सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಸುಂದರ ಮನದ ಸತ್ಯವಂತ ಮಕ್ಕಳು

ಶ್ರೀ ಗಿರಿಧರ್ ಉದ್ಯಾವರ | ದಕ್ಷಿಣ

parivartan-img

 ಕೊರೋನಾ ಕಾಲದಲ್ಲಿ ಶಾಲೆಗಳೆಲ್ಲ ಮುಚ್ಚಿದ್ದವು, ಹಾಗೆಯೇ ಮಕ್ಕಳು ಮನೆಯಿಂದ ಹೊರಗೆ ಹೋಗಿ ಆಟವಾಡಲು ಅನುಮತಿಯೂ ಇರಲಿಲ್ಲ. ಆಗ ಮೊಬೈಲ್ ಹಿಡಿದು ಕುಳಿತು ಸಮಯವನ್ನು ವ್ಯರ್ಥ ಮಾಡದೆ, ದೆಹಲಿಯ ಕೆಲವು ಮಕ್ಕಳು ತಮ್ಮ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ವಿಧಾನವನ್ನು ಕಂಡುಹಿಡಿದರು. ಅವರು ಒಂದು ಆತ್ಮೀಯ ಬಂಧನದಿಂದ ತಮ್ಮ ತಮ್ಮ ಬದುಕನ್ನು ಸುಂದರವಾಗಿಸಿಕೊಂಡರು.

ಲಾಕ್ಡೌನ್ ಸಮಯದಲ್ಲಿ ಪ್ರಾರಂಭವಾದ ದೆಹಲಿಯ ಸೇವಾಭಾರತಿಯ "ಈಚ್ ಒನ್ ಟೀಚ್ ಒನ್" ಅಂದರೆ, "ಒಬ್ಬರು ಇನ್ನೊಬ್ಬರಿಗೆ ಕಲಿಸಿ" ಕಾರ್ಯಕ್ರಮದಲ್ಲಿ ಒಂದಾದ ಡಿಪಿಎಸ್, ಜೀಡೀ ಗೋಯೆಂಕಾ, ಮಾಡ್ರನ್ ಸ್ಕೂಲ್ ನಂಥ ಪ್ರತಿಷ್ಠಿತ ಶಾಲೆಗಳ 1200ಕ್ಕೂ ಅಧಿಕ ಮಕ್ಕಳು ಅಂಬೇಡ್ಕರ್ ಬಸ್ತಿ, ವಾಲ್ಮೀಕಿ ಬಸ್ತಿ, ರವಿದಾಸ್ ಕ್ಯಾಂಪ್, ಕಾಲ್ಕಾಜೀ ಸಂಜಯ್ ಕ್ಯಾಂಪ್ ಬಸ್ತಿಗಳ ಮಕ್ಕಳಿಗೆ ಆನ್ ಲೈನ್ ನಲ್ಲಿ ಪಾಠ ಮಾಡಿದರು, ಸುಂದರವಾದ ಕಥೆಗಳನ್ನು ಹೇಳಿದರು, ನೃತ್ಯ ಕಲಿಸಿದರು, ಪೆನ್ ಸ್ಟ್ಯಾಂಡ್ ನಂತಹ ಅನೇಕ ಕಲಾತ್ಮಕ ವಸ್ತುಗಳನ್ನು ಮಾಡಲು ಕಲಿಸಿದರು. ಸಕಲ ಐಷಾರಾಮಗಳಿಂದ ಸಂಪನ್ನರಾದ ಶ್ರೀಮಂತ ಕುಟುಂಬದ ಮಕ್ಕಳು ಮತ್ತು ಜೋಪಡಿಯಲ್ಲಿರುವ ಸೌಲಭ್ಯ ವಂಚಿತ ಮಕ್ಕಳು, ಇಬ್ಬರನ್ನೂ ಹೃದಯದಿಂದ ಬೆಸೆಯುವ ಇದೊಂದು ಅಪರೂಪದ ಸೇವಾಯಾತ್ರೆಯಾಗಿತ್ತು.


ಈ ಯಾತ್ರೆಯು ಎರಡೂ ಪಂಗಡಗಳ ತಾರತಮ್ಯವನ್ನು ತೊಡೆದು, ಎಲ್ಲರ ಜೀವನದಲ್ಲಿ ಒಂದು ಅದ್ಭುತವಾದ ಹಾದಿಯನ್ನು ರೂಪಿಸಿತು. ದೆಹಲಿಯ ಸೇವಾಭಾರತಿಯ ಹಿರಿಯ ಪ್ರಾಂತಪ್ರಚಾರಕ ಭೂಪೇಂದ್ರಜೀ ಹೇಳುತ್ತಾರೆ, ಕೊರೋನಾ ಸಂದರ್ಭ ಕಳೆದ ನಂತರ "ಈಚ್ ಒನ್ ಟೀಚ್ ಒನ್" ಕಾರ್ಯಕ್ರಮವು ಈಗ ಸೇವೆಯ ನಂತರ ರಾಷ್ಟ್ರ ಭಾವವೂ ಸೇರಿಕೊಂಡ "ಟೀಮ್ ಸೇವಾ" ಎಂಬ ಹೊಸ ರೂಪ ತಳೆದಿದೆ.

2020ರ ಮಾರ್ಚ್ ಸಮಯ. ಕೊರೋನಾ ಭಾರತದಲ್ಲಿ ಪ್ರವೇಶ ಮಾಡಿತು, ಎಲ್ಲ ಶಾಲೆಗಳೂ ಅನಿರ್ದಿಷ್ಟಾವಧಿ ಮುಚ್ಚಿಹೋದವು. ಆಗ ದೆಹಲಿಯ ಸೇವಾಭಾರತಿಯ ಪ್ರಾಂತ ಸಂಪರ್ಕ ಪ್ರಮುಖರಾದ ನಿಧಿ ಅಹುಜಾ ಅವರನ್ನು, ಮೊದಲಿನಿಂದಲೂ ಸೇವಾಭಾರತಿಯ ಮೂಲಕ ಆಯೋಜಿಸಲ್ಪಡುತ್ತಿದ್ದ ಬೇಸಿಗೆ ಮತ್ತು ಚಳಿಗಾಲದ ಶಿಬಿರಗಳಲ್ಲಿ ಸೇವಾಬಸ್ತಿಗಳ ಮಕ್ಕಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ 50ಮಕ್ಕಳು ಫೋನ್ ಮೂಲಕ ಸಂಪರ್ಕಿಸಿದರು. ಇದೇ ಸಮಯದಲ್ಲಿ ಸ್ವಯಂ ಪ್ರಧಾನಿ ಮೋದಿಯವರು ಮಕ್ಕಳು ಮತ್ತು ಹಿರಿಯರು ಮನೆಯಿಂದ ಹೊರಹೋಗಬಾರದೆನ್ನುವ ವಿನಂತಿಯನ್ನು ಮಾಡುತ್ತಿದ್ದರು. ತಾಯಿತಂದೆಯರಿಗೆ ಹೆದರಿಕೆಯಿತ್ತು ಹಾಗೂ ಕಾರ್ಯಕರ್ತರಿಗೂ ಈ ಸಮಯದಲ್ಲಿ ಮಕ್ಕಳನ್ನು ಒಳ್ಳೆಯ ಕೆಲಸದಲ್ಲಿ ಹೇಗೆ ತೊಡಗಿಸಬೇಕು ಎನ್ನುವ ಚಿಂತೆಯೂ ಇತ್ತು. ಆಗ ನಿಧಿಜೀ ಅವರು ಈ "ಈಚ್ ಒನ್ ಟೀಚ್ ಒನ್" ಕಾರ್ಯಕ್ರಮವನ್ನು ರೂಪಿಸಿ, ಗೂಗಲ್ ಫಾರ್ಮ್ ಗಳ ಮೂಲಕ ಮಕ್ಕಳಿಗೆ ನಿವೇದನೆ ತಲುಪಿಸಿದರು.


ಸೇವಾಬಸ್ತಿಯ ಮಕ್ಕಳಿಗೆ ಯಾರ್ಯಾರಿಗೆ ಕಲಿಸುವ ಇಚ್ಛೆ ಇದೆ ಎಂಬ ಅವರ ನಿವೇದನೆಗೆ 1000ಕ್ಕೂ ಹೆಚ್ಚಿನ ಮಕ್ಕಳು ಸ್ವಯಂಪ್ರೇರಿತರಾಗಿ ಖುಷಿ ಖುಷಿಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಇಚ್ಛೆ ವ್ಯಕ್ತಪಡಿಸಿದಾಗ ನಿಧಿಯವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಆಗ ಸೇವಾಭಾರತಿಯು ಸಂಸ್ಕಾರ ಕೇಂದ್ರಗಳ ನಿರೀಕ್ಷಕರು ಹಾಗೂ ಶಿಕ್ಷಕಿಯರ ಸಹಯೋಗದಿಂದ ಬಸ್ತಿಯಲ್ಲಿರುವ ಕೆಲವು ಆಂಡ್ರಾಯ್ಡ್ ಫೋನ್ ಉಪಯೋಗಿಸಿ ಸೇವಾಬಸ್ತಿಯ ಒಂದು ಮಗುವಿಗೂ, ಸೌಲಭ್ಯವಿರುವ ಒಂದು ಮಗುವಿನೊಂದಿಗೂ ಆನ್‌ಲೈನ್ ಸಂಪರ್ಕ ಮಾಡಿಸಿದರು. ಹೇಳಿಕೊಡುವವರನ್ನು ವಾಲಂಟಿಯರ್ ಎಂದು ಕರೆದರು. ವಾರದಲ್ಲಿ ಒಂದು ಬಾರಿ ನಡೆದ ಈ ತರಗತಿಯು ಭೇದಭಾವವನ್ನು ತೊಡೆದು ಹಾಕಿ ಸಾರ್ಥಕ ಮಿತ್ರತ್ವವನ್ನು ಸ್ಥಾಪಿಸಿತು.


ಈಗ ಈ ಕಾರ್ಯಕ್ರಮದ ಚಾಲನೆಯ ಜವಾಬ್ದಾರಿ ಹೊತ್ತಿರುವ ಸೋದರಿ ದೀಪ್ತಿ ಹೇಳುತ್ತಾರೆ.... ಈ ತರಗತಿಗಳು ದೊಡ್ಡವರ ವಿಭಾಗ, ಕಥೆ ಹೇಳುವ ವಿಭಾಗ, ಹವ್ಯಾಸಗಳ ವಿಭಾಗ ಮತ್ತು ಬುಕ್ ಬ್ಯಾಂಕ್ ವಿಭಾಗ ಎಂಬ 4 ವಿಭಾಗಗಳಲ್ಲಿ ನಡೆಯಿತು. ದೊಡ್ಡವರ ವಿಭಾಗದಲ್ಲಿ ಪರಸ್ಪರ ಸ್ನೇಹವನ್ನು ದೃಢಗೊಳಿಸಲಾಯಿತು. ಕಥಾ ವಿಭಾಗದಲ್ಲಿ ವಾಲಂಟಿಯರ್ ಮಕ್ಕಳು ಕೆಲವು ನೈತಿಕ ಹಾಗೂ ವೈಜ್ಞಾನಿಕ ಕಥೆಗಳನ್ನು ದೊಡ್ಡವರಿಗೆ ಹೇಳಿದರು. ಹವ್ಯಾಸಗಳ ತರಗತಿಯಲ್ಲಿ ಡ್ರಾಯಿಂಗ್ ಪೆಯಿಂಟಿಂಗ್, ಕಸೂತಿಯ ಹಲವು ವಿಧಗಳನ್ನು ಆನ್‌ಲೈನ್ ಮೂಲಕ ಕಲಿಸಲಾಯಿತು ಮತ್ತು ಬುಕ್ ಬ್ಯಾಂಕ್ ನಲ್ಲಿ ಸೇವಾಬಸ್ತಿಯ ಮಕ್ಕಳಿಗೆ ಒಳ್ಳೆಯ ಪುಸ್ತಕಗಳನ್ನು ಕಳಿಸಲಾಯಿತು. ಈ ಅಭಿಯಾನದಲ್ಲಿ 11ರಿಂದ 19ವರ್ಷದೊಳಗಿನ 1500ಮಕ್ಕಳನ್ನು ಪ್ರೇರೇಪಿಸಲು ಮತ್ತು ಅವರ ಮನೋಬಲವನ್ನು ಹೆಚ್ಚಿಸಲು ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಪ್ರಸಿದ್ಧ ಬ್ಯಾಟ್ಸ್‌ಮನ್ ಶಿಖರ್ ಧವನ್, ಸ್ಫೂರ್ತಿದಾಯಕ ಮಾತುಗಾರ ಶಿವಖೇಡಾ ಸಹಿತ ಅನೇಕ ಹೆಸರಾಂತ ವ್ಯಕ್ತಿಗಳ ವಿಡಿಯೋಗಳನ್ನು ಮಾಡಿ ಈ ಮಕ್ಕಳಿಗೆ ಶುಭ ಹಾರೈಸಲಾಯಿತು.

ಕೊರೋನಾ ಕಾಲದಲ್ಲಿ ಶುರುವಾದ ದೆಹಲಿಯ ಸೇವಾಭಾರತಿಯ ಈ ಶಿಕ್ಷಣ ಅಭಿಯಾನ ಇದೀಗ ಈ ಮಕ್ಕಳಿಗೆ ಜೀವನವಿಡೀ ಜೊತೆಯಾಗಿದೆ. ಡಿಸೆಂಬರ್ ನಲ್ಲಿ ಮೊದಲ ಸಲ ಈ ಮಕ್ಕಳು ಪರಸ್ಪರ ಭೇಟಿಯಾದ ಆ ದೃಶ್ಯ ರಾಮ-ಭರತರ ಮಿಲನದಂತೆ ಹೃದಯಸ್ಪರ್ಶಿಯಾಗಿತ್ತು. ಆರ್ಕೆಪುರದ ಸೇವಾಬಸ್ತಿಯ ನೀರಜ್ ಹೇಳಿದ ಮಾತು.... "ಜೀವನಪೂರ್ತಿ ಹಾಗೂ ಜೀವನದ ನಂತರವೂ ನಮ್ಮೊಂದಿಗೆ ಈ ಅನುಬಂಧವು ಇರುತ್ತದೆ" ಈಗಲೂ ಸೇವಾಭಾರತಿಯ ಕಾರ್ಯಕರ್ತರ ಮನದಲ್ಲಿ ಮೊಳಗುತ್ತಿದೆ... 

490 Views
अगली कहानी