सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ನಾವಿರಲಿ ಇಲ್ಲದಿರಲಿ ಭಾರತ ಸುರಕ್ಷಿತವಾಗಿರಲಿ

ಶ್ರೀಮತಿ ಮೇಘ ಪ್ರಮೋದ್ | ದಕ್ಷಿಣ

parivartan-img

 ಕೆಲವೊಮ್ಮೆ ಮನುಷ್ಯನಮೇಲೆ ದು:ಖಗಳ ಪರ್ವತವೇ ಬಿದ್ದುಬಿಡುತ್ತದೆ. ಭೂಪಾಲ್ ನ ಅರೋರ ಕಾಲೋನಿಯಲ್ಲಿ ಒಂದು ಕೋಣೆಯ ಮನೆಯನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದ ಕಲ್ಪನಾ ವಿಶ್ವಕರ್ಮರ ಕಥೆಯೂ ಇಂತಹದೆ ಒಂದು ನೋವಿನ ಘಟನೆಯನ್ನು ಸಾರುತ್ತದೆ.

ಗರ್ಭಿಣಿಯಾಗಿದ್ದ ಕಲ್ಪನಾರ ಒಂದು ಕಾಲಿಗೆ ಗ್ಯಾಂಗ್ರಿನ್ ಆಗಿದ್ದರಿಂದ ಬಹುತೇಕ ಅವರು ಅಂಗವಿಕಲರಾಗಿದ್ದರು. ಕೊರೋನಾದ ಈ ಸಂದರ್ಭವು ಅವರ ಬದುಕಿನಲ್ಲಿ ಅನೇಕ ತೊಂದರೆಗಳನ್ನು ತಂದೊಡ್ಡಿತ್ತು. ಒಂದು ಕಡೆ ಕಲ್ಪನಾರ ಮಾವ ದ್ವಾರಕಾಪ್ರಸಾದ್ ವಿಶ್ವಕರ್ಮರು ಕೊರೋನಾ ಸೋಂಕಿಗೆ ಒಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ ಮತ್ತೊಂದು ಕಡೆ ಆಟೊ ಡ್ರೈವರ್ ಆಗಿದ್ದ ಅವರ ಪತಿ ಸೋನು ಅವರಿಗೆ ಲಾಕ್ ಡೌನ್ ನಿಂದಾಗಿ ಆದಾಯವೂ ಇಲ್ಲವಾಗಿತ್ತು. ಹೊಟ್ಟೆಯಲ್ಲಿ ಪುಟ್ಟ ಜೀವವನ್ನು ಹೊತ್ತಿದ್ದ ಕಲ್ಪನಾರಿಗೆ ತನ್ನ ಮಾವನ ಚಿಕಿತ್ಸೆಯ ವೆಚ್ಚವನ್ನು ಬರಿಸುವುದು ಕಷ್ಟಕರವಾಗಿತ್ತು ಹಾಗೆಯೆ ಒಂದು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಉಂಟಾಗಿತ್ತು. ಇವರ ಈ ನೋವು ಯಾವಾಗ ಭೋಪಾಲ್ ನ ಸೇವಾ ಭಾರತಿಯ ಮಹಾನಗರ ಮಹಿಳಾ ಸಂಯೋಜಕರಾದ ಆಬಾ ದೀದಿಗೆ ತಿಳಿಯಿತೋ ಆಗ ಸೇವಾ ಭಾರತಿಯ ರೂಪದಲ್ಲಿ ದೇವರ ಅನುಗ್ರಹ ಕಲ್ಪನಾರ ಮೇಲೆ ಆಯಿತು. ಸೇವಾ ಸಂಕಲ್ಪ ಕೈಗೊಂಡಿದ್ದ ಸೇವಾಭಾರತಿಯ ಕಾರ್ಯಕರ್ತರು ಕಲ್ಪನಾರ ಪರಿವಾರದ ಎಲ್ಲಾ ಜವಬ್ಧಾರಿಯನ್ನು ತಾವೆ ವಹಿಸಿಕೊಂಡರು.


ಮೊದಲು ಅವರ ಮಾವನ ಚಿಕಿತ್ಸೆಗಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಿದರು. ಆದರೆ ಅವರು ವಿಧಿವಶರಾದಾಗ ಅವರ ಅಂತ್ಯ ಸಂಸ್ಕಾರದಿಂದ ಹಿಡಿದು 13ನೇ ದಿನದ ಕಾರ್ಯಗಳ ತನಕ ಎಲ್ಲಾ ಕರ್ತವ್ಯಗಳನ್ನು ನಿಭಾಯಿಸಿದರು. ಇಷ್ಟೇ ಅಲ್ಲ, ಲಾಕ್ ಡೌನ್ ಮುಗಿಯುವ ತನಕ ಈ ಪರಿವಾರಕ್ಕೆ ದಿನಸಿ ಹಾಗು ಗರ್ಭಿಣಿಯಾಗಿದ್ದ ಕಲ್ಪನಾರಿಗೆ ಪೌಷ್ಟಿಕ ಅಹಾರ ದೊರೆಯುವ ವ್ಯವಸ್ಥೆಯನ್ನೂ ಮಾಡಿದರು.

ಇಂತಹ ದಾರುಣ ಕಥೆಗಳಲ್ಲಿ ಒಂದು ಕಥೆ ಜ್ಯೋತಿಯವರದ್ದೂ ಆಗಿತ್ತು. ಇವರ 8 ವರ್ಷದ ಮಗಳು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಳು, ಇಂದೋರ್ ನ ಬಾಡ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ಜ್ಯೋತಿ ಹಲವು ಮನೆಗಳಲ್ಲಿ ಮನೆಕೆಲಸ ಮಾಡಿ ತಮ್ಮ ಮನೆಯನ್ನು ನಡೆಸುತ್ತಿದ್ದರು ಹಾಗು ಪತಿ ಆಟೊ ಓಡಿಸುತ್ತಿದ್ದರು

ಆದರೆ ಲಾಕ್ ಡೌನ್ ಇಬ್ಬರ ಉದ್ಯೋಗವನ್ನು ಕಿತ್ತುಕೊಂಡಿತ್ತು. ಕ್ಯಾನ್ಸರ್ ನಂತಹ ಭಯಾನಕ ಕಾಯಿಲೆಯಿಂದ ಬಳಲುತ್ತಿದ್ದ ಮಗಳು ಒಂದು ತುತ್ತು ಊಟಕ್ಕಾಗಿ ಹಂಬಲಿಸಲು ಪ್ರಾರಂಭಿಸಿದಾಗ ಜ್ಯೋತಿ ಇಂದೋರ್ ನ ಸೇವಾ ಭಾರತಿಯ ಸಹಾಯವಾಣಿಯ ಮೂಲಕ ಪ್ರಾಂತ ಸಂಯೋಜಕರಾದ ಸುನೀತಾ ದೀದಿ ಅವರಿಗೆ ದಿನಸಿಯ ಅವಶ್ಯಕತೆ ಇರುವುದನ್ನು ತಿಳಿಸಿದರು. ಫೋನ್ ಮೂಲಕ ಆಲಿಸಿದ ಆ ಕರುಣಾಜನಕ ಕಥೆಯನ್ನು ಇಂದಿಗೂ ಮರೆಯಲು ಆಗುವುದಿಲ್ಲ ಎಂದು ಸುನೀತ ದೀದಿ ಹೇಳುತ್ತಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಲಾಕ್ ಡೌನ್ ಮುಗಿಯುವ ತನಕ ಈ ಪರಿವಾರಕ್ಕೆ ದಿನಸಿಯನ್ನು ಒದಗಿಸಿದ್ದಲ್ಲದೆ ಸಾಧ್ಯವಾದಷ್ಟು ಎಲ್ಲಾ ರೀತಿಯಲ್ಲೂ ಸಹಾಯ ಮಾಡಿದರು. ಮೈ ರಹೂಂ ನಾ ರಹೂಂ, ಭಾರತ್ ಯೆ ರೆಹೆನಾ ಚಾಹಿಯೆಎಂಬ ಮಣಿಕರ್ಣಿಕಾ ಚಲನಚಿತ್ರದ ಪ್ರಸಿದ್ಧ ಹಾಡಿನ ಈ ಸಾಲುಗಳು ಸಂಘದ ಸ್ವಯಂಸೇವಕರಿಗೇ ಬರೆದಂತಿದೆ. ಸೀಧಿ ಜಿಲ್ಲೆಯ ಜಿಲ್ಲಾ ಸೇವಾ ಪ್ರಮುಖರಾದ ಆಶಿಷ್ ಜೀಯವರ ಕಥೆಯನ್ನು ಕೇಳಿದರೆ ಹಾಗೆಯೆ ಅನ್ನಿಸುತ್ತದೆ.


ಕೊರೋನಾ ಸಮಯದಲ್ಲಿ ನಿರಂತರವಾಗಿ ಸೇವಾ ಕಾರ್ಯದಲ್ಲಿ ತೊಡಗಿದ್ದ ಆಶೀಷ್ ಜೀಯವರಿಗೆ ಕೊರೋನಾ ಸೋಂಕು ತಗುಲಿದಾಗ, ಅವರು ರೀವಾದ ಕುಶಭಾವು ಠಾಕರೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸಂದರ್ಭದಲ್ಲೂ ಗಂಭೀರ ಸ್ಥಿತಿಯಲ್ಲಿದ್ದ ಬೇರೆ ರೋಗಿಗೆ ಕೆಲವು ಗಂಟೆಗಳ ಕಾಲ ಆಕ್ಸೀಜನ್ ಸಿಲಿಂಡರ್ ನ ಅವಶ್ಯಕತೆ ಇದೆ ಎಂದು ತಿಳಿದುಬಂದಾಗ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ತಮ್ಮ ಆಕ್ಸೀಜನ್ ಸಿಲಿಂಡರನ್ನು 3ಗಂಟೆಗಳ ಕಾಲ ಆ ರೋಗಿಗೆ ನೀಡಿ ತಾವು ಕರ್ಪೂರದ ಸಹಾಯದಿಂದ ಉಸಿರಾಡುತ್ತಿದ್ದರು. ಇಂದು ಆಶೀಷ್ ಜೀಯವರು ಸುರಕ್ಷಿತರಾಗಿದ್ದಾರೆ ಹಾಗೆಯೆ ಯಾರಿಗಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಸಹಾಯ ಮಾಡಿದ್ದರೋ ಆ ಮಹಿಳಾರೋಗಿಯು ಆರೋಗ್ಯವಾಗಿದ್ದಾರೆ.

"ಇಡೀ ಕ್ಷೇತ್ರದಲ್ಲಿ ಸ್ವಯಂಸೇವಕರು ಸಮಾಜದ ಜೊತೆ ನಿಂತಿದ್ದಾರೆ. 589ಸಹಾಯವಾಣಿ ಕೇಂದ್ರಗಳು, 123 ಐಸೋಲೇಶನ್ ಕೇಂದ್ರಗಳು, 17ಕೋವಿಡ್ ಕೇರ್ ಸೆಂಟರ್ ಗಳು ಹಾಗು 649 ಸ್ಥಳಗಳಲ್ಲಿ 40,624 ಆಹಾರಗಳ ಪೊಟ್ಟಣಗಳನ್ನು ಹಂಚುವ ಕೆಲಸದಲ್ಲಿ 11,077 ಕಾರ್ಯಕರ್ತರು ಸಂಪೂರ್ಣವಾಗಿ ತಮ್ಮ ಯೋಗದಾನವನ್ನು ನೀಡಿದ್ದಾರೆ" ಎಂದು ಮಧ್ಯಕ್ಷೇತ್ರದ ಕ್ಷೇತ್ರ ಕಾರ್ಯವಾಹರಾದ ಅಶೋಕ್ ಅಗರವಾಲ್ ಜೀ ಹೇಳುತ್ತಾರೆ.

ರತ್ಲಾಂ ನ ಪಂಚೇಡ್ ಗ್ರಾಮದಲ್ಲಿ ನೂರು ಪ್ರತಿಶತ ವ್ಯಾಕ್ಸಿನೇಶನ್ ಹಾಕಿಸುವ ಮೂಲಕ ಸ್ವಯಂಸೇವಕರು ಇತಿಹಾಸವನ್ನು ರಚಿಸಿದ್ದರು. ಆ ಹಳ್ಳಿಯಲ್ಲಿ ಕೊರೊನಾದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 30ಕ್ಕೆ ಏರಿದಾಗ ಹಲವು ವರ್ಷಗಳಿಂದ ಶಾಖೆಗೆ ಬರುತ್ತಿದ್ದ ತರುಣ ಸ್ವಯಂಸೇವಕರು ತಮ್ಮ ಗ್ರಾಮವನ್ನು ಕೊರೋನಾದಿಂದ ಸುರಕ್ಷಿತವಾಗಿಡಲು ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಪ್ರತಿಜ್ಞೆ ಮಾಡಿದರು.

ಮೊದಲಿಗೆ ಸ್ವಯಂಸೇವಕರು ಹಳ್ಳಿಯನ್ನು ಸೀಲ್ ಮಾಡಿ ಹಳ್ಳಿಗೆ ಬಂದು ಹೋಗುವವರನ್ನು ತಡೆದ ಕಾರಣ ಕೊರೋನಾದ ಸೋಂಕಿನ ಪ್ರಮಾಣ ಶೂನ್ಯವಾಯಿತು, ನಂತರ ಇಡಿ ಹಳ್ಳಿಯಲ್ಲಿ ಮನೆ ಮನೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಲು ಯೋಗ್ಯರಾದ ಎಲ್ಲರನ್ನು ವ್ಯಾಕ್ಸಿನೇಶನ್ ಸೆಂಟರ್ ಗೆ ಕರೆದೊಯ್ಯುವ ಮೂಲಕ ವ್ಯಾಕ್ಸಿನೇಶನ್ ಹಾಕಿಸಲಾಯಿತು.

ಕೊರೋನಾದ ಈ ಬಾರಿಯ ಅಲೆಯು ದಟ್ಟವಾದ ವನವಾಸಿ ಪ್ರದೇಶಗಳಿಗೂ ಹರಡಿತ್ತು. ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯಲ್ಲಿ ಈ ಮಹಾಮಾರಿಯನ್ನು ತಡೆಯಲು ಒಂದು ಹೊಸ ಯಶಸ್ವಿ ಪ್ರಯೋಗವನ್ನು ಮಾಡಲಾಯಿತು. ಖಂಡ್ವಾದ ವಿಭಾಗ ಸೇವಾ ಪ್ರಮುಖರಾದ ಅತುಲ್ ಶಾಹ್ ಜೀಯವರ ಪ್ರಕಾರ ವನವಾಸಿ ಬಾಹುಳ್ಯವಿರುವ ಪ್ರದೇಶಗಳಲ್ಲಿ ಅಲ್ಲಿಯ ಜನರು ಆಸ್ಪತ್ರೆಗೆ ಬರಲು ಹಾಗು ಪರೀಕ್ಷೆ ಮಾಡಿಸಿಕೊಳ್ಳಲು ತಯಾರಿರಲಿಲ್ಲ.

ಶೀತ, ಕೆಮ್ಮು, ಜ್ವರದಿಂದ ಸಾವನ್ನಪ್ಪುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಾ ಹೋಯಿತು. ಇಂತಹ ಸಂದರ್ಭದಲ್ಲಿ ಇಂದೋರ್ ನ ಪ್ರಸಿದ್ಧ ಗೋಕುಲ್ ದಾಸ್ ಆಸ್ಪತ್ರೆಯ ಹಿರಿಯ ವೈದ್ಯರು ಗ್ರಾಮೀಣ ವೈದ್ಯರಿಗೆ ಆನ್ ಲೈನ್ ತರಬೇತಿ ನೀಡುವ ಮೂಲಕ ಹಳ್ಳಿಯ ವೈದ್ಯರು ಹಳ್ಳಿಯಲ್ಲೆ ಪರೀಕ್ಷೆ ನಡೆಸುವ ಹಾಗಾಯಿತು, ಹಾಗೆಯೆ ಸಂಘವು ರೋಗಿಗಳಿಗೆ ಪರೀಕ್ಷೆಯ ನಂತರ ಪ್ರಾಥಮಿಕ ಚಿಕಿತ್ಸೆಗಾಗಿ ಔಷಧಿಯ ವ್ಯವಸ್ಥೆಯನ್ನೂ ಮಾಡಿತು.

ಈ ಗ್ರಾಮೀಣ ವೈದ್ಯರ ಮೂಲಕ ಗುಡಿ, ಸಿಂಗೋಟ್, ಬೋರ್ಗಾವ್, ಗುಲಾಯಿ ಮಾಲ್, ರೋಶನಿ, ಪಟಾಜನ್, ಝಿಂಝರೀ, ಗೋಲಖೇಢಾ, ಝುಮ್ಮರ್ಕಲೀ ಹಾಗು ಸುತ್ತ ಮುತ್ತಲಿನ ಹಳ್ಳಿಯ 14ಒ ಪಿ ಡಿ ಗಳು ನಿರಂತರವಾಗಿ ವನವಾಸಿ ಇಲಾಖೆಗಳಲ್ಲಿ ರೋಗಿಗಳ ಪರೀಕ್ಷೆ ಮತ್ತು ಪ್ರಾಥಮಿಕ ಚಿಕಿತ್ಸೆಗಳನ್ನು ನೀಡುತ್ತಾ ಸಾವಿರಾರು ವನವಾಸಿಗಳ ಪ್ರಾಣವನ್ನು ಉಳಿಸಿತು.
798 Views
अगली कहानी