सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಸಾಹಸದ ನೆಗೆತ.ಸಾಹಸದ ನೆಗೆತ.

ಶ್ರೀಮತಿ ಸಹನ ವಿಠ್ಠಲ್ ಕುಮಾರ್ | ದಕ್ಷಿಣ

parivartan-img

ಎಲ್ಲರ ದೃಷ್ಟಿ ಟಿವಿ ಪರದೆಯ ಮೇಲಿತ್ತು. 1000 ಮೀಟರ್ ರೋಲರ್ ಸ್ಕೇಟಿಂಗ್ ಸ್ಪರ್ಧೆಯ ಫಲಿತಾಂಶ ಘೋಷಣೆ ಆಗುವುದರಲ್ಲಿತ್ತು. ವಿಶ್ವ ಬೇಸಿಗೆ ಪಂದ್ಯ 2015, ಲಾಸ್ ಏಂಜಲೀಸ್ 'ನಲ್ಲಿ ಚಿನ್ನದ ಪದಕಕ್ಕಾಗಿ 14ವರ್ಷದ ಕುಶಲ್ ರೇಷಂನ ಹೆಸರು ಹೇಳುತ್ತಿದ್ದಂತೆ ಕೇಶವ ಸೇವಾ ಸಾಧನಾದಲ್ಲಿದ್ದ ಎಲ್ಲಾ ಜನರು ಖುಷಿಯಿಂದ ಹಾರಿದರು, ಗೋವಾದ ಡಿಚೋಲಿಯಲ್ಲಿ ವಿಶಿಷ್ಟ ಚೇತನ ಮಕ್ಕಳಿಗಾಗಿ ಸಂಘದ ಸಹಯೋಗದಿಂದ ನಡೆಯುತ್ತಿರುವ ಈ ವಿಶೇಷ ಶಾಲೆಯ ಸೇವಾ ಭಾವಿ ಕಾರ್ಯಕರ್ತರಿಗಾಗಿ ಕುಶಲ್'ನ ಚಿನ್ನದ ಪದಕ ಒಂದು ಕಠಿಣ ಹೋರಾಟ ಸುಖಾಂತ್ಯವಾಗಿತ್ತು. ಸಂಸ್ಥೆಯ ಸಚಿವ ಹಾಗೂ ಸಂಘದ ವಿಭಾಗ ಸಂಘಚಾಲಕ ನಾನಾಜಿ ಬೇಹರೆಯವರ ಪ್ರಕಾರ ಮಕ್ಕಳು ಅಲ್ಲಿಗೆ ಬಂದಿದ್ದಾಗ ಅವರ ತಂದೆ ತಾಯಂದಿರು ಗಾಯದ ಹೆದರಿಕೆಯಿಂದ ಅವರನ್ನು ಆಟವಾಡಲು ಸಹ ಬಿಡಲು ಸಿದ್ಧರಿರಲಿಲ್ಲ. ಸ್ಕೇಟಿಂಗ್'ನಂತಹ ಅಪಾಯಕಾರಿ ಸ್ಪರ್ಧೆಗಾಗಿ ಕೋಚ್ ನಿಂದ ತರಬೇತಿ ಕೊಡಿಸಲು, ನಂತರ ವಿದೇಶಕ್ಕೆ ಆಟವಾಡಲು ಕಳುಹಿಸಲು ಅವರನ್ನು ಒಪ್ಪಿಸುವುದು ಬಹಳ ಕಷ್ಟವಾಗಿತ್ತು,


ಕುಶಲನ ಜಯದ ಯಾತ್ರೆ ಇಲ್ಲಿಗೆ ನಿಲ್ಲಲಿಲ್ಲ. ಈ ಪ್ರತಿಭಾಶಾಲಿ ಹುಡುಗನು ಇದರ ನಂತರ ಇದೇ ಬೇಸಿಗೆ ಪಂದ್ಯದಲ್ಲಿ 200×2 ಮೀಟರ್ (ರಿಲೇ) ನಲ್ಲಿ ಸಹ ಚಿನ್ನ ಹಾಗೂ 300 ಮೀಟರ್'ನಲ್ಲಿ ಕಂಚು ಪದಕ ಜಯಿಸಿದ. ಇದೇ ಶಾಲೆಯಿಂದ 13 ವರ್ಷದ ರಿಯಾ ಗಾವಡೆ 1000 ಮೀಟರ್ ಹಾಗೂ 300 ಮೀಟರ್ ರಿಂಕ್ ಹಾಗೂ ರಿಲೇ ಓಟದಲ್ಲಿ ಬೆಳ್ಳಿ, 100×2 ಮೀಟರ್ (ರಿಲೇ) ನಲ್ಲಿ ಕಂಚು ಪದಕ ಜಯಿಸಿದ. ಇದರೊಂದಿಗೆ ಶಾಲೆಯ ಇನ್ನೊಬ್ಬ ಹುಡುಗಿ ಊರ್ಮಿಳಾ ಪರಬ್ 300 ಮೀಟರ್ ರೋಲರ್ ಸ್ಕೇಟಿಂಗ್'ನಲ್ಲಿ ಕಂಚು ಪದಕ ಜಯಿಸಿದಳು. ಈ ಜಯ ಹಾಗೂ ಇದರ ನಂತರದ ಖುಷಿಯು ಎಷ್ಟರಮಟ್ಟಿಗೆ ಮಕ್ಕಳ ತಂದೆ-ತಾಯಿಯದಾಗಿತ್ತೋ ಅಷ್ಟೇ ಅವರ ಕೋಚ್ ಪ್ರೇಮಾನಂದ ನಾಯಕ ಹಾಗೂ ಸಂಸ್ಥೆಯ ಆ ಸಮರ್ಪಿತ ಕಾರ್ಯಕರ್ತರದಾಗಿತ್ತು. ಏಕೆಂದರೆ ಈ ಮಕ್ಕಳ ಮನೋಬಲ ಹೆಚ್ಚಿಸಲು ಹಾಗೂ ಅವರ ಆತ್ಮವಿಶ್ವಾಸ ಬಡಿದೆಬ್ಬಿಸಲು ಇವರು ಹಗಲು-ರಾತ್ರಿ ಶ್ರಮಿಸಿದ್ದರು.




ಸಂಸ್ಥೆಯು ಗೋವಾದಲ್ಲಿ ಸೇವಾ ಕಾರ್ಯದ ಪ್ರಾರಂಭವನ್ನು ದೂರದ ಪ್ರದೇಶಗಳಲ್ಲಿ ವಾಸಿಸುವ, ಬಡಮಕ್ಕಳನ್ನು ಹಾಸ್ಟೆಲ್ನಲ್ಲಿ ಇರಿಸಿ ಮಾಡಿತ್ತು. ಕೇವಲ ಡಿಚೋಲಿಯಲ್ಲಿ 300 ಮಾನಸಿಕ ವಿಕಲಚೇತನ ಮಕ್ಕಳು ಇರುವರು ಮತ್ತು ಅವರಿಗಾಗಿ ಯಾವುದೇ ಶಾಲೆ ಇಲ್ಲವೆಂದು 2004ರಲ್ಲಿ ಸಂಸ್ಥೆಯು ನಡೆಸಿದ ನಿಯಮಿತ ಸಮೀಕ್ಷೆಯಲ್ಲಿ ತಿಳಿಯಿತು. ಆಗ ಅವರ ತಂದೆ ತಾಯಿಯರ ಕೋರಿಕೆಯಂತೆ, ಮೊದಲು 2004ರಲ್ಲಿ ಇಲ್ಲಿ ಹಾಗೂ 2011ರಲ್ಲಿ ವಾಲ್ಪೋಯಿಯಲ್ಲಿ ವಿಶೇಷ ಚೇತನರ ಶಾಲೆಯ ಸ್ಥಾಪನೆ ಮಾಡಲಾಯಿತು. ಇಂದು ಈ ಎರಡು ಶಾಲೆಗಳಲ್ಲಿ ಸುಮಾರು 160 ಮಕ್ಕಳು ಕಲಿಯುತ್ತಿರುವರು. ಪಾಠ ಹಾಗೂ ಆಟದೊಂದಿಗೆ ಈ ಮಕ್ಕಳಿಗೆ ರಾಖಿ ತಯಾರಿಸುವ, ದೀಪಾಲಂಕಾರ, ಪೇಪರ್ ಆರ್ಟ್'ನಂತಹ ಅನೇಕ ವಿಷಯಗಳನ್ನು ಕಲಿಸಲಾಗುತ್ತಿದೆ. ಇದೇ ರೀತಿಯಲ್ಲಿ ನಿಪುಣ ಶಾಲೆಯ ಒಬ್ಬ ಹುಡುಗಿ ವಿಭಾ ಅಜಿತ್ ಕಾಣೇಕರ್'ಳಿಗೆ 2010ರಲ್ಲಿ ಬಾಲಶ್ರೀ ಪ್ರಶಸ್ತಿ ದೊರೆಯಿತು.


ಕೇಶವ ಸೇವಾ ಸಾಧನಾದಲ್ಲಿ ಹಲವಾರು ವರ್ಷಗಳಿಂದ ಈ ಮಕ್ಕಳಿಗೆ ಫಿಸಿಯೊಥೆರಪಿ ಮಾಡುತ್ತಿರುವ ಡಾಕ್ಟರ್ ಲಾರೆನ್ಸ್ ಸಲ್ಡಾನಾ ಹೇಳುವಂತೆ ಯಾರು ಇವರನ್ನು ನಿರ್ಬಲರೆಂದು ತಿಳಿಯುವರೋ ಅವರಿಗೆ ಇವರ ಯೋಗ್ಯತೆಯ ಅರಿವಿಲ್ಲ. ಈ ಎಲ್ಲಾ ಮಕ್ಕಳು ಅಪಾರ ಸಾಮರ್ಥ್ಯದಿಂದ ತುಂಬಿರುವರು. ಅವರಿಗೆ ದಾರಿತೋರಿಸುವ ಅವಶ್ಯಕತೆ ಮಾತ್ರ ಇದೆ. ಇದೇ ಕಾರ್ಯವನ್ನು ಕೆಎಸ್ಎಸ್ ಗೋವಾ ಮಾಡುತ್ತಿರುವುದು. ಈ ಕೆಳಗಿನ ಸಾಲುಗಳು ಈ ಮಕ್ಕಳಿಗೆ ಸರಿಯಾಗಿ ಹೊಂದಿಕೊಂಡಿದೆ."ಈ ಕತ್ತರಿಗಳು ನಮ್ಮ ಹಾರಾಟವನ್ನು ಹೇಗೆ ತಡೆಯಬಲ್ಲವು ನಾವು ಹಾರುವುದು ರೆಕ್ಕೆಗಳಿಂದಲ್ಲ ಪರಾಕ್ರಮದಿಂದ."

ಸಂಪರ್ಕ_ಲಕ್ಷ್ಮಣ ಬಹರೆ(ನಾನಾಜೀ).

ಮೊಬೈಲ್ ನಂಬರ್_09422443165

727 Views
अगली कहानी