सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಶಿವೇ ಗ್ರಾಮದ ಚಿತ್ರಣವನ್ನು ಬದಲಿಸಿದ ವೀರ ಸಾವರ್ಕರ್ ಮಂಡಲ ..

ಶ್ರೀ ಗಿರಿಧರ್ ಉದ್ಯಾವರ | ದಕ್ಷಿಣ

parivartan-img

 ಬಬನ್ ದಗಡೂ ಮೇಲೆ ಇವತ್ತು ಕಷ್ಟಗಳ ಪರ್ವತವೇ ತುಂಡಾಗಿ ಬಿದ್ದಂತಾಗಿತ್ತು. ಮಣ್ಣಿನ ಪಾತ್ರೆಗಳನ್ನು ತಯಾರಿಸಿ ಪಟ್ಟಣದಲ್ಲಿ ಮಾರಾಟ ಮಾಡಿ ಬದುಕು ಸಾಗಿಸಲು ಕಷ್ಟವಾದಾಗ ಈ ಬಡ ಹುಡುಗ ತನ್ನ ಹಳ್ಳಿಗೆ ಹಿಂತಿರುಗಿ ತನ್ನ ಪುಟ್ಟ ಜಮೀನಿನಲ್ಲಿ ಉಳುಮೆ ಆರಂಭಿಸಿದ. ಆದರೆ ದುರ್ವಿಧಿ !! ಐದು ತಿಂಗಳ ಸತತ ಪರಿಶ್ರಮದಿಂದ ಕೈಸೇರಿದ 40 ಕ್ವಿಂಟಲ್ ಫಸಲು ದುರದೃಷ್ಟವಶಾತ್ ಬೆಂಕಿಗೆ ಆಹುತಿಯಾಯಿತು. ಆ ಸಮಯದಲ್ಲಿ ಅವನ ನೆರವಿಗೆ ಬಂದವರು ಆ ಹಳ್ಳಿಯ ವೀರ ಸಾವರ್ಕರ್ ಮಂಡಲದ ಯುವಕರು!!

 ಈ ಸ್ವಯಂಸೇವಕರು ಅಸಹಾಯಕನಾಗಿದ್ದ ಬಬನ್ ದಗಡೂಗೆ ಹಳ್ಳಿಯವರಿಂದ 25 ಕ್ವಿಂಟಲ್ ದವಸಧಾನ್ಯ ಹಾಗೂ 20,000 ರೂಪಾಯಿಗಳನ್ನು ಸಂಗ್ರಹಿಸಿ ಸಹಾಯ ಮಾಡಿದರು. ಪುಣೆಯ ಖೇಡ್ ತಾಲೂಕಿನ ಸಣ್ಣ ಹಳ್ಳಿಯಾದ "ಶಿವೆ" ಯಲ್ಲಿ ಸಂಘದ ಸ್ವಯಂಸೇವಕರ ಮಂಡಲಿಯು ಕಷ್ಟದ ಪರಿಸ್ಥಿತಿಯಲ್ಲಿ ಈ ಬಡ ರೈತನಿಗೆ ಬೆಂಬಲವಾಗಿ ನಿಂತು ಆತನಿಗೆ ಆಸರೆಯಾಗಿದೆ.




 ಶಂಕರ ತುಲಸೀರಾಮ ಸಾತ್ಪುತೆ ಅವರಿಗೆ ಇಂದಿಗೂ ಆ ದಿನವನ್ನು ಮರೆಯಲಾಗಿಲ್ಲ... ಅಂದು ಅವರ ಮನೆಯು ಸುಟ್ಟು ಕರಕಲಾದ ಮೇಲೆ ಈ ಯುವಕರು 1,75,000/- ರೂಪಾಯಿಗಳನ್ನು ಸಂಗ್ರಹಿಸಿ ಇವರಿಗೆ ಪುಟ್ಟದಾದ ಮನೆಯನ್ನು ನಿರ್ಮಿಸಿ ಕೊಟ್ಟಿದ್ದರು.

 ಇದೊಂದು ಉದಾಹರಣೆ ಮಾತ್ರ.. ಗ್ರಾಮದಲ್ಲಿರುವ ರಾಮಚಂದ್ರ ಗಹದೇ ಸ್ಮೃತಿ ವಾಚನಾಲಯ ಇರಬಹುದು, ಅಥವಾ ಇದೇ ಕಟ್ಟಡದಲ್ಲಿ ಸುವ್ಯವಸ್ಥಿತವಾಗಿ ನಡೆಯುತ್ತಿರುವ ನಿ:ಶ್ಶುಲ್ಕದ ಕಂಪ್ಯೂಟರ್ ತರಗತಿಗಳಿರಬಹುದು! ಗ್ರಾಮ ವಿಕಾಸ ಸಮಿತಿ ಮತ್ತು ಸಾವರ್ಕರ್ ಮಂಡಲದ ವತಿಯಿಂದ ಗ್ರಾಮದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ, ಈ ಎಲ್ಲ ಕ್ಷೇತ್ರಗಳಲ್ಲೂ ಮನಸ್ಸು ವಿಕಾಸ ಹೊಂದುವ, ಸರಿಯಾದ ಮಾರ್ಗದರ್ಶನವನ್ನು ನೀಡುವ ಕಾರ್ಯಗಳು ನಡೆಯುತ್ತಿವೆ.




ರಾಷ್ಟ್ರೀಯ ಸ್ವಯಂಸೇವಕ ಸಂಘದ "ರಾಷ್ಟ್ರ ಜಾಗರಣ" ಅಭಿಯಾನದ ಮುಖಾಂತರ 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಸಂಘದ ಸ್ವಯಂಸೇವಕರು "ಶಿವೆ" ಗ್ರಾಮವನ್ನು ತಲುಪಿದರು. ಆ ಕಾಲದ ಪ್ರಾಂತ ಗ್ರಾಮವಿಕಾಸ ಪ್ರಮುಖರಾಗಿದ್ದ ರಮೇಶಜೀ ಕೋಬಲ್ ಮತ್ತು ಅವರ ಸಂಗಡಿಗರ ಪರಿಶ್ರಮದಿಂದ ಇಲ್ಲಿ ಒಂದು ಸಾಪ್ತಾಹಿಕ ಶಾಖೆಯು ಆರಂಭವಾಯಿತು. ಶಾಖೆಯಲ್ಲಿ ತಯಾರಾದ ಸ್ವಯಂಸೇವಕರ ಪರಿಶ್ರಮದಿಂದ ಗ್ರಾಮದಲ್ಲಿ ಪರಿವರ್ತನೆಯ ಗಾಳಿ ಬೀಸಲಾರಂಭಿಸಿತು ಎಂದು ಸಾವರ್ಕರ್ ಮಂಡಲದ ಸಂಸ್ಥಾಪಕ ಶ್ರೀ ರೋಹಿದಾಸ್ ಗಡದೇ ಹೇಳುತ್ತಾರೆ.


18 ವರ್ಷಗಳಿಂದ ನಡೆಯುತ್ತಿರುವ ಐದು ದಿನಗಳ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಿಂದ ಗ್ರಾಮದ ಜನರಲ್ಲಿ ರಾಷ್ಟ್ರಭಾವದ ಜಾಗೃತಿ ಬೆಳೆಯತೊಡಗಿದೆ. ಈ ಗ್ರಾಮದ ಬಡ ಕುಟುಂಬದ ಕನ್ಯೆಯರ ವಿವಾಹವು, ಮಂಡಲದ ವತಿಯಿಂದ ಪ್ರತಿ ವರ್ಷವೂ "ಸಾಮೂಹಿಕ ವಿವಾಹ" ಕಾರ್ಯಕ್ರಮದಲ್ಲಿ ಕಿಂಚಿತ್ತೂ ಖರ್ಚಿಲ್ಲದೆ ಜರಗುತ್ತಿವೆ. ಈವರೆಗೆ ಈ ಕಾರ್ಯಕ್ರಮದ ಮೂಲಕ ಬಡ ಕುಟುಂಬದ 400ಕ್ಕೂ ಹೆಚ್ಚಿನ ಹೆಣ್ಣು ಮಕ್ಕಳ ವಿವಾಹವನ್ನು ನೆರವೇರಿಸುವುದರಲ್ಲಿ ಯಶಸ್ವಿಯಾಗಿದೆ.




ಶಿವೆ ಗ್ರಾಮದಲ್ಲಿ ಈಗ ಜನರಿಗೆ ಸಣ್ಣ ಪುಟ್ಟ ಅವಶ್ಯಕತೆಗಳಿಗೆ ದೊಡ್ಡವರ ಮುಂದೆ ಕೈ ಚಾಚುವ ಪ್ರಮೇಯವಿಲ್ಲ. ರಮೇಶ ಕೋಬಲ್ ಜೀ ಅವರ ಪ್ರಕಾರ ಈ ಗ್ರಾಮದಲ್ಲಿ ಪುರುಷರ ಮತ್ತು ಮಹಿಳೆಯರ ಪ್ರತ್ಯೇಕ ಸ್ವಸಹಾಯ ಸಂಘಗಳು ಸುಸೂತ್ರವಾಗಿ ನಡೆಯುತ್ತಿವೆ. ಅಗತ್ಯವಿದ್ದ ಸಮಯದಲ್ಲಿ 1% ಬಡ್ಡಿಯ ಶರತ್ತಿನ ಮೇಲೆ ಹಣ ಸಿಗಬಹುದಾಗಿದೆ. ಗ್ರಾಮದ ಮಕ್ಕಳು ನಗರದ ಮಕ್ಕಳ ರೀತಿಯಲ್ಲೇ ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ ಶ್ರೀ ರಾಮಗೀರ್ ಬಾಬಾ ಶಿಕ್ಷಣ ಸಂಸ್ಥೆಯ ವತಿಯಿಂದ ಇಲ್ಲಿ ಜ್ಞಾನದೀಪ ವಿದ್ಯಾಲಯ ನಡೆಯುತ್ತಿದೆ. ಈ ವಿದ್ಯಾಲಯವು ವ್ಯವಸ್ಥಿತವಾದ ರೀತಿಯಲ್ಲಿ ಸಾಗುವಲ್ಲಿ ವೀರ ಸಾವರ್ಕರ್ ಮಂಡಲವು ಮುಖ್ಯ ಪಾತ್ರವನ್ನು ವಹಿಸುತ್ತಿದೆ.


ಈ ಗ್ರಾಮದ ಮಕ್ಕಳು ಸರ್ಕಾರಿ ನೌಕರಿಗಳನ್ನು ಪಡೆಯಲಿ ಎಂಬ ಉದ್ದೇಶದಿಂದ ರಾಮಚಂದ್ರ ಗಹದೇ ಸ್ಮೃತಿ ವಾಚನಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯ ತರಬೇತಿಗಳು ನಡೆಯುತ್ತಿವೆ. ಇದೇ ಕಟ್ಟಡದಲ್ಲಿ ನಡೆಯುತ್ತಿರುವ ಕಂಪ್ಯೂಟರ್ ಕೇಂದ್ರದ ವಿಶೇಷತೆಯೆಂದರೆ, ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳೂ ಸಹ ಇಲ್ಲಿ ಕಂಪ್ಯೂಟರ್ ಕಲಿಯಲು ಬರುತ್ತಾರೆ. ವಾಚನಾಲಯದಲ್ಲಿ ಲಭ್ಯವಿರುವ 15,000ಕ್ಕೂ ಅಧಿಕ ಪುಸ್ತಕ ಭಂಡಾರವು ನಿಜವಾದ ಅರ್ಥದಲ್ಲಿ ಎಂದಿಗೂ ಖಾಲಿಯಾಗದ ಜ್ಞಾನಭಂಡಾರವಾಗಿದೆ.


ಸಂಪರ್ಕ - ರೋಹಿದಾಸ್ ಗಡದೇ


+91 98506 67265


557 Views
अगली कहानी