नियमित अपडेट के लिए सब्सक्राईब करें।
5 mins read
ಭಾಗ್ಯನಗರ | ತೆಲಂಗಾಣ
ಒಂದು ರಸ್ತೆ
ಅಪಘಾತದಲ್ಲಿ ತನ್ನ ತಾಯಿ-ತಂದೆಯರನ್ನು ಕಳೆದುಕೊಂಡು, ಜೊತೆಗೆ ತನ್ನ ಎಡಗಾಲು ಮತ್ತು ಬಲಗೈಯನ್ನು ಕಳೆದುಕೊಂಡು, ಬದುಕನ್ನು ದುಸ್ತರಗೊಳಿಸಿದ ತನ್ನ ಜೀವನದ ಆ ಕ್ಷಣವನ್ನು ಭಾರತಿ ಎಂದೂ ಮರೆಯುವುದಿಲ್ಲ. ಕೇವಲ
ಆರು ವರ್ಷದ ಹಸುಳೆ ಭಾರತಿಗೆ ವಿಧಿಯ ಎಲ್ಲಾ ಬಾಗಿಲುಗಳು ಮುಚ್ಚಿದ್ದವು. ಎಲ್ಲಿ ನಾಲ್ಕೂ
ದಿಕ್ಕುಗಳಲ್ಲಿ ಕತ್ತಲೆಯೇ ತುಂಬಿತ್ತೋ, ಅಲ್ಲಿ ಅಭಯ
ನೀಡಬಲ್ಲ ಭಗವಂತನ ಬೆಳಕಿನ ಕಿರಣಗಳು ಮುಂದಿನ ದಾರಿಯನ್ನು ತೋರಿಸಿ ಬಿಡುತ್ತವೆ. ಭಾರತಿ ಕಂಪ್ಯೂಟರ್ಸ್ ನಲ್ಲಿ ಬಿಕಾಂ ಓದುತ್ತಾ, ಪ್ರತಿಕೂಲ ಪರಿಸ್ಥಿತಿಗಳು ಎಷ್ಟೇ ಪ್ರಭಲವಾಗಿದ್ದರೂ, ನಿಮ್ಮ ಜೀವನವನ್ನು ಪೋಷಿಸುವ ಸಕಾರಾತ್ಮಕ ಮಾರ್ಗದರ್ಶನವು ನಿಮ್ಮ
ಸೋಲನ್ನು ಗೆಲುವನ್ನಾಗಿ ಬದಲಾಯಿಸುತ್ತದೆ ಎಂದು ಪ್ರತಿಯೊಬ್ಬರಿಗೂ ಪ್ರೇರಣೆಯನ್ನು ನೀಡುತ್ತಾಳೆ.
ಭಾರತಿಗೆ
ಜೀವನದಲ್ಲಿ ಹೊಸದಿಕ್ಕು ,ಆತ್ಮವಿಶ್ವಾಸ ಮತ್ತು ಜೀವನದ
ಆಧಾರವನ್ನು ನೀಡುವ ಅವಳ ಪರಿವಾರವೆಂದರೆ ಅದು “ಭಾಗ್ಯನಗರದ ವೈದೇಹಿ ಆಶ್ರಮ”. ಕೇವಲ ಮೂರು
ಹೆಣ್ಣುಮಕ್ಕಳೊಂದಿಗೆ ಪ್ರಾರಂಭವಾದ ವೈದೇಹಿ ಆಶ್ರಮ, ಅನೇಕ ಅನಾಥ ಮತ್ತು ವಿಷಮ ಪರಿಸ್ಥಿತಿಗಳಿಗೆ ಬಲಿಯಾದ ಸುಮಾರು 205ಕ್ಕೂ ಅಧಿಕ ಮುಗ್ಧ ಹೆಣ್ಣುಮಕ್ಕಳ ಜೀವನಕ್ಕೆ ಆಧಾರವಾಗಿದೆ, ಅಷ್ಟೇ ಅಲ್ಲ, ಅವರಿಗೆ ತುಂಬು
ಕುಟುಂಬದ ಆನಂದ ಉತ್ಸಾಹ ಮತ್ತು ಜೀವನವನ್ನು ಸಂಭ್ರಮಿಸುವ ಅವಕಾಶವನ್ನು ನೀಡುತ್ತಿದೆ.
ಸ್ವರ್ಗೀಯ ಶ್ರೀ ಪಿ
ವಿ ದೇಶಮುಖಜೀ ಅವರ ಮಾರ್ಗದರ್ಶನದಿಂದ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳ ಬಗ್ಗೆ ಗಮನಹರಿಸುವ
ಸಲುವಾಗಿ ವೈದೇಹಿ ಸೇವಾ ಸಮಿತಿಯು 1993 ರಲ್ಲಿ ಭಾಗ್ಯನಗರದಲ್ಲಿ (ಹೈದರಾಬಾದ್)ಸೇವಾಭಾರತಿಯ ಒಂದು ಘಟಕವಾಗಿ ಪ್ರಾರಂಭವಾಯಿತು. 1999ರಲ್ಲಿ ಸಂಘದ ಅಂದಿನ ಅಖಿಲ ಭಾರತೀಯ ಸೇವಾ ಪ್ರಮುಖರಾದ ಸೂರ್ಯನಾರಾಯಣ
ರಾವ್ ಅವರು ವೈದೇಹಿ ಸೇವಾ ಸಮಿತಿಯ ಹೊಸ ಕಟ್ಟಡಕ್ಕೆ ಶಿಲಾನ್ಯಾಸವನ್ನು ನೆರವೇರಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಮ ಪೂಜನೀಯ ಸರಸಂಘಚಾಲಕರಾದ ಮೋಹನ ಜೀ ಭಾಗವತ್ ಅವರಿಂದ 2005ರಲ್ಲಿ ಈ ಆಶ್ರಮದ ಹೊಸ ಕಟ್ಟಡದ ಉದ್ಘಾಟನೆಯು ಆಯಿತು ಎಂದು ಸಂಘದ ಸ್ವಯಂಸೇವಕರಾದ ಹಾಗು ವೈದೇಹಿ ಸಮಿತಿಯ ಸಚಿವರಾದ ಶ್ರೀ ಬಾಲಕೃಷ್ಣ ಅವರು
ಹೇಳುತ್ತಾರೆ.
ಈ ಆಶ್ರಮದಲ್ಲಿ ವಿದ್ಯಾಭ್ಯಾಸ ಮುಗಿಸಿ ವೈವಾಹಿಕ ಜೀವನದ ಸುಖಮಯ ಜೀವನವನ್ನು ಸಾಗಿಸುತ್ತಿರುವ ಉಮಾದೇವಿ ಹೆಮ್ಮೆಯಿಂದ, ವೈದೇಹಿ ಆಶ್ರಮದಲ್ಲಿ ನನ್ನ ಪಾಲನೆ-ಪೋಷಣಯಾಗಿದ್ದು ನಿಜಕ್ಕೂ ನನ್ನ ಸೌಭಾಗ್ಯ. ನನ್ನ ಐದು ವರ್ಷದ ಮಗ ಶಾಲೆಯ ಸ್ಪರ್ಧೆಯಲ್ಲಿ ಸ್ವಾತಂತ್ರ್ಯ ಸೇನಾನಿಯ ಪಾತ್ರವನ್ನು ನಿರ್ವವಹಿಸಿ ಪ್ರಥಮ ಸ್ಥಾನ ಗಳಿಸಿದ ಯಶಸ್ಸು ವೈದೇಹಿ ಆಶ್ರಮಕ್ಕೆ ಸಲ್ಲುತ್ತದೆ. ಏಕೆಂದರೆ ಇಲ್ಲಿ ನನಗೆ ಚಿಕ್ಕಂದಿನಿಂದ ನೃತ್ಯ-ಸಂಗೀತ ನಾಟ್ಯಕಲೆ ಕರಾಟೆ ಮತ್ತು ಕ್ರೀಡೆಗಳಂತಹ ಅನೇಕ ವಿಭಾಗಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು, ಅದರ ಲಾಭವು ಇಂದು ನನ್ನ ಮೂರೂ ಮಕ್ಕಳಿಗೆ ಸಿಗುತ್ತಿದೆ ಎಂದು ಹೇಳುತ್ತಾರೆ.
ತಾಯಿ-ತಂದೆಯರ ಮೃತ್ಯುವಿನ ನಂತರ ಕುಮಾರಿ ಬಿ ರಂಗಮ್ಮಳಿಗೆ ಏನು ಗೊತ್ತಿತ್ತು ತನ್ನ ಕರಕುಶಲ ಕಲೆಗಳಾದ ಪೇಪರ್ ಕ್ವಿಲ್ಲಿಂಗ್ ಮತ್ತು ಮುತ್ತುಗಳಿಂದ ಮಾಡಿದ ಆಭರಣಗಳ ಪ್ರಶಂಸೆ ಲಂಡನ್ನಿನ ಬೀದಿಗಳಲ್ಲಿ ಆಗುತ್ತದೆ ಎಂದು?? ರಂಗಮ್ಮ ಇಂದು ಇದೇ ಆಶ್ರಮದಲ್ಲಿ ತನ್ನ ಸಹೋದರಿಯರಿಗೆ ಯೋಗ,ಕರಾಟೆ,ನೃತ್ಯ,ಗಾಯನ,ಕರಕುಶಲ ಕಲೆಗಳಂತಹ ಎಲ್ಲಾ ಆಯಾಮಗಳ ಶಿಕ್ಷಣವನ್ನು ನೀಡುತ್ತಿದ್ದಾಳೆ.
ಪ್ರತಿವರ್ಷವೂ
ವೈದೇಹಿ ಆಶ್ರಮದ ಪ್ರಾಂಗಣದಲ್ಲಿ ವಿವಾಹ ಅಥವಾ ಯಾವುದಾದರು ಉತ್ಸವವನ್ನು ಆಯೋಜಿಸಲಾಗುತ್ತದೆ. ಆಗ ನಮ್ಮ ಹೆಣ್ಣುಮಕ್ಕಳು ಮತ್ತು ಅವರ
ಪರಿವಾರದವರನ್ನು ಆಮಂತ್ರಿಸಲಾಗುತ್ತದೆ. ಆಗ ಅವರ ಮಕ್ಕಳೂ ಇಲ್ಲಿಗೆ ಬರುತ್ತಾರೆ ಮತ್ತು ಬಹಳ
ದೊಡ್ಡ ಕುಟುಂಬದ ರೀತಿಯಲ್ಲಿ ಆನಂದದಿಂದ ಈ ಪ್ರಾಂಗಣದಲ್ಲಿ ನಲಿಯುತ್ತಾರೆ, ಎಂದು ಆರಂಭದಿಂದಲೂ ಈ ಆಶ್ರಮದ ಮೇಲ್ವಿಚಾರಣೆಯನ್ನು
ಮಾಡುತ್ತಾ, ಬಾಲಕಿಯರಿಗೆ ತಮ್ಮ ಸ್ನೇಹ ಮತ್ತು ಮಾರ್ಗದರ್ಶನದಿಂದ ಪ್ರತಿಕ್ಷಣವೂ
ಬೆಂಬಲವಾಗಿ ನಿಂತಿರುವ ವೈದೇಹಿ ಆಶ್ರಮದ ಅಧ್ಯಕ್ಷೆ ಎಂ. ಸೀತಾಕುಮಾರಿ ಬಹಳ ಹರ್ಷದಿಂದ ಹೇಳುತ್ತಾರೆ.
ಕೊರೋನಾ ಮಹಾಮಾರಿಯ ಕಾಲದಲ್ಲೂ ಇಲ್ಲಿನ ಹೆಣ್ಣುಮಕ್ಕಳು ವಿಶೇಷ ಭೂಮಿಕೆಯನ್ನು ನಿಭಾಯಿಸುತ್ತ ಹೆಲ್ಪ್ ಲೈನ್ ಸೆಂಟರನ್ನು ನಡೆಸಿದರು. ಈ ಹೆಣ್ಣುಮಕ್ಕಳಿಗೆ ಮನೆಯಂತಾಗಿರುವ ವೈದೇಹಿ ಆಶ್ರಮವು, ತಾಯಿ-ತಂದೆಯರು ಅಥವಾ ಪೋಷಕರೂ ಇಲ್ಲದಿರುವ ಆರರಿಂದ ಹತ್ತು ವರ್ಷದ ವಯಸ್ಸಿನ ಬಾಲಕಿಯರನ್ನು ಇಲ್ಲಿ ದತ್ತು ಪಡೆಯಲಾಗುತ್ತದೆ. ಆಶ್ರಮವು ತಾಯಿ-ತಂದೆಯರ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸುತ್ತ, ಅವರ ಪಾಲನೆ-ಪೋಷಣೆ, ಉನ್ನತ ಶಿಕ್ಷಣ, ಸಂಸ್ಕಾರ, ಜೀವನ ಕೌಶಲ್ಯ ಅಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನದ ಸಂಪೂರ್ಣ ಜವಾಬ್ದಾರಿಯನ್ನು ನಿಭಾಯಿಸುತ್ತಾ
ಅವರನ್ನು ಸಮಾಜಕ್ಕೆ ಆದರ್ಶ ಮತ್ತು ಸ್ಪೂರ್ತಿದಾಯಕ ವ್ಯಕ್ತಿತ್ವವನ್ನು ರೂಪಿಸುವ ಗುರಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.ಗುಣಮಟ್ಟದ ಶಿಕ್ಷಣವನ್ನು ಗಟ್ಟಿಗೊಳಿಸುವಲ್ಲಿ ಹತ್ತನೇ ತರಗತಿಯವರೆಗೆ ಎಲ್ಲಾ ಬಾಲಕಿಯರು ಶ್ರೀ ಸರಸ್ವತಿ ಶಿಶುಮಂದಿರದ ಹೈಸ್ಕೂಲಿನಲ್ಲಿ ಅಭ್ಯಸಿಸುತ್ತಾರೆ. ಇಲ್ಲಿ ಈ ಬಾಲಕಿಯರಿಗೆ ಕ್ರೀಡೆಗಳು, ವಿಜ್ಞಾನಮೇಳಗಳು, ಸಾಂಸ್ಕೃತಿಕ ಚಟುವಟಿಕೆ, ಇತ್ಯಾದಿಗಳಲ್ಲಿ ಭಾಗವಹಿಸಲು ಉತ್ತೇಜನ ನೀಡಲಾಗುತ್ತದೆ. ಶಿಕ್ಷಣ, ಸಂಸ್ಕಾರ ಮತ್ತು
ರಾಷ್ಟ್ರಭಾವವನ್ನು ಜಾಗೃತಗೊಳಿಸುವ ಜೊತೆಗೆ, ಉನ್ನತ ಶಿಕ್ಷಣವು ಪೂರ್ತಿಯಾದ ಮೇಲೆ ವಿವಾಹದ ತನಕ ಸಂಪೂರ್ಣ ಜವಾಬ್ದಾರಿಯನ್ನು ಆಶ್ರಮವೇ ವಹಿಸುತ್ತದೆ. ಇಂದು ಆಶ್ರಮದ 21 ಹೆಣ್ಣುಮಕ್ಕಳು ಸ್ನಾತಕೋತ್ತರ ವಿದ್ಯಾಭ್ಯಾಸ ಮುಗಿಸಿ ಕೆಲಸ ಮಾಡುತ್ತಿದ್ದಾರೆ. 2021ರ ವರೆಗೆ 45 ಹುಡುಗಿಯರ ವಿವಾಹದಲ್ಲಿ ವೈದೇಹಿ ಆಶ್ರಮವು ತಾಯಿ-ತಂದೆಯರ ಪ್ರತೀ ಕರ್ತವ್ಯವನ್ನು ನಿಭಾಯಿಸಿತು ಮತ್ತು ಈಗಲೂ ಅವರೆಲ್ಲರ ತವರುಮನೆ ಇದೇ ವೈದೇಹಿ ಆಶ್ರಮವೇ ಆಗಿದೆ.
ಎಲ್ಲಿ, ಒಂದು ಕಡೆ ಸಮಾಜದಲ್ಲಿ ಒಬ್ಬ
ಹೆಣ್ಣು ಸಂಘರ್ಷ ಮತ್ತು ಸವಾಲುಗಳ ದಾರಿಯಲ್ಲಿ ಪಯಣಿಸುತ್ತಿದ್ದರೆ, ಮತ್ತೊಂದೆಡೆ ವೈದೇಹಿ ಆಶ್ರಮವು ಸುಡುಬಿಸಿಲಿನಲ್ಲಿ ವಿಶಾಲವಾದ
ಮರದ ನೆರಳಿನಿಂದ ದೊರಕುವ ತಂಪಿನ ಅನುಭವವನ್ನು ನೀಡುತ್ತಿದೆ. ವೈದೇಹಿ ಆಶ್ರವು ಮುಗ್ಧ
ಹೆಣ್ಣುಮಕ್ಕಳಿಗೆ ಎಲ್ಲ ಕಲೆಗಳನ್ನು ಕರಗತ ಮಾಡಿಸಿ, ಸ್ವಚ್ಛಂದ ಆಕಾಶದಲ್ಲಿ ಹಾರಾಡುವ ಬುದ್ಧಿಶಕ್ತಿ ಮತ್ತು
ಆತ್ಮವಿಶ್ವಾಸವನ್ನು ನೀಡುತ್ತ ಅವರನ್ನು ಗಟ್ಟಿಗೊಳಿಸುತ್ತಿದೆ.
नियमित अपडेट के लिए सब्सक्राईब करें।