सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಕನಸಿನ ಒಂದು ಮನೆ ಇರಲಿ

ಶ್ರೀ ಸುಬ್ರಾಯ ನಂದೋಡಿ | ದಕ್ಷಿಣ

parivartan-img

ತಮ್ಮ ತಲೆಯ ಮೇಲೊಂದು ಸೂರು ಇರಬೇಕೆಂಬ ಕನಸುಗಳನ್ನು ಆಸೆಯ ಕಣ್ಣುಗಳಿಂದ ಕಾಣುತ್ತಾ ಬಡವರು ಗುಡಿಸಿಲಿನಲ್ಲಿಯೇ ತಮ್ಮ ಜೀವನವನ್ನು ಕಳೆಯುತ್ತಾರೆ. ಕೆಲವರಿಗೆ ಆ ಅದೃಷ್ಟವೂ ಇಲ್ಲದ ಕಾರಣ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ ಎಲ್ಲವೂ ಫುಟ್ಪಾತಿನಲ್ಲಿಯೇ ಕಳೆದುಹೋಗುತ್ತದೆ.

ಕೇರಳದ ಪುಟ್ಟ ಗ್ರಾಮವಾದ ಇರಿಂಜಾಲಕುಡಾದಲ್ಲಿ ವಾಸಿಸುವ ಶಂಸಾದ್ ಕೂಡ ಇವರಲ್ಲಿ ಒಬ್ಬರಾಗಿದ್ದರು. ಅಂಗವಿಕಲ ತಾಯಿ_ ತಂದೆಯ ಜೊತೆಗೆ ಒಂದು ಬಾಡಿಗೆ ಕೊಠಡಿಯಲ್ಲಿ ದಿನ ಕಳೆಯುತ್ತಿದ್ದ ಈ ಶಂಸಾದ್ ತನಗೂ ಒಂದು ಸ್ವಂತ ಮನೆ ಹೊಂದುವ ಯೋಗ ಬರುವುದೆಂದು ಕನಸಿನಲ್ಲಿಯೂ ಕೂಡ ಯೋಚಿಸಿರಲಿಲ್ಲ. ಈಗ ಅವರಲ್ಲಿ ಸ್ವಂತ ಭೂಮಿ ಇದೆ ಮಾತ್ರವಲ್ಲ ಬೇಗನೇ ಮನೆಯೂ ಕೂಡ ನಿರ್ಮಾಣವಾಗಲಿದೆ. ಸೇವಾಭಾರತಿ ಇರಿಂಜಾಲಕುಡಾ ತಂಡದ ಸತತ ಪರಿಶ್ರಮದಿಂದ ಇದೇ ರೀತಿಯಾಗಿ 24 ಪರಿವಾರದವರಿಗೆ ಸೂರು ಸಿಕ್ಕಿದೆ.


ಈಗ ತಾವೆಲ್ಲರೂ ಮೇಲೆ ಯಾವ ವಿಷಯವನ್ನು ಓದಿದ್ದೀರೋ ಅದು ದಂತಕತೆಯಲ್ಲ, ವಾಸ್ತವವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿರಂತರವಾದ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಇರಿಂಜಾಲಕುಡಾದ ಸ್ವಯಂಸೇವಕರ ತಂಡವು ಯಶಸ್ವಿ ಉದ್ಯೋಗಿಯಾದ ಪಿ.ಸುಂದರಂ ಅವರಲ್ಲಿ ಸೇವಾಕಾರ್ಯಗಳಿಗೆ ಧನಸಹಾಯವನ್ನು ಯಾಚಿಸಲು ಹೋದಾಗ ಈ ವಾಸ್ತವ ಸಾಕಾರಗೊಂಡಿತು. ಸ್ವಲ್ಪ ಹೊತ್ತಿನ ಮಾತುಕತೆಯ ನಂತರ ಅವರೆಲ್ಲರೂ ಆಶ್ಚರ್ಯಚಕಿತರಾದರು. ಮಾರುಕಟ್ಟೆ ಬೆಲೆ 75 ಲಕ್ಷ ಇರುವ 21777 Sq.ft. ಭೂಮಿಯನ್ನು ಅಂಗವಿಕಲರಿಗೆ ಮನೆ ಕಟ್ಟಲು ಸಂಘದ ಮೂಲಕ ದಾನ ಮಾಡಲು ಇಚ್ಛಿಸುತ್ತೇನೆ ಎಂದು ಸುಂದರಮ್'ಜಿಯವರು ಹೇಳಿದರು. ಇಲ್ಲಿಂದಲೇ ಇವರ ಈ ಪರಿಶ್ರಮಕ್ಕೆ ರೆಕ್ಕೆ ಮೂಡಿತು. ಸುಂದರಮ್'ಜಿಯವರಿಂದ ಪ್ರಭಾವಿತರಾಗಿ ಸಮೀಪದ ಮುರಿಯಾದ್ ಪಂಚಾಯತಿನ ಇಲಾಖೆಯ ಒಬ್ಬ ಶ್ರೀಮಂತ ವಿಧವೆ ವನಜಾ ಇಂದಾವನ್ ಕೂಡ ತಮ್ಮ 48 ಲಕ್ಷ ಬೆಲೆಯ 19600 ಸ್ಕ್ವಾಯರ್ ಫೀಟ್ ಭೂಮಿಯನ್ನು ಸಂಘದ ಸ್ವಯಂಸೇವಕರ ಮೂಲಕ ಅಗತ್ಯವಿರುವವರಿಗೆ ದಾನಮಾಡುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ಈ ಭೂದಾನದಿಂದ ತಮ್ಮ ಸೇವೆಗೆ ಹೊಸ ಆಯಾಮ ಸಿಕ್ಕಿತು ಎಂದು ಕೇರಳದ ಇರಿಂಜಾಲಕುಡಾ ಸೇವಾಭಾರತಿಯ ಕಾರ್ಯದರ್ಶಿ ಪಿ. ಹರಿದಾಸ್ ತಿಳಿಯುತ್ತಾರೆ.


ಬಹಳ ಪರಿಶ್ರಮದಿಂದ ಮನೆಯಿಲ್ಲದ 24 ಬಡ ಅಂಗವಿಕಲರನ್ನು ಗುರುತಿಸಿ ಆಯ್ಕೆಮಾಡಿ ಯಾರಲ್ಲಿ ಮನೆ ಇಲ್ಲವೋ ಅವರಿಗೆ ನೀಡಲಾಯಿತು. ಕೊನೆಯಲ್ಲಿ ಒಂದು ಸಮಾರೋಪ ಸಮಾರಂಭವನ್ನು ಆಯೋಜಿಸಿ ಸುಂದರಂ ಮತ್ತು ವನಜಾ ಇಂದಾವನ್ ಉಪಸ್ಥಿತಿಯಲ್ಲಿ ಮಲಯಾಳದ ಸುಪ್ರಸಿದ್ಧ ಸಿನಿಮಾ ನಟ ಮತ್ತು ರಾಜ್ಯಸಭಾ ಸದಸ್ಯರಾದ ಶ್ರೀ ಸುರೇಶ್ ಗೋಪಿಯವರು ಈ ಭಾಗ್ಯಶಾಲಿಗಳಾದ 24 ಜನರಿಗೆ 3.10 ಸೆಂಟ್ಸ್ (1348 Sq.ft.) ಸಮಾನವಾಗಿ ಗುರುತು ಮಾಡಿದ ಪ್ಲಾಟ್'ನ ಭೂಮಿಯ ದಾಖಲೆ ಪತ್ರಗಳನ್ನು ನೀಡಿದರು. ಈ ದಾಖಲೆ ಪತ್ರದ ಪ್ರಕಾರ ಅವರು ಆ ಭೂಮಿಯನ್ನು ಮುಂದಿನ ಹತ್ತು ವರ್ಷಗಳವರೆಗೆ ಬೇರೆಯವರಿಗೆ ಹಸ್ತಾಂತರಿಸುವಂತಿಲ್ಲ, ಮಾರಾಟ ಮಾಡುವಂತೆಯೂ ಇಲ್ಲ. ಈ ಯಾತ್ರೆ ಇಲ್ಲಿಗೇ ಮುಗಿಯುವುದಿಲ್ಲ. ಈಗ ಸ್ವಯಂಸೇವಕರು ಈ ಭೂಮಿಯಲ್ಲಿ ಮನೆ ಕಟ್ಟಿಕೊಡಲು ಧನ ಸಂಗ್ರಹ ಮಾಡಲಾರಂಭಿಸಿದ್ದಾರೆ. ಈ ಉದ್ದೇಶಿತ ಕಾರ್ಯವನ್ನು ಈಡೇರಿಸಲು ಸಮರ್ಪಿತ ಸ್ವಯಂಸೇವಕರ ಒಂದು ತಂಡವಿದೆ. ಸರ್ಕಾರಿ ಯೋಜನೆ ಮತ್ತು ಕಾರ್ಪೊರೇಟ್ ವಲಯ ಸಹಿತ ಎಲ್ಲಾ ದಾನಿಗಳಿಂದ ಧನ ಸಂಗ್ರಹಿಸಲು ಸಂಪರ್ಕ ಮಾಡಲಾರಂಭಿಸಿದ್ದಾರೆ.


ಸರಕಾರಿ ಆಸ್ಪತ್ರೆಯಲ್ಲಿ ಔಷಧಿ ಮತ್ತು ಅಗತ್ಯವಿರುವವರಿಗೆ ಊಟದ ವ್ಯವಸ್ಥೆಯನ್ನು 2007 ರಿಂದಲೇ ಆರಂಭಿಸಿರುವ ಇರಿಂಜಾಲಕುಡಾ ಸೇವಾಭಾರತಿಯು ಕೇವಲ ಕೆಲವೇ ವರ್ಷಗಳಲ್ಲಿ ಸಂಸ್ಥಾಪಕ ಸ್ವಯಂಸೇವಕರಾದ ಪಿ.ಹರಿದಾಸ್ ಪಿ.ಯಂ.ಶಂಕರನ್ ಮತ್ತು ಎ.ಎಸ್. ಸತೀಶನ್ ಮೊದಲಾದವರ ಸಾಮರ್ಥ್ಯಪೂರ್ಣ ಸಂಚಾಲಕತ್ವದಲ್ಲಿ ಮಾಡಿ ತೋರಿಸಿರುವುದು ಸಾವಿರಾರು ಜನರ ಜೀವನಕ್ಕೊಂದು ನವ ಚೈತನ್ಯ ದೊರೆತಂತಾಗಿದೆ. ಪ್ರಸ್ತುತ ಸೇವಾಭಾರತಿ ಇರಿಂಜಾಲಕುಡಾ ಮೂಲಕ "ಸಂಗಮೇಶ್ವರ ವಾನಪ್ರಸ್ಥಾ ಆಶ್ರಮಂ" ಎಂಬ ಹೆಸರಿನಲ್ಲಿ ವೃದ್ಧಾಶ್ರಮ; ಸೇವಾಶ್ರಮ ನಿಲಯಂ ಹೆಸರಿನಲ್ಲಿ, ಮಾನಸಿಕವಾಗಿ ಹಿಂದುಳಿದವರಿಗೆ ಒಂದು ಡೇ ಕೇರ್ ಸೆಂಟರ್, ಹಾಗೂ ದಿನದ 24 ಗಂಟೆಗಳ ಕಾಲ ಆಂಬುಲೆನ್ಸ್ ಸೇವೆ, ಮತ್ತು ಫ್ರೀಜರ್ ವ್ಯವಸ್ಥೆಯನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ.

ಸಂಪರ್ಕ : ಜಿತಿನ್ ರಮೇಶ್

ಸಂಪರ್ಕ ನಂಬರ್ :08330083324

1204 Views
अगली कहानी