सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಕಷ್ಟದ ಸಹಾಯಕರು.

ಶ್ರೀಮತಿ ಸಹನ ವಿಠ್ಠಲ್ ಕುಮಾರ್ | ದಕ್ಷಿಣ

parivartan-img

ವಿಧಿಯ ಒಂದು..... ಕೇವಲ.....ಒಂದೇ ಒಂದು ಹೊಡೆತ ಮಾನವನ ಎಲ್ಲವನ್ನೂ ನಷ್ಟ ಮಾಡಬಲ್ಲದು. ಭೋಪಾಲದಲ್ಲಿ ಸಹ ವಿಧಿಯು ಅಂತಹದೇ ಆಟವನ್ನು ಆಡಿತು. ಪೈಸೆಗೆ ಪೈಸೆ ಒಟ್ಟುಗೂಡಿಸಿ ಮಾಡಿದ ಜೋಪಡಿಗಳು ಒಂದೇ ಕ್ಷಣದಲ್ಲಿ ಭಸ್ಮವಾಯಿತು. 9 ಏಪ್ರಿಲ್ 2018 ರ 12 ಗಂಟೆಗೆ ಸುಡುವ ಮಧ್ಯಾಹ್ನದಲ್ಲಿ ಭೋಪಾಲದ ಐಷಾರಾಮಿ ರಿಹಾಯಿಶ್ಸಾ ಕೆತ್ ನಗರದ ಪಕ್ಕದ ಜೋಪಡಿಗಳಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಉಂಟಾದ ಭಯಾನಕ ಬೆಂಕಿ ಇಲ್ಲಿ ವಾಸಿಸುತ್ತಿದ್ದ ಅಸಹಾಯಕರಾದ ಜನರ ಸಣ್ಣಸಣ್ಣ ಕನಸುಗಳನ್ನು ಬೂದಿಯ ರಾಶಿಯಾಗಿ ಬದಲಾಯಿಸುತ್ತಿತ್ತು. ಆಗಲೇ ಕೆಲವು ಯುವಕರ ಒಂದು ತಂಡ ದೇವದೂತರಂತೆ ಪ್ರಕಟವಾಯಿತು. ಈಗ ಅಲ್ಲಿ ಈ ಅಸಹಾಯಕ ಜನರ ಹಾಗೂ ನಿರ್ದಯ ವಿಧಿಯ ನಡುವೆ ಗೋಡೆಯಾಗಿ ಯಾರಾದರೂ ನಿಂತಿದ್ದರೆ, ಅದು ಖಾಕಿ ಚಡ್ಡಿ ತೊಟ್ಟಿರುವ ಈ ಯುವ ಗಣವೇಷಧಾರಿ ಸ್ವಯಂಸೇವಕರಾಗಿದ್ದರು. ಇವರು ತಮ್ಮ ಸಾಹಸ ಹಾಗೂ ಸೇವಾಭಾವದಿಂದ ಈ ಸೇವಾಬಸ್ತಿಯ ಜನರ ಮೇಲೆ ಬಿದ್ದಿರುವ ವಿಧಿಯ ವಕ್ರ ದೃಷ್ಟಿಯ ಪರಿಣಾಮವನ್ನು ಕಡಿಮೆ ಮಾಡಲು ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನೂ ಮಾಡಿದರು.


ಸ್ವಯಂಸೇವಕನೊಬ್ಬ ಸೇವಾಬಸ್ತಿಯವರನ್ನು ಬೆಂಕಿಯಿಂದ ಹೊರಗೆ ತರುವಲ್ಲಿ ಸಹಾಯ ಮಾಡುತ್ತಿದ್ದರೆ, ಇನ್ನೊಬ್ಬ ಡೇರೆಯ ವ್ಯವಸ್ಥೆಯಲ್ಲಿ ಸೇರಿಕೊಂಡಿದ್ದನು. ಮಧ್ಯಪ್ರದೇಶದ ರಾಜಧಾನಿ ಭೋಪಾಲದ ಸಾಕೇತ್ ನಗರದಲ್ಲಿ 25 ವರ್ಷದಿಂದ ವಾಸಿಸುತ್ತಿರುವ ಈ ಜೋಪಡಿಯಲ್ಲಿ ಹತ್ತಿದ ಭೀಷಣ ಬೆಂಕಿಯಿಂದ ಒಟ್ಟು 31 ಜೋಪಡಿಗಳು ಹೊತ್ತಿ ಭಸ್ಮವಾದವು. ಪೀಡಿತರ ಸಹಾಯಕ್ಕಾಗಿ ಎಲ್ಲಕ್ಕಿಂತ ಮೊದಲು ತಲುಪಿದ ಸ್ವಯಂಸೇವಕರು ಬೆಂಕಿ ಹೊತ್ತಿದ ಕೆಲವೇ ಗಂಟೆಗಳಲ್ಲಿ ಅವರಿಗೆ ಬೇಕಾಗಿದ್ದ ಬಟ್ಟೆ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಿದರು. ಭೋಪಾಲದ ವಿಭಾಗ ಬೌದ್ಧಿಕ್ ಪ್ರಮುಖ್ ನಿತಿನ್'ಜಿ ಕೇಕರೆಯವರ ಪ್ರಕಾರ ಆಡಳಿತ ಸಿಬ್ಬಂದಿಯಿಂದ ಹಿಡಿದು ಮಂದಿರದ ಸಮಿತಿಯವರೆಗೆ ಸ್ವಯಂಸೇವಕರು ಎಲ್ಲರೊಂದಿಗೆ ಮಾತನಾಡಿ ಕೆಲವೇ ಗಂಟೆಗಳಲ್ಲಿ ಪೀಡಿತರಿಗಾಗಿ ಈ ರೀತಿಯ ಸಹಾಯವನ್ನುಒಗ್ಗೂಡಿಸಿದರು.

25 ವರ್ಷಗಳಿಂದ ಮನೆಮನೆಯಲ್ಲಿ ಪಾತ್ರೆ ತೊಳೆಯುವ, ಈ ಜೋಪಡಿಯಲ್ಲೇ ಇದ್ದುಕೊಂಡು ಯುವಾವಸ್ಥೆಯಿಂದ ಮುದುಕಿಯಾಗಿರುವ ಶಾಂತಿ ಬಾಯಿಯ ವ್ಯಥೆಯು ಕಣ್ಣೀರಿನೊಂದಿಗೆ ಉಕ್ಕಿ ಬರುವುದು. ಅವಳು ತಲೆಯ ಮೇಲೆ ಕೈಹೊತ್ತು ವಿಧಿಯನ್ನು ದೂಷಿಸುತ್ತಿದ್ದಳು. ಆಗಲೇ ಈ ಯುವಕರು ಅವಳಿಗೆ ಧೈರ್ಯ ತುಂಬಿ ಎರಡು ದಿನ ರಾತ್ರಿ ಹಗಲೆನ್ನದೆ ತಮ್ಮವರಂತೆ ಅವರ ಎಲ್ಲಾ ಅವಶ್ಯಕತೆಗಳನ್ನು ಪೂರ್ತಿಗೊಳಿಸುವಲ್ಲಿ ನಿರತರಾದರು. ಮೊದಲು ಇಲ್ಲಿಗೆ ಬಂದವರಲ್ಲಿ ಅಶ್ವಿನಿ ಚಡಾರ್, ಗೌರವ್ ಶುಕ್ಲ, ಕಾರ್ತಿಕ್ ವರ್ಮ, ಅಶುತೋಷ್ ನಾಮದೇವ್ ಹಾಗೂ ಅತುಲ್ ವಿಶ್ವಕರ್ಮ ಮೊದಲನೇ ದಿನ ಹೋಟೆಲಿನಿಂದ ಹಾಗೂ ಎರಡನೇ ದಿನ ಜೋಪಡಿಯ ಪಕ್ಕದ 2 ಎ ಸೆಕ್ಟರ್'ನ 150 ಕುಟುಂಬಗಳಿಂದ ಭೋಜನವನ್ನು ಸಂಗ್ರಹಿಸಿ ತಂದು ಹಂಚಿದರು. ಈ ಯುವಕರು ಉಚಿತ ವ್ಯವಸ್ಥೆಗಾಗಿ ಮಂದಿರದ ಸಮಿತಿ ಹಾಗೂ ಸೇವಾಭಾರತಿಯ ಕಾರ್ಯಕರ್ತರಿಂದ ಸಹಾಯವನ್ನು ಕೇಳಿದರು.

ಸೇವಾಭಾರತಿಯ ಮಂಡಲದ ಸಹೋದರಿಯರು ಮಕ್ಕಳಿಗಾಗಿ ಪುಸ್ತಕ ಹಾಗೂ ಅವಶ್ಯಕ ಸಾಮಗ್ರಿಗಳನ್ನು ಸಂಗ್ರಹಿಸಿದರು ಹಾಗೂ ಓದುವುದಕ್ಕಾಗಿ ಮಂದಿರಗಳ ಕೋಣೆಯನ್ನು ತೆರೆಸಿದರು. ಬೆಂಕಿ ಹತ್ತಿದ 24 ಗಂಟೆಯೊಳಗೆ ಸೇವಾಭಾರತಿಯ ಮೊಬೈಲ್ ಮೆಡಿಕಲ್ ವ್ಯಾನ್'ನ ಡಾಕ್ಟರ್ ದಿನೇಶ್ ಶರ್ಮ ಹಾಗೂ ಡಾಕ್ಟರ್ ರಾಮ್ಅ ವತಾರ್ ಯಾದವ್ ಸೇವಾಬಸ್ತಿಯ ಜನರ ವೈದ್ಯಕೀಯ ಪರೀಕ್ಷೆ ನಡೆಸಿ ಅವಶ್ಯಕ ಮದ್ದುಗಳನ್ನು ಕೊಟ್ಟರು. ಈಗ ಈ ಪೀಡಿತ ಕುಟುಂಬಗಳನ್ನು ಸರಕಾರವು ಒಂದು ಬಹುಮಹಡಿ ಕಟ್ಟಡಕ್ಕೆ ಸ್ಥಳಾಂತರಿಸಿದೆ. ಸಹಾಯ ಮಾಡುವ ಹಲವು ಸಂಸ್ಥೆಗಳು ಕೈಜೋಡಿಸಿವೆ ಹಾಗೂ ಸೇವಾ ಭಾರತಿಯ ಸಾಕೇತ್ ಮಂಡಲದ ಸಮಸ್ತ ಮಹಿಳೆಯರು ಹಾಗೂ ಪುರುಷರು ಸ್ವಯಂಸೇವಕರ ಸಹಯೋಗದಲ್ಲಿ ಎಲ್ಲರೊಂದಿಗೆ ಸಮನ್ವಯದಿಂದ ಅರ್ಹ ವ್ಯಕ್ತಿಗೆ ಅವಶ್ಯಕವಿರುವ ಎಲ್ಲ ವಸ್ತುಗಳನ್ನು ತಲುಪಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿರುವರು.

1228 Views