सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಬಾ.. ಕೈ ಜೋಡಿಸೋಣ.. ಮುನ್ನಡೆಯೋಣ (ವಿವೇಕಾನಂದ ಸೇವಾ ಮಂಡಲ - ಮಹಾರಾಷ್ಟ್ರ)

ಶ್ರೀ ಗಿರಿಧರ್ ಉದ್ಯಾವರ | ದಕ್ಷಿಣ

parivartan-img

 ಕನಸುಗಳ ನಗರಿ ಮುಂಬಯಿಯಲ್ಲಿ, ಜೀವನವೂ ಅಲ್ಲಿನ ಲೋಕಲ್ ರೈಲಿನಂತೆ ಓಡುತ್ತಿರುತ್ತದೆ. ಆದರೆ, ತಮ್ಮ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಮುಂದೆ ಸಾಗುವ ಈ ಭರದ ಸ್ಪರ್ಧೆಯಲ್ಲಿ, ಹಿಂದೆ ಉಳಿದುಹೋದವರ ಕೈ ಹಿಡಿದು ಅವರನ್ನು ಮುನ್ನಡೆಸಿದಂಥ ಕೆಲವೊಂದಿಷ್ಟು ಯುವಕರೂ ಇದ್ದರು. ಉಚ್ಚ ಶಿಕ್ಷಣದ ನಂತರ ಸಂಪಾದನೆಯೇ ನಮ್ಮ ಗುರಿ ಎಂಬ ಧ್ಯೇಯೋದ್ದೇಶವನ್ನು ಬದಲಿಸಿದವರು ಸ್ವಾಮಿ ವಿವೇಕಾನಂದ ಸೇವಾ ಮಂಡಲದ ಯುವಕರು.

ಮಹಾರಾಷ್ಟ್ರದ ದೊಂಬಿವಿಲಿ ನಗರದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಒಂದಷ್ಟು ಹುಡುಗರು, ಅವಶ್ಯಕತೆಯಿದ್ದ ವಿದ್ಯಾರ್ಥಿಗಳಿಗೋಸ್ಕರ 1991ರಲ್ಲಿ ಒಂದು ಸಣ್ಣ ಗ್ರಂಥಾಲಯವನ್ನು ಸ್ಥಾಪಿಸುವ ಮೂಲಕ ಈ ಕಾರ್ಯದ ಶುಭಾರಂಭವನ್ನು ಮಾಡಿದರು. ಸಂಘದ ಅನುಭವಿ ಸ್ವಯಂಸೇವಕರಾಗಿದ್ದ ವಿಷ್ಣು ಗಜಾನನ ದೇವಸ್ಥಲೀ ಮತ್ತು ಪ್ರೊಫೆಸರ್ ಸುರೇಶ ನಾಖರೇ ಅವರ ಪ್ರೇರಣೆಯಿಂದ ಇಂಜಿನಿಯರಿಂಗ್ ಓದುತ್ತಿದ್ದ 15 ವಿದ್ಯಾರ್ಥಿಗಳ ಬಲದಿಂದ ಈ ಮಂಡಲಿಯು ಸ್ಥಾಪನೆಯಾಯಿತು. ಈ ಯುವಕರು ಪ್ರತಿ ಶನಿವಾರ ಮತ್ತು ಭಾನುವಾರಗಳಂದು ದೊಂಬಿವಿಲಿಯ ಮಹಾನಗರಪಾಲಿಕೆಯ ಸರ್ಕಾರಿ ವಿದ್ಯಾಲಯಗಳಿಗೆ ಹೋಗಿ ಮಕ್ಕಳಿಗೆ ವಿಜ್ಞಾನ ಹಾಗೂ ಗಣಿತ ವಿಷಯಗಳನ್ನು ಹೇಳಿಕೊಡುತ್ತಾ ಬಂದರು. ಮೊದಲ 18 ವರ್ಷಗಳು ಸತತವಾಗಿ ಗ್ರಾಮದ ಮಕ್ಕಳಿಗೂ ಕಲಿಸುತ್ತಿದ್ದರು.




ಕೇತನ್ ಬೋಂದ್ರೆ, ಶೈಲೇಶ ನಿಪುನಗೆ, ವಿನೋದ ದೇಶಪಾಂಡೆ, ರವೀಂದ್ರ ವಾರಂಗ, ಪ್ರಜ್ನೇಶ್ ಲೋಡಾಯ, ತೃಪ್ತಿ ದೇಸಾಯಿ, ಸಾಯಿಲೀ ಕಾಟ್ಕರ, ಸೋನಲ್ ಭಾವಸಾರ್, ಅನಿಕೇತನ ಗಾಂಧಿ ಹಾಗೂ ನಂದಕುಮಾರ್ ಪಾಲ್ಕರ, ಹೀಗೆ 40 ಯುವ ಇಂಜಿನಿಯರುಗಳನ್ನು ಒಳಗೊಂಡ ಈ ಮಂಡಲಿಯು ಥಾಣೆ ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ ವಾಸವಾಗಿರುವ ವನವಾಸಿಗಳ ಗ್ರಾಮವಾದ  "ವಿಹೀ" ಯನ್ನು ದತ್ತು ತೆಗೆದುಕೊಂಡು, ಹಲವಾರು ವರ್ಷಗಳ ಕಾಲ ನಿರಂತರವಾಗಿ ಶಿಕ್ಷಣ, ಆರೋಗ್ಯ ಹಾಗೂ ಸ್ವಾವಲಂಬನೆಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿತು.


ಒಂದು ಸಣ್ಣ ಮನೆಯಲ್ಲಿ ತನ್ನ ತಾಯಿ ತಂದೆ ಹಾಗೂ ಅಣ್ಣ ತಂಗಿಯರೊಡನೆ ವಾಸವಾಗಿದ್ದ ಸುನಿಲ್ ಕುಲಕರ್ಣಿಯವರಿಗೆ (ಹೆಸರು ಬದಲಾಯಿಸಲಾಗಿದೆ) ಓದಲು ಜಾಗವೂ ಇರಲಿಲ್ಲ, ಹಾಗೇ ಪುಸ್ತಕಗಳನ್ನು ಖರೀದಿಸುವ ಶಕ್ತಿಯೂ ಇರಲಿಲ್ಲ. ಆದರೂ ಅವರು ಇಂಜಿನಿಯರ್ ಆಗಲು ಬಯಸುತ್ತಿದ್ದರು. ಮಂಡಲಿಯ ವತಿಯಿಂದ ನಡೆಸಲಾಗುತ್ತಿದ್ದ, ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 1ರವರೆಗೆ ತೆರೆದಿರುತ್ತಿದ್ದ ಜ್ಞಾನಮಂದಿರ ಗ್ರಂಥಾಲಯದ ವಾಚನಾಲಯದಲ್ಲಿ ಇಂಜಿನಿಯರಿಂಗ್ ನ ದುಬಾರಿ ಪುಸ್ತಕಗಳನ್ನು ಓದುವ ಅವಕಾಶ ಸಿಕ್ಕಿತು ಹಾಗೂ ಅವರ ಶಿಕ್ಷಣದ ಶುಲ್ಕವನ್ನು ಭರಿಸುವಲ್ಲಿ ಮಂಡಲಿಯ ಯುವಕರು ಕೈ ಜೋಡಿಸಿದರು.

ಇಂದು ಪ್ರತಿಷ್ಠಿತ ಕಂಪೆನಿ ಎನಿಸಿಕೊಂಡಿರುವ ಟಿಸಿಎಸ್ ನಲ್ಲಿ ವಾರ್ಷಿಕ 22 ಲಕ್ಷ ರೂ. ವೇತನದ ಪ್ಯಾಕೇಜ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುನಿಲ್, ಈಗ ತಾವೇ ಮಂಡಲಿಯೊಂದಿಗೆ ಜೊತೆಗೂಡಿ ಇತರ ವಿದ್ಯಾರ್ಥಿಗಳ ಶೈಕ್ಷಣಿಕ ಸಫಲತೆಯ ಮಾರ್ಗವನ್ನು ಹಸನಾಗಿಸುವಲ್ಲಿ ಭಾಗಿಯಾಗಿದ್ದಾರೆ.

ಬಾಲ್ಯದಿಂದಲೂ ಸಂಘದ ಸ್ವಯಂಸೇವಕರಾಗಿರುವ ಮತ್ತು ವಿವೇಕಾನಂದ ಸೇವಾ ಮಂಡಲಿಯ ಅಧ್ಯಕ್ಷ ಕೇತನ್ ಬೋಂದ್ರೆ ಹೇಳುತ್ತಾರೆ - ಕೇವಲ 30 ಪುಸ್ತಕಗಳಿಂದ ಬರುತ್ತಿದ್ದ ಬಾಡಿಗೆಯಿಂದ ಒಂದು ಸಣ್ಣ ಗೋದಾಮಿನಲ್ಲಿ ಪ್ರಾರಂಭವಾದ ಈ ಗ್ರಂಥಾಲಯದಲ್ಲಿ ಇಂದು 8000 ಕ್ಕೂ ಅಧಿಕ ಪುಸ್ತಕಗಳು ಮತ್ತು 100 ವಿದ್ಯಾರ್ಥಿಗಳು ಕುಳಿತು ಓದುವ ವ್ಯವಸ್ಥೆಯಿದೆ. ಈ 22 ವರ್ಷಗಳಲ್ಲಿ ದೊಂಬಿವಿಲಿಯ ಮತ್ತು ಅಕ್ಕಪಕ್ಕದ ಸುಮಾರು 10 ಸಾವಿರಕ್ಕೂ ಅಧಿಕ ಇಂಜಿನಿಯರುಗಳು ಈ ಗ್ರಂಥಾಲಯದ ಲಾಭವನ್ನು ಪಡೆಯುತ್ತಿದ್ದಾರೆ.




ಈಗ ವಿಹೀ ಗ್ರಾಮದ ಬಗ್ಗೆ ತಿಳಿಯೋಣ. ಥಾಣೆ ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿರುವ ವನವಾಸಿಗಳ ಗ್ರಾಮ ವಿಹೀ, ಈಗೊಂದು 20 ವರ್ಷಗಳ ಹಿಂದೆ ಮಹಾರಾಷ್ಟ್ರದ ಅತ್ಯಂತ ಹಿಂದುಳಿದ ಗ್ರಾಮಗಳಲ್ಲಿ ಒಂದಾಗಿತ್ತು. ಇಲ್ಲಿನ ಯುವಕರು ನಿರಂತರವಾಗಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವ ಮೂಲಕ ಆರೋಗ್ಯದ ಮಟ್ಟವನ್ನು ಸುಧಾರಿಸಿದರು ಮತ್ತು ಗ್ರಾಮಸ್ಥರ ನೆರವಿನಿಂದ ಮಳೆನೀರಿನ ಸಂರಕ್ಷಣೆಯನ್ನು ಮಾಡಲು 3 ಚೆಕ್ ಡ್ಯಾಂ (ತಡೆ ಅಣೆಕಟ್ಟು) ಗಳನ್ನು ಕಟ್ಟಿದರು. ಇಷ್ಟೇ ಅಲ್ಲ, ರೈತರಿಗೆ ಜೈವಿಕ ಉಳುಮೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ, ಅವರ ಫಸಲು ಹಾಗೂ ಆದಾಯವನ್ನು ಹೆಚ್ಚಿಸುವಲ್ಲಿ ಸಹಕರಿಸಿದರು. ವನವಾಸಿ ಮಹಿಳೆಯರೂ ಸ್ವಾವಲಂಬಿಗಳಾಗುವಂತೆ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಅವರನ್ನು ವ್ಯಾಪಾರಗಳಲ್ಲಿ ಬೆಸೆದರು. ಮಹಾರಾಷ್ಟ್ರದಲ್ಲಿ ದೀಪಾವಳಿಯಂದು ಬೆಳಗುವ ಪಾರಂಪರಿಕ ದೀಪದ ತೈಲವನ್ನು ತಯಾರಿಸುವ ಕೆಲಸವನ್ನು ಕಲಿತು, ಈ ಮಹಿಳೆಯರು ಕಳೆದ ವರ್ಷ 50 ಸಾವಿರ ಪೊಟ್ಟಣಗಳನ್ನು ದೊಂಬಿವಿಲಿಯ ಕ್ಷೇತ್ರದಲ್ಲಿ ಮಾರಿದರು.


ಕಚ್ಚಾ ವಸ್ತುವಿನ ಖರೀದಿಯಿಂದ ಹಿಡಿದು ಪ್ಯಾಕೇಜಿಂಗ್ ಕಾರ್ಯದವರೆಗೂ ಎಲ್ಲಾ ಕೆಲಸವನ್ನೂ ಮಹಿಳೆಯರೇ ಖುದ್ದಾಗಿ ಮಾಡಿದರು, ಮಂಡಲಿಯು ಕೇವಲ ಅವರಿಗೆ ಮಾರುಕಟ್ಟೆಯನ್ನು ಒದಗಿಸಿತು ಅಷ್ಟೇ!! ಮಂಡಲಿಯು ಇಲ್ಲಿ ಕಾರ್ಯ ಪ್ರಾರಂಭಿಸಿದಾಗ ಹತ್ತನೇ ತರಗತಿಯ ವಿದ್ಯಾರ್ಥಿಯನ್ನು ಕಾಣಲೂ ಕಷ್ಟವಾಗಿತ್ತು.. ಆದರೆ ಈಗ ಪ್ರಕಾಶ್ ಕವಠೇ, ಯಶವಂತ್, ವೃಂದಾ, ಕೌಸಲ್ಯಾ .. ಹೀಗೆ ವನವಾಸಿ ಪರಿವಾರದ ಅನೇಕ ಮಕ್ಕಳು ಪದವೀಧರರೋ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದವರೋ ಆಗಿ, ಉದ್ಯೋಗದಲ್ಲಿದ್ದಾರೆ.

ಒಂದು ಹೇಳಿಕೆಯಿದೆ, ದೇವರ ಹೆಸರಲ್ಲಿ ಕಾರ್ಯ ಪ್ರಾರಂಭಿಸಿದರೆ ಎಲ್ಲ ರೀತಿಯ ಸಹಯೋಗ ಸಿಕ್ಕಿಯೇ ಸಿಗುತ್ತದೆ ಎಂದು! ಭಾಜಪಾ ಸಂಸದರ ವಿನಯ್ ಸಹಸ್ರಬುದ್ಧೇ ಅವರು ಮಂಡಲಿಯ ಕಾರ್ಯವನ್ನು ಪರಿಶೀಲಿಸಲು ವಿಹೀ ಗ್ರಾಮಕ್ಕೆ ಭೇಟಿ ನೀಡಿದಾಗ ಎಷ್ಟು ಪ್ರಭಾವಿತರಾದರೆಂದರೆ ಅವರು ಈ ಗ್ರಾಮವನ್ನೇ "ದತ್ತು" ತೆಗೆದುಕೊಂಡುಬಿಟ್ಟರು. ಮತ್ತು ಸಂಸದರ ನಿಧಿಯ ಸಹಯೋಗದೊಂದಿಗೆ ವಿಹೀ ಗ್ರಾಮದ ಕಾಯಕಲ್ಪವನ್ನೂ ಮಾಡಿದರು!!




ಮಂಡಲಿಯು ಸತತ ಮೂರು ವರ್ಷಗಳ ಕಾಲ ಆರ್ಥಿಕವಾಗಿ ಹಿಂದುಳಿದ ಮೇಧಾವಿ ಮಕ್ಕಳಿಗಾಗಿ ಎಸ್ಎಸ್ಎಲ್ಸಿಯ ತರಬೇತಿಯನ್ನು ಅತಿ ಕಡಿಮೆ ವೆಚ್ಚದಲ್ಲಿ ದೊರಕುವಂತೆ ಮಾಡಿತು. ಸಂಘದ ಸ್ವಯಂಸೇವಕರಾದ ಮತ್ತು ಉದ್ಯೋಗ ತ್ಯಜಿಸಿ ವಿಹೀ ಗ್ರಾಮದಲ್ಲಿ ಒಂದು ವರ್ಷವಿದ್ದು ಗ್ರಾಮದ ವಿಕಾಸದ ಬಗ್ಗೆ ಗಮನ ಹರಿಸುವ ಶೈಲೇಶ ನಿಪುನಗೆ ಹೇಳುತ್ತಾರೆ, ಮಂಡಲಿಯು ಸತತವಾಗಿ ಔದ್ಯೋಗಿಕ ಮೇಳವನ್ನು ಆಯೋಜಿಸಿ ಯುವಕರಿಗೆ ಸರಿಯಾದ ಉದ್ಯೋಗವನ್ನು ಆರಿಸಿಕೊಳ್ಳುವಲ್ಲಿ ಸಹಾಯವನ್ನೂ ಮಾಡಿದೆ, ಎಂದು!!

ವಿವೇಕಾನಂದ ಸೇವಾ ಮಂಡಲದ "ಕೈ ಜೋಡಿಸೋಣ, ಮುನ್ನಡೆಯೋಣ" ಧ್ಯೇಯವು ಮಾದರಿಯಾಗಿದೆ!!


ಸಂಪರ್ಕ - ಕೇತನ್ ಬೋಂದ್ರೆ ಸಂಪರ್ಕ ಸಂಖ್ಯೆ - +91 98339 30032
605 Views
अगली कहानी