सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ನೂರಾರು ಗ್ರಾಮಗಳಲ್ಲಿ ಹರಿಯಿತು ವಿಕಾಸದ ಗಂಗೆ: ಬಡತನದ ವಿರುದ್ಧ ಗೆಲುವು ಸಾಧಿಸಿತು ಸುಯಶ್ ಚಾರಿಟೇಬಲ್ ಟ್ರಸ್ಟ್.

ಶ್ರೀ ಸುಬ್ರಾಯ ನಂದೋಡಿ | ದಕ್ಷಿಣ

parivartan-img

ಢಗೇವಾಡಿ - ಮಹಾರಾಷ್ಟ್ರ ದ ಒಂದು ಸಣ್ಣ ಹಳ್ಳಿ. ತಮ್ಮಲ್ಲಿ ಹೆಚ್ಚಿನವರು ಪ್ರಾಯಶಃ ಢಗೇವಾಡಿಗೆ ಹೋಗಿರಲಾರಿರಿ ಮತ್ತು ಬಹುತೇಕ ಹೆಸರನ್ನೂ ಕೇಳಿರಲಾರಿರಿ. 32 ವರ್ಷಗಳ ಹಿಂದೆ ಒಂದು ದಂಪತಿ ಅಲ್ಲಿಗೆ ಆಗಮಿಸಿದರು ಹಾಗೂ ತಮ್ಮ ಸಂಕಲ್ಪ ಶಕ್ತಿಯಿಂದ ಈ ಹೆಸರು ತಿಳಿಯದ ಗ್ರಾಮದ ಚಿತ್ರಣವನ್ನೇ ಬದಲಿಸಿದರು.


1985 ರ ಮಾತು. ಮಹಾರಾಷ್ಟ್ರದ ಅಕೋಲಾನಗರ, ಜಿಲ್ಲೆ- ಅಹಮದ್ ನಗರದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ 55 ಮನೆಗಳಿರುವ ಸಣ್ಣ ಹಳ್ಳಿಯಲ್ಲಿ ಇಡೀ ಭೂಮಿ ಬಂಜರಾಗಿತ್ತು. ನೀರಿಗಾಗಿ ಕೇವಲ ಒಂದು ಕೆರೆ, ಅದೂ ಕೂಡ 5 ಕಿಲೋಮೀಟರ್ ದೂರದಲ್ಲಿತ್ತು. ಆಗ ಮೋಹನ ರಾವ್ ಘೈಸಾಸ್\'ಜಿ ಮತ್ತು ಅವರ ಪತ್ನಿ ಸ್ಮಿತಾಜಿ ಈ ಹಳ್ಳಿಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು. ಆ ದಿನಗಳಲ್ಲಿ ಢಗೇವಾಡಿಯಲ್ಲಿ ಬೆಳೆಯಲು ಏನೂ ಇರಲಿಲ್ಲ ಮಾತ್ರವಲ್ಲ ಸಂಪಾದನೆಗಾಗಿ ಅನ್ಯ ಮಾರ್ಗವೂ ಇರಲಿಲ್ಲ. ಅಲ್ಲಿನ ಪ್ರಪಂಚ ಹೀಗಿತ್ತು - ಎಲ್ಲಾ ಗಂಡಸರು 9 ತಿಂಗಳು ಉದ್ಯೋಗಕ್ಕಾಗಿ ಹೊರಗೆ ಇರುತ್ತಿದ್ದರು. ಹಳ್ಳಿಯಲ್ಲಿ ಮುದುಕರು, ಮಹಿಳೆಯರು ಮಕ್ಕಳು ಮಾತ್ರ ಇರುತ್ತಿದ್ದರು. ಆದರೆ ಇಂದು ನಾಲ್ದೆಸೆಗಳಲ್ಲಿಯೂ ಹಸುರಿದೆ.




ನೀರಿನ ಸಂಕಷ್ಟವನ್ನು ಪರಿಹರಿಸಿಕೊಂಡಿರುವ ಈ ಗ್ರಾಮದಲ್ಲಿ ಈಗ 26 ಬಾವಿಗಳಿವೆ, 35 ಚೆಕ್ ಡ್ಯಾಂಗಳಿವೆ. ಯಾವ ಜನರು ಟೊಮೇಟೊವನ್ನೇ ನೋಡಿರಲಿಲ್ಲವೋ ಅಂತಹ ಸ್ಥಳದಿಂದ ಈಗ ಪ್ರತಿವಾರ ಕಾಲಿಫ್ಲವರ್ ಮತ್ತು ಟೊಮೇಟೊ ತುಂಬಿಸಿಕೊಂಡ ಟೆಂಪೋ ಮಾರಾಟ ಮಾಡಲು ಹೊರಡುತ್ತಿದೆ. ಈ ಚಮತ್ಕಾರ ನಿಜವಾಗಿಯೂ ಸುಯಶ್ ಚಾರಿಟೇಬಲ್ ಟ್ರಸ್ಟ್\'ನ ಕೈವಾಡದಿಂದಾಗಿದೆ. ಇವರು ಸಾವಿರಾರು ಕೃಷಿಕರ ಅದೃಷ್ಟವನ್ನೇ ಬದಲಾಯಿಸಿದರು. ಘೈಸಾಸ್ ದಂಪತಿಗಳು ಟ್ರಸ್ಟಿನ ಮೂಲಕ ವನವಾಸಿ ವಿದ್ಯಾರ್ಥಿಗಳಿಗೆ ಶ್ರೇಷ್ಠ ಕೃಷಿ ತರಬೇತಿಯನ್ನು ನೀಡಲಾರಂಭಿಸಿದರು.

ಯಾವಾಗ ಈ ವಿದ್ಯಾರ್ಥಿಗಳ ಪರಿವಾರದವರು ಒಂದು ಎಕರೆ ಬಂಜರು ಭೂಮಿಯಲ್ಲಿ 40,000 ಸಂಪಾದಿಸಲು ಆರಂಭಿಸಿದರೋ ಆಗ ಜೈವಿಕ ಕೃಷಿ ಆಧಾರಿತ ಆದರ್ಶವನ್ನು ಸಮೀಪದ ಗ್ರಾಮದವರೂ ಕೂಡ ತಮ್ಮದಾಗಿಸಿಕೊಂಡರು.


ಮೆಲ್ಗಾಟ್ ಹಳ್ಳಿಯ ಬಾಪೂ ಕಾಲೇ ಮತ್ತು ಶಾಮ್ ಬೇಲ್\'ಸರೆ ತಮ್ಮ ಕೃಷಿ ಭೂಮಿಯಲ್ಲಿ ಪ್ರತಿ ಎಕರೆಗೆ 10 ಕ್ವಿಂಟಾಲ್ ಸೋಯಾಬೀನ್ ಮತ್ತು ಒಂದು ಕ್ವಿಂಟಾಲ್ ಜೋಳದ ಮಿಶ್ರ ಕೃಷಿ ಮಾಡಿ 47000 ಸಂಪಾದಿಸಿದರು. ಬಾಪೂ ಕಾಲೆ ಹೇಳುತ್ತಾರೆ ಈಗ ಅವರ ಬಂಜರು ಭೂಮಿಯು ಫಲವತ್ತಾಗಿದೆ.ಬಿಬಾ ಗ್ರಾಮದ  ಮೋತೀಲಾಲ್ ಬಾವನೆಯವರು ಒಂದು ಚೆಕ್ ಡ್ಯಾಂ ನಿರ್ಮಾಣ ಮಾಡಿದಾಗ ನಾಲ್ಕು ರೈತರು ಸಾಮೂಹಿಕವಾಗಿ ಇದರಿಂದ ನೀರನ್ನು ಎರೆಯುವ ಪ್ರಯೋಗ ಮಾಡಿದರು ಮತ್ತು ಪ್ರತಿಯೊಂದು ಎಕರೆ ಭೂಮಿಯಲ್ಲಿ 18000 ಮೌಲ್ಯದ ಬಂಪರ್ ಬೆಳೆಯನ್ನು ಪಡೆದರು. ವಿಹೀರ್ ಗ್ರಾಮದ ದಾದಾ ರಾವ್ ಖಂಗಾರೆ ಹೇಳುವಂತೆ ಹೊಸ ರೀತಿಯ ಕೃಷಿ ಮಾಡಿ ಪ್ರತಿ ಎಕರೆಗೆ 10.5 ಕ್ವಿಂಟಾಲ್ ಹತ್ತಿ ಬೆಳೆದು ದಾಖಲೆಯ ಉತ್ಪಾದನೆಯಾಗಿದೆ.


ಇಂದು ಟ್ರಸ್ಟಿನ ಪ್ರಯತ್ನದ ಫಲವಾಗಿ ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸಗಢ, ರಾಜಸ್ಥಾನ ಮತ್ತು ಒರಿಸ್ಸಾದಲ್ಲಿ 2600 ಗ್ರಾಮಗಳ ಒಂದು ಲಕ್ಷ ಜನರು ಬಡತನದ ಶಾಪದಿಂದ ಮುಕ್ತರಾಗಿದ್ದಾರೆ. ಎಲೆಕ್ಟ್ರಿಕಲ್ಸ್ ಜೊತೆಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಮೋಹನ ರಾವ್ ಅವರು ಆ ಸಮಯದಲ್ಲಿ ಸಂಘದ ಸ್ವಯಂಸೇವಕರ ರೂಪದಲ್ಲಿ ಅಕೋಲಾ ವನವಾಸಿ ಕಲ್ಯಾಣ ಆಶ್ರಮದ ಮಕ್ಕಳ ಪಾಲನೆಯ ಜವಾಬ್ದಾರಿಯು ತಮ್ಮ ಜೀವನದ ದಿಕ್ಕನ್ನೇ ಬದಲಿಸಬಲ್ಲದು ಎಂದು ಕನಸಿನಲ್ಲಿಯೂ ಕೂಡ ಆಲೋಚಿಸಿರಲಿಲ್ಲ. ಹಲವಾರು ವರ್ಷಗಳ ಕಾಲ ಪುಣೆ ನಗರದ ಸಂಘಚಾಲಕರಾಗಿದ್ದ ಮೋಹನರಾವ್ ಅವರ ವನವಾಸಿ ವಿದ್ಯಾರ್ಥಿಗಳನ್ನು ಸ್ವಾವಲಂಬಿ ಮಾಡುವ ಆಲೋಚನೆಯು ನಿಧಾನವಾಗಿ ಗ್ರಾಮಗಳ ವಿಕಾಸಕ್ಕೆ ನಾಂದಿಯಾಯಿತು. ಟ್ರಸ್ಟಿನ ಕಾರ್ಯಕರ್ತರು ರೈತರಿಗೆ ಉತ್ತಮವಾದ ಬೀಜ ಮತ್ತು ಜೈವಿಕ ಕೃಷಿ ತರಬೇತಿಯ ಜೊತೆಗೆ ಗೋಮೂತ್ರದಿಂದ ಗೊಬ್ಬರವನ್ನು ತಯಾರಿಸುವ ವಿಧಾನವನ್ನೂ ಕಲಿಸುತ್ತಿದ್ದಾರೆ. ಈ ಸಂಪೂರ್ಣ ಪ್ರೋಜೆಕ್ಟ್ ನಿಂದ ಟ್ರಸ್ಟಿನ ಮೂಲಕ ಸಣ್ಣ ಸಣ್ಣ ಚೆಕ್ ಡ್ಯಾಂ ನಿರ್ಮಿಸಿ ಬಾವಿಗಳನ್ನು ತೋಡಿ ಪರಂಪರಾಗತ ಜಲಸಂರಕ್ಷಣೆಯ ಮೂಲಕ ಹಳ್ಳಿಗಳಲ್ಲಿ ನೀರನ್ನು ಸಂಗ್ರಹಿಸಲಾಗುತ್ತಿದೆ. ಈ ಕೆಲಸ ಅಷ್ಟೊಂದು ಸುಲಭವಾಗಿರಲಿಲ್ಲ. ಉಂಬರಪಾಡಾ ಗ್ರಾಮದ ವಾಕಯ ಗ್ರಾಮದವರು ಟ್ರಸ್ಟ್ ಕಾರ್ಯಕರ್ತರು ಬಂದು ಕುಳಿತುಕೊಳ್ಳುವುದನ್ನೂ ನಿರಾಕರಿಸಿದ್ದರು. ಒಂದು ವೇಳೆ ಹಳ್ಳಿಗೆ ನೀರನ್ನು ತರುವುದಾದರೆ ಮಾತ್ರ ನಾವು ನಿಮ್ಮ ಮಾತನ್ನು ಕೇಳುತ್ತೇವೆ ಎಂದು ಗ್ರಾಮವಾಸಿಗಳು ಹೇಳುತ್ತಿದ್ದರು.

ಇಂದು ಇದೇ ಗ್ರಾಮದ ಏಕನಾಥ ಗಾಯಕ್ವಾಡ್ ಅವರು ಮೂರು ಎಕರೆ ಜಮೀನಿನಲ್ಲಿ ಸ್ಟ್ರಾಬೆರಿ ಕೃಷಿ ಮಾಡಿ 1,60,000 ರೂಪಾಯಿ ಸಂಪಾದಿಸಿ ದಾಖಲೆಯನ್ನು ನಿರ್ಮಿಸಿ ಅವರೊಂದಿಗೆ ಸಂದರ್ಶಿಸಲು ದೃಶ್ಯ ಮಾಧ್ಯಮದವರೂ ಇಲ್ಲಿಗೆ ಬರುವಂತಾಯಿತು. ಹಲವಾರು ವರ್ಷಗಳಿಂದ ಬೀಜವನ್ನು ಖರೀದಿಸಿ ಬಾವಿಯನ್ನು ತೋಡುವವರೆಗೆ ಟ್ರಸ್ಟಿನವರು ರೈತರಿಗೆ ಹಣದ ಸಹಾಯವನ್ನು ಮಾಡುತ್ತಿದ್ದರು.

ಅವರು ಫಸಲಿನಲ್ಲಿ ಬಂದ ಹಣದಲ್ಲಿ ಸಾಲವನ್ನು ತೀರಿಸುತ್ತಿದ್ದರು. ಈಗ ಗ್ರಾಮ ಗ್ರಾಮಗಳಲ್ಲಿ ಈ ಕೆಲಸವು ಸ್ವಸಹಾಯ ಸಂಘಗಳ ಮೂಲಕ ನಡೆಯುತ್ತಿದೆ. ರೈತರು ತಮ್ಮದೇ ಉಳಿತಾಯದಿಂದ ಆತ್ಮ ನಿರ್ಭರರಾಗಿದ್ದಾರೆ. ಪ್ರಥಮವಾಗಿ ನಾನಾಜಿ ದೇಶಮುಖ್ ಪುರಸ್ಕಾರರಿಂದ ಗೌರವಿಸಲ್ಪಟ್ಟಿರುವ ಪುಣೆಯ ಸುಯಶ್ ಚಾರಿಟೇಬಲ್ ಟ್ರಸ್ಟ್ ಗೋ ಆಧಾರಿತ ಉತ್ತಮ ಕೃಷಿಯ ಹೊಸ ಆದರ್ಶವನ್ನು ವಿಕಾಸಗೊಳಿಸಿ ಲಕ್ಷಾಂತರ ವನವಾಸಿ ಪರಿವಾರದವರು ಆತ್ಮನಿರ್ಭರರಾಗಿ ತಮ್ಮ ಜೀವನದಲ್ಲಿ ಸಮೃದ್ಧಿಯ ಹೊಸ ಬೆಳಕನ್ನು ಹೊಂದುವ ಕಾರ್ಯವನ್ನು ಮಾಡುತ್ತಿದ್ದಾರೆ.


841 Views
अगली कहानी