सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ನಿನ್ನ ಮನೆಯಂಗಳದ ತುಳಸಿ ನಾನು...

ದಕ್ಷಿಣ

parivartan-img

ಮೊದಲು ಮದುವೆ, ನಂತರ ಮದುವೆಯ ಸುಂದರ ಕನಸು ದುಃಸ್ವಪ್ನವಾಗಿ ಬದಲಾಗುವುದು ಹಾಗು ಅದರೊಂದಿಗೆ ವಿಚ್ಛೇದನದ ನೋವು... ನಂತರ ಇನ್ನೊಬ್ಬ ಪುರುಷನ ಮೇಲೆ ನಂಬಿಕೆ ಇಟ್ಟು ಮತ್ತೆ ಮದುವೆಯೆಂಬ ಸೂತ್ರದಲ್ಲಿ ಬಂಧಿಯಾಗುವುದು. ಜೀವನದ ಈ ಏರಿಳಿತಗಳು ಧೈರ್ಯವಂತ  ಹೆಣ್ಣು ಮಕ್ಕಳನ್ನೇ ಧೃತಿಗೆಡಿಸುತ್ತವೆ. ಅಂತಹದರಲ್ಲಿ ಸುನೀತಾ (ಹೆಸರು ಬದಲಿಸಲಾಗಿದೆ)  ಒಬ್ಬ ಅನಾಥೆಯಾಗಿದ್ದಳು. ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದರೂ ಆಕೆ ಸೋತಿರಲಿಲ್ಲ. ಕಾರಣ, ಆಕೆಯ ವಿಶಿಷ್ಟವಾದ ಕುಟುಂಬ ಪ್ರತೀ ಹೆಜ್ಜೆಯಲ್ಲಿಯೂ ಆಕೆಯ ಜೊತೆ ದೃಢವಾಗಿ ನಿಂತಿತ್ತು.

ಆ ಕುಟುಂಬ ಬೆಂಗಳೂರಿನ ಬಸವನಗುಡಿಯಲ್ಲಿರುವ ಅಬಲಾಶ್ರಮ. ಸಂಘದ ಸ್ವಯಂಸೇವಕರ ಸಹಯೋಗದೊಂದಿಗೆ ನಡೆಯುತ್ತಿರುವ ಈ ಆಶ್ರಮವು ಒಂಟಿ, ಪೀಡಿತ ಹಾಗು ಅಸಹಾಯಕ ಹೆಣ್ಣುಮಕ್ಕಳನ್ನು ಮತ್ತೆ ಸಮಾಜದಲ್ಲಿ ಗೌರವಾನ್ವಿತ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ಈಗ ಗೀತಾ ಅಮೇರಿಕಾದ ಪ್ರತಿಷ್ಠಿತ ದೇವಾಲಯದ ಅರ್ಚಕನನ್ನು ಮದುವೆಯಾಗಿದ್ದಳೆ ಹಾಗು ತನ್ನ ಮುದ್ದಿನ ಮಗಳೊಂದಿಗೆ ಸಂತೋಷವಾಗಿದ್ದಳೆ. ಈ ವಿಶಿಷ್ಟ ಕುಟುಂಬವು ಗೀತಾಳಂತಹ ಅದೆಷ್ಟೋ ಜನ ಪೀಡಿತ ಹಾಗು ಅನಾಥ ಹೆಣ್ಣುಮಕ್ಕಳ ಜೀವನದಲ್ಲಿ ತಾಯಿಯ ಸಹಜ ವಾತ್ಸಲ್ಯ ಹಾಗು ತಂದೆಯ ಶಿಸ್ತಿನ ಆರೈಕೆ ಎರಡರ ಕೊರತೆಯನ್ನು ನೀಗಿಸಿದೆ.




ಈಗ ಮನೀಷಾಳ ಬಗ್ಗೆ ಮಾತನಾಡೋಣ. (ಹೆಸರು ಬದಲಿಸಲಾಗಿದೆ) ಅಮಾನುಷ ಅತ್ಯಾಚಾರದ ನಂತರ ತಾಯಿಯಾಗಲಿದ್ದ ಈ ಅವಿವಾಹಿತ ಯುವತಿಯನ್ನು ತೀವ್ರ ಖಿನ್ನತೆಯ ಸ್ಥಿತಿಯಲ್ಲಿ ಅಬಲಾಶ್ರಮಕ್ಕೆ ಕರೆತರಲಾಗಿತ್ತು. ಆಗ ಮನೀಷಾ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಹಾಗೆಯೆ ಯಾವುದಕ್ಕೂ ಪ್ರತಿಕ್ರಿಯಿಸುತ್ತಿರಲಿಲ್ಲ. ಕೇವಲ ಶೂನ್ಯವನ್ನು ದಿಟ್ಟಿಸಿ ನೋಡುತ್ತಿದ್ದಳು. ಆದರೆ ಅಬಲಾಶ್ರಮದ ಸಹೃದಯ ವಾತಾವರಣದಲ್ಲಿ ಬದುಕಲು ಪ್ರಾರಂಭಿಸಿದ ಮೇಲೆ ಆಕೆ ಮತ್ತೆ ತನ್ನ ಜೀವನವನ್ನು ನಡೆಸಲು ಪ್ರಾರಂಭಿಸಿದ್ದಲ್ಲದೆ ಈಗ ಇಲ್ಲಿಯ ಒಬ್ಬ ಕಚೇರಿಯ ನುರಿತ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತ ಇತರ ಹೆಣ್ಣುಮಕ್ಕಳಿಗೆ ದಾರಿ ತೋರುವ ಕೆಲಸವನ್ನು ಮಾಡುತ್ತಿದ್ದಾಳೆ.


ಆಶ್ರಮದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಅವರಿಗೆ ವೃತ್ತಿಪರ ತರಬೇತಿಯನ್ನೂ ನೀಡಲಾಗುತ್ತದೆ, ಇಷ್ಟೇ ಅಲ್ಲದೆ ಅವರನ್ನು ಬೇರೆಕಡೆಗಳಲ್ಲಿ ಕೆಲಸಕ್ಕೆ ನೀಯೋಜಿಸುವ ಪ್ರಯತ್ನಗಳನ್ನೂ ಮಾಡಲಾಗುತ್ತದೆ.

ಅಬಲಾಶ್ರಮದ ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಹಾಗು ಬಸವನಗುಡಿ ನಗರದ ಸಂಘಚಾಲಕರಾದ ಬಿ.ವಿ 


ಶೇಷಾಜೀಯವರು ತಿಳಿಸುತ್ತಾರೆ, ಸುಮಾರು 100 ವರ್ಷಕ್ಕೂ ಹಿಂದೆ 1905ರಲ್ಲಿ ಅರ್ಯಸಮಾಜದ ಉತ್ಸಾಹಿ ಯುವಕ ಚಕ್ರವರ್ತಿ ವೆಂಕಟವರ್ಧಾ ಅಯ್ಯಂಗಾರ್ ಅವರಿಂದ ಅಬಲಾಶ್ರಮದ ಅಡಿಪಾಯವನ್ನು ಹಾಕಲಾಯಿತು. ಅವರೇ ಸ್ವತಃ ಒಬ್ಬ ಬಾಲ ವಿಧವೆಯನ್ನು ಮದುವೆ ಮಾಡಿಕೊಂಡಿದ್ದು ಸಂಪ್ರದಾಯಸ್ಥ ಸಮಾಜಕ್ಕೆ ಭಾರಿ ಹೊಡೆತವನ್ನು ನೀಡಿತ್ತು. ಅಯ್ಯಂಗಾರ್ ಜೀಯವರ ಮನೆಯಿಂದಲೇ ವಿಧವೆಯರ ಪುನರುಜ್ಜೀವನದ ಪ್ರತಿಜ್ಞೆಯೊಂದಿಗೆ ಪ್ರಾರಂಭವಾದ ಅಬಲಾಶ್ರಮವು ಇಂದು ಕರ್ನಾಟಕದಲ್ಲಿ ಒಂದು ವಿಶಾಲವಾದ ವೃಕ್ಷದ ರೂಪವನ್ನು ತಳೆದು ತನ್ನ ನೆರಳಿನಲ್ಲಿ ನೂರಾರು ಹೆಣ್ಣುಮಕ್ಕಳಿಗೆ ಸಮೃದ್ಧ ಹಾಗು ಸ್ವತಂತ್ರ ಜೀವನವನ್ನು ನೀಡುತ್ತಿದೆ. ಶ್ರೀ ಶೇಷಾಜೀಯವರು ಇಂದಿಗೂ ಮೊದಲ ಬಾರಿಗೆ ಇಲ್ಲಿಗೆ ಬಂದ ಆ ಕ್ಷಣವನ್ನು ನೆನಪಿನಲ್ಲಿಟ್ಟುಕೊಂಡಿದ್ದಾರೆ. ಅವರು ಇಲ್ಲಿಗೆ ಬಂದ ಮೊದಲ ದಿನದಿಂದಲೇ ಅವರು ಅಬಲಾಶ್ರಮದವರಾಗಿ ಬಿಟ್ಟರು. ಇಂದು ಸಂಘದ ಸ್ವಯಂಸೇವಕರು ತಮ್ಮ ಸೇವಾ ಸಮರ್ಪಣೆಯಿಂದ ಈ ಸಂಸ್ಥೆಯನ್ನು ಎತ್ತರದ ಸ್ತರಕ್ಕೆ ಕೊಂಡೊಯ್ದಿದ್ದಾರೆ. ಆಶ್ರಮದ ವ್ಯವಸ್ಥೆಯನ್ನು ಕೇವಲ ಪಾರದರ್ಶಕವಾಗಿ ಹಾಗು ಸಮಾಜಾಭಿಮುಖವಾಗಿ ಮಾಡಿದ್ದಲ್ಲದೆ ಅಲ್ಲಿಯ ಹೆಣ್ಣುಮಕ್ಕಳ ಜೀವನದಲ್ಲಿ ಸಂಸ್ಕಾರ ಮತ್ತು ದೇಶಭಕ್ತಿಯ ರಂಗನ್ನು ತುಂಬುವ ಮೂಲಕ ಅವರಲ್ಲಿ ದೇಶಕ್ಕಾಗಿ ಬದುಕುವ ಮನೋಭಾವವನ್ನು ಕಲಿಸಿದ್ದಾರೆ. ಈ ಆಶ್ರಮದಿಂದ ಹೊರಬಂದ ಕೆಲವು ಹೆಣ್ಣು ಮಕ್ಕಳು ತಮ್ಮ ಜೀವನದ ಕೆಲವು ವರ್ಷಗಳನ್ನು ವನವಾಸಿ ಇಲಾಖೆಯಲ್ಲಿ ಸೇವಾಕಾರ್ಯವನ್ನು ಮಾಡಲು ವ್ಯಯಿಸಿದ್ದಾರೆ.


ಅಬಲಾಶ್ರಮವನ್ನು ಬೇರೆ ಆಶ್ರಮಗಳಿಗಿಂತ  ಭಿನ್ನವಾಗಿಸುವ ವಿಷಯವೆಂದರೆ ಇಲ್ಲಿ ಕೇವಲ 16 ರಿಂದ 25 ವರ್ಷ ವಯಸ್ಸಿನ ಹೆಣ್ಣುಮಕ್ಕಳಿಗೆ ಮಾತ್ರ ಪ್ರವೇಶ ದೊರೆಯುತ್ತದೆ. ಏಕೆಂದರೆ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದು ಸುಲಭ ಹಾಗು ಅದಕ್ಕಾಗಿ ಅನೇಕ ಸಂಸ್ಥೆಗಳಿದ್ದು ಈ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶೇಷಾಜೀ ಹೇಳುತ್ತಾರೆ.  ಹೆಣ್ಣುಮಕ್ಕಳು ಹದಿಹರೆಯದ ಹೊಸ್ತಿಲಿಗೆ ಹೆಜ್ಜೆಇಟ್ಟಾಗ, ಅನೇಕ ಸಂಸ್ಥೆಗಳಿಗೆ ಅವರ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಹಲವು ಸಮಸ್ಯೆಗಳು ತಲೆದೋರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಅಬಲಾಶ್ರಮ ಆ ಹೆಣ್ಣುಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಮುಂದಾಗುತ್ತದೆ.

ಅಬಲಾಶ್ರಮವು ಅಲ್ಲಿಯ ಹೆಣ್ಣುಮಕ್ಕಳಲ್ಲಿ ಸುರಕ್ಷತೆ, ಸ್ವಾವಲಂಬನೆ, ಸಾಮರಸ್ಯ, ಸಂಸ್ಕೃತಿ, ಸ್ವಾಭಿಮಾನ, ಸೇವೆ, ಹೀಗೆ ಅನೇಕ ವಿಚಾರಗಳ ಬಗ್ಗೆ ಪ್ರಾಮುಖ್ಯತೆ ನೀಡುವ ಮೂಲಕ ಕರ್ನಾಟಕದಾದ್ಯಂತ ತನ್ನ ಛಾಪು ಮೂಡಿಸಿದೆ. ಇಲ್ಲಿಯ ಹೆಣ್ಣು ಮಗಳು ಯಾವುದೇ ಮನೆಯ ಸೊಸೆಯಾಗಿ ಹೋದರೂ ಅಥವಾ ಯಾವುದೇ ವೃತ್ತಿರಂಗವನ್ನು ಆಯ್ಕೆ ಮಾಡಿಕೊಂಡರೂ ಅಲ್ಲಿ ಆಕೆ ಆದರ್ಶವೆಂದು ಸಾಬೀತಾಗುತ್ತಾಳೆ. ತಂದೆ-ತಾಯಿಯರನ್ನು ಕಳೆದುಕೊಂಡ ಕಾಸ ಸಹೋದರಿಯರಾದ ರಷ್ಮಿ ಮತ್ತು ರಮ್ಯ ಇಬ್ಬರು ಅಬಲಾಶ್ರಮದಲ್ಲೆ ಇದ್ದುಕೊಂಡು ತಮ್ಮ ಉನ್ನತ ಶಿಕ್ಷಣವನ್ನು ಪಡೆದಿದ್ದು ಇವರಲ್ಲಿ ಒಬ್ಬಳು ಪ್ರಖ್ಯಾತ ಹೋಮಿಯೋಪತಿ ವೈದ್ಯಳಾಗಿ ಹಾಗು ಮತ್ತೊಬ್ಬಳು ಬಯೋಟೆಕ್ನಾಲಜಿ ವಿಷಯವನ್ನು ಅಧ್ಯಯನಮಾಡಿ ಅಂತರರಾಷ್ಟ್ರೀಯ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ. ಅಬಲಾಶ್ರಮದ ಹೆಣ್ಣುಮಕ್ಕಳನ್ನು ವಿವಾಹವಾಗಲು ಯಾವಾಗಲೂ ಉದಾತ್ತ , ಶ್ರೇಷ್ಠ ಮತ್ತು ಶ್ರೀಮಂತ ಕುಟುಂಬಗಳು ಸಿದ್ಧವಿರುತ್ತದೆ.



ಸಂಪರ್ಕಿಸಿ: ಬಿ.ವಿ ಶೇಷಾ

ಮೊಬೈಲ್ ಸಂ: 9483334328

1322 Views
अगली कहानी