सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ದಾತಾರ್ ನಲ್ಲಿ ಶಿಕ್ಷಣದ ಬೆಳಕು ಹರಡಿತು.

ಶ್ರೀಮತಿ ಮೇಘ ಪ್ರಮೋದ್ | ದಕ್ಷಿಣ

parivartan-img

ಇಂದು, ಗ್ರಾಮದಾದ್ಯಂತ ಪರಿಮಳಯುಕ್ತ  ಸುಗಂಧವನ್ನು  ಚಿಮುಕಿಸಲಾಯಿತು. ಹಳ್ಳಿಯ ವಾತಾವರಣದಲ್ಲಿ ವಿಭಿನ್ನವಾದ ಉತ್ಸಾಹ ತುಂಬಿತ್ತು. ಹಬ್ಬದ ಆಚರಣೆಗಾಗಿ ಎಂಬಂತೆ ಮನೆ ಮನೆಗಳಲ್ಲೂ ಸ್ವಚ್ಛತಾ ಕಾರ್ಯ ನಡೆದಿತ್ತು. ಸಮಯದ ಪುಟಗಳನ್ನು ಸ್ವಲ್ಪಮಟ್ಟಿಗೆ ತಿರುಗಿಸಿ ನೋಡಿದರೆ, ಇಲ್ಲಿ ಸಾಮಾನ್ಯ ದಿನಗಳಲ್ಲಿ ಇಂತಹ ಪರಿಸರಕ್ಕೆ ವ್ಯತಿರಿಕ್ತವಾಗಿ ಇರುತ್ತಿತ್ತು. ಕಾರಣ ಈ ಹಳ್ಳಿಯ ಬಹುತೇಕ ಎಲ್ಲಾ ಮನೆಗಳಲ್ಲಿ ಕಚ್ಚಾ ಮದ್ಯವನ್ನು ತಯಾರಿಸಲಾಗುತ್ತಿತ್ತು. ಇದರ ಪರಿಣಾಮವಾಗಿ ಪರಿಸರದಲ್ಲಿ  ವಿಚಿತ್ರವಾದ ವಾಸನೆ ಇರುತ್ತಿತ್ತು. ಆದರೆ ಇಂದು ಗ್ರಾಮಸ್ಥರಿಗೆ ಬಹಳ ವಿಶೇಷ ದಿನವಾಗಿತ್ತು. ಕಾರಣ ಝಾನ್ಸಿ ನಗರದ ಎಸ್‌ಎಸ್‌ಪಿ ದೇವ್‌ಕುಮಾರ್ ಆಂಟನಿ ಪಟ್ಟಣದಿಂದ 12 ಕಿ.ಮೀ ದೂರದಲ್ಲಿರುವ ಈ ದಾತಾರ್ ಎಂಬ ಹಳ್ಳಿಗೆ ಬರುವವರಿದ್ದರು. 


ಕಠಿಣ ಮತ್ತು ಪ್ರಾಮಾಣಿಕ ಕಾರ್ಯಕ್ಕೆ ಹೆಸರುವಾಸಿಯಾದ ಆಂಟನಿಯವರು ಇಂದು ಮದ್ಯ ಮಾರಾಟಗಾರರನ್ನು ಬಂಧಿಸಲು ಇಲ್ಲಿಗೆ ಬಂದವರಲ್ಲ, ಅಥವಾ ಯಾವುದೇ ಅಪರಾಧಿಗಳನ್ನು ಕಂಬಿ ಹಿಂದೆ ಕಳುಹಿಸಲೂ ಅಲ್ಲ. ಅವರು ಕುಡಿತವನ್ನು ತ್ಯಜಿಸಿದ ಮತ್ತು ಮದ್ಯ ತಯಾರಿಕೆಯನ್ನು ನಿಲ್ಲಿಸಿದ್ದ ದಾತಾರ್‌ನ ಯುವಕರನ್ನು ಗೌರವಿಸಲು ಬರುತ್ತಿದ್ದರು. ವಾಸ್ತವವಾಗಿ, ಇದು ಪವಾಡಕ್ಕಿಂತ ಕಡಿಮೆಯೇನಲ್ಲ. - ಇಲ್ಲಿಯ ಪಾರಿವಾಳ ಸಮಾಜದ ಜನರು ತಮ್ಮ ಅಪರಾಧ ಮತ್ತು ಅಕ್ರಮ ಮದ್ಯ ವ್ಯವಹಾರದಿಂದ ಕುಖ್ಯಾತರಾಗಿದ್ದವರು, ಆದರೆ ಇಂದು ಅದೇ ಸಮಾಜದ ಕೆಲವು ಯುವಕರು ಕುಡಿತ ಮತ್ತು ಮದ್ಯದ ವ್ಯವಹಾರವನ್ನು ತ್ಯಜಿಸಿದ್ದರಿಂದ ಅಂತಹ ಯುವಕರನ್ನು ಸನ್ಮಾನಿಸಲಾಗುತ್ತಿತ್ತು. 




ಈ ಅದ್ಭುತ ಬದಲಾವಣೆಯು ಸಂಘದ ಸ್ವಯಂಸೇವಕರು ನಡೆಸುತ್ತಿರುವ ಸೇವಾ ಸಮರ್ಪಣಾ ಸಮಿತಿಯ ಹಲವು ವರ್ಷಗಳ ಪರಿಶ್ರಮದ ಪರಿಣಾಮವಾಗಿದೆ. ಸಮಿತಿಯು 10 ವರ್ಷಗಳ ಕಾಲ ನಡೆಸುತ್ತಿದ್ದ ಅರಣ್ಯ ಶಿಕ್ಷಕ ಶಾಲೆ, ಪಾರಿವಾಳ ಸಮಾಜದ ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಬೆಳೆಸಿದ್ದಲ್ಲದೆ, ಅವರ ಹೆತ್ತವರನ್ನು ಸಮಾಜದ ಮುಖ್ಯವಾಹಿನಿಯ ಭಾಗವನ್ನಾಗಿ ಮಾಡಿತು. ರಾಜ್‌ಕುಮಾರ್ ದ್ವಿವೇದಿಯವರು 10 ವರ್ಷಗಳ ಹಿಂದೆ, ಮೊದಲ ಬಾರಿಗೆ ದಾತಾರ್‌ಗೆ ಬಂದಾಗ 2007 ರ ಮೇ ದಿನವನ್ನು ಮರೆತಿಲ್ಲ. ಆ ಸಮಯದಲ್ಲಿ, ಯಾವುದೇ ವ್ಯಕ್ತಿಯು ಅವರನ್ನು ತಮ್ಮ ಬಿಡಾರಕ್ಕೆ ಕರೆದೊಯ್ಯಲು ಸಿದ್ಧರಿರಲಿಲ್ಲ. ಅವರು ಈ ಮಕ್ಕಳಿಗೆ ಕಲಿಸಲು ಬಯಸಿದ್ದರು, ಆದರೆ ಅವರ ಪೋಷಕರು ಇದಕ್ಕೆ ಸಿದ್ಧರಿರಲಿಲ್ಲ. ಹೆಚ್ಚಿನ ಪ್ರಯತ್ನಗಳ ನಂತರ, ರಾಜ್‌ಕುಮಾರ್ ಜಿ ಅವರು ಶಿಕ್ಷಣವನ್ನು ಹೊರತುಪಡಿಸಿ ಬೇರೆ ಯಾವ ವಿಷಯಗಳಿಗೂ ತಲೆತೂರಿಸಬಾರದು ಎಂಬ ಷರತ್ತಿನೊಂದಿಗೆ ಮಕ್ಕಳ ಶಿಕ್ಷಣಕ್ಕೆ ಒಪ್ಪಿಗೆ ದೊರೆಯಿತು.




ಇಲ್ಲಿನ ಕಜ್ಜಾ (ಪಾರಿವಾಳ ಸಮಾಜವನ್ನು ಹೊರತುಪಡಿಸಿ) ಜನರು ಬೇರೆ ಜನರನ್ನು ನಂಬಲಿಲ್ಲ. ಅಲ್ಲದೆ, ಪಾರಿವಾಳ ಬುಡಕಟ್ಟು ಜನಾಂಗದ ಅಪರಾಧಿ ಇತಿಹಾಸವು ಅವರನ್ನು ಉಳಿದ ಸಮಾಜದಿಂದ ಬೇರ್ಪಡಿಸಿತ್ತು. ಝಾನ್ಸಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಪಾರಿವಾಳಿಗರಿಗೆ ಹೆದರುತ್ತಿದ್ದವು, ಪಾರಿವಾಳಿಗರ ಹೊಲಗಳಿಗೆ ಹೊಂದಿಕೊಂಡಿರುವ ಹೊಲಗಳಲ್ಲಿ ಲೂಟಿ ಮತ್ತು ಕಳ್ಳತನದ ಘಟನೆಗಳು ಹೆಚ್ಚು ಎಂಬ ನಂಬಿಕೆ ಇತ್ತು. ಬಡತನವು ಸಾಮಾನ್ಯವಾಗಿ ಶಿಕ್ಷಣದ ಹಾದಿಯಲ್ಲಿ ದೊಡ್ಡ ಅಡಚಣೆಯಾಗುತ್ತದೆ. ಆದರೆ ಇಲ್ಲಿ ಬಡತನ ಅಥವಾ ಹಸಿವು ಇರಲಿಲ್ಲ, ಆದರೂ ಅವರ ಮಕ್ಕಳು ಎಲ್ಲಿಯೂ ಅಧ್ಯಯನಕ್ಕೆ ಹೋಗಲಿಲ್ಲ. ಇಲ್ಲಿ ಸಮಸ್ಯೆ ಬೇರೆಯೇ ಇತ್ತು. ಆದರೆ ಈ ಪ್ರದೇಶದಲ್ಲಿ ಶಿಕ್ಷಣದ ಸೂರ್ಯ ಉದಯಿಸಿದ ಕೂಡಲೇ ಹಿಂದುಳಿದ ಸಾಮಾಜಿಕ ಚಿಂತನೆಯ ಕರಾಳ ದಿನ ಓಡಿಹೋಗಲು ಪ್ರಾರಂಭಿಸಿತು ಮತ್ತು ಹಳ್ಳಿಯ ಬಾಲ್ಯವು ಸುವರ್ಣ ಭವಿಷ್ಯದತ್ತ ಸಾಗಿತು. ಈ ಕೆಲವು ವರ್ಷಗಳಲ್ಲಿ ದಾತಾರ್‌ನಲ್ಲಿ ಎಲ್ಲವೂ ಬದಲಾಗಿದೆ. ಬಿ.ಎಸ್ಸಿ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಆಶಿಶ್ ಮನೋರಿಯಾ ಈಗ ತನ್ನ ಹೆಸರನ್ನು ಪಾರಿವಾಳವನ್ನು ಅಡ್ಡಹೆಸರಿನಂತೆ ಬಳಸಲು ಬಯಸುವುದಿಲ್ಲ. ಅವರ ಕುಟುಂಬವು ಪಾರಿವಾಳ ಸಮಾಜದ ಆ ವರ್ಗಕ್ಕೆ ಸೇರಿದ್ದೂ, ಕುಡಿಯುವುದನ್ನು ನಿಲ್ಲಿಸಿದ್ದು ಮಾತ್ರವಲ್ಲದೆ ಮದ್ಯ ಮಾರಾಟವನ್ನೂ ನಿಲ್ಲಿಸಿದೆ. ಹಳ್ಳಿಯಲ್ಲಿ ಹಾರ್ಡ್‌ವೇರ್ ಅಂಗಡಿಯೊಂದನ್ನು ನಡೆಸುತ್ತಿರುವ ಅನಿಲ್ ಮನೋರಿಯಾ ಹೇಳುತ್ತಾರೆ., "ನಮ್ಮ ಕನಸಿನಲ್ಲಿಯೂ ಸಹ ನಾವು ಈ ವ್ಯವಹಾರವನ್ನು ತೊರೆಯಲು ಸಾಧ್ಯವಾಗುವುದೆಂದು ಭಾವಿಸಿರಲಿಲ್ಲ" 

ಇತಿಹಾಸವನ್ನು ನೋಡಿದರೆ, ಪಾರಿವಾಳ ಜನಾಂಗದವರು ತುಂಬಾ ಕೆಟ್ಟ ದಿನಗಳನ್ನು ಕಂಡಿದ್ದಾರೆ. ಜನರು ಅವರನ್ನ ನೋಡಿದಾಕ್ಷಣ ಹೊಡೆಯಲು ಪ್ರಾರಂಭಿಸಿದ ಸಮಯವಿತ್ತು. ಎಲ್ಲರೊಂದಿಗೆ ಕುಳಿತುಕೊಳ್ಳಲು ಅವರಿಗೆ ಅವಕಾಶವಿರಲಿಲ್ಲ. ಕಳ್ಳತನ ಮತ್ತು ದರೋಡೆಗಳ ಹೊರತಾಗಿ, ಈ ಜನರಿಗೆ ಹೊಟ್ಟೆಯನ್ನು ತುಂಬಲು ಯಾವುದೇ ದಾರಿ ಇರಲಿಲ್ಲ. ನಂತರ, ಫೆಬ್ರವರಿ 1958 ರಲ್ಲಿ, ಅಂದಿನ ಗೃಹ ಸಚಿವ ಬಲ್ವಂತ್ ನಾಗೇಶ್ ದಾತಾರ್ ಅವರು ದಾತಾರ್ ಗ್ರಾಮವನ್ನು ರೂಪಿಸಿದರು. ಆದರೆ 40 ವರ್ಷಗಳ ನಂತರವೂ ಪಾರಿವಾಳ  ಸಮಾಜದ ಜನರು ಮುಖ್ಯವಾಹಿನಿಯ ಭಾಗವಾಗಲು ಸಾಧ್ಯವಾಗಲಿಲ್ಲ. ಪಾರಿವಾಳ ಸಮಾಜದ ಸಾಮಾಜಿಕ ಸ್ಥಾನಮಾನವನ್ನು 2005 ರಲ್ಲಿ ಸಂಘದ ಮಹಾನಗರ ಬೈಠಕ್ ನಲ್ಲಿ ಮೊದಲ ಬಾರಿಗೆ ಚರ್ಚಿಸಲಾಯಿತು, ನಂತರ ಸ್ವಯಂಸೇವಕರು ಈ ಸಮಾಜದ ನಡುವೆ ಕೆಲಸ ಮಾಡಲು ನಿರ್ಧರಿಸಿದರು. ಏಕಲ ವಿದ್ಯಾಲಯ ಈ ನಿರ್ಣಯದ ಮೊದಲ ಹಂತವಾಗಿತ್ತು. ಶಾಲೆ ಈಗ ಸೇವಾ ಸಮರ್ಪಣ್ ಸಮಿತಿಯ ಮೂಲಕ ನಡೆಯುತ್ತದೆ.




ಇಂದು ದಾತಾರ್‌ನಿಂದ 450 ಮಕ್ಕಳು ಝಾನ್ಸಿಯ ವಿವಿಧ ಶಾಲೆಗಳಿಗೆ ಹೋಗುತ್ತಾರೆ. ಈ ಮಕ್ಕಳು ಹಿಂದೆ ಶಾಲೆಗೆ ಹೋಗುವ ಬದಲು ಮನೆಯಲ್ಲಿಯೇ ಇದ್ದು ಪೋಷಕರಿಗೆ ಮದ್ಯದ ವ್ಯವಹಾರದಲ್ಲಿ ಸಹಕರಿಸುತ್ತಿದ್ದರು ಹಾಗು ಪೋಷಕರ ಕಣ್ಣು ತಪ್ಪಿಸಿ ಮದ್ಯವನ್ನು ಸೇವಿಸುತ್ತಿದ್ದರು. ಪಶ್ಚಿಮ ಉತ್ತರ ಪ್ರದೇಶದ ಕ್ಷೇತ್ರ ಸೇವಾ ಪ್ರಮುಖ್  ನವಲ್ ಕಿಶೋರ್ ಅವರ ಪ್ರಕಾರ, ಪಾರಿವಾಳ ಸಮಾಜವು ಹೆಣ್ಣುಮಕ್ಕಳನ್ನು ಓದಿಸಲು ಸಿದ್ಧರಿರಲಿಲ್ಲ. 11 ರಿಂದ 14 ವರ್ಷ ವಯಸ್ಸಿನ ಹುಡುಗಿಯರನ್ನು ಮದುವೆ ಮಾಡಿ ಕಳುಹಿಸುತ್ತಿದ್ದರು. ಆದರೆ ಈಗ ಇಲ್ಲಿ 80 ಹುಡುಗಿಯರು ಅಧ್ಯಯನಕ್ಕಾಗಿ ಝಾನ್ಸಿಗೆ ಹೋಗುತ್ತಿದ್ದಾರೆ.

ಪಾರಿವಾಳಿಗರು ಕಜ್ಜರಿಗೆ (ತಮ್ಮ ಸಮಾಜವನ್ನು ಹೊರತುಪಡಿಸಿ ಬೇರೆ ಜನರಿಗೆ) ಸಹಾಯ ಹಸ್ತವನ್ನು ಚಾಚಿವೆ. ಸಮಿತಿಯು ಝಾನ್ಸಿಯ ಸಿಪ್ರಿ ಬಾಜಾರ್ ಬಸ್ತಿಯ (ಇಲ್ಲಿ ಸಮಿತಿಯ ಬಾಲಸಂಸ್ಕಾರ ಕೇಂದ್ರವು ನಡೆಯುತ್ತಿದೆ) ಇಬ್ಬರು ಬಡ ಹುಡುಗಿಯರನ್ನು ಮದುವೆಮಾಡಿಸಿದಾಗ ಈ ಹೆಣ್ಣುಮಕ್ಕಳ ಮದುವೆಗೆ ಎಲ್ಲಾ ಹಣವನ್ನು ದಾತಾರ್‌ನಿಂದ ನೀಡಲಾಯಿತು.

ಬನ್ನಿ ಈಗ ಸನ್ಮಾನ ಸಂಮಾರಭದ ಬಗ್ಗೆ ತಿಳಿಯೋಣ. ಎಸ್.ಎಸ್.ಪಿ ದೇವಕುಮಾರ್ ಅವರು ಪಾರಿವಾಳ ಸಮಾಜದ ಈ ಪರಿವರ್ತನೆಯನ್ನು ನೋಡಿ ಅವರ ಮನಸ್ಸಿನಲ್ಲಿ ಪಾರಿವಾಳಿಗರ ಬಗ್ಗೆ ಇದ್ದ ಭಾವನೆಯನ್ನು  ಬದಲಿಸಿಕೊಂಡರು. ಕಾರ್ಯಕ್ರಮಕ್ಕೆ ಬರುವ ಮೊದಲು ಅವರು  ಪಾರಿವಾಳಿಗರು ಅಪರಾಧದ ಹಾದಿಯನ್ನು ಬಿಡಬಲ್ಲರು ಎಂದು ನಂಬಿರಲಿಲ್ಲ. ಆದರೆ ಕಾರ್ಯಕ್ರಮದ ನಂತರ ಅವರ ದೃಷ್ಟಿಕೋನ ಬದಲಾಗಿದ್ದಲ್ಲದೆ ಇಲ್ಲಿನ ಕೆಲವು ಯುವಕರಿಗೆ ಪೊಲೀಸ್ ಸೇವೆಗೆ ಸೇರಲು ಪ್ರೋತ್ಸಾಹಿಸಿದರು.

1156 Views
अगली कहानी