सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಆಧುನಿಕ ಸಂತ –ಮಾಧವರಾವ್ ಜೀ ಕಾಣೆ

ಶ್ರೀಮತಿ ಮೇಘ ಪ್ರಮೋದ್ | ದಕ್ಷಿಣ

parivartan-img

 ಚಳಿ, ಮಳೆ, ಬೇಸಿಗೆ ಹೀಗೆ ಯಾವುದೇ ಕಾಲವಿರಲಿ ಕಾಲಿಗೆ ಹವಾಯಿ ಚಪ್ಪಲಿ ಹಾಕಿಕೊಂಡು ಅತ್ಯಂತ ಸಾಧಾರಣವಾದ ಜುಬ್ಬ ಹಾಗು ಪಂಚೆಯನ್ನು ತೊಟ್ಟು ತಲಾಸರಿಯ ದಟ್ಟವಾದ ವನವಾಸಿ ಹಳ್ಳಿಗಳಲ್ಲಿ ಮೈಲುಗಟ್ಟಲೆ ಕಾಲ್ನಡಿಗೆಯಲ್ಲಿ ಚಲಿಸಿ ಅಲ್ಲಿಯ ಮಕ್ಕಳಿಗೆ ಜ್ಞಾನದ ಬಾಗಿಲನ್ನು ತೆರೆದವರು ಮಾಧವರಾವ್ ಜೀ ಕಾಣೆಯವರು. ಇಂದಿನ ಪೀಳಿಗೆಯು ಇವರ ಜೀವನದ 50 ವರ್ಷಗಳ ಸಮರ್ಪಣೆಯ ಬದುಕನ್ನು ತಿಳಿದು ಎಲ್ಲರಿಗು ತಿಳಿಸಬೇಕಾಗಿದೆ.



ಮಾಧವರಾವ್ ಜೀ ಕಾಣೆಯವರಂತಹ ಪ್ರಚಾರಕರ ಜೀವನಯಾತ್ರೆಯನ್ನು ತಿಳಿದರೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಅರ್ಥ ಮಾಡಿಕೊಳ್ಳಬಹುದು. ಕಲ್ಯಾಣದ ಒಂದು ಮದ್ಯಮ ವರ್ಗದ ಕುಟುಂಬದಲ್ಲಿ 15 ಡಿಸೆಂಬರ್ 1927ರಂದು ಜನಿಸಿ, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ತಲಾಸರಿ ತಾಲೂಕಿನಲ್ಲಿ ವನವಾಸಿ ಬಾಲಕರ ಶಿಕ್ಷಣಕ್ಕಾಗಿ ಹಾಗು ಅವರ ಅಭಿವೃದ್ಧಿಗಾಗಿ ತಮ್ಮ ಜೀವನದ 28 ವರ್ಷಗಳನ್ನು ಸಮರ್ಪಿಸಿಕೊಂಡ ಕಾಣೆಜೀ ಜೀವನಪೂರ್ತಿ ಪರರಿಗಾಗಿ ಬದುಕಿದರು.



ತಾರುಣ್ಯದಲ್ಲಿ, ಗೋವ ವಿಮೋಚನ ಸಂಘರ್ಷದ ಕೊನೆಯವರೆಗು ಸತ್ಯಾಗ್ರಹಿಗಳಾಗಿದ್ದ ಮಾಧವರಾವ್ ಜೀ ಮುಂದೆ 1964ರಲ್ಲಿ ಕಲ್ಯಾಣ ನಗರ ಪಾಲಿಕೆಯ ಅಧ್ಯಕ್ಷರಾಗುವ ಮೂಲಕ ದೇಶದ ಯುವ ಅಧ್ಯಕ್ಷರಾದರು‌. ಕಲ್ಯಾಣ ನಗರ ಪಾಲಿಕೆಯಲ್ಲಿ ಅವರ ಅಧಿಕಾರಾವಧಿಯನ್ನು ಅತ್ಯಂತ ಯಶಸ್ವಿ ಕಾಲಾವಧಿ ಎಂದು ಪರಿಗಣಿಸಲಾಗುತ್ತದೆ.

ಆದರೆ ಈ ಆಧುನಿಕ ತಪಸ್ವಿ ತನ್ನ ಗುರು ಹಾಗು ಕಲ್ಯಾಣದ ವಿಭಾಗ ಪ್ರಚಾರಕರಾಗಿದ್ದ ದಾಮೂ ಅನ್ನಾ ಟೋಕೆಕರ್ ಜೀಯವರ ಆಹ್ವಾನದ ಮೇರೆಗೆ ರಾಜನೀತಿಯ ತಮ್ಮ ಉಜ್ವಲ ವೃತ್ತಿ ಜೀವನವನ್ನು ತ್ಯಜಿಸಿ ವನವಾಸಿ ಜನರ ಸೇವೆಗಾಗಿ ತಲಾಸರಿಯ ದಟ್ಟವಾದ ಕಾಡುಗಳ ಕಡೆಗೆ ಮುಖಮಾಡಿದರು.



ಕಾಣೆಜೀಯವರ ಸತತ ಪ್ರಯತ್ನಗಳಿಂದ 1967 ರಲ್ಲಿ ಹಿಂದೂ ಸೇವಾ ಸಂಘದ ಮುಖಾಂತರ ಕೇವಲ 5 ವಿದ್ಯಾರ್ಥಿಗಳಿಂದ ಒಂದು ಗುಡಿಸಿಲಿನಲ್ಲಿ ವನವಾಸಿ ವಸತಿ ಗೃಹಎಂಬ ಹೆಸರಿನಿಂದ ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿ ನಿಲಯವನ್ನು ಪ್ರಾರಂಭಿಸಲಾಯಿತು. ನಂತರ ಕಾಣೆಜೀಯವರ ಪ್ರಯತ್ನದಿಂದಾಗಿ ಒಂಬತ್ತು ಮುಕ್ಕಾಲು ಎಕರೆಯಷ್ಟು ಭೂಮಿಯು ದಾನವಾಗಿ ವಿದ್ಯಾರ್ಥಿ ನಿಲಯಕ್ಕೆ ದೊರೆಯಿತು.


ಈ ವಿದ್ಯಾರ್ಥಿನಿಲಯದಿಂದ ಕಳೆದ 55 ವರ್ಷಗಳಲ್ಲಿ 2000ಕ್ಕಿಂತಲು ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮುಗಿಸಿ ಅನೇಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದಾರೆ. ಇಲ್ಲಿ ಕಲಿತು ಡಾಕ್ಟರ್, ಎಂಜಿನಿಯರ್ ಮುಂತಾದ ಅನೇಕ ಉನ್ನತ ಪದವಿಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಸಂಸ್ಕಾರವಂತರನ್ನಾಗಿ ಮಾಡಿ ಅವರನ್ನು ಉತ್ತಮ ಹಾಗು ಯೋಗ್ಯ ವ್ಯಕ್ತಿಗಳನ್ನಾಗಿಸುವಲ್ಲಿ ಮಾಧವರಾವ್ ಜೀಯವರು ಸತತವಾಗಿ 28 ವರ್ಷಗಳಿಂದ ಸರ್ವ ಸಮರ್ಪಣೆಯಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ, ಅನೇಕ ಬಾರಿ ಅವರು ವಿದ್ಯಾರ್ಥಿಗಳ ಪೋಷಕರನ್ನು ಭೇಟಿಯಾಗಲು ಹಲವು ಕಿಲೋಮೀಟರ್ ನಡೆದು ಅವರ ಮನೆಗಳಿಗೆ ತೆರಳುತ್ತಿದ್ದರು.

ಮಾಧವರಾವ್ ಜೀ ವಾಸ್ತವಿಕವಾಗಿ ಆಧುನಿಕ ಯುಗದ ಸಂತರಾಗಿದ್ದರು. ಅವರು ಚಾಪೆಯ ಮೇಲೆ ಮಲಗುತ್ತಿದ್ದರು. ಗುಡಿಸಿಲಿನಲ್ಲೆ ವಾಸಿಸುತ್ತಿದ್ದರು. ಕಾಲ್ನಡಿಗೆಯಲ್ಲೆ ಪ್ರವಾಸ ಮಾಡುತ್ತಿದ್ದರು. ಅವರ ಪ್ರಯತ್ನದಿಂದಲೆ ತಲಾಸರಿ, ದಹಾನು ಹಾಗು ಪಾಲಘರ್ ನಲ್ಲಿದ್ದ ನಕ್ಸಲಿಸಂ ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಯಿತು" ಎಂದು ಮಾಧವರಾವ್ ಜೀಯವರೊಂದಿಗೆ ಅವರ ನೆರಳಿನಂತೆ ವಿದ್ಯಾರ್ಥಿನಿಲಯದ ನಿರ್ವಹಣೆಯನ್ನು ಮಾಡುತ್ತಿದ್ದ ಸಂಘದ ತೃತೀಯ ವರ್ಷ ಶಿಕ್ಷಿತ ಸ್ವಯಂಸೇವಕ ಅಪ್ಪಾಜಿ ಜೋಶಿ ಹೇಳುತ್ತಾರೆ.


ಕಲ್ಯಾಣದಲ್ಲಿದ್ದ ಅವರ ಕೋಣೆ ಸತತ 24 ವರ್ಷಗಳ ಕಾಲ ವನವಾಸಿ ಮಕ್ಕಳಿಗೆ ಮನೆಯಾಗಿತ್ತು. ಕೇವಲ 17 ವರ್ಷದ ವಯಸ್ಸಿನಲ್ಲಿ ತಮ್ಮ ತಂದೆ ತಾಯಿಗಳನ್ನು ಕಳೆದುಕೊಂಡಿದ್ದ ಮಾಧವರಾವ್ ಜೀಯವರಿಗೆ ತಮ್ಮ ಅಂತಿಮ ಸಮಯದಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಾಗ ತಮ್ಮ ಚಿಕಿತ್ಸಗೆ ಆಗುವ ವೆಚ್ಚವನ್ನು ವಿದ್ಯಾರ್ಥಿನಿಲಯಕ್ಕಾಗಿ ಉಪಯೋಗಿಸಬೇಕೆಂದು ಡಾಕ್ಟರಲ್ಲಿ ವಿನಂತಿಸಿಕೊಂಡಿದ್ದರು. ಏಕೆಂದರೆ ಅವರ ಪ್ರಕಾರ ಅವರು ತಮ್ಮ ಜೀವನ ಯಾತ್ರೆಯನ್ನು ಪೂರ್ತಿಗೊಳಿಸಿದ್ದರು.ಉಜ್ವಲವಾದ ಪ್ರಸಿದ್ಧಿ ಕೀರ್ತಿಗಳಿಂದ ದೂರವಿದ್ದು ದಟ್ಟವಾದ ಕತ್ತಲೆಯಲ್ಲಿ ವಿಕಾಸದ ಬಾಗಿಲನ್ನು ತೆರೆಯಲು ಮಾಧವರಾವ್ ಜೀ ತಮ್ಮ ಸಂಪೂರ್ಣ ಜೀವನವನ್ನು ಸಮರ್ಪಿಸಿದರುಎಂದು ದತ್ತೋಪಂತ್ ಠೇಂಗಡಿಯವರು ಮಾಧವರಾವ್ ಜೀಯವರ ಬದುಕನ್ನು ವರ್ಣಿಸಿದ್ದಾರೆ.
1064 Views
अगली कहानी