂದು ಕ್ರೀಡಾ ಶಿಬಿರದ ಸಂದರ್ಭದಲ್ಲಿ ಸ್ವರೂಪವರ್ಧಿನಿಯ ಕಾರ್ಯಕರ್ತರ ದೃಷ್ಟಿ ಇವನ ಮೇಲೆ ಬಿತ್ತು ಹಾಗು ಅವರು ಸಂತೋಷ್ ನಲ್ಲಿ ಒಬ್ಬ ಒಳ್ಳೆಯ ಕ್ರೀಡಾಪಟು ಆಗುವ ಎಲ್ಲಾ ಸಾಧ್ಯತೆಗಳನ್ನು ಗಮನಿಸಿದರು. ವರ್ಧಿನಿಯು ಅವನ ಶುಲ್ಕ ಹಾಗು ಇನ್ನಿತರ ಖರ್ಚುಗಳನ್ನು ವಹಿಸಿಕೊಂಡು ಒಂದು ಕ್ರೀಡಾ ಅಕಾಡಮಿಯಲ್ಲಿ ಪ್ರವೇಶ ದೊರಕಿಸಿಕೊಟ್ಟಿತು. ಇಂದು ಸಂತೋಷ್ ಅಖಿಲ ಭಾರತ ಮಟ್ಟದ ಮಲ್ಲಕಂಬ ಆಟಗಾರನಾಗಿದ್ದಾನೆ ಹಾಗು ಮಹರಾಷ್ಟ್ರದ ಪೋಲಿಸ್ ಇಲಾಖೆಯಲ್ಲಿ ನೇಮಕಾತಿ ದೊರೆತಿದ್ದು ತನ್ನ ವಿಭಾಗದ ವಿಭಿನ್ನ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಸಿದ್ಧನಾಗಿದ್ದಾನೆ. ಇವೆಲ್ಲ ಕೇವಲ ಕೆಲವೇ ಕೆಲವು ಉದಾಹರಣೆಗಳು. ವರ್ಧಿನಿಯ ಸಂಪರ್ಕಕ್ಕೆ ಬಂದ ಚಂದ್ರಕಾಂತ್, ವಿಶ್ವಾಸ್, ಸಂತೋಷ್ ರಂತಹ ನೂರಾರು ಬಾಲಕರು ಇಂದು ಸಮಾಜಕ್ಕೆ ಮಾದರಿಯಾಗಿದ್ದಾರೆ.
"1979ನೇ ಇಸವಿಯಲ್ಲಿ ಪುಣೆಯ ಸೇವಾಬಸ್ತಿಗಳಲ್ಲಿ ವಾಸಿಸುವ ಪ್ರತಿಭಾವಂತ ಬಾಲಕರನ್ನು ಹುಡುಕಿ ಅವರ ಸರ್ವಾಂಗೀಣ ಅಭಿವೃದ್ಧಿಯ ಗುರಿಯೊಂದಿಗೆ ಈ ಪ್ರಕಲ್ಪವು ಅಸ್ತಿತ್ವಕ್ಕೆ ಬಂತು" ಎಂದು ಸ್ವ-ರೂಪವರ್ಧಿನಿಯ ಉಪಾಧ್ಯಕ್ಷರು ಹಾಗು ರಾಷ್ಟ್ರೀಯ ಸೇವಾ ಭಾರತಿಯ ಕೇಂದ್ರೀಯ ಟೋಳಿ ಸದಸ್ಯರಾದ ಶಿರೀಷ್ ಪಟವರ್ಧನ್ ಹೇಳುತ್ತಾರೆ. ಚಿಕ್ಕ ಸ್ವರೂಪದಲ್ಲಿ ಪ್ರಾರಂಭವಾದ ಈ ಪ್ರಕಲ್ಪವು ಇಂದು ವಿಸ್ತೃತ ಆಯಾಮಗಳನ್ನು ಹೊಂದಿದೆ. ಶಿರೀಶ್ ಜೀಯವರ ಪ್ರಕಾರ ವರ್ಧಿನಿಯ ಮೂಲಕ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತಿ ಕಡಿಮೆ ಶುಲ್ಕದೊಂದಿಗೆ ಕೋಚಿಂಗ್ ನಡೆಯುತ್ತಿದೆ. ಈ ಕೋಚಿಂಗ್ ಸೆಂಟರ್ ನಲ್ಲಿ ಓದಿದ 200 ಕ್ಕೂ ಹೆಚ್ಚು ಬಡ ಮಕ್ಕಳು ಇಂದು ಪ್ರಥಮ ಹಾಗು ದ್ವಿತೀಯ ದರ್ಜೆಯ ಅಧಿಕಾರಿಗಳಾಗಿದ್ದಾರೆ. ಮೊಬೈಲ್ ಲ್ಯಾಬೊರೇಟರಿಯು ಹಳ್ಳಿ-ಹಳ್ಳಿಗಳನ್ನು ಸಂಚರಿಸಿ ಮಕ್ಕಳಿಗೆ ವಿಜ್ಞಾನದ ಪ್ರಯೋಗಗಳನ್ನು ತೋರಿಸಿ ವಿಜ್ಞಾನದ ಮೇಲೆ ಅಭಿರುಚಿ ಹೆಚ್ಚಿಸುತ್ತಿದೆ. ಕಳೆದ 17 ವರ್ಷದಿಂದ ನಡೆಯುತ್ತಿರುವ ಈ ಪ್ರಯೋಗ ಶಾಲೆಯ ಮೂಲಕ ಸುಮಾರು100 ಹಳ್ಳಿಗಳ ಸಾವಿರಾರು ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅವರ ತಿಳುವಳಿಕೆಯ ವಿಕಾಸವಾಗಿದೆ. ಇದರ ಹೊರತಾಗಿ ಮಹಿಳೆಯರ ಸ್ವಾವಲಂಬನ ಕೇಂದ್ರ, ಕೌನ್ಸೆಲಿಂಗ್ ಕೇಂದ್ರ, ಪಾಕೊಲಿ ಮಾಂಟೆಸರಿ ಸ್ಕೂಲ್ ಹಾಗು ನೈಪುಣ್ಯ ಅಭಿವೃದ್ಧಿಯಂತಹ ಅನೇಕ ಆಯಾಮಗಳು ಸಹ ಇಂದು ಈ ಪ್ರಕಲ್ಪದ ಮೂಲಕ ನಡೆಯುತ್ತಿವೆ.
ಸಂಪರ್ಕಿಸಿ: ಶಿರೀಷ್ ಪಟವರ್ಧನ್
ಮೊಬೈಲ್ ಸಂ : 9822675765
नियमित अपडेट के लिए सब्सक्राईब करें।