सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಧೈರ್ಯಶಾಲಿ ಸ್ವಯಂಸೇವಕರ ಮುಂದೆ ನಿರ್ದಯ ಬೆಂಕಿಯೂ ಶರಣಾಗಲೇಬೇಕು!

ದಕ್ಷಿಣ

parivartan-img

ಭಾರತದ ವಾಣಿಜ್ಯ ನಗರಿ ಮುಂಬಯಿಯ ಕಂಡಿವಾಲಿ ಪ್ರದೇಶದಲ್ಲಿರುವ ದಾಮು ನಗರದ ಕೊಳೆಗೇರಿಗಳಲ್ಲಿ ಆಹ್ಲಾದಕರ ಮಧ್ಯಾಹ್ನದಂತೆ ತೋರುತ್ತಿತ್ತು, ಆದರೆ ವಾಸ್ತವಿಕವಾಗಿ ಅದು ಮಾರ್ದವತೆಯ ಸೊಬಗಾಗಿರಲಿಲ್ಲ!! ಮಾರಣಾಂತಿಕ ಬೆಂಕಿಯ ಆಹುತಿಯಲ್ಲಿ ಈ ಕೊಳೆಗೇರಿಯ ನಿವಾಸಿಗಳ ಬದುಕನ್ನು ಬೂದಿಯಾಗಿಸಿ, ಅವರ ಕನಸುಗಳನ್ನು ನುಚ್ಚುನೂರು ಮಾಡಿದ ದುರದೃಷ್ಟಕರ ದಿನವಾಗಿತ್ತು. !!

2014ರ ಡಿಸೆಂಬರ್ 7, ಮಧ್ಯಾಹ್ನ 12.30ಕ್ಕೆ ಎಲ್ಪಿಜಿ ಸಿಲಿಂಡರ್ ಸ್ಫೋಟದಿಂದಾಗಿ ಮಾರಕ ಬೆಂಕಿ ಕಾಣಿಸಿಕೊಂಡಿತು. ದಾಮು ಕೊಳೆಗೇರಿ ನಗರವಿಡೀ ಬೆಂಕಿಯ ಜ್ವಾಲೆಯ ಹಿಡಿತಕ್ಕೆ ಸಿಕ್ಕಿಹೋಯಿತು. ಕಣ್ಣು ಮಿಟುಕಿಸುವುದರಲ್ಲಿ ಡಜನ್ನುಗಟ್ಟಲೆ ಗುಡಿಸಲುಗಳಿಗೆ ಬೆಂಕಿ ಆವರಿಸಿತು ಮಾತ್ರವಲ್ಲದೆ ಮೇಲಿಂದ ಮೇಲೆ ಹಲವಾರು ಸ್ಫೋಟಗಳು ಸಂಭವಿಸಿದವು. ಜನರಿಗೆ ಇದರ ಸುಳಿವೂ ಇರಲಿಲ್ಲ. ರಾಕ್ಷಸನಂತೆ ಎರಗುತ್ತಿದ್ದ ಬೆಂಕಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಲಭ್ಯವಿರುವ ಮಾರ್ಗದಿಂದ ಆಚೀಚೆ ಓಡುವುದನ್ನು ಹೊರತುಪಡಿಸಿ, ಮತ್ತೇನಾದರೂ ಮಾಡಬೇಕೆಂಬುದೂ ತೋಚುತ್ತಿರಲಿಲ್ಲ!

ಅಲ್ಲಿ ಇನ್ನೇನು ಎಲ್ಲವೂ ಬೂದಿಯಾಗಿಬಿಡುತ್ತದೆ ಎಂಬ ಅರಿವಿನ ಆ ಭಯಾನಕ ಕ್ಷಣದಲ್ಲಿ, ಆರ್‌ಎಸ್‌ಎಸ್‌ನ ಸ್ವಯಂಸೇವಕರು ಮಾಡಿದ್ದು ನಿಜಕ್ಕೂ ಅತ್ಯಂತ ಧೈರ್ಯದ ಹಾಗೂ ಶ್ಲಾಘನೀಯ ಕಾರ್ಯ.


"ದಾಮು ನಗರದ ಬಳಿಯ ಶಾಲೆಯಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿ ನಾವು ಪಾಲ್ಗೊಳ್ಳುತ್ತಿದ್ದಾಗ ಕಿವಿ ಕಿವುಡಾಗುವಂಥ ಸ್ಫೋಟವನ್ನು ಕೇಳಿದೆವು ಮತ್ತು ನಿಖರವಾಗಿ ಏನಾಯಿತು ಎಂದು ವಿಚಾರಿಸಲು ನಾವು ಹೊರಬಂದೆವು" ಎಂದು ಆರ್ ಎಸ್ ಎಸ್ ನ ಸ್ವಯಂಸೇವಕ ಶಶಿಭೂಷಣ್ ಶರ್ಮಾ ನೆನಪಿಸಿಕೊಳ್ಳುತ್ತಾರೆ. ತಮ್ಮೊಂದಿಗಿದ್ದ ಇತರ ಸ್ವಯಂಸೇವಕರಾದ ಉಮೇಶ್ ದಾಮ್ಲೆಪ್ರದೀಪ್ ಶರ್ಮಾಚಂದ್ ರೈನಾಸಂಜಯ್ ಖೇತನ್ ಮತ್ತು ಮನೋಜ್ ಅವರೊಂದಿಗೆ ಸ್ಫೋಟದ ದಿಕ್ಕಿನತ್ತ ಓಡಿದಾಮು ನಗರದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿ ಕೊಳೆಗೇರಿಗೆ ಧಾವಿಸಿದರು.


 ಕೊಳೆಗೇರಿಯ ಪರಿಸ್ಥಿತಿ ತುಂಬಾ ಭಯಾನಕವಾಗಿತ್ತು. ನಿರ್ದಯ ಬೆಂಕಿಯು ಅಲ್ಲಿರುವ ಎಲ್ಲವನ್ನೂ ನುಂಗುತ್ತಿತ್ತು. ಅದೃಷ್ಟಹೀನ ಕುಟುಂಬಸ್ಥರು ತಮ್ಮ ಅದೃಷ್ಟವೆಲ್ಲ ಬೂದಿಯಲ್ಲಿ ನೆಲಸಮವಾಗುವುದನ್ನು ಕಣ್ಣಾರೆ ನೋಡುತ್ತ ನಿಂತಿದ್ದರು. ಏತನ್ಮಧ್ಯೆ ಅಲ್ಲಿದ್ದ ಸಿಲಿಂಡರ್ ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಸ್ವಯಂಸೇವಕ ಶಶಿಯು ವೇಗವಾಗಿ ಹಾರಿ ಅದನ್ನು ಜನರಿಂದ ದೂರ ಎಸೆದನು. ಅದೇ ಸಮಯದಲ್ಲಿ ನೆಲದ ಮೇಲೆ ಮಲಗಿದ್ದ ಹಾಗೂ ಸಹಾಯಹಸ್ತಕ್ಕಾಗಿ ಹಾತೊರೆಯುತ್ತಿದ್ದ ಅಸಹಾಯಕ ಅಂಗವಿಕಲ ವೃದ್ಧೆಯೊಬ್ಬಳು ಅವನ ದೃಷ್ಟಿಯನ್ನು ಸೆಳೆದಳು. ಶಶಿ ಶರ್ಮಾ ಆಕೆಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ.

ಆರ್ ಎಸ್ಎಸ್ ನ ಪೂರ್ಣಾವಧಿ ಕಾರ್ಯಕರ್ತ ಹಾಗೂ ಜನ್ ಕಲ್ಯಾಣ್ ಸಮಿತಿಯ ಸಂಘಟನಾ ಮಂತ್ರಿಯಾದ ಸಹದೇವ್ ಜೀ ಅವರ ಪ್ರಕಾರಈ ಅಗ್ನಿ ಅವಘಡ ನಡೆದ ಒಂದು ಗಂಟೆಯೊಳಗೆ 350 ಸ್ವಯಂಸೇವಕರು ದಹಿಸಾರ್ ನಿಂದ ಜೋಗೇಶ್ವರಿ ಪ್ರದೇಶಕ್ಕೆ ಬಂದು ರಕ್ಷಣಾ ಕಾರ್ಯದಲ್ಲಿ ಧುಮುಕಿದರು. ದುರಂತದ ಸ್ಥಳದಲ್ಲಿ ಎಪ್ಪತ್ತು ಮಕ್ಕಳು ಕಾಣೆಯಾಗಿದ್ದರು. ಸ್ವಯಂಸೇವಕರು ವ್ಯಾಪಕ ಶೋಧ ನಡೆಸಿದರು ಮತ್ತು ಕಾಣೆಯಾದ ಎಲ್ಲ ಮಕ್ಕಳನ್ನು ಹುಡುಕಿ ಅವರ ಹೆತ್ತವರಿಗೆ ಒಪ್ಪಿಸಿದರು.





ಈ ದುರಂತದಲ್ಲಿ 2 ಮಂದಿ ಸತ್ತರು ಮತ್ತು 1250 ಮನೆಗಳು ನೆಲಸಮಗೊಂಡವು. ನಿರಾಶ್ರಿತರಿಗಾಗಿ ಲೋಖಂಡ್ವಾಲಾದ ಮೈದಾನದಲ್ಲಿ ವಸತಿಗಳನ್ನು ನಿರ್ಮಿಸಲಾಯಿತು ಆದರೆ ಯಾರೂ ಅಲ್ಲಿಗೆ ಹೋಗಲು ಸಿದ್ಧರಿರಲಿಲ್ಲ. ಒಮ್ಮೆ ಅವರಿಗೆಲ್ಲ ಆಶ್ರಯವಾಗಿದ್ದ ಮನೆಗಳು ಈಗ ಚಿತಾಭಸ್ಮದ ರಾಶಿಯಲ್ಲಿ ಹೂತುಹೋಗಿದ್ದವು. ಆಡಳಿತ ವ್ಯವಸ್ಥೆಯು ಸಿದ್ಧಪಡಿಸುತ್ತಿದ್ದ ಪರಿಹಾರಧನದ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಸೇರಿಸಬೇಕಾಗಿದ್ದುದೂ ಅವರೆಲ್ಲರೂ ಅಲ್ಲೇ ಉಳಿಯಲು ದೊಡ್ಡ ಕಾರಣ!! ಆರ್ ಎಸ್ಎಸ್ ಬೃಹತ್ ಪರಿಹಾರ ಡ್ರೈವ್ ನ್ನು ಕೈಗೆತ್ತಿಕೊಂಡಿತು. ಅದು 5 ದಿನಗಳವರೆಗೆ ಮುಂದುವರಿಯಿತು. ಒಟ್ಟಾರೆ 35 ಲಕ್ಷವನ್ನು ಸಂಗ್ರಹಿಸಿ ದೈನಂದಿನ ಅಗತ್ಯದ ಆಹಾರ ಪ್ಯಾಕೆಟ್‌ಗಳು ಮತ್ತು ಸ್ಮಾರ್ಟ್ ಕಿಟ್‌ಗಳನ್ನು ವಿತರಿಸಲು ಖರ್ಚು ಮಾಡಲಾಯಿತು.

"ಆ ಅಗ್ನಿ ದುರಂತದ ಸಮಯದಲ್ಲಿ ಸ್ವಯಂಸೇವಕರು ತೋರಿಸಿದಂತಹ ಧೈರ್ಯ ಮತ್ತು ಮಾನವೀಯ ಮೌಲ್ಯಗಳನ್ನು ನಾನು ಮತ್ತೆಲ್ಲೂ ನೋಡಿರಲಿಲ್ಲ" ಎಂದು ಆ ಸಮಯದಲ್ಲಿ ಅಲ್ಲಿನ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡಿದ್ದ ಶ್ರೀ ಪ್ರಶಾಂತಿ ಮಾನೆ ಹೇಳುತ್ತಾರೆ. ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳನ್ನು ಶೋಧಿಸಿ, ಪರಿಹಾರಧನದ ಚೆಕ್ಕುಗಳನ್ನು ಹಸ್ತಾಂತರಿಸಲು ಸಹ ಸ್ಥಳೀಯ ಆಡಳಿತವು ಸ್ವಯಂಸೇವಕರ ಸಹಾಯವನ್ನು ಪಡೆದುಕೊಂಡಿತು. ಎಲ್ಲಾ ಹಂತದ ಜನರು ಪರಿಹಾರಕ್ಕಾಗಿ ದೇಣಿಗೆ ನೀಡಲು ಮುಂದೆ ಬಂದರು. "ಒಂದು ದಿನ ಬಡ ವೃದ್ಧೆಯೊಬ್ಬಳು ಪರಿಹಾರ ಕೇಂದ್ರಕ್ಕೆ ಬಂದು ತನ್ನ ಚಿಂದಿ ಚೀಲದಲ್ಲಿದ್ದ ಇಡೀ ಅಕ್ಕಿಯನ್ನು ದಾನ ಮಾಡಿದಳು" ಎಂದು ಶಶಿ ಜಿ ಹೇಳುತ್ತಾರೆ, ಅದು ಅವರನ್ನು ನಿಜವಾಗಿಯೂ ಭಾವುಕರನ್ನಾಗಿ ಮಾಡಿದ ಕ್ಷಣವೆಂದು ಉದ್ಗರಿಸುತ್ತಾರೆ.!!


ಸಂಪರ್ಕ - ಸಹದೇವ ಸೋನಮಾನೆ

9967897850


2040 Views
अगली कहानी