सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಅಂಧಕಾರದಲ್ಲಿ ಮುಳುಗಿದವರ ಬಾಳಿಗೆ ಬೆಳಕಾದವರು. (ಒರಿಸ್ಸಾ)

ದಕ್ಷಿಣ

parivartan-img

ಫ಼್ಯಾನಿ  ಎಂದರೆ ಇಟಾಲಿಯನ್ ಭಾಷೆಯಲ್ಲಿ ಉಚಿತ ಎಂದರ್ಥ. 2 ಮೇ 2019ರಲ್ಲಿ ಗಂಟೆಗೆ 200ಕಿ.ಮೀ. ಗಿಂತಲೂ ವೇಗವಾಗಿ ಬೀಸಿದ 'ಫ್ಯಾನಿ' ಬಿರುಗಾಳಿಯು ಒರಿಸ್ಸಾದಲ್ಲಿ ಎಂತಹ ಹಾನಿಯನ್ನು ಉಂಟುಮಾಡಿತ್ತು ಎಂದರೆ ಅದನ್ನು ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಕಟಕ್, ಭುವನೇಶ್ವರ್, ಕುರ್ದಾ, ಪುರಿ ಸೇರಿದಂತೆ 5 ಜಿಲ್ಲೆಗಳ ಅನೇಕ ಪಟ್ಟಣಗಳು ಕತ್ತಲಲ್ಲಿ ಮುಳುಗಿ ಹೋದವು.1ಲಕ್ಷ 56 ಸಾವಿರ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದವು ಹಾಗೂ ಒಂದೂವರೆ ಕೋಟಿಯಷ್ಟು ತೆಂಗಿನಮರಗಳು ಭೀಕರ ಗಾಳಿಯ ರಭಸಕ್ಕೆ ಧರೆಗುರುಳಿ ನಾಶವಾಗಿದ್ದವು. ಈ ಗ್ರಾಮಗಳಲ್ಲಿ ನೆಲೆಸಿದ್ದ ರೈತರ ಬಳಿ ಈಗ ಹೊಲ-ಗದ್ದೆಗಳೂ ಇರಲಿಲ್ಲ, ವಾಸಿಸುತ್ತಿದ್ದ ಮನೆಯೂ ಇರಲಿಲ್ಲ. ಈ ಭೀಕರ ಚಂಡಮಾರುತವು 64 ಜನರನ್ನು ಹಾಗೂ 65,000 ಜಾನುವಾರುಗಳನ್ನು ಬಲಿಪಡೆದಿತ್ತು. ಚಾವಣಿಯೇ ಇಲ್ಲದ ಮನೆಗಳಲ್ಲಿ ತಮ್ಮದಾಗಿರುವ ಎಲ್ಲವನ್ನೂ ಕಳೆದುಕೊಂಡು ಕುಳಿತಿದ್ದ ಜನರ ನೆರವಿಗೆ ಮೊದಲು ಬಂದವರು ಸಂಘದ ಸ್ವಯಂಸೇವಕರು.



ಒರಿಸ್ಸಾದಲ್ಲಿ, ಸಂಘದ ಸ್ವಯಂಸೇವಕರು ನಡೆಸುತ್ತಿರುವ ಉತ್ಕಲ್ ಸಂತ್ರಸ್ತರ ಪರಿಹಾರ ಸಮಿತಿಯ 1500 ಕ್ಕೂ ಹೆಚ್ಚು ಸ್ವಯಂಸೇವಕರು ಮೇ 5 ರಿಂದ ಹಗಲಿರುಳೆನ್ನದೆ ಸಂತ್ರಸ್ತರಿಗೆ ನೆರವು ನೀಡಿದ್ದಾರೆ. ಸಮಿತಿಯ ವತಿಯಿಂದ ನಡೆಸುತ್ತಿರುವ ಪರಿಹಾರ ಶಿಬಿರಗಳಲ್ಲಿ 96,000 ಕ್ಕಿಂತಲೂ ಹೆಚ್ಚಿನ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಹಾಗೂ ತಾತ್ಕಾಲಿಕ ಚಾವಣಿಗಾಗಿ (ಮನೆಯ ಮಾಡು) 1.2ಲಕ್ಷ ಟಾರ್ಪಲಿನ್'ಗಳ ವ್ಯವಸ್ಥೆ ಮಾಡಿ ಈ ಸಂತ್ರಸ್ತ ಕುಟುಂಬಗಳನ್ನು ಜೂನ್ ತಿಂಗಳಿನಲ್ಲಿ ಸುರಿಯುವ ಮಳೆಯಿಂದ ಪಾರುಮಾಡುವ ಯತ್ನವನ್ನು ಮಾಡಲಾಯಿತು. ಸಮಿತಿಯ ಸದಸ್ಯ ವಿಜಯ್ ಸ್ವೈನ್'ರವರು ಹೇಳುತ್ತಾರೆ...... "ಇಲ್ಲಿ ಅವಶ್ಯಕತೆಗಳು ಹೆಚ್ಚಿದೆ. ಸಂಪನ್ಮೂಲಗಳ ಕೊರತೆ ಉಂಟಾಗಿದೆ, ಸಾಂಕ್ರಾಮಿಕ ರೋಗಗಳನ್ನು ತಪ್ಪಿಸಲು 4ಲಕ್ಷ ಸೊಳ್ಳೆ ಪರದೆಗಳನ್ನು ವಿತರಿಸಿದ ನಂತರವೂ ನಾವು ಕೇವಲ 4 ಪ್ರತಿಶತದಷ್ಟು ಜನರಿಗೆ ಮಾತ್ರ ಸಹಾಯ ಮಾಡಲು ಸಾಧ್ಯವಾಗಿದೆ.

ದೂರದ ಗ್ರಾಮಗಳು ಅಥವಾ ಪುರಿ, ಕಟಕ್ ಮತ್ತು ಭುವನೇಶ್ವರದ ಸೇವಾಬಸ್ತಿಯ ಪ್ರತೀ ಮನೆಗಳಿಗೂ ಸೋಲಾರ್ ದೀಪಗಳನ್ನು ತಲುಪಿಸಲಾಗುತ್ತಿದೆ."




ಭುವನೇಶ್ವರದಿಂದ 25 ಕಿ.ಮೀ ದೂರದಲ್ಲಿರುವ ಬಾಲೀಪಾಟ್ನಾ ಎಂಬ ಒಂದು ಸಣ್ಣ ಹಳ್ಳಿಯನ್ನೆ  ತೆಗೆದುಕೊಳ್ಳುವುದಾದರೆ ಈ ಪ್ರದೇಶದ ಪ್ರಮುಖ ವಾಣಿಜ್ಯ ಬೆಳೆ ಸಂಪೂರ್ಣವಾಗಿ ನಾಶವಾಗಿತ್ತು. ಹಾಗೆಯೇ ಮುಸ್ಲಿಂ ಬಾಹುಳ್ಯವಿದ್ದ ಈ ಹಳ್ಳಿಯ ಜನರ ಪರಿಸ್ಥಿತಿ ಶೋಚನೀಯವಾಗಿತ್ತು, ಇಂತಹ ಪರಿಸ್ಥಿತಿಯ ಒಂದು ಪರಿವಾರಕ್ಕೆ ಪರಿಹಾರ ಸಮಿತಿಯ ಸದಸ್ಯರು ಚಾವಣಿಗಾಗಿ ಟಾರ್ಪಲಿನ್, ಧರಿಸಲು ಬಟ್ಟೆ ಹಾಗೂ ಸೊಳ್ಳೆ ಪರದೆಗಳೊಂದಿಗೆ ಅಲ್ಲಿಗೆ ಹೋದಾಗ ಅಲ್ಲಿನ ಸೈಫುದ್ದೀನ್ ಖಾನ್ ಎಂಬ ವ್ಯಕ್ತಿಯ ಕಣ್ಣಲ್ಲಿ ನಿರೂರಿತ್ತು. ಆ ಬಡ ರೈತ ತಾನು ಇಲ್ಲಿಯ ತನಕ ಸಂಘದವರನ್ನು ತನ್ನ ಶತ್ರುಗಳೆಂದು ಭಾವಿಸಿದ್ದೆ, ಆದರೆ ಸಂಘದವರೇ ನಮಗೆ ಸಹಾಯಮಾಡುವಲ್ಲಿ ಮುಂದಾದ ಮೊದಲಿಗರು ಎಂದು ಅಳುತ್ತಳುತ್ತಾ ಹೇಳಿದರು.


ಈ ಅನಾಹುತದಿಂದ ಉಂಟಾದ ಹಾನಿಯನ್ನು ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸುವ ಮೂಲಕ ಸರಿದೂಗಿಸಲಾಗುವುದಿಲ್ಲ. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ನಿರಂತರವಾಗಿ ಕೆಲಸ ಮಾಡಬೇಕಾಗಿದೆ. ಸಂಘದ ಪೂರ್ವಕ್ಷೇತ್ರದ ಕ್ಷೇತ್ರ ಸೇವಾ ಪ್ರಮುಖ್ ಜಗದೀಶ್'ಜೀಯವರು ಮುಂದಿನ ಯೋಜನೆಯ ಬಗ್ಗೆ ಬೆಳಕು ಚೆಲ್ಲುತ್ತಾ  ಹೇಳುತ್ತಾರೆ.... "ನಾವು ಉದ್ಯೋಗದ ಬಗ್ಗೆ ವಿಶೇಷ ಗಮನ ಹರಿಸುತ್ತಿದ್ದೇವೆ, ಈ ಕುಟುಂಬಗಳ ಮೂಲ ಆದಾಯಕ್ಕಾಗಿ ತೆಂಗಿನಕಾಯಿ, ಕಡಲೆಕಾಯಿ ಮತ್ತು ಗೋಡಂಬಿ ಮರ/ಗಿಡಗಳನ್ನು ನೆಡಲಾಗುವುದು, ಹಾಗೆಯೇ ಪಾಳುಬಿದ್ದ ಸರ್ಕಾರಿ ಭೂಮಿಗಳಲ್ಲಿ ಶ್ರೀಗಂಧದ ಮರಗಳನ್ನು ನೆಡಲಾಗುವುದು ಮತ್ತು ಮಳೆಗಾಲಕ್ಕೂ ಮುನ್ನ ಎಲ್ಲಾ ಮನೆಗಳಿಗೂ ಪ್ಲಾಸ್ಟಿಕ್ ಚಾವಣಿಗಳನ್ನು ಹಾಕಲಾಗುವುದು."




ಚಂಡಮಾರುತವು ಸಮುದ್ರದ ದಡದಲ್ಲಿದ್ದ ಜೂಮ್ ಜಂಗಲ್ ಎಂದು ಕರೆಯಲ್ಪಡುವ ಎತ್ತರವಾಗಿ ಬೆಳೆದು ನಿಂತಿದ್ದ ಮರಗಳನ್ನು ನಾಶಪಡಿಸಿದೆ. ಇದರ ಪರಿಣಾಮವಾಗಿ ಹವಾಮಾನದ ವ್ಯತಿರಿಕ್ತ ಪರಿಣಾಮಗಳು ನೇರವಾಗಿ ನಗರಗಳ ಮೇಲೆ ಬೀರುತ್ತವೆ. ಹಾಗಾಗಿ ಸಂಘವು ಈ ಕಾಡುಗಳನ್ನು ಪುನಃ ಅಭಿವೃದ್ಧಿಪಡಿಸುವ ಯೋಜನೆಗಳನ್ನು ಹಾಕಿಕೊಂಡಿದೆ. ಜೀವನೋಪಾಯಕ್ಕಾಗಿ 50 ಕುಟುಂಬಗಳಿಗೆ ದೋಣಿಗಳನ್ನು ನೀಡಲಾಗಿದೆ ಹಾಗು ಇನ್ನಷ್ಟು ದೋಣಿಗಳನ್ನು ಒದಗಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. ವೀಳ್ಯದೆಲೆ ಬೆಳೆಯನ್ನು ಅವಲಂಬಿಸಿರುವ 600 ಪರಿವಾರಗಳ ಪುನರ್ವಸತಿಯನ್ನು ಕಲ್ಪಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ.

14ಆಂಬ್ಯುಲೆನ್ಸ್'ಗಳೊಂದಿಗೆ ಹಗಲು-ರಾತ್ರಿ ಯು.ಬಿ.ಎಸ್.ಎಸ್. ಗೆ ಸಂಬಂಧಿಸಿದ ವೈದ್ಯರ ಮತ್ತು ಆರೋಗ್ಯ ಕಾರ್ಯಕರ್ತರ ತಂಡವು ಈ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆದಿದೆ. ಮುಂದೆ ನಿರಂತರ ಚಿಕಿತ್ಸೆಗಾಗಿ ಪ್ರಾಥಮಿಕ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುವುದು.

ಸಂಪರ್ಕ: ಸುದರ್ಶನ್'ಜೀ.

9439194221


903 Views
अगली कहानी