सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಮನಸಿದ್ದಲ್ಲಿ ಮಾರ್ಗ

ದಕ್ಷಿಣ

parivartan-img

ಒಂದೊಮ್ಮೆ ಹಣದ ಕೊರತೆಯಿಂದಾಗಿ ಮನೆಯನ್ನು ನಿಭಾಯಿಸಲು ಸಾಧ್ಯವಾಗದ ಕ್ಲಿಷ್ಟಕರ ಪರಿಸ್ಥಿತಿಯಲ್ಲಿದ್ದ ದೀಪಿಕಾ, ಇಂದು ಲೆಕ್ಕ ಪರಿಶೋಧಕಳಾಗಿ ಸರ್ಕಾರದ ಬಜೆಟ್ಟಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾಳೆ. ಆದರೆ ಈ ಯಶೋಗಾಥೆ ಬರೆಯುವುದು ದೀಪಿಕಾಳಿಗೆ ಸುಲಭದ ಕಾರ್ಯವಾಗಿರಲಿಲ್ಲ. ಎಡೆಬಿಡದ ಕೂಲಿ ಕೆಲಸದಿಂದ ತಂದೆ ಖಾಯಿಲೆಗೆ ತುತ್ತಾಗಿ, ತಾಯಿ ಹೊಸಿಲನ್ನೇ ದಾಟದಂತಾಯಿತು. ಮನೆಯ ಚಿಕ್ಕದೊಂದು ಕೋಣೆಯಲ್ಲಿ ಕಿರಿಯರಿಗೂ ಟ್ಯೂಶನ್ ನಡೆಸುತ್ತಾ, ತನ್ನ ಅಧ್ಯಯನವನ್ನೂ ಮುಂದುವರೆಸುವುದು ಆಕೆಗೆ ತುಂಬಾ ಕಷ್ಟಕರವಾಗಿತ್ತು. ಆದರೆ ದೀಪಿಕಾಳ ಕನಸುಗಳು ಬೆಟ್ಟದಷ್ಟಿದ್ದವು. ಹಾಗಾಗಿ ಅವಳು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸಿದಳು. ಆಗ ದೀಪಿಕಾಳಂಥ ಹುಡುಗಿಯರಿಗೆಂದೇ, ಕಳೆದ 17 ವರ್ಷಗಳಿಂದ ನರೋಡಾದ ಮಹಿಳಾ ಸ್ವಸಹಾಯ ಸಂಘ ನಡೆಸಿಕೊಂಡು ಬಂದಿರುವ ಗ್ರಂಥಾಲಯದ ಸಹಾಯವೂ ಆಕೆಗೆ ದೊರಕಿತು.




1993ರಲ್ಲಿ ಡಾ. ಹೆಡ್ಗೇವಾರ್ ಜನ್ಮಶತಾಬ್ದಿ ಸೇವಾಸಮಿತಿಯ ಆಶ್ರಯದಲ್ಲಿ ಕಿರಣ್ ಬಾಗೇಲಾ, ಮಧುಬೆನ್ ಪ್ರಜಾಪತಿ ಮತ್ತು ಹೇತಲ್ ಬೆನ್ ಕೆಲ ಸ್ವಯಂಸೇವಕರ ಸಹಕಾರದಿಂದ ಹೊಲಿಗೆ ತರಬೇತಿಯೊಂದಿಗೆ ಈ ಸ್ವಸಹಾಯ ಸಂಘವನ್ನು ಆರಂಭಿಸಿದ್ದರು. ಕಳೆದ 25 ವರ್ಷಗಳಲ್ಲಿ ನೂರಾರು ಹೆಣ್ಣುಮಕ್ಕಳು ಹೊಲಿಗೆ, ಕಸೂತಿ, ಚೀಲ ತಯಾರಿ ಇತ್ಯಾದಿಗಳಲ್ಲಿ ಕೌಶಲ್ಯ ಪಡೆದು, ಈಗ ತಮ್ಮದೇ ಉತ್ಪಾದನಾ ಘಟಕಗಳನ್ನು ಆರಂಭಿಸಿದ್ದಾರೆ. ಇತ್ತೀಚಿನ 6 ವರ್ಷಗಳಿಂದ ಮೈಕ್ರೋಸಾಪ್ಟ್ ಆಫೀಸ್ ಮತ್ತು ಟ್ಯಾಲಿ ಮೊದಲಾದ ಉದ್ಯೋಗಾಧಾರಿತ ಕಂಪ್ಯೂಟರ್ ಕೋರ್ಸುಗಳನ್ನೂ ಇಲ್ಲಿ ಕಲಿಸಲಾಗುತ್ತಿದೆ. ಇಲ್ಲಿ ತರಬೇತಿ ಪಡೆದ ನೂರಾರು ಹೆಣ್ಣುಮಕ್ಕಳು ಅನ್ಯಾನ್ಯ ಕಂಪನಿಗಳಲ್ಲಿ ಕೆಲಸವನ್ನೂ ಗಿಟ್ಟಿಸಿದ್ದಾರೆ. ಅಹಮದಾಬಾದ್ ನಗರದ ಹೊರವಲಯದ ನರೋಡಾದ ಸೌಜಪುರಬೌಘಾ ಭಾಗದಲ್ಲಿರುವ ಈ ಮಹಿಳಾ ಸ್ವಸಹಾಯ ಸಂಘವು ಸೇವಾಬಸ್ತಿ ಹಾಗೂ ಹಿಂದುಳಿದ ಪ್ರದೇಶಗಳ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ಗಣನೀಯ ಸಾಧನೆ ಮಾಡಿದೆ.




ಗುಜರಾತಿನಲ್ಲಿ ಹೀರಾ ಕೂಲಿಗಳ ಸ್ಥಿತಿ ತೀರಾ ಶೋಚನೀಯ. ಮಣ್ಣಿನ ಚಿಕ್ಕ ಚಿಕ್ಕ ಮನೆಗಳಲ್ಲಿ ವಾಸಿಸುವ ಇವರ ಜೀವನ- ಜಂಜಾಟಗಳಿಂದಾಗಿ, ಇವರ ಹೆಣ್ಣುಮಕ್ಕಳು ತಾವೇ ಶಿಕ್ಷಣವನ್ನು ಅರ್ಧದಲ್ಲಿ ಬಿಟ್ಟು ಬಿಡುತ್ತಾರೆ, ಇಲ್ಲವೇ ಬಿಡಿಸಲ್ಪಡುತ್ತಾರೆ. ಕಟ್ಟಡ ಕಾರ್ಮಿಕರ ಕುಟುಂಬಗಳದ್ದೂ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ. ಅಂಥ ಕುಟುಂಬಗಳ ಮಹಿಳೆಯರು ಮತ್ತು ಯುವತಿಯರನ್ನು ಆರ್ಥಿಕವಾಗಿ ಆತ್ಮನಿರ್ಭರರನ್ನಾಗಿ ಮಾಡುವ ಕಾರ್ಯ ಶುರುವಾಯಿತು. ಮಹಿಳಾ ಸ್ವಸಹಾಯ ಸಂಘದಲ್ಲಿ ಕಂಪ್ಯೂಟರ್ ಶಿಕ್ಷಕಿಯಾಗಿರುವ ಶ್ರೀಮತಿ ಕೃತಿ ಜೈನ್ ಹೇಳುವಂತೆ-- ಇಲ್ಲಿಗೆ ಬರುವ ಮಹಿಳೆಯರ ವ್ಯಕ್ತಿತ್ವ-ವಿಕಾಸದ ಬಗ್ಗೆಯೂ ವಿಶೇಷ ಗಮನ ಹರಿಸಲಾಗುತ್ತದೆ. ಚರ್ಚೆ, ಹಾಡು, ರಂಗೋಲಿ, ಮೆಹಂದಿ ಮುಂತಾದ ಸ್ಪರ್ಧೆಗಳು ಇಲ್ಲಿ ಎಡೆಬಿಡದೆ ನಡೆಯುತ್ತಿರುತ್ತವೆ. ವಿಭಿನ್ನ ವಿಷಯಗಳ ತಜ್ಞರು ಬಂದು ಇವರಿಗೆ ಜೀವನದ ಹಲವಾರು ಕ್ಷೇತ್ರಗಳ ಬಗ್ಗೆ ಅರಿವು ಮೂಡಿಸುತ್ತಾರೆ. ಮಕರ ಸಂಕ್ರಾಂತಿ, ರಕ್ಷಾ ಬಂಧನ ಮತ್ತು ಸಾಮರಸ್ಯ ದಿನ ಇತ್ಯಾದಿ ಸಂದರ್ಭಗಳಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳ ಮೂಲಕ ಈ ಮಹಿಳೆಯರಿಗೆ ದೇಶಪ್ರೇಮ ಹಾಗೂ ಸಮಾಜಸೇವಾ ಭಾವಗಳನ್ನು ಜಾಗೃತಗೊಳಿಸಲಾಗುತ್ತದೆ.




ಮೊದಲಿನಿಂದಲೂ ಸಂಘಕ್ಕೆ ಮಾರ್ಗದರ್ಶನ ಮಾಡುತ್ತಿರುವ ಕಿರಣ್ ಜೀ ಅವರ ಪ್ರಕಾರ-- ಇಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆಯೂ ಸಂಪೂರ್ಣ ಕಾಳಜಿ ವಹಿಸಲಾಗುತ್ತದೆ. ಇಲ್ಲಿ ಸ್ತನಕ್ಯಾನ್ಸರ್ ಹಾಗೂ ಕ್ಷಯರೋಗದಂಥ ಖಾಯಿಲೆಗಳಿಗೆ ಉಚಿತವಾಗಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಅಂತೆಯೇ, ನಗರದ ಪ್ರಸಿದ್ಧ ಆಹಾರತಜ್ಞರು ಇಲ್ಲಿಗೆ ಬಂದು, ಕಡಿಮೆ ವೆಚ್ಚದಲ್ಲಿ ಯಾವ ರೀತಿಯ ಆಹಾರ ಸೇವಿಸುವ ಮೂಲಕ ಆರೋಗ್ಯವಾಗಿರಬಹುದು ಎಂಬ ಬಗ್ಗೆಯೂ ಮಾಹಿತಿ ನೀಡುವರು. ಹಾಗೆಯೇ ಸಮಿತಿಯ ವತಿಯಿಂದ ವಾಟರ್ ಬೆಡ್, ಗಾಲಿಕುರ್ಚಿ, ಆಮ್ಲಜನಕದ ಸಿಲೆಂಡರುಗಳಂಥ ವೈದ್ಯಕೀಯ ಸಲಕರಣೆಗಳನ್ನು ಅಗತ್ಯಾನುಸಾರ ಮಹಿಳೆಯರಿಗೆ ಉಚಿತವಾಗಿ ನೀಡಲಾಗುವುದು. ಇಂದು ಮಹಿಳೆಯರಿಂದ- ಮಹಿಳೆಯರಿಗಾಗಿ-ಮಹಿಳೆಯರದ್ದೇ ಎನ್ನುವಂತೆ ಈ ಸಂಘ ಬೆಳೆದು ನಿಂತಿದೆ. ಇದರ ಎಲ್ಲಾ ಉಸ್ತುವಾರಿಯನ್ನು ಈಗ ಸ್ವಯಂಸೇವಕರ ಕುಟುಂಬಗಳ ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಸುನೀತಿ ಬೆನ್ ಪಟೇಲ್ ನೇತೃತ್ವದ 12 ಮಹಿಳೆಯರ ಸಮಿತಿಯು ಇದರ ಆಡಳಿತವನ್ನು ಅತ್ಯಂತ ಪರಿಣಾಮಕಾರಿಯಾಗಿ ನಡೆಸುತ್ತಿದೆ. ಇದರ ಹಣಕಾಸಿನ ವ್ಯವಹಾರವನ್ನು ಸಮಿತಿಯ ಟ್ರಸ್ಟಿಗಳು ನೋಡಿಕೊಳ್ಳುತ್ತಾರೆ. ಕೇವಲ ಒಂದು ಕೊಠಡಿಯಿಂದ ಪ್ರಾರಂಭವಾದ ಈ ಮಹಿಳಾ ಸ್ವಸಹಾಯ ಸಂಘವು ಇಂದು ಮೂರಂತಸ್ತಿನ ಕಟ್ಟಡವಾಗಿ ಬೆಳೆದಿದೆ. ಸೇವಾ ಇಂಟರ್ ನ್ಯಾಷನಲ್ ಮತ್ತು ಸೇವಾಭಾರತಿ ಸಂಸ್ಥೆಗಳ ಆರ್ಥಿಕ ನೆರವಿನಿಂದಲೇ ಸಂಘವು ಸ್ವಂತದ ಕಟ್ಟಡ ಹೊಂದಲು ಸಾಧ್ಯವಾಯಿತೆಂದು ಸುನೀತೀ ಜೀ ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ತನ್ನಂತೆ ಇತರ ಹೆಣ್ಣುಮಕ್ಕಳೂ ಜೀವನದಲ್ಲಿ ಮುಂದೆ ಬರಲೆಂಬ ಆಶಯದೊಂದಿಗೆ ತರಬೇತುದಾರರಾಗಿ ದೀಪಿಕಾ ದುಡಿಯುತ್ತಿದ್ದಾರೆ.

ಸಂಪರ್ಕ - ಸುನೀತಿ ಪಟೇಲ್

ದೂರವಾಣಿ-09408840167

1176 Views
अगली कहानी