नियमित अपडेट के लिए सब्सक्राईब करें।
5 mins read
ದಕ್ಷಿಣ
ವಾಸ್ತವವಾಗಿ ಭಾರತದ ಅಸ್ತಿತ್ವ ಹಳ್ಳಿಗಳಲ್ಲಿದೆ ಎಂಬುದು ಸತ್ಯವಾದ ಮಾತು. ಒಂದು ವೇಳೆ ನೀವು ಯಾವುದಾದರೂ ಆದರ್ಶ ಗ್ರಾಮವನ್ನು ನೋಡಲು ಬಯಸಿದ್ದರೆ ಮಧ್ಯಪ್ರದೇಶದ ನರಸಿಂಹಪುರ ಜಿಲ್ಲೆಯ ಬಘುವಾರ್ ಹಳ್ಳಿಗೆ ಬನ್ನಿ. ಇಲ್ಲಿ ಸ್ವಚ್ಛವಾದ ರಸ್ತೆಗಳು, ಒಳ ಚರಂಡಿಗಳು, ಪ್ರತೀ ಮನೆಯಲ್ಲೂ ಶೌಚಾಲಯಗಳು, ಆಟವಾಡಲು ಒಳಾಂಗಣ ಕ್ರೀಡಾಂಗಣ ಹಾಗು ಅಡುಗೆಗಾಗಿ ಜೈವಿಕ ಅನಿಲ ಸ್ಥಾವರವನ್ನು ನೀವು ಇಲ್ಲಿ ನೋಡಬಹುದು. ಹಲವು ವರ್ಷಗಳಿಂದ ಹಳ್ಳಿಯ ಯಾವುದೆ ವಿವಾದವು ಪೊಲೀಸ್ ಠಾಣೆಯವರೆಗು ಬಂದಿಲ್ಲ. ಶಾಲೆ ಹಾಗು ಸಮುದಾಯ ಭವನಕ್ಕಾಗಿ ಸರ್ಕಾರ ನೀಡಿದ ಹಣವು ಕಮ್ಮಿಯಾದಾಗ ಬಘುವಾರ್ ಹಳ್ಳಿಯ ಜನರೆ ಹಣವನ್ನು ನೀಡಿದ್ದಲ್ಲದೆ ಶ್ರಮಸೇವೆಯನ್ನೂ ಮಾಡಿದ್ದಾರೆ.
ಇವೆಲ್ಲವೂ 50ವರ್ಷಗಳಿಂದ ನಡೆಯುತ್ತಿರುವ ಸಂಘದ ಶಾಖೆ ಹಾಗು ಸ್ವಯಂಸೇವಕರಿಂದ ನಡೆಯುತ್ತಿರುವ ಗ್ರಾಮ ವಿಕಾಸದ ಪ್ರಯತ್ನದ ಪರಿಣಾಮವಾಗಿದೆ. ಸುಮಾರು 25 ವರ್ಷಗಳಿಂದ ಅವಿರೋಧವಾಗಿ ಗ್ರಾಮದ ಸರಪಂಚರಾಗಿರುವ ಠಾಕೂರ್ ಸುರೇಂದ್ರ ಸಿಂಹ, ಠಾಕೂರ್ ಸಂಗ್ರಾಮ್ ಸಿಂಹ ಹಾಗು ಹರಿಶಂಕರಲಾಲರಂತಹ ಸ್ವಯಂಸೇವಕರು ಅಂದಿನ ಸರಕಾರ್ಯವಾಹರಾದ ಭಾವುರಾವ್ ದೇವರಸರ ಪ್ರೇರಣೆಯಿಂದ ತಮ್ಮ ಹಳ್ಳಿಯನ್ನು ಆದರ್ಶ ಗ್ರಾಮವಾನ್ನಾಗಿ ಮಾಡಲು ನಿರ್ಧರಿಸಿದರು. 50 ವರ್ಷಗಳಿಂದ ನಿಯಮಿತವಾಗಿ ನಡೆಯುತ್ತಿರುವ ಪ್ರಭಾತ ಫೇರಿ, ಪ್ರತಿ ಮನೆಯ ಗೋಡೆಗಳ ಮೇಲೆ ಬರೆದ ಒಳ್ಳೆಯ ವಿಚಾರಗಳು ಹಾಗೂ ಮಳೆಯ ನೀರನ್ನು ಸಂಗ್ರಹಿಸುವ ಅಭ್ಯಾಸ, ಇವು ಬಘುವಾರನ್ನು ಬೇರೆ ಎಲ್ಲಾ ಹಳ್ಳಿಗಳಿಗಿಂತ ಭಿನ್ನವಾಗಿಸಿದೆ
1950 ರಿಂದ ಬಘುವಾರ್ ನ ಗ್ರಾಮ ವಿಕಾಸ ಸಮಿತಿಯು ಸಮಗ್ರ ಗ್ರಾಮ ವಿಕಾಸಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. ಹಳ್ಳಿಯನ್ನು ತಲುಪುವ 3ಕಿ.ಮೀ. ಉದ್ದದ ರಸ್ತೆಯನ್ನು ಇಲ್ಲಿನ ಯುವಕರು ಸೇರಿ ನಿರ್ಮಿಸಿದ್ದಾರೆ. ಕೃಷಿತಜ್ಞ ಹಾಗು ಸಂಘದ ತೃತಿಯ ವರ್ಷ ಶಿಕ್ಷಣ ಮುಗಿಸಿರುವ ಸ್ವಯಂಸೇವಕರಾದ ಬಘುವಾರ್ ವಾಸಿಯಾದ ಎಮ್.ಪಿ. ನರೋಲಿಯಾಜೀ ಹೇಳುವಂತೆ ಹಳ್ಳಿಯ ಜನರು ಎಂದಿಗೂ ಅಭಿವೃದ್ಧಿಗಾಗಿ ಸರ್ಕಾರವನ್ನು ಅವಲಂಬಿಸಿಲ್ಲಸರ್ಕಾರದಿಂದ ಪಡೆದ ಹಣಕ್ಕೆ ಹಳ್ಳಿಯವರು 1.5ಲಕ್ಷದಷ್ಟು ಹಣವನ್ನು ಸೇರಿಸಿ ಶಾಲೆಯ ಕಟ್ಟಡವನ್ನು ನಿರ್ಮಿಸಿದರು. ಹಾಗೆಯೆ ಭ್ರಮರಿ ನದಿಗೆ ಅಣೆಕಟ್ಟನ್ನು ನಿರ್ಮಿಸಲು 2.5ಲಕ್ಷ ಹಣವನ್ನು ನೀಡಿ ನೀರಿನ ಕೊರತೆಯಿಂದ ಕೃಷಿಗೆ ಆಗುತ್ತಿದ್ದ ತೊಂದರೆಯನ್ನು ಪರಿಹರಿಸಿಕೊಂಡರು. ನಿಯಮಿತವಾದ ಸ್ವಚ್ಛತೆ, ಮನೆಗಳ ಮುಂದೆ ಇಂಗು ಗುಂಡಿ, ಒಳಚರಂಡಿಗಳ ನಿರ್ಮಾಣ, ಮರಗಳನ್ನು ನೆಡುವುದು, ಹಾಗು ಇಂದ್ರ ದೇವರ ಕೃಪೆಯಿಂದ ಸುರಿಯುವ ಮಳೆಯ ಪ್ರತಿ ಹನಿಯನ್ನು ಕಾಪಾಡಿ ನೀರಾವರಿಗಾಗಿ ಬಳಸುವುದು ಹಳ್ಳಿಯ ಪ್ರತಿಯೊಬ್ಬರ ಅಭ್ಯಾಸವಾಗಿದೆ.
ನೂರಕ್ಕೆ ನೂರಷ್ಟು ಸಾಕ್ಷರತೆ, ಮನೆಗಳ ಗೋಡೆಯ ಮೇಲೆ ಬರೆದ ಪ್ರೇರಣಾದಾಯಕ, ಜ್ಞಾನವರ್ಧಕ ಹಾಗು ಸಂಸ್ಕಾರಪೂರ್ಣ ವಾಕ್ಯಗಳು ಮನಸ್ಸಿನ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತವೆ. ಶೇಕಡ 40ರಷ್ಟು ಮನೆಗಳ ಊಟವನ್ನು ಗೋಬರ್ ಗ್ಯಾಸ್ ಬಳಸಿ ತಯಾರಿಸಲಾಗುತ್ತದೆ. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ನಡೆಯಲು, ಮಕ್ಕಳು ಹಾಗು ಶಿಕ್ಷಕರ ಹಾಜರಾತಿ ಸರಿಯಾಗಿ ಇರುವಂತೆ ನೋಡಿಕೊಳ್ಳಲು, ಸಮಿತಿಯ ಸದಸ್ಯರು ಎಲ್ಲಾ ಪ್ರಯತ್ನವನ್ನು ಮಾಡುತ್ತಾರೆ. ಶಿಶುಮಂದಿರದ ಪ್ರಾಂಶುಪಾಲರಾದ ನಾರಾಯಣ ಪ್ರಸಾದ್ ನರೊಲಿಯರಂತೆ ಕೆಲವು ವ್ಯಕ್ತಿಗಳು ಕಾಲ ಕಾಲಕ್ಕೆ ಶಾಲೆಗೆ ತೆರಳಿ ಪಾಠವನ್ನು ಮಾಡುತ್ತಾರೆ.
ಇದೇ ಸರ್ಕಾರಿ ಶಾಲೆಯಲ್ಲಿ ಓದು ಮುಗಿಸಿದ ನರೊಲಿಯಾಜೀ ಕೃಷಿ ಸಂಚಾಲಕರಾದರೆ, ಅವಧೇಶ್ ಶರ್ಮ ಲೆಫ್ಟಿನೆಂಟ್ ಆಗಿದ್ದಾರೆ. ಇಷ್ಟೆ ಅಲ್ಲ ಕೆಲವರು ಡಾಕ್ಟರ್ ಗಳಾದರೆ, ಮೂವರು ಪಿ ಎಚ್ ಡಿ ಕೂಡಾ ಮಾಡಿದ್ದಾರೆ. ಐಎಎಸ್ ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಮೊದಲು ಈ ಹಳ್ಳಿಯನ್ನು ಒಮ್ಮೆ ನೋಡಬೇಕು ಎಂದು ನರಸಿಂಹಪುರದ ಕಲೆಕ್ಟರ್ ಮನೀಶ್ ಸಿಂಹರ ಸಲಹೆಯಂತೆ ವಿದ್ಯಾರ್ಥಿಗಳ ಹಲವು ತಂಡಗಳು ಈ ಹಳ್ಳಿಯನ್ನು ನೋಡಲು ಬಂದಿವೆ.
ಸಂಪರ್ಕಿಸಿ:-ಸುಭಾಶ್ ಜೀ
ಮೊಬೈಲ್ ನಂ:-7697335610
नियमित अपडेट के लिए सब्सक्राईब करें।