नियमित अपडेट के लिए सब्सक्राईब करें।
5 mins read
ದಕ್ಷಿಣ
ಹುಟ್ಟು ಮತ್ತು ಸಾವುಗಳನ್ನು ತುಂಬಾ ಹತ್ತಿರದಿಂದ ನೋಡುವ ವೈದ್ಯರು ಪ್ರತೀದಿನ ಒಂದಲ್ಲ ಒಂದು ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಆದರೆ ಇಂದು ಡಾ.ರಿಷಿಯವರ ಜೀವನದಲ್ಲಿ ಇದು ಎಲ್ಲಕ್ಕಿಂತ ದೊಡ್ಡದಾದ ಪರೀಕ್ಷೆಯಾಗಿತ್ತು.
ವಾರ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ 23 ಹಸುಗೂಸುಗಳ ಜೀವನ ಅಪಾಯದ ಅಂಚಿನಲ್ಲಿತ್ತು, ಅಗ್ನಿಶಾಮಕ ಸಿಲಿಂಡರ್ ನ ಸಹಾಯದಿಂದ ಬೆಂಕಿಯನ್ನು ನಂದಿಸುವ ಪ್ರಯತ್ನವೂ ವಿಫಲವಾಯಿತು, ಮಧ್ಯಪ್ರದೇಶದ ಛತರ್ ಪುರ ಜಿಲ್ಲೆಯ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ವಾರ್ಡಿನ ಎ.ಸಿ.ಯಲ್ಲಿ ಕಾಣಿಸಿ ಕೊಂಡ ಬೆಂಕಿಯು ನವಜಾತ ಶಿಶುಗಳ ಜೀವವನ್ನು ಅಪಾಯಕ್ಕೆ ಸಿಲುಕಿಸಿತ್ತು. ಆಗ ಅಲ್ಲಿ ಕರ್ತವ್ಯದಲ್ಲಿ ತೊಡಗಿದ್ದ ಸಂಘದ ಪ್ರಥಮ ವರ್ಷ ಶಿಕ್ಷಿತ ಸ್ವಯಂಸೇವಕರೂ ಆದ ಡಾ. ರಿಷಿ ದ್ವಿವೇದಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಅವರ ಅದಮ್ಯ ಸಾಹಸ ಮತ್ತು ತ್ವರಿತ ಬುದ್ಧಿವಂತಿಕೆಯಿಂದ ಹಸುಳೆಗಳಿಗೆ ಬೆಂಕಿಯು ತಾಗದಂತೆ ರಕ್ಷಿಸಿದರು.
ಜುಲೈ 7 ರಂದು ಸಂಜೆ 7 ಗಂಟೆಯ ತನಕ ಛತರ್ ಪುರ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲವು ಚೆನ್ನಾಗಿತ್ತು, ಮಕ್ಕಳ ವಾರ್ಡಿನಿಂದ ಆಗಾಗ ಪುಟ್ಟ ಮಕ್ಕಳ ಅಳುವಿನ ದ್ವನಿ ಕೇಳಿ ಬರುತ್ತಿತ್ತು, ಅಲ್ಲಿದ್ದ ಎ.ಸಿ. ಯಂತ್ರಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಹಾಗು ಆ ಬೆಂಕಿಯ ಕಾರಣದಿಂದಾಗಿ ವಿದ್ಯುತ್ ಕಡಿತಗೊಂಡು ಕತ್ತಲೆ ಆವರಿಸಿತ್ತು. ಬೆಂಕಿಯು ಭಯಾನಕ ರೂಪವನ್ನು ತಾಳುವ ಮೊದಲು ಅಲ್ಲಿ ಉಪಸ್ಥಿತರಿದ್ದ ಚಿಕಿತ್ಸಾ ಅಧಿಕಾರಿಗಳಾದ ಡಾ.ರಿಷಿ ದ್ವಿವೇದಿಯವರು ಅಗ್ನಿಶಾಮಕ್ ಸಿಲಿಂಡರ್ ನ ಸಹಾಯದಿಂದ ಬೆಂಕಿಯನ್ನು ನಂದಿಸುವ ಪ್ರಯತ್ನವನ್ನು ಪ್ರಾರಂಭಿಸಿದರು. ಆದರೆ ಸಿಲಿಂಡರ್ ನ ಗ್ಯಾಸ್ ಖಾಲಿಯಾದ ನಂತರವೂ ಬೆಂಕಿಯನ್ನು ಆರಿಸಲಾಗದ ಕಾರಣ ವಾರ್ಡಿನ ತುಂಬ ಉಸಿರುಗಟ್ಟಿಸುವಷ್ಟು ಹೊಗೆ ಆವರಿಸಿತ್ತು. ಕರ್ತವ್ಯ ನಿರತರಾಗಿದ್ದ ದಾದಿಯರಾದ ಸಂಗೀತ ಮತ್ತು ಜಯ ಅವರ ಧೈರ್ಯವೂ ಪರಿಹಾರ ಸೂಚಿಸಲು ಪ್ರಾರಂಭಿಸಿತು, ಅವರು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡು ಹೊರಹೋಗುವಂತೆ ವೈದ್ಯರನ್ನು ಬೇಡಿಕೊಂಡರು, ಆದರೆ ಡಾ.ರಿಷಿಯವರ ಒಳಗಿನ ಸ್ವಯಂಸೇವಕತ್ವ ಆ ಮಕ್ಕಳನ್ನು ಅಪಾಯದಲ್ಲಿ ಬಿಡಲು ಸಿದ್ಧರಿರಲಿಲ್ಲ, ಶಾಖೆಯಲ್ಲಿ ಹಾಡುತ್ತಿದ್ದ “ಜೀವನ್ ಬನ್ ತೂ ದೀಪ್ ಸಮಾನ್ ಜಲ್-ಜಲ್ ಕರ್ ಸರ್ವಸ್ವ್ ಮಿಟಾ ದೆ ಬನ್ ಕರ್ತವ್ಯ್ ಪ್ರಧಾನ್” ಎಂಬ ಹಾಡಿನ ಸಾಲುಗಳು ಕಿವಿಯಲ್ಲಿ ಪ್ರತಿಧ್ವನಿಸತೊಡಗಿದವು. ಅವರು ದಾದಿಯರ ಸಹಾಯದಿಂದ ಮಕ್ಕಳನ್ನು ಎತ್ತಿಕೊಂಡು ಬೇರೆ ವಾರ್ಡ್'ಗಳಿಗೆ ಸ್ಥಳಾಂತರಿಸತೊಡಗಿದರು ಹಾಗೆಯೆ ಅಲ್ಲಿ ನೆರೆದಿದ್ದ ರೋಗಿಗಳ ಸಂಬಂಧಿಕರು ಸಹಾಯಕ್ಕೆ ಬಂದು ನವಜಾತ ಶಿಶುಗಳನ್ನು ಸುರಕ್ಷಿತವಾಗಿ ಹೊರತರಲಾಯಿತು.
ಡಾ.ರಿಷಿಯವರ ಪ್ರಕಾರ ಈ ಕಠಿಣ ಪರಿಸ್ಥಿತಿಯಲ್ಲಿ ನಾನು ಏನೇ ಮಾಡಿದ್ದರು ಅದು ಸಂಘದಲ್ಲಿ ದೊರೆತ ಸಂಸ್ಕಾರದ ಪ್ರಭಾವದಿಂದ ಸಾಧ್ಯವಾಯಿತು ಎಂದು ಹೇಳುತ್ತಾರೆ. ಇವರ ತಂದೆ ವಿಪಿನ್ ಬಿಹಾರಿಜೀಯವರು ಮಹೋಬಾದಲ್ಲಿ ಸಂಘದ ಜಿಲ್ಲಾ ಬೌದ್ಧಿಕ್ ಪ್ರಮುಖ್ ರಾಗಿದ್ದರು ಹಾಗು ಇವರ ಅಣ್ಣ ರಜನೀಶ್ 5 ವರ್ಷಗಳ ಕಾಲ ಪ್ರಚಾರಕರಾಗಿದ್ದರು.
नियमित अपडेट के लिए सब्सक्राईब करें।