सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ವಜ್ರಕ್ಕೆ ಸಿಕ್ಕಿತ್ತು ಆಭರಣದ ವ್ಯಾಪಾರಿ.

ದಕ್ಷಿಣ

parivartan-img

ಅವರು ತರಗತಿಯ ಹಿಂದಿನ ಬೆಂಚಿನವರು,ಯಾರಿಗೂ ಕಪ್ಪುಹಲಗೆಯಲ್ಲಿ ಬರೆದ ಅಕ್ಷರ ಅರ್ಥವೇ ಆಗುತ್ತಿರಲಿಲ್ಲ. ಗಣಿತ ಕತ್ತಲಿನ ಕಪ್ಪು ಸುರಂಗದಂತೆ ಕಾಣುತ್ತಿತ್ತು, ಇಂಗ್ಲಿಷ್ ಅಂತೂ ತಲೆಯ ಮೇಲಿಂದಲೇ ಜಾರಿ ಹೋಗುತ್ತಿತ್ತು. ಕಲಿಕೆಯಲ್ಲಿ ಹಿಂದಿರುವ, ಎಲ್ಲರಿಂದಲೂ ತಿರಸ್ಕೃತರಾದ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಹುಡುಕಿ ಅವರಿಗೆ ಅವಕಾಶದ ಬಾಗಿಲು ತೆರೆಯುತ್ತದೆ ಈ "ಕಲ್ಪತರು." ಜಾರ್ಖಂಡ್ ನ ರಾಜಧಾನಿ ರಾಂಚಿಯಿಂದ ಮೂವತ್ತೈದು ಕಿಲೋಮೀಟರ್ ದೂರದಲ್ಲಿರುವ ಹೆಚಲ್ ಪಂಚಾಯತ್ ನಲ್ಲಿ ಒಂದು ಹೆಕ್ಟೇರ್ ಜಾಗದಲ್ಲಿ ವ್ಯಾಪಿಸಿರುವ ಈ ತರಬೇತಿ ಕೇಂದ್ರವು ಇಂಟರ್ ಹಾಗೂ ಮೆಟ್ರಿಕ್ ಫೇಲಾಗಿರುವ ಯುವಕರಿಗೆ ಕೌಶಲ್ಯ ತರಬೇತಿಯ ಮೂಲಕ ಗೌರವಾನ್ವಿತ ಹಾಗೂ ಆತ್ಮ ನಿರ್ಭರ ಜೀವನ ನಡೆಸಲು ದಾರಿ ತೋರಿಸಿದೆ.


ಸಂಘದ ಪೂರ್ವ ಕ್ಷೇತ್ರದ ಸಂಘಚಾಲಕರು ಹಾಗೂ ರಾಷ್ಟ್ರೀಯ ಸೇವಾ ಭಾರತಿಯ ಅಖಿಲ ಭಾರತೀಯ ಅಧ್ಯಕ್ಷರೂ ಆಗಿದ್ದ ಶ್ರೀ ಸಿದ್ಧನಾಥ ಸಿಂಹಜೀಯವರ ಪ್ರಯತ್ನದಿಂದ 2009 ರಲ್ಲಿ ಕಾರ್ಮಿಕ ಶಿಲ್ಪಿ ಪ್ರಶಿಕ್ಷಣ ಕೇಂದ್ರ ಪ್ರಾರಂಭವಾಯಿತು. ಇದು ಶಿಕ್ಷಣವೇ ಅರ್ಹತೆಯ ಏಕಮಾತ್ರ ಮಾನದಂಡವಲ್ಲ ಎಂಬ ವಿಶಿಷ್ಟ ಚಿಂತನೆಯನ್ನು ಕಾರ್ಯಗತಗೊಳಿಸಿತು. ಇಲ್ಲಿ ಕೊಡಲಾದ ಕೌಶಲ್ಯ ತರಬೇತಿ ಹಾಗೂ ಪ್ರಾಯೋಗಿಕ ಜ್ಞಾನವು ನೂರಾರು ಗ್ರಾಮೀಣ ಯುವಕರ ಜೀವನವನ್ನು ಸುಂದರಗೊಳಿಸಿದೆ.

ಸೋನಭದ್ರ ಜಿಲ್ಲೆಯ ಒಂದು ಸಣ್ಣ ಹಳ್ಳಿ ಅಂತರಾ. ರೈತ ಪರಿವಾರದ ರಾಮಚಂದ್ರ ಸಿಂಗ್ ಓದಿನಲ್ಲಿ ಯಾವಾಗಲೂ ಏಟನ್ನೇ ತಿನ್ನುತ್ತಿದ್ದ.




ಹೈಸ್ಕೂಲ್ ಫೇಲ್ ಆದ ಬಳಿಕ ಭವಿಷ್ಯವು ಅಂಧಕಾರಮಯವಾಯಿತು. ಆಗ ಅವನು ಕಲ್ಪತರುವಿನ ಸಂಪರ್ಕಕ್ಕೆ ಬಂದ. ಇಲ್ಲಿಂದಲೇ ಅವನ ಪೂರ್ತಿ ಜೀವನ ಬದಲಾಯಿತು. ಇಲ್ಲಿಯ ವೆಲ್ಡಿಂಗ್ ಹಾಗೂ ಮೆಷಿನ್ ಮೇಕಿಂಗ್ ತರಬೇತಿ ಪಡೆದ ಬಳಿಕ ಈಗ ಅವನು ಮಾಸ್ಟರ್ ವೆಲ್ಡರ್ ಆಗಿ ಪ್ರತಿತಿಂಗಳು ಸುಮಾರು 40 ಸಾವಿರ ರೂಪಾಯಿ ಸಂಪಾದಿಸುವನು. ಯಾವ ರಾಮಚಂದ್ರನಲ್ಲಿ ಅವನ ತಂದೆ ತಾಯಿಯರ ಎಲ್ಲಾ ಭರವಸೆಗಳು ಚೂರು ಚೂರಾಗಿದ್ದವೋ ಹಾಗೂ ಸಂಬಂಧಿಕರ ಬೈಗಳು ಅವನ ಜೀವನವನ್ನು ದುರ್ಭರವಾಗಿಸಿತ್ತೋ ಅಂತಹವನಿಂದ ಇಂದು ತಂದೆ ತಾಯಿಯರ ಎಲ್ಲಾ ಕನಸುಗಳು ಪೂರ್ತಿಯಾಗುತ್ತಿವೆ.

"ಕಲಿಯುತ್ತಿರುವಾಗ ಗಳಿಸು" (EARN WHILE LEARN ) ಪರಿಕಲ್ಪನೆಯ ಮೇಲೆ ಕೆಲಸ ಮಾಡುತ್ತಿರುವ ಕಲ್ಪತರುವಿನ ಶಿಕ್ಷಾರ್ಥಿಗಳು ಓದಿನ ಜೊತೆ ಜೊತೆಗೆ ಸಂಪಾದನೆಯನ್ನೂ ಮಾಡುತ್ತಾರೆ. ಎರಡು ವರ್ಷದ ಅವಧಿಯ ಕೋರ್ಸಿಗೆ ಪ್ರತಿವರ್ಷ 15,000 ಫೀಸ್ ಇದೆ. ಇದಕ್ಕಿಂತ ಜಾಸ್ತಿ ಹಣವನ್ನು ಅವರು ಪ್ರಾಯೋಗಿಕ ತರಬೇತಿ ಸಮಯದಲ್ಲಿ ಕೆಲಸ ಮಾಡಿ ಸಂಪಾದಿಸುತ್ತಿರುವರು.


ಇವೆಲ್ಲವುಗಳಿಂದಾಗಿ ಕಲ್ಪತರು ಸಂಸ್ಥೆಯು ಇತರ ಸಂಸ್ಥೆಗಳಿಗಿಂತ ಭಿನ್ನವಾಗಿ ಉನ್ನತ ಸ್ಥಾನದಲ್ಲಿದೆ. ಈ ಕಲ್ಪತರು ಸಂಸ್ಥೆಯು ಹತ್ತಿರದ ಮುಸ್ಲಿಂ ಬಾಹುಳ್ಯ ಇರುವ ಹಫುವ ಹಳ್ಳಿಯ ಚಿತ್ರಣವನ್ನೇ ಬದಲಾಯಿಸಿದೆ. ಒಂದು ಕಾಲದಲ್ಲಿ ಈ ಗ್ರಾಮವು ಬೆದರಿಕೆ ಹಾಗೂ ಜಗಳಗಳಿಗೆ ಕುಪ್ರಸಿದ್ಧವಾಗಿತ್ತು. ಇಂದು ಅಲ್ಲಿನ ಯುವಕರು ವಿಕಾಸದ ಹಾದಿಯಲ್ಲಿ ಮುನ್ನಡೆಯುತ್ತಿರುವರು. ಕಲ್ಪತರುವಿನಲ್ಲಿ ಸಂಸ್ಕಾರ ಹಾಗೂ ಪ್ರಶಿಕ್ಷಣ ಪಡೆದ ಸುಮಾರು 22 ಯುವಕರು ದುಬಾಯಿ ಹಾಗೂ ಸೌದಿ ಅರಬಿಯಾದಲ್ಲಿ ಬೇರೆ ಬೇರೆ ಕಂಪೆನಿಗಳಲ್ಲಿ ಉನ್ನತ ಸ್ಥಾನ ಪಡೆದು ಚೆನ್ನಾಗಿ ಹಣ ಗಳಿಸುತ್ತಿರುವರು.

ಆಲಿಂ ಅನ್ಸಾರಿ ಹಾಗೂ ಅವರಂತಹ 10 ಇಂಟರ್ ಫೇಲ್ ಯುವಕರು ಕಲ್ಪತರುವಿನಲ್ಲಿ ಫಿಟ್ಟರ್ ಟ್ರೈನಿಂಗ್ ಪಡೆಯುತ್ತಿರುವಾಗ ಅವರು ಮೂರು ವರ್ಷದ ಕೋರ್ಸನ್ನು ಪೂರ್ತಿಗೊಳಿಸುವರೆಂಬ ಭರವಸೆ ಇರಲಿಲ್ಲ. ಇಂದು ಆಲಿಂ ಅನ್ಸಾರಿ ಮತ್ತು ಆತನ 10 ಗೆಳೆಯರು ಒಮಾನ್ ನಲ್ಲಿ ಒಂದು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಾ ಉತ್ತಮ ಸಂಪಾದನೆ ಮಾಡುತ್ತಿರುವರು.




ಅಕ್ಕಪಕ್ಕದ ಹಳ್ಳಿಯಲ್ಲಿ ಇಂಟರ್ ಹಾಗೂ ಮೆಟ್ರಿಕ್ ಫೇಲ್ ಯುವಕರು ಸಿಗುವುದು ಕಡಿಮೆಯಾದಾಗ ಕಲ್ಪತರು ಪದವೀಧರ ಯುವಕರಿಗೆ ಅವಕಾಶ ನೀಡಿತು. ಅಷ್ಟೇ ಅಲ್ಲದೆ ಪ್ರಾಯೋಗಿಕ ಜ್ಞಾನ ಇರುವ ಕೆಲವು ಇಂಜಿನಿಯರ್ ಗಳನ್ನು ಸಹ ಸಂಸ್ಥೆಗೆ ಕರೆತಂದಿತು. ಒಮ್ಮೆ ತರಬೇತಿ ಪಡೆಯಲು ಬಂದ ಹಾಗೂ ನಂತರ ಶಾಶ್ವತವಾಗಿ ಕಲ್ಪತರುವಿನ ಭಾಗವಾಗಿರುವ ಆದಿತ್ಯ ಸಿಂಗ್ ಹೇಳುತ್ತಾರೆ..... "ಯಾವ ಪ್ರಾಯೋಗಿಕ ಜ್ಞಾನದ ಕೊರತೆ ಅವರಿಗೆ ಇಂಜಿನಿಯರಿಂಗ್ ಕಲಿಕೆಯ ಅವಧಿಯಲ್ಲಿ ಬಾಧಿಸುತ್ತಿತ್ತೋ, ಆ ಕೊರತೆ ಇಲ್ಲಿ ಭರ್ತಿಯಾಗಿದೆ. ಮಾತ್ರವಲ್ಲ ಅವರೇ ಇಂದು ಇಲ್ಲಿನ ವಿದ್ಯಾರ್ಥಿಗಳಿಗೆ ತರಬೇತಿ ಕೊಡುವರು. ಕಲ್ಪತರುವಿನಲ್ಲಿ ನಾನು ಹೆಚ್ಚು ಹಣ ಸಂಪಾದನೆ ಮಾಡದಿದ್ದರೂ, ಇಲ್ಲಿ ಸಿಗುವ ಕೆಲಸದ ತೃಪ್ತಿ ಬೇರೆಲ್ಲೂ ಇಲ್ಲ."


ಉದ್ಯಮ ಸ್ನೇಹಿ ಕೋರ್ಸ್ ಪಟ್ಟಿಯಲ್ಲಿ ಎನ್.ಡಿ.ಪಿ, ವೆಲ್ಡಿಂಗ್, ಫಿಟ್ಟರ್ ಮೆಕ್ಯಾನಿಕ್, ಎಲೆಕ್ಟ್ರಾನಿಕ್ ಫಿಟ್ಟಿಂಗ್ ಸೇರಿದಂತೆ ಉದ್ಯೋಗ ಅವಕಾಶವಿರುವ ಅನೇಕ ತರಬೇತಿಗಳು ನಡೆಯುತ್ತವೆ. ಜೊತೆಗೆ ಇಲ್ಲಿ ಸಾವಯವ ಕೃಷಿ, ಎರೆಹುಳ ಮತ್ತು ಕಾಂಪೋಸ್ಟ್ ಗೊಬ್ಬರ ತಯಾರಿಕೆ ತರಬೇತಿ, ಹಸುವಿನ ಮೂತ್ರದಿಂದ ಕೀಟನಾಶಕ ಉತ್ಪಾದನೆ, ಎತ್ತು ಚಾಲಿತ ಹಿಟ್ಟಿನ ಗಿರಣಿ ಮತ್ತು ಅಣಬೆ ಉತ್ಪಾದನೆ ಮುಂತಾದ ಹಲವು ಕೆಲಸಗಳನ್ನು ಕಲಿಸಲಾಗುತ್ತದೆ. ಸಂಸ್ಥೆಯು ಗ್ರಾಮೀಣ ಮಹಿಳೆಯರಿಗೆ ಹೊಲಿಗೆ ತರಬೇತಿಯೊಂದಿಗೆ ಅವರ ಉತ್ಪನ್ನಗಳನ್ನು ಮಾರಾಟ ಮಾಡಲು ಸಹ ಸಹಾಯ ಮಾಡುತ್ತದೆ. ಪ್ರಶಿಕ್ಷಣ ಗಳಿಸಿದ ಯುವಕರ ನಿಯೋಜನೆಗಾಗಿ ಕಲ್ಪತರು ಸಂಸ್ಥೆಯು ಅನೇಕ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಸಂಸ್ಥೆಯ ಪ್ರಾಂಶುಪಾಲರು ಹಾಗೂ ಸಂಘದ ಸ್ವಯಂಸೇವಕರೂ ಆದ ಸಂಜೀತ್ ಜೀ ಹೇಳುತ್ತಾರೆ.


ಇಲ್ಲಿನ ವಿದ್ಯಾರ್ಥಿಗಳು ಜೀವನಪೂರ್ತಿ ಕಲ್ಪತರು ಪರಿವಾರದ ಭಾಗವಾಗಿರುತ್ತಾರೆ. ಅವರ ಪ್ರಕಾರ ನಾಲ್ಕು ಬ್ಯಾಚ್ ಪಾಸ್ ಆದನಂತರ, ಅಕ್ಕಪಕ್ಕದ ಹಳ್ಳಿಯಲ್ಲಿ ಹೈಸ್ಕೂಲ್ ಮತ್ತು ಇಂಟರ್ ಫೇಲ್ ಆದ ಯುವಕರು ಸಿಗುವುದಿಲ್ಲ. ಓದು ಅರ್ಹತೆಯ ಮಾನದಂಡವಲ್ಲ ಎಂಬ ಚಿಂತನೆಯಿಂದ ಹುಟ್ಟಿದ ಈ ಕಲ್ಪತರು ಸಂಸ್ಥೆಯು ಹಿಂದೆ ಯಾರು ತನ್ನ ಪ್ರೀತಿಪಾತ್ರರೇ "ಖೋಟಾ ನಾಣ್ಯ" ಎಂದೆಣಿಸಿ ಅವರಿಂದ ಎಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದರೋ ಅಂತಹ ಆಕಾರವಿಲ್ಲದ ಯುವಕರನ್ನು ಕೆತ್ತನೆ ಮಾಡಿ ವಜ್ರಗಳನ್ನಾಗಿ ತಯಾರಿಸುತ್ತಿದೆ.


ಸಂಪರ್ಕ_ಸಂಜೀವ ಜಿ.

ಸಂಪರ್ಕ ನಂಬರ್ 875771625

1122 Views
अगली कहानी