सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಯುವ ಸಂಕಲ್ಪದ ಅನುಪಮ ಉದಾಹರಣೆ - ಆನಂದಪುರ ಭಾಲಿ.

ದಕ್ಷಿಣ

parivartan-img

 ಆಕಾಶದಲ್ಲಿ ರಂಧ್ರ ಇರಬಾರದು ಎಂದು ಯಾರು ಹೇಳುತ್ತಾರೆ, ಒಂದು ಕಲ್ಲನ್ನು ಚೆನ್ನಾಗಿ ಬೀಸಿ ಸ್ನೇಹಿತರೇ" ಪ್ರಸಿದ್ಧ ಕವಿ ದುಶ್ಯಂತ್ ಕುಮಾರ್ ಅವರ ಈ ಸಾಲುಗಳು ಆನಂದಪುರ ಭಾಲಿಯಲ್ಲಿ ಮಹತ್ವವನ್ನು ಪಡೆಯುತ್ತಿರುವುದು ಕಾಣಿಸಿಕೊಳ್ಳುತ್ತದೆ. ಹರಿಯಾಣದ ರೋಹ್ತಕ್ ಜಿಲ್ಲೆಯ ಈ ಗ್ರಾಮವು ಒಂದು ಕಾಲದಲ್ಲಿ ರಾಜಕೀಯ ದ್ವೇಷದ ನೆಲೆಯಾಗಿತ್ತು. ಪರಿಸ್ಥಿತಿ ಹೇಗಿತ್ತು ಎಂದರೆ ಗ್ರಾಮದ ಹೆಚ್ಚಿನ ಯುವಕರಿಗೆ ಜೈಲು ಮತ್ತು ಪೊಲೀಸ್ ಠಾಣೆಗಳ ಪರಿಚಯ ಚೆನ್ನಾಗಿತ್ತು . ಬಸ್ ಕಂಡಕ್ಟರ್ ಇವರನ್ನು ಬಸ್ಸಿನಲ್ಲಿ ಕುಳಿತುಕೊಳ್ಳಿಸುತ್ತಿರಲಿಲ್ಲ. ಅವರು ಕುಳಿತರೂ ಟಿಕೆಟ್ ಹಣ ಕೇಳಲು ಹೆದರುತ್ತಿದ್ದರು.


ಆದರೆ ಇಂದು ಈ ಕೆಲವು ಯುವಕರ ಸಾರ್ಥಕ ಪ್ರಯತ್ನದ ಫಲವಾಗಿ ಹಳ್ಳಿಯ ಚಿತ್ರಣವೇ ಬದಲಾಗಿದೆ. ಗ್ರಾಮದ ಮಧ್ಯದಲ್ಲಿ ನಿರ್ಮಿಸಲಾದ ಮೂರು ಅಂತಸ್ತಿನ ಕೇಶವ ಭವನ ಮತ್ತು ಅದರಲ್ಲಿ ನಡೆಯುತ್ತಿರುವ ತಕ್ಷಶಿಲಾ ವಿದ್ಯಾ ಮಂದಿರ, ಆರ್ಯಭಟ್ಟ ಅಧ್ಯಯನ ಕೇಂದ್ರ, ಲೆಫ್ಟಿನೆಂಟ್ ಅತುಲ್ ಪವಾರ್ ಕಂಪ್ಯೂಟರ್ ಸೆಂಟರ್ ಅಥವಾ ಹುತಾತ್ಮ ಪೈಲಟ್ ಸಂದೀಪ್ ಪಲಡವಾಲ್ ಗ್ರಂಥಾಲಯ ಇವು ಗ್ರಾಮದಲ್ಲಿನ ಬದಲಾವಣೆಯ ಕಥೆಯನ್ನು ಹೇಳುತ್ತಿವೆ. ಭಾಲಿ ಆನಂದಪುರದ ಈ ಹೊಸ ರೂಪದ ಯಶಸ್ಸು  ಹರಿಯಾಣ ಪ್ರಾಂತದ, ಪ್ರಾಂತ ಸಹಗ್ರಾಮ ವಿಕಾಸ ಪ್ರಮುಖ್ ಅನೂಪ್ ಸಿಂಗ್ ಮತ್ತು ಅವರ ಸಹಕಾರಿಗಳಿಗೆ ಸಲ್ಲುತ್ತದೆ. ಈ ಯುವಕರಿಗೆ ಸಂಘದಿಂದ ಮತ್ತು ಸೇವಾಭಾರತಿಯಿಂದ ಪ್ರೇರಣೆ ದೊರೆತಾಗ ಬದಲಾವಣೆಯ ಗಾಳಿ ಬೀಸಲಾರಂಭಿಸಿತು.ಹಳ್ಳಿಯ ಬಯಲುಗಳಲ್ಲಿ ಹಿರಿಯರಿಗೆ ಪತ್ರಿಕೆ ಹಂಚುವ ಮೂಲಕ ಪ್ರಾರಂಭಿಸಿದ ಸೇವಾ ಪ್ರಯಾಣಕ್ಕೆ ಹೊಸ ಆಯಾಮಗಳು ಸೇರುತ್ತಾ ಹೋಯಿತು ಮತ್ತು ' ಶಹೀದ್ (ಹುತಾತ್ಮ) ಚಂದ್ರಶೇಖರ್ ಆಜಾದ್ ಸೇವಾ ಸಮಿತಿ' ಜನ್ಮ ತಾಳಿತು.

ತಕ್ಷಶಿಲಾ ಅಧ್ಯಯನ ಕೇಂದ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ ಗ್ರಾಮದ 48 ಯುವಕರು ಇಂದು ಸರ್ಕಾರಿ ಕೆಲಸಗಳನ್ನು ಮಾಡುತ್ತಿದ್ದಾರೆ.  ರಾಷ್ಟ್ರೀಯ ಸೇವಾ ಭಾರತಿಗೆ ಸಂಬಂಧಿಸಿದ ಈ ಸಂಸ್ಥೆಯ ಯಶಸ್ಸನ್ನು ನಾವು ಇದರಿಂದಲೇ ತಿಳಿಯಬಹುದು.ಹರಿಯಾಣದ ಹೆಣ್ಣುಮಕ್ಕಳು, ಕುಸ್ತಿಯಿಂದ ಹಿಡಿದು ಅಥ್ಲೆಟಿಕ್ಸ್ ವರೆಗೆ ತಮ್ಮ ವಿಜಯ ಪತಾಕೆಯನ್ನು ದೇಶದೆಲ್ಲೆಡೆ ಹಾರಿಸಿದ್ದಾರೆ. ಆದ್ದರಿಂದ ಭಾಲಿ ಆನಂದಪುರದ ಹೆಣ್ಣುಮಕ್ಕಳು ದುರ್ಗಾ ಕ್ರೀಡಾ ಕೇಂದ್ರದಲ್ಲಿ ತರಬೇತುದಾರರ ಮೇಲ್ವಿಚಾರಣೆಯಲ್ಲಿ ಫುಟ್ಬಾಲ್ ಮತ್ತು ಇತರ ಕ್ರೀಡೆಗಳನ್ನು ನಿಯಮಿತವಾಗಿ ಆಡುತ್ತಾರೆ. ಇದರ ಪರಿಣಾಮವಾಗಿ, ನಿಶು, ಮಂಜು ಮತ್ತು ಕಾಜಲ್ ಸೇರಿದಂತೆ 5 ಬಾಲಕಿಯರು ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದಾರೆ.ಪ್ರಾಂತ ಸೇವಾ ಪ್ರಮುಖ್ ಕೃಷ್ಣಕುಮಾರ್  "ಗ್ರಾಮದ ಅಗತ್ಯತೆಗೆ ತಕ್ಕಂತೆ  ಸೇವೆಯ ಹೊಸ ಆಯಾಮಗಳನ್ನು  ಜೋಡಿಸುತ್ತಾ ಹೋದರು.


 3ನೇ ತರಗತಿಯಿಂದ ಹನ್ನೆರಡನೇ ತರಗತಿಯ ಮಕ್ಕಳಿಗಾಗಿ, ವಿವೇಕಾನಂದ ಸಂಸ್ಕಾರ ಕೇಂದ್ರವನ್ನು 6ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಅಧ್ಯಯನ ಮಾಡಲು ಹವಾನಿಯಂತ್ರಿತ ಸಭಾಂಗಣವನ್ನು ನಿರ್ಮಿಸಲಾಯಿತು. ಅಲ್ಲಿಗೆ  ಹತ್ತಿರದ ಗ್ರಾಮಗಳಾದ ಗಡ್ಡಿ, ಖೇಡಿ, ಬನಿಯಾನಿ ಮತ್ತು ದೋಬ್‌ನಿಂದ ಯುವಕರು ಬಂದು ಓದುತ್ತಿದ್ದಾರೆ.ಶಹೀದ್ (ಹುತಾತ್ಮ) ಪೈಲಟ್ ಸಂದೀಪ ಪಲಡವಾಲ್ ಗ್ರಂಥಾಲಯದಲ್ಲಿ 5000 ಪುಸ್ತಕಗಳ ಭಂಡಾರ ಗ್ರಾಮದ ವಿದ್ಯಾರ್ಥಿಗಳಿಗೆ ಪುಸ್ತಕ-ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿದೆ. 


ಎಲ್ಲಾ ಪ್ರಮುಖ ಪತ್ರಿಕೆಗಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಯಾರಿ ನಡೆಸಲು ನಿಯತಕಾಲಿಕೆಗಳನ್ನು ಗ್ರಂಥಾಲಯಗಳಿಗೆ ತರಿಸಲಾಗುತ್ತಿದೆ.ಈ ದಿನಗಳಲ್ಲಿ ಬರೇಲಿ, ಸ್ಟೇಷನ್ ಮಾಸ್ಟರ್ ಮೋನು ರೋಸ್ ಅಥವಾ ಸಿಐಎಫ್ ಸಬ್ ಇನ್ಸ್‌ಪೆಕ್ಟರ್ ಸುಮಿತ್ ರೋಸ್‌ರಲ್ಲಿ  ಈ ಪುಸ್ತಕಗಳು ಮತ್ತು ತಕ್ಷಶಿಲಾ ಅಧ್ಯಯನ ಕೇಂದ್ರವು ಅವರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿವೆ. ಯುವಕರು, ವಯಸ್ಕರು ಮತ್ತು ಮಹಿಳೆಯರಿಗಾಗಿ ಹಲವಾರು ವರ್ಷಗಳಿಂದ ನಡೆಯುತ್ತಿರುವ ಸಂಘ ಮತ್ತು ಸಮಿತಿಯ ಶಾಖೆಯು ಗ್ರಾಮದಲ್ಲಿ ಸಾಮರಸ್ಯ ಮತ್ತು ಅಭಿವೃದ್ಧಿಯ ಹೊಸ ಕಥೆಯನ್ನು ಬರೆದಿದೆ.

ಜನವರಿ 2013 ರಂದು ಶಹೀದ್ ಸಬ್ ಲೆಫ್ಟಿನೆಂಟ್ ಅತುಲ್ ಪವಾರ್ ಕಂಪ್ಯೂಟರ್ ಸೆಂಟರ್ ನ್ನು ಪ್ರಾರಂಭಿಸಿದಾಗ, ಕೆಲವು ಕಂಪ್ಯೂಟರ್ ಗಳನ್ನು ಸೇವಾಭಾರತಿಯಿಂದ  ಮತ್ತು ಕೆಲವು  ಗ್ರಾಮದ ಜನರೇ ನೀಡಿದರು. ಕೇಶವ ಭವನಕ್ಕೆ ಭೂಮಿಯನ್ನು ಸಹ  ಪಂಚಾಯತಿಯೆ ಸಮಿತಿಗೆ ನೀಡಿತು. ಸಾವಯವ ಕೃಷಿಯನ್ನು ಉತ್ತೇಜಿಸಲು, ಬಲರಾಮ್ ಕಿಸಾನ್ ಸೇವಾ ಕೇಂದ್ರವನ್ನು ಪ್ರಾರಂಭಿಸಲಾಯಿತು. ಇದರ ಮೂಲಕ ಮನೆಮನೆಗಳಲ್ಲಿ ಸಾವಯವ ಗೊಬ್ಬರ ತಯಾರಿಸಲು ಗ್ರಾಮದಲ್ಲಿ ತರಬೇತಿ ನೀಡಲಾಗುತ್ತಿದೆ.ಮಹಿಳೆಯರಿಗಾಗಿ ನಡೆಯುತ್ತಿವ ರಾಣಿ ಲಕ್ಷ್ಮೀಬಾಯಿ ಹೊಲಿಗೆ ಕೇಂದ್ರದ ವಿಶೇಷತೆಯೆಂದರೆ, ಒಂದು ಬ್ಯಾಚ್ ಪೂರ್ಣಗೊಂಡ ನಂತರ ಅದು ಹಳ್ಳಿಯ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತದೆ.


ಇದರಿಂದಾಗಿ ಅಲ್ಲಿನ ಮಹಿಳೆಯರು ಸುಲಭವಾಗಿ ಹೊಲಿಗೆ ಕಲಿಯಬಹುದು ಸೇವೆ ಪಡೆದವರಲ್ಲಿ ಸೇವಾ ಭಾವದ ಜಾಗೃತಿ ಮಾಡುವುದು ಸಂಘದ ಮೂಲ ಮಂತ್ರ. ಅದನ್ನು ನಾವು ಭಾಲಿ ಆನಂದಪುರದಲ್ಲಿ ನೋಡಬಹುದು. ರೈಲ್ವೆಯಲ್ಲಿ ನೌಕರಿ ಮಾಡುತ್ತಿರುವ ಸಮುಂದರ್ ಗಿಲೌಡ್ ಆಗಿರಲಿ ಅಥವಾ ಬಾಲಕಿಯರ ಕೋಚ್ ನರೇಂದ್ರ ಪಲಡ್ವಾಲ್ ಆಗಿರಲಿ, ಎಲ್ಲಾ ಯುವಕರೂ ಸಹ ಗ್ರಾಮದಲ್ಲಿ ನಡೆಯುತ್ತಿರುವ ಈ ಸೇವಾ ಕಾರ್ಯಗಳಿಗೆ ಸಮಯವನ್ನು ನೀಡುತ್ತಾರೆ.ಜಲ ಸಂರಕ್ಷಣೆಯಿಂದ ಹಿಡಿದು ವೃಕ್ಷಾರೋಪಣದವರೆಗೆ ಪ್ರತಿಯೊಂದು ಚಟುವಟಿಕೆಯಲ್ಲೂ ಗ್ರಾಮಸ್ಥರ ಸಂಪೂರ್ಣ ಬೆಂಬಲ ದೊರೆಯುತ್ತದೆ ಎಂದು ಈ ಸೇವಾಕಾರ್ಯಗಳ ಸೂತ್ರಧಾರ ಅನೂಪ್ ಜೀ  ಹೇಳುತ್ತಾರೆ. ಕಳೆದ 5 ವರ್ಷಗಳಿಂದ ನಡೆಯುತ್ತಿರುವ ಗ್ರಾಮೋತ್ಸವವು ವಿವಿಧ ಬಣಗಳ ನಡುವೆ ವಿಭಜನೆಯಾಗಿರುವ ಭಾಲಿ ಆನಂದಪುರವನ್ನು ಒಂದುಗೂಡಿಸಿದೆ ಎಂದು ಅವರು ಹೇಳುತ್ತಾರೆ.


ಸಂಪರ್ಕ... ಅನೂಪ್ ಸಿಂಹಜೀ 

9034729351


884 Views
अगली कहानी