सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ನಾಳೆಗಾಗಿ ಇಂದೇ ತಯಾರಿ.

ದಕ್ಷಿಣ

parivartan-img

ನಿಜ ಹೇಳಬೇಕೆಂದರೆ ದೆಹಲಿಯ ಕಲಂದರ್ ಕಾಲೊನಿಯ ಮಸ್ತ್ ಕಲಂದರ್ ನೇ ಆಗಿದ್ದ ಹುಡುಗ - ಶಕೀಲ್. ದಿನವಿಡೀ ಉಪದ್ರವಿಯಾಗಿ, ಜಿಗಿತ ನೆಗೆತ ಮತ್ತು ಅಲೆಮಾರಿತನದಲ್ಲಿ ಮಾತ್ರ ಅವನ ಮನಸ್ಸು ವಿಹರಿಸುತ್ತಿತ್ತು. ಮನೆಯ ಹಿರಿಯರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಅಧ್ಯಯನ ಮತ್ತು ಶಾಲೆ ಅವನ ಆವರಣದ ಹೊರಗಿತ್ತು. ಗುರ್ಬತ್ ನಲ್ಲಿ ವಾಸಿಸುತ್ತಿರುವ ಅವನ ಪರಿಶ್ರಮಿ ತಂದೆ-ತಾಯಿ ಮುಂದೆ ಶಕೀಲ್ ತನ್ನ ವಿದ್ಯಾಭ್ಯಾಸ ಮುಗಿಸಿ ತಮ್ಮ ವೃದ್ಧಾಪ್ಯದಲ್ಲಿ ಸಹಾಯಕವಾಗಬಹುದೆಂದು ಬಯಸಿದ್ದರು. ಆದರೆ ಈಗ ಅವರಿಗೆ ಅವನ ರೀತಿ ನೀತಿ ನೋಡಿ ತಮ್ಮ ನಿರೀಕ್ಷೆಗಳಿಗೆ ತಣ್ಣೀರೆರಚುತ್ತಿದ್ದಂತೆ ಕಂಡುಬರುತ್ತಿದ್ದ.

ಆಗ ನಡೆದ ಒಂದು ಘಟನೆ... ಚೂರು ಚೂರಾಗುತ್ತಿದ್ದ ಅವರ ನಿರೀಕ್ಷೆಗಳು ಹೊಸ ಬೆಳಕಿನ ಕಿರಣವನ್ನು ಪಡೆದವು.


ಬೀದಿಬದಿಯ ಅಲೆಮಾರಿ ಮಕ್ಕಳ ಪ್ರಕಲ್ಪಕ್ಕೆ ಸಂಬಂಧಿಸಿದ ಸೇವಾ ಭಾರತಿಯ ಕಾರ್ಯಕರ್ತರು ಅವರ ಸೇವಾಬಸ್ತಿಗೆ ಆಗಮಿಸಿದಾಗ ಅವರ ದೃಷ್ಟಿ ಶಕೀಲ್ ಮೇಲೆ ಬಿತ್ತು. ತಂಡವು ಶಕೀಲ್ ಅವರ ಮನೆಗೆ ಬಂದು ಅವನನ್ನು ಸಂಸ್ಕಾರವಂತನಾಗಿ ಮಾಡುವ ಹಾಗೂ ಇತರ ತರಬೇತಿಗಳ ಬಗ್ಗೆ ಮಾತನಾಡಿದಾಗ, ಶಕೀಲ್ ಅವರ ತಂದೆ ತಕ್ಷಣ ಒಪ್ಪಿದರು. ಸರಿ. ಅಷ್ಟೇ ಮತ್ತೇನು. ಶಕೀಲ್ ಸಂಸ್ಕಾರ ಕೇಂದ್ರಕ್ಕೆ ಹೋಗಲು ಪ್ರಾರಂಭಿಸಿದನು ಮತ್ತು ನೋಡನೋಡುತ್ತಿದ್ದಂತೆ ಅವನು ವಿದ್ಯುತ್ ಕೆಲಸವನ್ನು ಕರಗತ ಮಾಡಿಕೊಂಡನು. ಸ್ವಯಂಸೇವಕರೊಂದಿಗೆ ಸಂಪರ್ಕಕ್ಕೆ ಬಂದ ನಂತರ, ಅವನಲ್ಲಿ ಸಂಸ್ಕಾರದ ಬೀಜಗಳು ಎಷ್ಟರಮಟ್ಟಿಗೆ ಮೊಳಕೆಯೊಡೆದವೆಂದರೆ, ಅವನು ಅವನಿಗೆ ತಿಳಿಯದಂತೆ ತನ್ನ ತಂದೆ ಮತ್ತು ತಾಯಿಗೆ ವಿಧೇಯನಾಗಿಬಿಟ್ಟಿದ್ದ. ಇಂದು ಸೇವಾಬಸ್ತಿಯಲ್ಲಿರುವ ಪ್ರತಿಯೊಬ್ಬರಿಗೂ ಶಕೀಲ್ ಮಾಡುವ ಎಲೆಕ್ಟ್ರಿಷಿಯನ್ ಕೆಲಸದ ಬಗ್ಗೆ ಎಲ್ಲರಿಗೂ ಮನವರಿಕೆಯಾಗಿದೆ. ಈಗ ಅವನು ಚೆನ್ನಾಗಿ ಹಣವನ್ನು ಸಂಪಾದಿಸುತ್ತಿದ್ದಾನೆ ಮತ್ತು ಅವನ ಹೆತ್ತವರು ತುಂಬಾ ಸಂತೋಷವಾಗಿದ್ದಾರೆ.




ಅಲೆಮಾರಿ ಮತ್ತು ಉಪೇಕ್ಷಿತ ಮಕ್ಕಳಿಗಾಗಿ 1994 ರಲ್ಲಿ ಸೇವಾ ಭಾರತಿ ಪ್ರಾರಂಭಿಸಿದ ಅಲೆಮಾರಿ ಮಕ್ಕಳ ಪ್ರಕಲ್ಪದ ಮೂಲಕ, ಇಲ್ಲಿಯವರೆಗೆ ಶಕೀಲ್‌ರಂತಹ ಸಾವಿರಾರು ಹದಿಹರೆಯದವರ ಜೀವನಕ್ಕೆ ಹೊಸ ದಿಕ್ಕು ದೊರೆತಿದೆ.

ಈಗ ದಿಲ್ ಶಹಾ ವಿಹಾರದ ರಾಜು ದುಬೆ ಅವರನ್ನೇ ತೆಗೆದುಕೊಳ್ಳಿ. ಈ ಹದಿಹರೆಯದವನು ಈ ಪ್ರದೇಶದಲ್ಲಿ ನಡೆಯುತ್ತಿರುವ ಕೇಂದ್ರಕ್ಕೆ ಹೋಗಲು ಪ್ರಾರಂಭಿಸಿದನು ಮತ್ತು ಪೂರ್ಣ ಆಸಕ್ತಿಯಿಂದ ಕಂಪ್ಯೂಟರ್ ತರಬೇತಿ ಪಡೆದನು. ಇಂದು, ಈ ಉತ್ಸಾಹಿ ಯುವಕ ಬಿ.ಕಾಂ. ಎರಡನೇ ವರ್ಷ ಅಧ್ಯಯನ ಮಾಡುವುದರ ಜೊತೆಗೆ ಪ್ರೊಜೆಕ್ಟರ್ ಗುತ್ತಿಗೆದಾರನಾಗಿ ಕೆಲಸ ಮಾಡುವ ಮೂಲಕ ಚೆನ್ನಾಗಿ ಸಂಪಾದಿಸಲು ಪ್ರಾರಂಭಿಸಿದ್ದಾನೆ. ಇದೇ ರೀತಿ ಅಲೆಮಾರಿ ಜೀವನವನ್ನು ತ್ಯಜಿಸಿದ ಸಂತೋಷನು ಕೇಂದ್ರದಲ್ಲಿ ಲಭಿಸಿದ ಸ್ವಾವಲಂಬನೆಯ ಪ್ರೇರಣೆಯಿಂದ ದೋಣಿ ಉದ್ಯಮದಿಂದ ಇಂದು ಚೆನ್ನಾಗಿ ಹಣವನ್ನು ಸಂಪಾದಿಸಲಾರಂಭಿಸಿದ್ದಾನೆ. ಈ ಪ್ರಕಲ್ಪದಲ್ಲಿ ತನ್ನ ಹೆಂಡತಿಯೂ ಸಹ ಸೇರಿ ಕೆಲಸ ಮಾಡಬೇಕೆಂದು ಅವನು ಬಯಸುತ್ತಾನೆ. 


ಸೇವಾ ಭಾವನೆಯ ವಿಚಾರದಿಂದ ಮೊಳಕೆಯೊಡೆದ ಈ ಪ್ರಕಲ್ಪವು ಸ್ವಯಂಸೇವಕರ ದಣಿವರಿಯದ ಪ್ರಯತ್ನದಿಂದ ಇಂದು ವಿಶಾಲ ವಟವೃಕ್ಷವಾಗಿದೆ. ಇದರ ನೆರಳಿನಿಂದ ಸಾವಿರಾರು ಕಿಶೋರರ ಜೀವನವು ಸಂಸ್ಕಾರದ ಸುಗಂಧದಿಂದ ತೇವವಾಗುತ್ತಿದೆ. ಆರಂಭದಲ್ಲಿ ತೊಂದರೆಗಳಿದ್ದವು, ಆದರೆ ಮಕ್ಕಳಲ್ಲಿನ ಅದ್ಭುತ ಬದಲಾವಣೆಯನ್ನು ನೋಡಿ ಅನೇಕ ಕುಟುಂಬಗಳು ಸೇರಿಕೊಂಡವು.

ಇಂದು ಈ ಪ್ರಕಲ್ಪದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ತರಬೇತಿ ನೀಡಲಾಗಿದೆ. ಅಲೆಮಾರಿ ಮತ್ತು ನಿರ್ಲಕ್ಷ್ಯಕ್ಕೊಳಗಾದ ಮಕ್ಕಳು ಶಿಕ್ಷಣ ಪಡೆಯುವವರೆಗೂ ದೇಶದ ಸರ್ವಾಂಗೀಣ ವಿಕಾಸದ ಕನಸು ಈಡೇರಲು ಸಾಧ್ಯವಿಲ್ಲ ಎಂದು ಸೇವಾ ಭಾರತಿ ದೆಹಲಿಯ ಹಿರಿಯ ಕಾರ್ಯಕರ್ತ ಜ್ಞಾನಪ್ರಕಾಶ್ ಜಿ ಹೇಳುತ್ತಾರೆ.

ಸೇವಾ ಭಾರತಿಯ ಈ ಸೇವಾಕಾರ್ಯವು ದೆಹಲಿಯ ಸೇವಾಬಸ್ತಿಯ ಕಿರಿದಾದ ಗಲ್ಲಿಗಳಲ್ಲಿ ಎಷ್ಟೋ ಅಲೆಮಾರಿ ಯುವಕರನ್ನು ನಿಷ್ಪ್ರಯೋಜಕತನ, ಸೋಂಬೇರಿತನ ಮತ್ತು ಅಪರಾಧದ ಕಗ್ಗತ್ತಲೆಯಲ್ಲಿ ಕಳೆದುಹೋಗುವ ಮೊದಲು ಅವರ ಜೀವನದಲ್ಲಿ ಸ್ವಾವಲಂಬನೆಯ ಹೊಸ ಶಕ್ತಿಯನ್ನು ತುಂಬುತ್ತದೆ. ತರಬೇತಿಯೊಂದಿಗೆ ದೊರೆತ ಸಂಸ್ಕಾರಗಳು ಅವರನ್ನು ಉತ್ತಮ ಮನುಷ್ಯರನ್ನಾಗಿ ಮಾಡೇ ಮಾಡುತ್ತದೆ. ಹಾಗೆಯೇ ಸಮಾಜನ್ನೂ ಇಂತಹ ಅಲೆಮಾರಿ ಮಕ್ಕಳು ಅಪರಾಧಿಗಳಾಗುವ ಚಿಂತೆಯಿಂದ ಮುಕ್ತವಾಗಿಸುತ್ತದೆ.


ಸಂಪರ್ಕ : ರಾಮ ಕುಮಾರ್.

ಮೊಬೈಲ್ ನಂಬರ್ 9312936897

1243 Views
अगली कहानी