सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಭರವಸೆಯ ಹೊಸ ಮುಂಜಾವು- ವಾತ್ಸಲ್ಯ ವಿದ್ಯಾ ಮಂದಿರ, ಕಾನ್ಪುರ.

ಶ್ರೀಮತಿ ಮೇಘ ಪ್ರಮೋದ್ | ದಕ್ಷಿಣ

parivartan-img

ಕಾಲದ ಕ್ರೂರ ಪ್ರಹಾರವು ಇವರಿಂದ ಕುಟುಂಬದವರನ್ನು ಕಸಿದುಕೊಂಡಿತ್ತು. ವನವಾಸಿ (ಬುಡಕಟ್ಟು) ಪ್ರದೇಶದ ಈ ಬಡ ಅನಾಥ ಮಕ್ಕಳ ಬಾಲ್ಯವು ಎಂದೂ ಮುಗಿಯದ ಅಸಹಾಯಕವಾದ ಕತ್ತಲ ಸುರಂಗದಲ್ಲಿ ಕಳೆದುಹೋಗುತ್ತಿತ್ತು. ಆದರೆ ವಾತ್ಸಲ್ಯ ಮಂದಿರದಲ್ಲಿ ಇವರಿಗೆ ಸ್ನೇಹಭರಿತವಾದ ನೆರಳು ಹಾಗು ಶಿಕ್ಷಣದ ಬೆಳಕು ದೊರೆತು ಇಂದು ಇವರ ಕಣ್ಣಲ್ಲಿ ಸುವರ್ಣ ಭವಿಷ್ಯದ ಕನಸುಗಳಿದ್ದು ಅದನ್ನು ಪೂರ್ಣಗೊಳಿಸುವ ವಿಶ್ವಾಸವೂ ಇದೆ.


ಐಐಟಿಯ ಆಲ್ ಇಂಡಿಯ ರ್ಯಾಂಕಿಂಗ್ ನಲ್ಲಿ 320ನೇ ಸ್ಥಾನ ಗಳಿಸಿರುವ ಹಾಗು ಇಂದು ಎಮ್ಎನ್ಐಟಿಯಲ್ಲಿ ಎಂಜಿನಿಯರಿಂಗ್ ಮಾಡುತ್ತಿರುವ, ಬ್ರಿಜೇಶ್ ಥಾರು ಅಥವಾ ಎನ್ ಡಿಎಗೆ ತಯಾರಾಗುತ್ತಿರುವ ಪವನ್ ಪಾಲ್ ಇವರಿಬ್ಬರೂ ಕೇವಲ 4 ವರ್ಷದ ವಯಸ್ಸಿನವರಿದ್ದಾಗ ಇಲ್ಲಿಗೆ ಬಂದವರು. ಸಂಘದ ತರುಣ ಉದ್ಯೋಗಿ ಸ್ವಯಂಸೇವಕರಾದ ಸ್ವ. ಯತೀಂದ್ರಜೀತ್ ಸಿಂಹಜೀಯವರು ಅನಾಥ ಮಕ್ಕಳಿಗೆ ಮನೆಯನ್ನು ನೀಡಲು ಬಯಸಿ 2004ರಲ್ಲಿ ವಾತ್ಸಲ್ಯ ಮಂದಿರಕ್ಕೆ ಅಡಿಪಾಯ ಹಾಕಿದರು. ಇಲ್ಲಿಗೆ ಬರುವ ಮಕ್ಕಳು ಎಂದಿಗೂ ಕುಟುಂಬದ ಕೊರತೆಯನ್ನು ಅನುಭವಿಸಬಾರದು. ಆದ್ದರಿಂದ ದಿಬ್ಬಣ ಹೊರಡುವ ಈ ವಾತ್ಸಲ್ಯ ಮಂದಿರವು ಹೆಣ್ಣುಮಕ್ಕಳ ನಿಜವಾದ ತವರು ಮನೆಯಾಗಿರಬೇಕು ಎಂದು ಯತೀಂದ್ರಜೀವರು ಬಯಸಿದ್ದರು.

ಉತ್ರ ಪ್ರದೇಶದ ಕಾನ್ಪುರದಲ್ಲಿರುವ ಪಂಡಿತ್ ದೀನದಯಾಳ್ ಉಪಾಧ್ಯಾಯ ಸನಾತನ ಇಂಟರ್ ಕಾಲೇಜಿನ ಪರಿಸರದಲ್ಲಿರುವ ಈ ವಿದ್ಯಾರ್ಥಿ ನಿಲಯದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಅವರ ವೈಯಕ್ತಿಕ ಬೆಳವಣಿಗೆಗಾಗಿ ಕ್ರೀಡೆಯಿಂದ ಹಿಡಿದು ಕಂಪ್ಯೂಟರ್, ಸಂಗೀತ ಈ ಎಲ್ಲಾ ರೀತಿಯ ತರಬೇತಿಯನ್ನು ನೀಡಲಾಗುತ್ತದೆ. ಹಾಗೆಯೇ ಇವೆಲ್ಲದರ ಖರ್ಚನ್ನು ಪೂರ್ವ ಉತ್ತರ ಪ್ರದೇಶದ ಕ್ಷೇತ್ರಸಂಘಚಾಲಕರಾದ ವಿರೇಂದ್ರ ಪರಾಕ್ರಮ್ ಆದಿತ್ಯರ (ಯತೀಂದ್ರರ ತಂದೆ) ಪರಿವಾರದಿಂದಲೇ ಭರಿಸಲಾಗುತ್ತದೆ.


ಈ ಪ್ರಕಲ್ಪದಲ್ಲಿ ಪ್ರತೀ ತಿಂಗಳು 50,000ದಿಂದ 75,000 ರೂಪಾಯಿಗಳಷ್ಟು ಖರ್ಚು ಇರುತ್ತದೆ. ಯತೀಂದ್ರಜೀಯವರ ಅಕಾಲ ಮರಣದ ನಂತರ ಅವರ ಪತ್ನಿ ಸಮಾಜ ಸೇವಿಕೆ ನೀತುಸಿಂಹ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ವಾತ್ಸಲ್ಯ ಮಂದಿರದಲ್ಲಿ ಬಂದ ಹೆಚ್ಚಿನ ಮಕ್ಕಳು ಬಲರಾಂಪುರ, ಲಖಿಮ್ ಪುರ, ಬಹರಾಯಿಚ್, ಮನಿಕ್ ಪುರದಂತಹ ಬುಡಕಟ್ಟು ಪ್ರದೇಶದಿಂದ ಬಂದವರಾಗಿದ್ದಾರೆ ಎಂದು ಪೂರ್ವ ಉತ್ತರಪ್ರದೇಶದ ಕ್ಷೇತ್ರಸೇವಾಪ್ರಮುಖರಾದ ನವಲ್ ಕಿಶೋರ್ ಜೀ ಹೇಳುತ್ತಾರೆ.

ಗೋಂಡ್, ಕೋಲ್, ಥಾರ್ ನಂತಹ ಅಳಿವಿನಂಚಿನಲ್ಲಿರುವ ಈ ಬುಡಕಟ್ಟು ಜನಾಂಗದ ಈ ನವಜಾತ ಶಿಶುಗಳನ್ನು ವನವಾಸಿ ಕಲ್ಯಾಣ ಆಶ್ರಮದ ಕಾರ್ಯಕರ್ತರು ಇಲ್ಲಿಗೆ ತಂದಿದ್ದರು. ಪದವಿಯ ನಂತರ ದೀನದಯಾಳ್ ವಿದ್ಯಾಲಯದ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೋನಮ್ ಇಲ್ಲಿಗೆ ಮೊದಲು ಬಂದ ಮಕ್ಕಳಲ್ಲಿ ಒಬ್ಬಳು. ಅವಳಿಗೆ ಈಗ ತನ್ನ ತಂದೆ-ತಾಯಿ ಕಾಡು ಪ್ರಾಣಿಗಳಿಗೆ ಯಾವಾಗ ಬಲಿಯಾದರು ಹಾಗು ಯಾವಾಗ ತನ್ನ ಇಬ್ಬರು ಸಹೋದರ-ಸಹೋದರಿಯರೊಂದಿಗೆ ತಾನು ಇಲ್ಲಿಗೆ ಬಂದೆ ಎಂಬ ನೆನಪು ಕೂಡ ಇಲ್ಲ.


ಹಿಂದೆ ಸಂಘದ ಪ್ರಚಾರಕರಾಗಿದ್ದ  ಸುರೇಶ್ ಅಗ್ನಿಹೋತ್ರಿಜೀ ಹಾಗು ಅವರ ಪತ್ನಿ ಮೀನಾಜೀಯವರು ಮೊದಲ ದಿನದಿಂದಲೂ ಈ ಮಕ್ಕಳಿಗೆ, ತಂದೆತಾಯಿಯರ ಸ್ನೇಹವನ್ನು ನೀಡಿದ್ದಾರೆ. ಕಠಿಣ ಶಿಸ್ತು ಮತ್ತು ಪರಿಶ್ರಮವನ್ನೂ ಕಲಿಸಿದ್ದಾರೆ. ವಿದ್ಯಾರ್ಥಿ ನಿಲಯದ ದಿನಚರಿಯಲ್ಲಿ ಯೋಗ-ಶಿಕ್ಷಣ ಹಾಗು ಸಂಸ್ಕಾರಗಳ ಜೊತೆಗೆ ಪರಿಸರದ ಸಂಪೂರ್ಣ ಜವಾಬ್ದಾರಿಗಳ ನಿರ್ವಹಣೆಯನ್ನು ಸ್ವತಃ ಮಕ್ಕಳೇ ನಿರ್ವಹಿಸುತ್ತಾರೆ. ಇಲ್ಲಿ ಮಕ್ಕಳಿಗೆ ಕ್ರೀಡೆಗಳ ತರಬೇತಿಯನ್ನು ನೀಡಲಾಗುತ್ತದೆ. ಜಯ್, ಪವನ್, ಹಾಗು ಸಾಧ್ಯ್ ರು 2000 ಮೀಟರ್ ಓಟದ ಜೊತೆಗೆ ಸಂಗೀತದಲ್ಲೂ ಪದಕ ಗೆದ್ದು ವಿದ್ಯಾಲಯದ ಹೆಸರನ್ನು ಬೆಳಗಿಸಿದ್ದಾರೆ.


ಸಂಪರ್ಕಿಸಿ:

ನೀತು ಸಿಂಹ :8009336677

745 Views
अगली कहानी