सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಮಮತೆಯ ನೆರಳು- ಸುರ್ಮನ್

ದಕ್ಷಿಣ

parivartan-img

ಕುಂಗ್ಫು ಮತ್ತು ಕ್ರಿಕೆಟ್ ನಡುವೆ ಯಾವುದೇ ಹೋಲಿಕೆ ಇಲ್ಲವಾದರೂ, ಪೂಜಾ, ರಾಹುಲ್, ಅಮನ್ ಮತ್ತು ಗುಡ್ಡು ಇವರ ನಡುವೆ ಹೋಲಿಕೆ ಇತ್ತು. ಪೂಜಾ ಜೂನಿಯರ್ ಒಲಂಪಿಯಾಡ್ ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರೆ, ರಾಹುಲ್, ಅಮನ್ ಮತ್ತು ಗುಡ್ಡು ಚೆನ್ನೈನಲ್ಲಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಸ್ಫರ್ಧೆಯಲ್ಲಿ ಭಾಗವಹಿಸುವ ಮೂಲಕ ಹೆಸರು ಗಳಿಸಿದ್ದರು. ಹೀಗೆ ಈ ಭಿನ್ನ-ಭಿನ್ನ ಕ್ರೀಡೆಗಳ ಉದಯೋನ್ಮುಖ ತಾರೆಗಳನ್ನು ಒಂದುಗೂಡಿಸಿರುವುದೇ-ಸುರ್ಮನ್. ಹೆಸರು ಕೇಳುವುದಕ್ಕೆ ಸಂಗೀತದ ಯಾವುದೋ ಸುಮಧುರ ಸ್ವರದಂತೆ ಕೇಳಿಸುವ ಸುರ್ಮನ್ ಎಷ್ಟೋ ಅನಾಥ ಹಾಗು ನಿರ್ಗತಿಕ ಮಕ್ಕಳಿಗೆ ಅವರ ಸ್ವಂತ ಮನೆಯಂತಾಗಿದೆ. ಗುಲಾಬಿ ನಗರ ಜೈಪುರದಲ್ಲಿ ಕಳೆದ 18 ವರ್ಷಗಳಿಂದ ನಡೆಯುತ್ತಿರುವ ಈ ಸಂಸ್ಥೆಯು ಎಷ್ಟೋ ಮುಗ್ಧ ಮಕ್ಕಳ ಮಂದಹಾಸವನ್ನು ಮರಳಿಸಿದೆ. ಸಂಘದ ಸ್ವಯಂಸೇವಕರಾದ ಸುರೇಂದ್ರ ಚತುರ್ವೇದಿ ಹಾಗು ಅವರ ಪತ್ನಿ ಮನನ್ ಅವರ ಪ್ರಯತ್ನದಿಂದ 1998 ರಲ್ಲಿ ಕೇವಲ ಇಬ್ಬರು ಮಕ್ಕಳೊಂದಿಗೆ ಈ ಬಾಲಾಶ್ರಮವನ್ನು ಪ್ರಾರಂಭಿಸಿದರು. ಈಗ ಸುರ್ಮನ್ ಪರಿವಾರದಲ್ಲಿ 110 ಮಕ್ಕಳು ಮತ್ತು 8 ಮಹಿಳೆಯರು ಇದ್ದಾರೆ.


ಮಕ್ಕಳಿಗಿಂದ ಮೊದಲು ಜೈಪುರದ ಮನನ್ ಅವರ ಕಥೆಯನ್ನೂ ಸಹ ತಿಳಿದುಕೊಳ್ಳಬೇಕು. ಫ್ಯಾಷನ್ ಎಂಬ ಮನಮೋಹಕ ಜಗತ್ತಿನಲ್ಲಿ ಎಲ್ಲವೂ ಬದುಕಿಗಿಂತ ದೊಡ್ಡದು. ಮನನ್ ಫ್ಯಾಷನ್-ಡಿಸೈನಿಂಗ್ ನಲ್ಲಿ ಅಗ್ರಸ್ಥಾನವನ್ನು ಪಡೆದ ಕಾರಣ ಅಮೆರಿಕ ಮತ್ತು ಲಂಡನ್ ನ ಉನ್ನತ ಫ್ಯಾಷನ್ ಸಂಸ್ಥೆಗಳಲ್ಲಿ ಕೆಲಸಕ್ಕಾಗಿ ಅವಕಾಶಗಳ ಕೊಡುಗೆ ಲಭಿಸಿತ್ತು.

ಆದರೆ, ಭಾವುಕ ಮನಸ್ಸಿನ ಮನನ್, ಪತ್ರಕರ್ತರಾದ ಸ್ವಯಂಸೇವಕ ಸುರೇಂದ್ರ ಚತುರ್ವೇದಿ ಅವರನ್ನು ಮದುವೆಯಾದ ನಂತರ ಸಮಾಜ ಮತ್ತು ದೇಶಕ್ಕಾಗಿ ತಮ್ಮ ಪಾತ್ರದ ಬಗ್ಗೆ ಯೋಚಿಸಲಾರಂಭಿಸಿದರು. ಆಗ ಗೌರಿಯೊಂದಿಗೆ ನಡೆದ ಅವರ ಮೊದಲ ಭೇಟಿ ಎಲ್ಲವನ್ನೂ ಬದಲಿಸಿತು. ಗಾಯಗೊಂಡಿದ್ದ ಗೌರಿಯ ಶುಶ್ರೂಷೆ ಮಾಡಿ ಅವಳನ್ನು ಅವಳಿದ್ದ ಸೇವಾಬಸ್ತಿಗೆ ಬಿಡಲು ಹೋದಾಗ, ಭಿಕ್ಷೆಬೇಡುವ ಸಲುವಾಗಿ ಗೌರಿಯನ್ನು ತನ್ನ ತಾಯಿಯೆ ಮಾದಕ ವ್ಯಸನಿಯನ್ನಾಗಿಸಿ ಗಾಯ ಮಾಡಿದ್ದಳು ಎಂಬ ವಿಷಯ ತಿಳಿಯಿತು. ಗೌರಿಯನ್ನು ಅಲ್ಲಿಂದ ಕರೆದುಕೊಂಡು ಬರುವಾಗ ಆ ಬಸ್ತಿಯ ಅವಸ್ಥೆಯನ್ನು ನೋಡಿದ ಮನನ್  ಕೆಲವೇ ಕ್ಷಣಗಳಲ್ಲಿ ತನ್ನ ಜೀವನದ ಉದ್ದೇಶವನ್ನು ಅರ್ಥ ಮಾಡಿಕೊಂಡಿದ್ದಳು.

ಲಂಡನ್ ಗೆ ತೆರಳುವ ತನ್ನ ನಿರ್ಧಾರವನ್ನು ಬದಲಿಸಿ ಈ ನತದೃಷ್ಟ ಮಕ್ಕಳ ಜೀವನವನ್ನು ಪುನರುಜ್ಜೀವನಗೊಳಿಸಲು ಸಿದ್ಧರಾದರು. ಆದರೆ ಈ ದಾರಿ ಅಷ್ಟು ಸುಗಮವಾಗಿರಲಿಲ್ಲ. ಮಕ್ಕಳು ದೊಡ್ಡವರಾದಂತೆಲ್ಲ ಅವರ ಖರ್ಚುಗಳನ್ನು ಭರಿಸಲು ಮನನ್ ಅವರು ಚಿತ್ರಕಲೆ, ಬರವಣಿಗೆ ಮತ್ತು ರಂಗಭೂಮಿಗಳ ಮೂಲಕ ಹಣವನ್ನು ಸಂಪಾದಿಸಿದರು. ದೇಶ ವಿದೇಶಗಳಲ್ಲಿ ಸತತ 24ಗಂಟೆಗಳ ಕಾಲ ತಮ್ಮ ಚಿತ್ರಕಲೆಯ ಪ್ರದರ್ಶನವನ್ನು ಮಾಡಿದರು. 2000ದ ಇಸವಿಯಲ್ಲಿ ಸಂಸ್ಥೆಯ ನೊಂದಣಿಯಾದ ನಂತರ ಸಮಾಜವೂ ಸಹಕಾರಕ್ಕಾಗಿ ಮುಂದೆ ಬಂದಿತು.

ಮೊದಲು ಬಾಲಾಶ್ರಯ ಗೃಹದಿಂದ ಶುರುವಾದ ಈ ಸಂಸ್ಥೆಯು ಕೋಶಿಶ್ ಎಂಬ ಹೆಸರಿನಿಂದ ಪರಿತ್ಯಕ್ತ ಮಹಿಳೆಯರ ಸಹಾಯಕ್ಕಾಗಿ ಮುಂದೆ ಬಂದಿತು. ಈಗ ಆ ಮಹಿಳೆಯರು ಇಲ್ಲಿನ ಮಕ್ಕಳೊಂದಿಗೆ ಸಂಬಂಧವನ್ನು ಹೊಂದಿದ್ದಾರೆ. ಈ ಸಂಸ್ಥೆಯು ಬಡ ಹಾಗು ಬುದ್ಧಿವಂತ 78 ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಹಿಂದೆ ಪಾಂಚಜನ್ಯದ ರಾಜಸ್ಥಾನದ ವರದಿಗಾರರಾಗಿದ್ದ ಸುರೇಂದ್ರ ಅವರು ತಮ್ಮ ಪೂರ್ಣ ಸಮಯವನ್ನು ಸುರ್ಮನ್ ಗೆ ನೀಡಿದ್ದಾರೆ. 

ಯೋಗ, ಸಂಸ್ಕಾರ, ಶಿಸ್ತು, ಮತ್ತು ದೇಶಭಕ್ತಿ ಹೀಗೆ ಸಂಘದ ಈ ಎಲ್ಲಾ ಶಿಕ್ಷಣ ವ್ಯವಸ್ಥೆಯನ್ನು ಸುರ್ಮನ್ ಅಳವಡಿಸಿಕೊಂಡಿದೆ. ಅಧ್ಯಯನದೊಂದಿಗೆ ಚಿತ್ರಕಲೆ, ಸಂಗೀತ, ನಾಟಕ, ಹಾಡುಗಾರಿಕೆ ಮುಂತಾದ ಕಲೆಗಳನ್ನು ಮಕ್ಕಳ ಅಭಿರುಚಿಗೆ ಅನುಸಾರವಾಗಿ ಅವರಿಗೆ ಕಲಿಸಲಾಗುತ್ತದೆ. ಜೈಪುರದ ಚಿತ್ರಕೂಟ ಕ್ರೀಡಾಂಗಣದಲ್ಲಿ ಪ್ರತಿ ವರ್ಷ ನಡೆಯುವ ದಸರಾ ಮೇಳದಲ್ಲಿ ಸಾವಿರಾರು ಜನರ ಮುಂದೆ ಸುರ್ಮನ್ ನ ಮಕ್ಕಳು ಬಾಲರಾಮಾಯಣವನ್ನು ಹಾಡಿನ ರೂಪದಲ್ಲಿ ಪ್ರಸ್ತುತ ಪಡಿಸುತ್ತಾರೆ. ಸಂಸ್ಥೆಯ ಪತ್ರಿಕೆಯಾದ ಬೋಗನವೆಲ್ಲಿಯಾದಲ್ಲಿ ಮಕ್ಕಳು ಬರೆದ ಕಥೆ ಹಾಗು ಕವಿತೆಗಳನ್ನು ನಾವು ಓದಬಹುದು.

ಸುರ್ಮನ್ ನ ಹೊಸಾ ಮನೆ ತುಂಬಾ ದೊಡ್ಡಾದಾಗಿರಲಿದೆ. ಕಾರಣ, ಸರ್ಕಾರದಿಂದ ಸಿಕಾರ್ ರಸ್ತೆಯಲ್ಲಿ ರಿಯಾಯಿತಿ ದರದಲ್ಲಿ  ದೊರೆತಿರುವ ಭೂಮಿಯಲ್ಲಿ ಸಂಸ್ಥೆಯು ಆನಂದಲೋಕ ಎಂಬ ಹೆಸರಿನಲ್ಲಿ 1500 ಮಕ್ಕಳಿಗೆ ಆಶ್ರಯ ಗೃಹವನ್ನು ನಿರ್ಮಿಸುತ್ತಿದೆ.

ಇಲ್ಲಿಗೆ ಹಿಂದೆ ವೀಕ್ಷಕರಾಗಿ ಬಂದು ಈಗ ತಮ್ಮ ಪೂರ್ಣ ಜೀವನವನ್ನು ಇಲ್ಲಿಗಾಗಿ ಸಮರ್ಪಿಸಿ ಕೊಂಡಿರುವ ಸಂಘದ ಸ್ವಯಂಸೇವಕರಾದ ನರೇಂದ್ರ ಶೇಖಾವತ್(ನಂದ) ರವರು ಹೇಳುವಂತೆ ಸುರ್ಮನ್  ಸಂಪೂರ್ಣವಾಗಿ ಕೌಟುಂಬಿಕ ಶೈಲಿಯಲ್ಲಿ ಇರುವ ಒಂದು ಪ್ರಕಲ್ಪವಾಗಿದೆ. ಟ್ಯೂಶನ್, ಹೋಮ್ ವರ್ಕ್, ಆಟಪಾಠ ಇವೆಲ್ಲವೂ ಮನೆಯಲ್ಲಿ ನಡೆಯುವ ರೀತಿಯೇ ಇರುತ್ತದೆ. ಮನನ್ ಮತ್ತು ಸುರೇಂದ್ರಜೀಯವರ ಮೂರು ಮಕ್ಕಳೂ ಕೂಡ ಈ ಮಕ್ಕಳೊಂದಿಗೇ ಇರುತ್ತಾರೆ, ಮನನ್ ಚತುರ್ವೇದಿ ಇಂದು ರಾಜಸ್ಥಾನದ ಬಾಲ ಸಂರಕ್ಷಣ ಆಯೋಗದ ಅಧ್ಯಕ್ಷರಾಗಿದ್ದು ಆ ಪ್ರದೇಶದಲ್ಲಿರುವ ಮಕ್ಕಳ ಅಭಿವೃದ್ಧಿಯ ಬಗ್ಗೆ ಗಮನಿಸುತ್ತಿದ್ದಾರೆ


ಸಂಪರ್ಕಿಸಿ- ನರೇಂದ್ರ ಶೇಖಾವತ್ (ನಂದ) 

ಫೋನ್ ನಂ. 9829322232

1086 Views
अगली कहानी