सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಅವಘಡದಿಂದ ಪಾರಾದ ಮುಗ್ದ ಮಕ್ಕಳು

ಶ್ರೀಮತಿ ಮೇಘ ಪ್ರಮೋದ್ | ದಕ್ಷಿಣ

parivartan-img

ಬೆಂಕಿ ದೈತ್ಯ ರೂಪವನ್ನು ತಾಳಿದಾಗ , ಮನುಷ್ಯನು ಅಸಹಾಯಕನಾಗುತ್ತಾನೆ. ಆದರೆ ಕೆಲವೊಮ್ಮೆ ಮನುಷ್ಯನ ಧೈರ್ಯ ಮತ್ತು ಸಾಹಸದ ಮುಂದೆ ಬೆಂಕಿಯೂ ಶರಣಾಗಬೇಕಾಗುತ್ತದೆ. ಕೆಲವು ದೇವದೂತರು ಬಂದು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಆ 48 ಮಕ್ಕಳು ಅಗ್ನಿಗೆ ಆಹುತಿಯಾಗುವುದನ್ನು ತಪ್ಪಿಸದಿದ್ದರೆ 23 ನವೆಂಬರ್ 2017ರ ಆ ದಿನವನ್ನು ಇಂದೋರ್ (ಮಧ್ಯಪ್ರದೇಶ) ನ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಯಾದ ಯಂ ವೈ ಆಸ್ಪತ್ರೆಯ ಇತಿಹಾಸದಲ್ಲಿ ಕಪ್ಪು ಅಕ್ಷರದಲ್ಲಿ ಬರೆಯಬೇಕಾಗುತ್ತಿತ್ತು.

ಮಕ್ಕಳ ತುರ್ತು ವಾರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಅಲ್ಲಿದ್ದ ಮೂರು ಜನರು ವಾರ್ಡಿನ ಗಾಜಿನ ಗೋಡೆಯನ್ನು ಒಡೆಯುವ ಮೂಲಕ ಅಲ್ಲಿದ್ದ ಮಕ್ಕಳನ್ನು ರಕ್ಷಿಸತೊಡಗಿದರು ಅದನ್ನು ನೋಡಿ ಅಲ್ಲಿದ್ದ ಇನ್ನಿತರ ಸಿಬ್ಬಂಧಿಗಳು ಸಹ ಸಹಾಯ ಮಾಡಲು ಮುಂದಾದರು. ದಿನೇಶ್ ಸೋನಿ, ರಮೇಶ್ ವರ್ಮಾ ಮತ್ತು ಗಜೇಂದ್ರ ರಸೀಲೆ ಎಂಬ ಮೂವರು ಆಸ್ಪತ್ರೆಯಲ್ಲಿ ಬಡ ರೋಗಿಗಳಿಗಾಗಿ ಸೇವಾಭಾರತಿಯಿಂದ ನಡೆಸಲ್ಪಡುವ ಸೇವಾ ಪ್ರಕಲ್ಪದ ಕಾರ್ಯಕರ್ತರಾಗಿದ್ದರು.ಬಡ ಮತ್ತು ಅಸಹಾಯಕ ರೋಗಿಗಳ ರೋಗದ ಪರೀಕ್ಷೆಯಿಂದ ಹಿಡಿದು ಚಿಕಿತ್ಸೆಯ ತನಕ ಸಾಧ್ಯವಾಗುವ ಎಲ್ಲಾ ಸಹಾಯವನ್ನು ಮಾಡುವ ಸಲುವಾಗಿ ಇಂದೋರಿನಲ್ಲಿ ಸೇವಾಭಾರತಿಯ ಸಹಾಯ ಕೇಂದ್ರದ ವತಿಯಿಂದ ಕಳೆದ 3 ವರ್ಷಗಳಿಂದ ಸೇವಾಭಾರತಿ ಸೇವಾ ಪ್ರಕಲ್ಪ ಎಂಬ ಹೆಸರಿನಿಂದ ಆಸ್ಪತ್ರೆಯ ಆವರಣದಲ್ಲಿ ನಡೆಸಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಎಲ್ಲಾ ಅಸಹಾಯಕ ರೋಗಿಗಳಿಗೆ ಎಲ್ಲಾ ರೀತಿಯಿಂದಲೂ ಸಹಾಯ ಮಾಡಲಾಗುತ್ತಿದೆ.




ಗಜೆಂದ್ರ ರಸೀಲೆಯವರು ನವೆಂಬರ್ 23 ರಂದು ನಡೆದ ಘಟನೆಯ ಚರ್ಚೆ ಬಂದ ಕೂಡಲೇ ಭಾವುಕರಾಗುತ್ತಾರೆ. ಬೆಂಕಿಯ ಶಬ್ದವನ್ನು ಕೇಳಿ, ಅವರು ತಮ್ಮ ಇಬ್ಬರು ಸಹಚರರೊಂದಿಗೆ ವಾರ್ಡ್‌ಗೆ ತಲುಪಿದಾಗ, ಅಲ್ಲಿ ಅದಾಗಲೇ ಅವ್ಯವಸ್ಥೆ ಉಂಟಾಗಿತ್ತು. ಮಕ್ಕಳು ಭಯಭೀತರಾಗಿ ಕಿರುಚುತ್ತಿದ್ದರು. ಮಕ್ಕಳ ಸಂಬಂಧಿಕರ ಪರಿಸ್ಥಿತಿ ಶೋಚನೀಯವಾಗಿತ್ತು. ಆಗ ಅಲ್ಲಿ ಒಂದು ಕ್ಷಣವೂ ವ್ಯರ್ಥ ಮಾಡದೆ ಮೂವರೂ ಗಾಜಿನ ಗೋಡೆಗಳನ್ನು ಮುರಿದು ಐಸಿಯುಗೆ ನುಗ್ಗಿದರು ಮತ್ತು ಮಕ್ಕಳನ್ನು ರಕ್ಷಿಸತೊಡಗಿದರು. ನೋಡುನೋಡುತ್ತಿದ್ದಂತೆ ಅಲ್ಲಿದ್ದ ಅನೇಕರ ಸಹಾಯದಿಂದ 48 ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆಯಲಾಯಿತು.

ಯೋಜನೆಯ ಪ್ರಮುಖರಾದ ಮಹೇಂದ್ರ ಜೈನ್ ಅವರ ಪ್ರಕಾರ ಇಲ್ಲಿ ತೊಡಗಿಸಿಕೊಂಡಿದ್ದ ಎಲ್ಲಾ ಕಾರ್ಯಕರ್ತರು ಸೇವಾ ಭಾವನೆಯಿಂದ ತಮ್ಮ ಸಮಯವನ್ನು ಇಲ್ಲಿ ಬರುವ ಅಸಹಾಯಕ ರೋಗಿಗಳಿಗಾಗಿ ನೀಡುತ್ತಾರೆ, ಪ್ರಾಯಶಃ ಇಂತಹ ಪರರ ದುಃಖಕ್ಕೆ ಓಗೊಡುವ ಸ್ವಭಾವವೇ ಈ ಕಾರ್ಯಕರ್ತರಲ್ಲಿ ಬೆಂಕಿಯ ವಿರುದ್ಧ ಹೊರಾಡುವ ಧೈರ್ಯವನ್ನು ನೀಡಿತ್ತು ಎಂದು ಅವರು ಹೇಳುತ್ತಾರೆ.

ಈ ಯೋಜನೆಯ ಅಡಿಯಲ್ಲಿ ಯಾವ ರೋಗಿಗಳನ್ನು ಸಂಬಂಧಿಕರು ತೊರೆದು ಹೋಗಿರುತ್ತಾರೋ ಅಂತಹ ರೋಗಿಗಳನ್ನೂ ಇಲ್ಲಿ ನೋಡಿಕೊಳ್ಳಲಾಗುತ್ತಿದೆ.

ಯೋಜನೆಯು ತನ್ನದೇ ಆದ ಆಂಬ್ಯುಲೆನ್ಸ್ ಹೊಂದಿದ್ದು, ಇದು 24 ಗಂಟೆಗಳ ಕಾಲ ಪೀಡಿತ ರೋಗಿಗಳಿಗಾಗಿ ಇಂದೋರ್‌ನ ಎಲ್ಲೆಡೆ ತಲುಪುತ್ತದೆ.

838 Views
अगली कहानी