सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಪರ್ವತದ ಇನ್ನೊಂದು ಬದಿಯಲ್ಲಿ… ಹಿಮಾಚಲದಲ್ಲಿ ಸೇವಾ ಭಾರತಿಯ ಸೇವೆ.

ದಕ್ಷಿಣ

parivartan-img

 ಪರ್ವತ ಪ್ರದೇಶಗಳಲ್ಲಿ ವಿಹರಿಸಲು ಬಂದ ಯಾತ್ರಿಕರಿಗೆ ಕೆಲವು ದಿನಗಳವರೆಗೆ ಹಿಮಪಾತದ ಅಲೌಕಿಕ ಆನಂದ. ಅದೇ ಸಮಯದಲ್ಲಿ, ಬಿಸಿಯಾದ ಪ್ರವಾಸಿ-ತಾಣಗಳಿಂದ ಸ್ವಲ್ಪ ದೂರದಲ್ಲಿರುವ ಅನಾಮ ಪರ್ವತ ಪ್ರದೇಶಗಳಲ್ಲಿ ವಾಸಿಸುವ ಗ್ರಾಮಸ್ಥರಿಗೆ ಈ ಹಿಮಪಾತವು ಎಂತಹ ಸಂಕಷ್ಟವೆಂದರೆ, ಇದು ಅವರನ್ನು ಎಲ್ಲಾ ಮೂಲ ಸೌಕರ್ಯ-ಸಂಪನ್ಮೂಲಗಳಿಂದ ವಂಚಿತರನ್ನಾಗಿ ಮಾಡುತ್ತದೆ.ಹಿಮಾಚಲ ಪ್ರದೇಶದ ಪಾಂಗಿ ಮತ್ತು ವ್ಯಾರಾ ಇವೆರಡು ಅಂತಹದೇ ಹಳ್ಳಿಗಳಾಗಿದ್ದು ವರ್ಷದಲ್ಲಿ ಒಂಬತ್ತು ತಿಂಗಳುಗಳ ಕಾಲ ಬೀಳುವ ಭಾರೀ ಹಿಮಪಾತದಿಂದಾಗಿ ತನ್ನ ಸುತ್ತಲಿನ ಇತರ ಭಾಗಗಳಿಂದ ಸಂಪರ್ಕವನ್ನು ಕಡಿದುಕೊಳ್ಳುತ್ತದೆ. ಪಾಂಗಿಯು ಚಂಬಾ ಜಿಲ್ಲೆಯಿಂದ 20 ಮೈಲಿ ದೂರದಲ್ಲಿದ್ದರೆ, ವ್ಯಾರಾವು ಶಿಮ್ಲಾದಿಂದ 50 ಕೋಸ್ ದೂರದಲ್ಲಿದೆ. ಪ್ರವಾಸಿಗರು ಇಲ್ಲಿಗೆ ಬರುವುದೂ ಇಲ್ಲ, ಸ್ಥಳೀಯ ಆಡಳಿತವು ಇದರ ಬಗ್ಗೆ ಕಾಳಜಿ ವಹಿಸುವುದೂ ಇಲ್ಲ.


ಭಾರೀ ಹಿಮಪಾತವಾಗುವ ಈ ಪ್ರದೇಶಗಳಲ್ಲಿ ಶಿಕ್ಷಣ, ಚಿಕಿತ್ಸೆ ಮತ್ತು ಉದ್ಯೋಗದ ಲಭ್ಯತೆಯೂ ಹಳೆಯದಾದ ಹಿಮದ ದಪ್ಪ ಪದರದಡಿಯಲ್ಲಿ ಹೇಗೆ ಹೂತುಹೋಗಿದೆ ಎಂದರೆ, ಪಾಂಗಿ ಗ್ರಾಮದ ಇಬ್ಬರು ಕಿಶೋರರಾದ ಬಜಿರುರಾಮ್ ಮತ್ತು ವ್ಯಾರಾದ ಆದರ್ಶರಿಗಿಂತ ಉತ್ತಮವಾಗಿ ಬೇರೆ ಯಾರು ತಿಳಿದಿರಬಲ್ಲರು....? ಈ ಪ್ರದೇಶದಲ್ಲಿ ಹಿಮಾಚಲ ಸೇವಾ ಭಾರತಿಯು 2012 ರಲ್ಲಿ ವಿವೇಕಾನಂದ ಹಾಸ್ಟೆಲ್ ಸ್ಥಾಪಿಸುವವರೆಗೂ ಈ ಇಬ್ಬರೂ ಶಾಲೆಯ ಮುಖವನ್ನು ನೋಡಿರಲಿಲ್ಲ. ಇದಕ್ಕೂ ಮೊದಲು, ಅವರ ಜೀವನದಲ್ಲಿ ಹತಾಶೆಯನ್ನು ಬಿಟ್ಟು ಬೇರೇನೂ ಇರಲಿಲ್ಲ. ಹಾಸ್ಟೆಲ್‌ಗೆ ಬಂದ ನಂತರ ಅವರಿಬ್ಬರ ಕನಸುಗಳಿಗೆ ರೆಕ್ಕೆ ಮೂಡಿತು. ಬಜಿರುರಾಮ್‌ಗೆ ಇಂಟರ್ ನಲ್ಲಿ 90% ಅಂಕಗಳು ದೊರೆತಿದೆ. ಇಂದು ಈ ಇಬ್ಬರೂ ಕಿಶೋರರು ಪದವಿ ಪಡೆಯುತ್ತಿದ್ದಾರೆ.

ಸಮೀಪದ ಲುಧ್‌ಬಾಡಾ ಗ್ರಾಮದ ರಿಂಪಿ ಮತ್ತು ಆಕೆಯ ತಂಗಿಯ ಪೋಷಕರು ಅಕಾಲಿಕವಾಗಿ ನಿಧನರಾದರು. ಈ ಅನಾಥ ಸಹೋದರಿಯರ ಮಾಹಿತಿ ಸೇವಾ ಭಾರತಿಯ ನಗರದ ಅಧ್ಯಕ್ಷರಾದ ವಿನೋದ್ ಅಗರ್ವಾಲ್ ಮತ್ತು ಅಶೋಕ್ ಜಿ ಅವರಿಗೆ ತಿಳಿದಾಗ, ಅವರ ಪ್ರಯತ್ನದ ಫಲವಾಗಿ ಸೇವಾ ಭಾರತಿಯು ಈ ಹೆಣ್ಣುಮಕ್ಕಳನ್ನು ದತ್ತು ಪಡೆಯಿತು. ಇಂದು ಈ ಇಬ್ಬರೂ ಕಲಿತು ತಮ್ಮ ಕಾಲಮೇಲೆ ನಿಂತಿದ್ದಾರೆ.ಮನುಷ್ಯರನ್ನು ಪಾರ್ಶ್ವವಾಯುವಿಗೆ ತಳ್ಳುವ ದೈಹಿಕ ಡಿಸ್ಟ್ರೋಫಿಯಂತಹ ಭೀಕರ ಕಾಯಿಲೆಯಿಂದ ಬಳಲುತ್ತಿರುವ ಪವನಾ ಮತ್ತು ಅವರ ನಾಲ್ಕು ಮಕ್ಕಳ ಕರುಣಾಜನಕ ಸ್ಥಿತಿಯನ್ನು ನೋಡಿದ ಸೇವಾ ಭಾರತಿಯ ಕಾರ್ಯಕರ್ತರಾದ ಡಾ. ತಿಲಕ್ ರಾಜ್ ಮತ್ತು ಜೋಗಿಂದರ್ ಸಿಂಗ್ ರಾಣಾ ಅವರು ಈ ರೋಗಪೀಡಿತ ತಾಯಿಗೆ ಡಾ.ರಾಜೇಂದ್ರಪ್ರಸಾದ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಿದರು.


1998 ರಲ್ಲಿ, ಹತ್ತಿರದ ಕಾಂಗ್ರಾದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿತು. ಗಾಯಗೊಂಡವರಿಗೆ ಸರಿಯಾದ ಸಮಯಕ್ಕೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸದ ಕಾರಣದಿಂದ ಉಂಟಾದ ಪ್ರಾಣಹಾನಿಯು ಕಾಂಗ್ರಾ ಸೇವಾ ಭಾರತಿಯನ್ನು ಈ ರೀತಿ ಯೋಚಿಸುವಂತೆ ಮಾಡಿತು. 2005 ರ ಹೊತ್ತಿಗೆ ಆಗಿನ ಸ್ಥಳೀಯ ಸೇವಾ ಭಾರತಿಯ ಅಧ್ಯಕ್ಷ ರಾಮ್‌ಸುಖ್ ಗುಪ್ತಾ ಅವರ ಪ್ರಯತ್ನದಿಂದ ಸೇವಾ ಭಾರತಿಯು ಎರಡು ಆಂಬುಲೆನ್ಸ್‌ಗಳನ್ನು ಖರೀದಿಸಿತು. ಅವುಗಳು ಇಂದು ಆಮ್ಲಜನಕ ಸಿಲಿಂಡರ್‌ಗಳನ್ನು ಹೊಂದಿವೆ. ನೀವು ಎಂದಾದರೂ ವೈದ್ಯಕೀಯ ಕಾಲೇಜಿಗೆ ಹೋದರೆ, ನಿಮಗೆ ಸಹಾಯ ಮಾಡಲು 'ಮೇ ಐ ಹೆಲ್ಪ್ ಯು' ಬ್ಯಾನರ್ ಅಡಿಯಲ್ಲಿ ಸೇವಾ ಭಾರತಿಯ ಕಾರ್ಯಕರ್ತರು ಉಪಸ್ಥಿತರಿರುತ್ತಾರೆ. ಇಲ್ಲಿ ಪ್ರತಿದಿನ ಬೆಳಿಗ್ಗೆ ಎರಡು ಬ್ರೆಡ್ 'ಗಳೊಂದಿಗೆ ಒಂದು ಕಪ್ ಚಹಾವನ್ನು ರೋಗಿಗಳಿಗೆ ವಿತರಿಸಲಾಗುತ್ತದೆ. ರೋಗಿಗಳಿಗೆ ಗಾಲಿಕುರ್ಚಿಗಳು ಮತ್ತು ಹಾಸಿಗೆ-ಕಂಬಳಿಗಳು ಉಚಿತವಾಗಿ ಲಭ್ಯವಿದೆ.

ಈ ಪರ್ವತ ಪ್ರದೇಶಗಳಲ್ಲಿ ಸೇವಾಭಾರತಿಯ ಸೇವಾವ್ರತಿಗಳ ಸೇವಾ ಸಮರ್ಪಣೆಯನ್ನು ಮಾನವೀಯ ನೆಲೆಯಲ್ಲಿ ಅರ್ಥೈಸಿಕೊಳ್ಳಲು, ಕ್ರೊಯೇಷಿಯಾದ ಪ್ರವಾಸಿ ಜೋರಿಕಾ ಕಾಹಾರ ಉದಾಹರಣೆಯಿಂದ ತಿಳಿಯಬಹುದು. ಅವರು ಹಿಮಾಲಯವನ್ನು ಭೇಟಿ ಮಾಡಲು ಇಲ್ಲಿಗೆ ಬಂದರು ಮತ್ತು ಧರ್ಮಶಾಲಾದಲ್ಲಿ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದರು. ಸೇವಾಭಾರತಿಯ ಕಾರ್ಯಕರ್ತರ ಸೇವೆಯು ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಆದರೆ ಗೌರವಪೂರ್ಣವಾಗಿ ಅವರ ಅಂತ್ಯಸಂಸ್ಕಾರವನ್ನು ಮಾಡಿದ್ದಲ್ಲದೆ, ಅವರ ಚಿತಾಭಸ್ಮವನ್ನು ಕ್ರೊಯೇಷಿಯಾ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಸೇವಾಭಾರತಿಯು ದುರ್ಗಮ ಗುಡ್ಡಗಾಡು ಪ್ರದೇಶಗಳಲ್ಲಿ ಸಂಸ್ಕಾರ ಕೇಂದ್ರ ಮತ್ತು ಹೊಲಿಗೆ ಕೇಂದ್ರವನ್ನು ದೊಡ್ಡ ಪ್ರಮಾಣದಲ್ಲಿ ನಡೆಸುವ ಮೂಲಕ ಶಿಕ್ಷಣ ಮತ್ತು ಉದ್ಯೋಗಗಳ ಮೇಲೆ ಮಡುಗಟ್ಟಿದ್ದ ಹಿಮವನ್ನು ವೇಗವಾಗಿ ತೆಗೆದುಹಾಕುತ್ತಿದೆ. ಸೇವಾಭಾವದ ನಿರಂತರ ಶಕ್ತಿಯು ಗುಡ್ಡಗಾಡಿನ ಜೀವನದ ಮೇಲೆ ಮಡುಗಟ್ಟಿದ ನಿರ್ದಯಿ ಹಿಮಗಡ್ಡೆಗಳಿಗು ಬೆವರಿಳಿಸಿದೆ. ಸೇವಾವ್ರತಿಗಳ ಸೇವಾ ಸಂಕಲ್ಪದ ಬಿಸಿಯಿಂದಾಗಿ, ಇಲ್ಲಿನ ಜನರ ಜೀವನವೂ ಅಲ್ಲಿನ ಉಳಿದ ಇತರ ಭಾಗಗಳೊಂದಿಗೆ ಜೊತೆಯಲ್ಲಿ ಹೆಜ್ಜೆಹಾಕಲು ಪ್ರಾರಂಭಿಸಿದೆ.


ಸಂಪರ್ಕ:ವಿನೋದ್ ಅಗರ್ವಾಲ್ ಜಿ,

ಸೇವಾ ಭಾರತಿ ಅಧ್ಯಕ್ಷರು, 9816043398
1063 Views
अगली कहानी