सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಜೀವನದಲ್ಲಿ ಕಠಿಣ ಪರಿಶ್ರಮದ ನಿಯಮಗಳು.... ರಾಜಸ್ಥಾನ, ಅನೂಪಗಢ.

ದಕ್ಷಿಣ

parivartan-img

 ಹಣೆಯಲ್ಲಿ ಸಿಂಧೂರ, ಕೈಯಲ್ಲಿ ಮೆಹಂದಿ ಮತ್ತು ದಂಪತಿಗಳಲ್ಲಿ ಅಲಂಕರಿಸಲ್ಪಟ್ಟ ಕೆಂಪು ಜರಿಯಂಚಿನ ಕಸೂತಿಯ ಬಟ್ಟೆಯಲ್ಲಿ ಅಂದವಾಗಿ ಹೆಣೆಯಲಾದ ರಾಖಿ......ಉಷಾ ಮತ್ತು ಸೀಮಾ ಅವರ ಸಂತೋಷವು ಇಂದು ಜೀವನದ ಹೊಸ ಮಜಲುಗಳನ್ನು ತೆರೆದುಕೊಳ್ಳುತ್ತಿದೆ. ಒಮ್ಮೆ ಸೇವಾ ಭಾರತಿ ಅನೂಪಗಢ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧುಗಳಾದ ಈ ಯುವತಿಯರು ಭಿಕ್ಷೆ ಬೇಡಲು ಹೋಗುತ್ತಿದ್ದ ಅದೇ ಗಲ್ಲಿಗಳಿಂದ ಈ ಯುವತಿಯರ ಮದುವೆಯ ಡೋಲಿಗಳು ಎದ್ದು ಸಂಭ್ರಮಿಸಿದಾಗ ಅವರ ತಾಯಿತಂದೆಯರು ಮಾತ್ರವಲ್ಲದೆ ಆ ಮೊಹಲ್ಲಾದಲ್ಲಿರುವ ಎಲ್ಲರೂ ಸೇವಾಭಾರತಿಯ ಕಾರ್ಯಕರ್ತರಿಗೆ ಆಶೀರ್ವಾದದ ಸುರಿಮಳೆಗೈಯ್ದರು. ಅನೂಪಗಢ ಸೇವಾಭಾರತಿಯ ಸ್ವಾವಲಂಬನೆಯ ಕೇಂದ್ರವು ಭಿಕ್ಷೆ ಬೇಡುತ್ತಿದ್ದ ಈ ಕುಟುಂಬದ ಯುವತಿಯರಿಗೆ ಹೊಲಿಗೆ, ಬ್ಯೂಟಿ ಪಾರ್ಲರ್ ಮತ್ತು ಇತರ ಉದ್ಯೋಗ ತರಬೇತಿ ನೀಡಿ ಆತ್ಮನಿರ್ಭರತೆಯ ದಾರಿ ತೋರಿಸಿದೆ.


ಆಹಾರಕ್ಕಾಗಿ ಕೈ ಚಾಚುತ್ತಿದ್ದ ಸೀಮಾ ಯಾರ ಮನೆಯಲ್ಲಿ ಅಪಮಾನವನ್ನು ಸಹಿಸುತ್ತಿದ್ದಳೋ ಅದೇ ಮನೆಯ ವಧುವಿನ ಕನಸುಗಳನ್ನು ಮೆಹಂದಿಯಿಂದ ಸಿಂಗರಿಸಲು ಹೋಗುತ್ತಿದ್ದಾಳೆ. ಹಲವಾರು ವರ್ಷಗಳಿಂದ ಮನೆಮನೆಯಿಂದ ಧಾನ್ಯಗಳನ್ನು ಬೇಡುತ್ತಿದ್ದ ಪೂನಂಗೆ ಧಾನ್ಯ ಎಂದೇ ಹೆಸರಾಗಿ ಹೋಗಿತ್ತು. ಇಂದು ಅದೇ ಪೂನಂ ಸ್ವಾವಲಂಬನ ಕೇಂದ್ರದಲ್ಲಿ ಹೊಲಿಗೆ ಕಲಿತ ನಂತರ \"ಪೂನಂ ಬೊಟಿಕ್...\" ತೆರೆಯಲು ತಯಾರಿ ನಡೆಸಿರುವಳು.

ಅನೂಪಗಢದಲ್ಲಿ ಸಾನ್ಸಿ, ಬಿಹಾರಿ, ಧೋಲಿ, ಬಾಜಿಗರ್ ವಸತಿಯ ಸುಮಾರು 110 ಕುಟುಂಬಗಳಿವೆ. ಯಾರು ಒಂದು ಕಾಲದಲ್ಲಿ ಶಿಕ್ಷಣ, ಉದ್ಯೋಗ ಮತ್ತು ಸಭ್ಯ ನಾಗರಿಕ ಸಮಾಜದಿಂದ ದೂರವಿದ್ದರೋ ಅವರು ಬೀದಿಬದಿಗಳಲ್ಲಿ ಹಿಟ್ಟು, ಬೇಳೆಕಾಳುಗಳು ಮತ್ತು ಅಕ್ಕಿಯನ್ನು ಕಸದಲ್ಲಿ ಹುಡುಕುತ್ತಾ, ಬರಿದಾದ ಕೊಳಕು ಜೀವನವನ್ನು ಸಾಗಿಸುತ್ತಿದ್ದರು. ಇಂದು, ಸೇವಾಭಾರತಿ ಜೋಧ್ಪುರ್ ಪ್ರಾಂತದ, ಸ್ವಾವಲಂಬನೆಯ ಪ್ರಮುಖರಾದ ಶ್ರೀ ದಿನಕರ್ ಪಾರೀಕ್ ಮತ್ತು ಕ್ಷೇತ್ರೀಯ ಪ್ರಶಿಕ್ಷಣ ಪ್ರಮುಖರಾದ ಶ್ರೀ ಗೋವಿಂದ್ ಕುಮಾರ್ ಜಿ ಅವರ ಏಳೆಂಟು ವರ್ಷಗಳ ಪ್ರಯತ್ನದಿಂದ, ಈ ಎಲ್ಲಾ ಕುಟುಂಬಗಳು ಜೀವನದಲ್ಲಿ ಶ್ರಮವಹಿಸಿ ಸ್ವಾಭಿಮಾನದಿಂದ ಬದುಕಲು ಕಲಿತಿದ್ದಾರೆ.

ಹೂವಿನ ಗಿಡಗಳನ್ನು ನೆಡುವವನಿಗೆ ಹೂವಿನ ಪರಿಮಳವು ಎಷ್ಟು ದೂರದ ತನಕ ಹರಡುತ್ತದೆ ಎಂದು ತಿಳಿದಿರುವುದಿಲ್ಲ. ಎಂಟನೇ ತರಗತಿಯಲ್ಲಿ ಓದುತ್ತಿರುವ ಅನಾಥನಾದ ರಾಮನು, ಸ್ವಯಂಸೇವಕರ ಸಹಾಯದಿಂದ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆದುಕೊಂಡು ತನ್ನ ಕೌಶಲ್ಯದಿಂದ ಭವಿಷ್ಯದ ದಿಕ್ಕನ್ನು ನಿರ್ಧರಿಸಿಕೊಂಡಿದ್ದಾನೆ. ಅಧ್ಯಯನದ ಜೊತೆಗೆ, ಗ್ಯಾರೇಜ್‌ನಲ್ಲಿ ವಾಹನಗಳ ಆಸನಗಳನ್ನು ಮಾಡುವ ಕೆಲಸದಿಂದ ಅವನು ತಿಂಗಳಿಗೆ 7000 ರೂಪಾಯಿ ಸಂಪಾದಿಸುತ್ತಿದ್ದಾನೆ. ಇದೇ ಸೇವಾಬಸ್ತಿಯ ಸೀಮಾ ಫಿಸಿಯೋಥೆರಪಿಸ್ಟ್ ತರಬೇತಿಯನ್ನು ಪಡೆಯುತ್ತಿದ್ದಾಳೆ. ಸುನೀತಾ ಬಿ.ಎ. ಕಲಿಯುತ್ತಾ ಮಕ್ಕಳಿಗೆ ಟ್ಯೂಷನ್ ಕೊಡುತ್ತಿದ್ದಾಳೆ.


ಅಜ್ಞಾನದ ಅಂಧಕಾರದಲ್ಲಿ ಶರಾಬಿನ ಮತ್ತಿನಲ್ಲಿ ಮುಳುಗಿ, ಎರಡು ಹೊತ್ತಿನ ಊಟದ ಹುಡುಕಾಟದಲ್ಲಿದ್ದ ಈ ಸೇವಾಬಸ್ತಿಯ ಜನರು ಮಕ್ಕಳಿಗೆ ಕಲಿಸುವ ಆಲೋಚನೆಯಿಂದ ದೂರವಾಗಿದ್ದರು ಎಂದು ಗೋವಿಂದಜೀ ನುಡಿಯುತ್ತಾರೆ. ಕಾರ್ಯಕರ್ತರ ನಿರಂತರ ಪ್ರಯತ್ನದಿಂದ, 250ಕ್ಕೂ ಹೆಚ್ಚು ಮಕ್ಕಳು ಈಗ ಹತ್ತಿರದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಕಿಶೋರಿ ಕೇಂದ್ರಗಳಲ್ಲಿ ಹದಿಹರೆಯದ ಬಾಲಕಿಯರ ತರಬೇತಿಯ ಬಗ್ಗೆ ವಿಶೇಷ ಗಮನ ಹರಿಸುತ್ತಿರುವ ಅನೂಪಗಢ ತಾಲೂಕಿನ ಮಹಿಳಾ ಮಂಡಲಿಯ ಅಧ್ಯಕ್ಷೆಯಾದ ಶ್ರೀಮತಿ ಜಯ ವಿಜಯ ಚೌಧರಿಯವರು ತಮ್ಮ ಸೇವಾಕಾರ್ಯದ ಓಡಾಟದಲ್ಲಿ ಅನೇಕ ಸೇವಾಬಸ್ತಿಯ ಮಹಿಳೆಯರಲ್ಲಿ ಉಂಟಾದ ಸುಧಾರಣೆಗೆ ಸಾಕ್ಷಿಯಾಗಿದ್ದಾರೆ. ಸೇವಾಭಾರತಿಯ ಸ್ವಾವಲಂಬನೆ ಕೇಂದ್ರದ ಮೂಲಕ ವರ್ಷಪೂರ್ತಿ 17 ಪ್ರಕಲ್ಪಗಳು ಇಲ್ಲಿ ನಡೆಯುತ್ತಿವೆ. ಇಲ್ಲಿ ಮಹಿಳೆಯರು ಹೊಲಿಗೆಯನ್ನು ಕಲಿಯುತ್ತಾ, ಬ್ಯಾಗ್‌, ಡೈಪರ್ಸ್, ಬಂಟಿಗ್ಸ್, ಧ್ವಜ ಮೊದಲಾದವುಗಳನ್ನು ಹೊಲಿಯುತ್ತಾರೆ. ಸೇವಾಬಸ್ತಿಯ ಮಹಿಳೆಯರು ಮಳೆಗಾಲದಲ್ಲಿ ರಕ್ಷೆಗಳನ್ನು, ದೀಪಾವಳಿಯ ಸಂದರ್ಭದಲ್ಲಿ ದೀಪ ಮತ್ತು ಲಕ್ಷ್ಮೀ, ಗಣೇಶರನ್ನು ತಯಾರಿಸುತ್ತಾ ಕುಟುಂಬಕ್ಕೆ ಆರ್ಥಿಕ ಕೊಡುಗೆ ನೀಡುತ್ತಿದ್ದಾರೆ.

ಈ ಕಥೆ 8 ವರ್ಷಗಳ ಹಿಂದೆ ಸಂಘದ ಸ್ವಯಂಸೇವಕ ದಿನಕರ್ ಪಾರೀಕ್ ಅನೂಪಗಢದಿಂದ ದೆಹಲಿಗೆ ಬಸ್‌ನಲ್ಲಿ ಹೋಗುತ್ತಿದ್ದಾಗ ಪ್ರಾರಂಭವಾಗುತ್ತದೆ. ಆಗ ಅವರು ಕಿಟಕಿಯಿಂದ ಇಬ್ಬರು ಮುಗ್ಧ ಮಕ್ಕಳು ಕಸದ ತೊಟ್ಟಿಯಿಂದ ಕೆಲವು ಆಹಾರ ಪದಾರ್ಥಗಳನ್ನು ಹೆಕ್ಕುವುದನ್ನು ನೋಡಿ ಅವರು ಅಲ್ಲಿಯೇ ಬಸ್ಸಿನಿಂದ ಇಳಿದರು. ಅವರ ದುಃಖ ಮತ್ತು ಈ ಸೇವಾಬಸ್ತಿಯ ಜನರಿಗೆ ಏನಾದರೂ ಮಾಡಬೇಕೆಂಬ ಬಯಕೆಯೇ ಒಂದು ದೀರ್ಘ ಕಾಲೀನ ಸೇವಾಯಾತ್ರೆಗೆ ನಾಂದಿಯಾಯಿತು. ಭಜನ್ ಸಂಧ್ಯಾ ಮತ್ತು ಸಂಸ್ಕಾರದ ಪಾಠದಿಂದ ಆರಂಭವಾದ ಈ ಕಾರ್ಯವು ಇಂದು ಮನೆ-ಮನೆಯಲ್ಲಿ ಸ್ವಾವಲಂಬನೆಯ ಮೂಲಕ ಗೌರವದ ಬೆಳಕನ್ನು ಮೂಡಿಸುತ್ತಿದೆ. ದಿನಕರ ಪಾರೀಕ್ ಮತ್ತು ಅನೂಪಗಢ ತಾಲೂಕಿನ ಅಧ್ಯಕ್ಷರಾದ ರಾಮರತ್ನ ಅವರ ಪ್ರಯತ್ನದಿಂದಾಗಿ, ಈ ಸೇವಾಬಸ್ತಿಯಲ್ಲಿ ಕಾನೂನು ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗಿದ್ದು, ಈ ಕುಟುಂಬಗಳಿಗೆ ಮನ್ನಣೆ ದೊರಕಿದೆ.

ನಾಲ್ಕು ಹೆಣ್ಣು ಮಕ್ಕಳ ಜವಾಬ್ದಾರಿ ಹೊತ್ತಿರುವ ವಿಕಲಚೇತನರಾದ ಪವನ್ ಅವರಂತಹ ಇತರ 5 ಕುಟುಂಬಗಳಿಗೆ ಸರ್ಕಾರದ ಯೋಜನೆಗಳಿಂದ ಪ್ರಯೋಜನವಾಗಿದೆ. ನೈಪುಣ್ಯ ವಿಕಾಸ ಯೋಜನೆಯಲ್ಲಿ ಪುರುಷರಿಗೆ ಕ್ಷೌರಿಕ ತರಬೇತಿ ನೀಡಲಾಯಿತು. ಇಂದು ಅವರು ಜೈಲು ಕೈದಿಗಳು, ಬಿಎಸ್ಎಫ್ ಸಿಬ್ಬಂದಿ ಮತ್ತು ಇತರ ಜನರಿಗೆ ಕ್ಷೌರ ಮಾಡುವ ಮೂಲಕ ಗೌರವಯುತ ಜೀವನ ನಡೆಸುತ್ತಿದ್ದಾರೆ. ಅಂಗವಿಕಲರಾದ ಪವನ್ ಅವರು ಸಣ್ಣ ಕ್ಷೌರದ ಅಂಗಡಿಯನ್ನು ಸಹ ತೆರೆದಿದ್ದಾರೆ.ನೀವು ಹೆಜ್ಜೆ ಹಾಕಿದರೆ ಸಾಕು, ದಾರಿಯು ತನ್ನಷ್ಟಕ್ಕೆ ಕಾಣಿಸಿಕೊಳ್ಳಲಾರಂಭಿಸುತ್ತದೆ. ಸೂರತ್ ಗಢ ಜಿಲ್ಲೆಯ ಸಹಸಚಿವ ಸೋಮದತ್ ಜಿ ಕಚೋರಿಯಾ ಹೇಳುತ್ತಾರೆ...


ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ, ಕೆಲಸ ಮಾಡುವಾಗ ಅಮಲು ಪದಾರ್ಥ ಸೇವಿಸುವುದಿಲ್ಲ ಮತ್ತು ಪ್ರತಿ ತಿಂಗಳು ಒಂದು ಸಾವಿರ ರೂಪಾಯಿಗಳನ್ನು ಖಾತೆಯಲ್ಲಿ ಉಳಿಸುತ್ತೇವೆ, ಎಂಬ ಈ ಮೂರು ಷರತ್ತುಗಳನ್ನು ಪೂರೈಸಿದ ಅನೇಕ ಯುವಕರಿಗೆ ಕೈಗಾಡಿಗಳನ್ನು ವಿತರಿಸಲಾಗಿದೆ. ಅವರಲ್ಲಿ ಡ್ರಮ್ಸ್ ಬಾರಿಸುವ, ಚಪ್ಪಲಿ ಹೊಲಿಯುವ, ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸುವ ರಾಕೇಶ್, ಕಾಲೂರಾಮ್, ಓಮ್ ಜಿ, ಮತ್ತು ಪವನ್ ಢೋಲಿ ಸೇರಿದ್ದಾರೆ,

ಶ್ರೀಗಂಗಾನಗರ ವಿಭಾಗದ ಮಾತೃಮಂಡಳಿಯ ಸಹವಿಭಾಗ ಸಂಯೋಜಕಿಯಾದ ಶ್ರೀಮತಿ ಭಗವತೀಜೀ ಪಾರೀಕ್ ಅವರ ಉಪಕ್ರಮ ಮತ್ತು ಚಿಂತನೆಯು ಇಂದು ಈ ಯುವಕರು ಸ್ವಾಭಿಮಾನದಿಂದ ಕೈಗಾಡಿಯನ್ನು ನಡೆಸುವ ಮೂಲಕ ತಮ್ಮ ಕುಟುಂಬಗಳಿಗೆ ಊಟ ಕೊಡುತ್ತಿದ್ದಾರೆ. ಕಬ್ಬಿಣದ ಕೆಲಸಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದ ಕಮ್ಮಾರರಿಗೆ ಕಿಸಾನ್ ಕಾರ್ಡ್ ಮಾಡಿಸಿ ಕೊಡಲಾಯಿತು. ಈಗ ಅವರು ಕೃಷಿ ಯಂತ್ರೋಪಕರಣಗಳನ್ನು ತಯಾರಿಸುವ ಮೂಲಕ ಸ್ವಾಭಿಮಾನದ ಬದುಕು ಸಾಗಿಸುತ್ತಿದ್ದಾರೆ.

ಮನಸ್ಸಿನಲ್ಲಿ ಒಳ್ಳೆಯ ಸಂಕಲ್ಪ ಮತ್ತು ಪೂರ್ಣ ಪರಿಶ್ರಮ ಇದ್ದರೆ, ಸಂಕಲ್ಪ ಈಡೇರಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಯಾರ ಪರಿಸ್ಥಿತಿಯನ್ನೇ ಆಗಲಿ ಬದಲಾಯಿಸಲು ಸಮಾಜದ ಸಹಭಾಗಿತ್ವ ಮತ್ತು ಉತ್ತಮ ಮಾರ್ಗದರ್ಶನ ಸಾಕು. 2019 ರ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಾವರ್ಗವನ್ನು ಅನೂಪಗಢದಲ್ಲಿ ನಡೆಸಿದಾಗ, ಇತರರ ಮುಂದೆ ಆಹಾರಕ್ಕಾಗಿ ಕೈ ಚಾಚುತ್ತಿದ್ದ ಅದೇ ಸ್ವಾವಲಂಬಿ ಕುಟುಂಬಗಳವರು 100 ಸ್ವಯಂಸೇವಕರಿಗೆ 7 ದಿನಗಳ ಕಾಲ ಬಹಳ ಉತ್ಸಾಹದಿಂದ ಭೋಜನ ತಯಾರಿಸಿದರು. ಈ ಸೇವಾಬಸ್ತಿಯು ಎಲ್ಲಾ ಭೇದಭಾವಗಳನ್ನು ಮರೆತು ಸಾಮರಸ್ಯ ಮತ್ತು ಸ್ವಾವಲಂಬನೆಯಲ್ಲಿ ಮುಂಚೂಣಿಯಲ್ಲಿದೆ.

482 Views
अगली कहानी