सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ವಿನಾಶದಿಂದ ವಿಕಾಸದೆಡೆಗಿನ ಗಾಥೆ

ಶ್ರೀಮತಿ ರೂಪಶ್ರೀ ನಾಗರಾಜ್ | ಲಡಾಖ್ | ಲಡಾಖ್

parivartan-img

ದೇವಭೂಮಿ ಎಂದೇ ಕರೆಯಲಾಗುವ ಲೇಹ್ ಲಡಾಖ್ ನಲ್ಲಿ, ಯಾವುದೇ ವಿಪತ್ತುಗಳ ಅರಿವಿಲ್ಲದೆ ಸಿಹಿ ನಿದ್ರೆಯಲ್ಲಿ ಮಲಗಿದ್ದ ಜನರ ಮೇಲೆ ಮಧ್ಯರಾತ್ರಿ ಧಾರಾಕಾರವಾಗಿ ಸುರಿದ ಮಳೆಯು  ಜಲಪ್ರಳಯದಂತೆ ಬಂದೆರಗಿತು.  2010ರ ಆಗಸ್ಟ್ 5ರಂದು ಇದ್ದಕ್ಕಿದ್ದಂತೆ ಆದ ಮೇಘಸ್ಪೋಟದಿಂದ , ಪ್ರವಾಹದ ರೀತಿಯಲ್ಲಿ ಧುಮ್ಮಿಕ್ಕಿದ  ನೀರು ರಸ್ತೆಗಳನ್ನು ಮತ್ತು ಹೊಲಗಳಲ್ಲಿ ಬೆಳೆದಿದ್ದ ಹಚ್ಚಹಸಿರು ಫಸಲುಗಳನ್ನು ನಾಶಪಡಿಸುವುದರ ಜೊತೆಗೆ, ತನ್ನೊಂದಿಗೆ ದೊಡ್ಡ ದೊಡ್ಡ ಬೃಹದಾಕಾರದ ಕಲ್ಲು ಬಂಡೆಗಳನ್ನೂ ಕೊಚ್ಚಿಕೊಂಡು ಬಂದಿತ್ತು. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಇಡೀ ಪರ್ವತವೇ ನೀರಿನೊಂದಿಗೆ ಕೆಳಕ್ಕೆ ಬಂದುಬಿಟ್ಟಿತೋ ಎನ್ನುವಂತಿತ್ತು ಅಲ್ಲಿನ ಪರಿಸ್ಥಿತಿ. ನಿದ್ರೆಯಲ್ಲೇ ಜನರು ಮನೆಗಳ ಸಹಿತವಾಗಿ ಕೆಲವು ಕಿಲೋಮೀಟರ್ ಗಳಷ್ಟು ದೂರ ಕೊಚ್ಚಿಕೊಂಡು ಹೋಗಿದ್ದರು. ಕೆಲವೇ ಗಂಟೆಗಳಲ್ಲಿ 600 ಕೋಟಿಯಷ್ಟು ನಷ್ಟವಾಗಿತ್ತು ಎಂದು ಆ ಸಮಯದಲ್ಲಿ ವಿಪತ್ತು ನಿರ್ವಹಣಾ ಅಧಿಕಾರಿಯಾಗಿದ್ದ ಜಗಮೀತ್ ತಪಕಾ ಅವರು ಹೇಳುತ್ತಾರೆ.


 ಆದರೆ ನಿಜಕ್ಕೂ ಭಗವಂತನ ಕೃಪೆ ದೊಡ್ಡದು. ಹತ್ತಿರದಲ್ಲೇ ಚೋಗ್ಲಂಸರ್ ನಲ್ಲಿ  ನಡೆಯುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಾ ವರ್ಗಕ್ಕೆ ಈ ಸಮಾಚಾರ ಮುಟ್ಟಿತು. “”ಶಿಕ್ಷಾ ವರ್ಗದ ತರಬೇತಿಯನ್ನು ಅಲ್ಲಿಗೇ  ಸಮಾಪ್ತಿಗೊಳಿಸಿ, ಎಲ್ಲ ಸ್ವಯಂಸೇವಕರೂ ಸಂಕಷ್ಟಕ್ಕೆ ಒಳಗಾದವರ ಸಹಾಯಕ್ಕಾಗಿ ಲಡಾಖ್ ಗೆ ಬಂದು ತಲುಪಿದರು, ತಮ್ಮ ಜೀವದ ಹಂಗು ತೊರೆದು ಆ ಸ್ವಯಂಸೇವಕರು 27 ಜೀವಗಳನ್ನು ರಕ್ಷಿಸಿ, ಪೀಡಿತ ಪರಿವಾರಗಳಿಗೆ ಭೋಜನ, ನೀರು, ಔಷಧಿ, ಸೊಳ್ಳೆಪರದೆ ಮತ್ತು ಹಾಸಿಗೆ ಇತ್ಯಾದಿಗಳ ವ್ಯವಸ್ಥೆಯನ್ನು  ಕೂಡಲೇ ಮಾಡಿದರು.” 

ಇಷ್ಟೇ ಅಲ್ಲ, ಸೇವಾಭಾರತಿಯು ಲಡಾಖ್ ಕಲ್ಯಾಣ ಸಂಘದ ಜೊತೆ ಸೇರಿ, ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಉದ್ಯೋಗ ತರಬೇತಿ ನೀಡುವ ಕಾರ್ಯವನ್ನೂ ಪ್ರಾರಂಭಿಸಿತು.

 ಐದು ಕಣಿವೆಗಳಿಂದ ಸುತ್ತುವರೆದಿರುವ ಲೇಹ್ ಲಡಾಖ್ ನ ಸೌಂದರ್ಯ ಎಲ್ಲರನ್ನೂ ಆಕರ್ಷಿಸುತ್ತದೆ, ಆದರೆ ವರ್ಷದ 12 ತಿಂಗಳೂ ಹಿಮಾಚ್ಛಾದಿತ ಪರ್ವತಗಳಿಂದ ಆವೃತವಾಗಿರುವ ಲಾಮಾಗಳ ಈ ನಾಡಿನಲ್ಲಿ ಯಾವಾಗಲೂ ತೀವ್ರವಾದ ಛಳಿ ಇರುತ್ತದೆ. ಹಾಗಾಗಿ ಇಲ್ಲಿ ಸ್ವಾವಲಂಬನೆ ಮತ್ತು ಪುನರ್ವಸತಿ ಬಹಳ ಕಠಿಣವಾಗಿಬಿಡುತ್ತದೆ. ಆದ್ದರಿಂದ ಸಣ್ಣ ಸಣ್ಣ ಉದ್ಯೋಗಿಗಳಿಗೆ ಸಾಧನಗಳನ್ನು ಕಲ್ಪಿಸುವುದರ ಮೂಲಕ ಕಾರ್ಯವನ್ನು ಪ್ರಾರಂಭವನ್ನು ಮಾಡಲಾಯಿತು. ಕ್ಷೌರಿಕರಿಗೆ ಕ್ಷೌರ ಮಾಡುವ ಕುರ್ಚಿ, ಟೈಲರ್ ಗಳಿಗೆ  ಹೊಲಿಯುವ ಯಂತ್ರ, ಢಾಭಾ ಮಂದಿಗೆ ಪಾತ್ರೆಗಳು, ಮತ್ತು ಬಡಗಿಗಳಿಗೆ ಉಪಕರಣಗಳನ್ನು ಕೊಡಲಾಯಿತು.   ಲಡಾಖ್ ನಲ್ಲಿ ಹರಿಯುವ ನೀರಿನಿಂದ ನಡೆಯುವ ರೈನ್ ಟೆಕ್  ಯಂತ್ರಗಳಿಂದ ಗೃಹಿಣಿಯರು ಗೋಧಿ ಮತ್ತು ಬಾರ್ಲಿಯ ಹಿಟ್ಟನ್ನು  ಮಾಡುತ್ತಿದ್ದರು. ಆದರೆ ಪ್ರವಾಹದಲ್ಲಿ 250 ರೈನ್ ಟೆಕ್  ಯಂತ್ರಗಳು ಕೊಚ್ಚಿ ಹೋಗಿದ್ದರಿಂದ ಸೇವಾಭಾರತಿಯು 90 ಜನರಿಗೆ  ರೈನ್ ಟೆಕ್  ಯಂತ್ರಗಳನ್ನೂ ಒದಗಿಸಿತು. 


  ಕೇವಲ ಚೋಗ್ಲಂಸರ್ ಒಂದರಲ್ಲೇ  240 ಮನೆಗಳು ಕೊಚ್ಚಿ ಹೋಗಿದ್ದವು. ಅನೇಕ ಸ್ವಯಂಸೇವಾ ಸಂಘಟನೆಗಳು ಪರಿಹಾರ ಕಾರ್ಯಗಳು ಮುಗಿದ ಮೇಲೆ ತಮ್ಮ ಹಾಸಿಗೆ ಸಾಮಾನುಗಳನ್ನು ಕಟ್ಟಿಕೊಂಡು ಹೊರಟರು. ಆದರೆ ಸೇವಾಭಾರತಿಯು   ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸಿ ಕೊಡಬೇಕೆಂದು ನಿಶ್ಚಯಿಸಿತು. ಇಷ್ಟೇ ಅಲ್ಲ, ಚೋಗ್ಲಂಸರ್ ನಲ್ಲಿ ಸ್ಥಳಾಂತರಿಸಲಾದವರಿಗೆ ಹಿಲ್ ಕೌನ್ಸಿಲ್ (ಸರ್ಕಾರದ) ಮೂಲಕ ನಿರ್ಮಿಸಲಾಗುತ್ತಿದ್ದ ಸೋಲರ್ ಕಾಲನಿಯಲ್ಲಿ ಸೇವಾಭಾರತಿಯು ಒಂದು ಮೆಡಿಕಲ್ ಹೆಲ್ಪ್ ಸೆಂಟರ್ ಮತ್ತು ಬಹುಉಪಯೋಗಿ ಸೇವಾ ಗೃಹವನ್ನು ನಿರ್ಮಿಸಿತು 


ಇಲ್ಲಿನ ಒಬ್ಬ ಪ್ರಮುಖ ಅಧಿಕಾರಿ ತೇನ್ಸಿಂಗ್ ದೋರ್ಜ್ಯಾ  ಅವರು ಹೇಳುತ್ತಾರೆ,ಸೇವಾಭಾರತಿಯು ನಿರಾಶ್ರಿತರಿಗೆ ನೂರು ಮನೆಗಳನ್ನು ಕಟ್ಟಿಕೊಟ್ಟು, ಪುನರ್ವಸತಿ ಕಾರ್ಯದಲ್ಲಿ ಕೈಜೋಡಿಸಿತು. ಹಾಗೆಯೇ ಸರ್ಕಾರಿ ಶಾಲೆಯಲ್ಲಿ ಪುಸ್ತಕಗಳು, ಸಮವಸ್ತ್ರ ಹಾಗೂ ನೀರಿನ ಟ್ಯಾಂಕ್ ಗಳ ಸೌಲಭ್ಯವನ್ನು ಕಲ್ಪಿಸಿತು. ವಿಪತ್ತಿನಿಂದ ಹಿಡಿದು ಪುನರ್ವಸತಿಯ  ಈ ಇಡೀ ಯಾತ್ರೆಯಲ್ಲಿ ಸ್ವಯಂಸೇವಕರು ಹೊಲಗಳಲ್ಲಿ ತುಂಬಿದ್ದ ಅವಶೇಷಗಳನ್ನು ಜೆಸಿಬಿಯಿಂದ ಸ್ವಚ್ಛ ಮಾಡುವುದರಿಂದ ಹಿಡಿದು, ಶವಗಳ ಅಂತ್ಯಸಂಸ್ಕಾರದ ತನಕ ಎಲ್ಲಾ ಕಾರ್ಯಗಳನ್ನು ಕೌಶಲ್ಯಪೂರ್ಣವಾಗಿ ನಿಭಾಯಿಸಿದರು ಎಂದು. 

     " ಪ್ರಾಥಮಿಕ ಶಿಕ್ಷಾ ವರ್ಗಕ್ಕೆ ಬಂದಿದ್ದ  ಸಂಘದ ಸ್ವಯಂಸೇವಕರು ಒಂದು ಕ್ಷಣವೂ ವ್ಯರ್ಥ ಮಾಡದೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸಹಾಯ ಮಾಡುವುದರಲ್ಲಿ ಮಗ್ನರಾದರು ಹಾಗು 27 ವ್ಯಕ್ತಿಗಳ ಜೀವವನ್ನು ಉಳಿಸಿರುವುದು ಸಂಘದ ಶಾಖೆಗಳಲ್ಲಿ ದೊರೆತ ಸಂಸ್ಕಾರವನ್ನು ತೋರಿಸುತ್ತದೆ " ಎಂದು ಅಂದಿನ ವಿಭಾಗ ಕಾರ್ಯವಾಹರಾಗಿದ್ದ  ಬಿಜಾಯ್  ಚಿಗಲಮತ್ತಾ ಹೇಳುತ್ತಾರೆ. 

ದುರಂತ ಸಂಭವಿಸಿ ದಶಕಗಳೇ ಕಳೆದರೂ ಸಂತ್ರಸ್ತ ಕುಟುಂಬಗಳಿಗಾಗಿ ಹಲವು ಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ.


ಸಂಪರ್ಕ - ಜಯದೇವ ಸಿಂಹ 

 ಮೊಬೈಲ್ ನಂಬರ್  - 91-9418005256

1123 Views
अगली कहानी