सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಸೂರತ್ ನ ಗ್ರಾಮಗಳಲ್ಲಿ ಜನರ ಸ್ವಭಾವಲ್ಲಿ ಪರಿವರ್ತನೆ.

ಶ್ರೀ ಗಿರಿಧರ್ ಉದ್ಯಾವರ | ದಕ್ಷಿಣ

parivartan-img

 ನಶೆಯಲ್ಲಿ ಮುಳುಗೆದ್ದು ಬಂದ ಪತಿಯಿಂದ ಪ್ರತಿದಿನವೂ ಹೊಡೆತ ತಿಂದು, ಎಲ್ಲ ಅಪಮಾನಗಳನ್ನೂ ಸಹಿಸುವ ಬದುಕು ಅವಳದಾಗಿತ್ತು. ನಶೆಯ ಚಟ, ಎಷ್ಟೋ ಹೆಂಗಸರನ್ನು ಬಹಳ ಚಿಕ್ಕ ವಯಸ್ಸಿನಲ್ಲೇ ವಿಧವೆಯರನ್ನಾಗಿ ಮಾಡಿಬಿಟ್ಟಿತ್ತು. ವನವಾಸಿ ಗ್ರಾಮದ ಮಹಿಳೆಯರು ನರಕಸದೃಶ ಬದುಕನ್ನು ತಮ್ಮ ಪಾಲಿನ ಭಾಗ್ಯವೆಂದೇ ಪರಿಗಣಿಸಿ ಸುಮ್ಮನಾಗಿಬಿಟ್ಟಿದ್ದರು. ಇವರಿಗೆ ಸ್ವಾಭಿಮಾನ ಹಾಗೂ ಸ್ವಾವಲಂಬನೆಯ ಹಾದಿಯನ್ನು ತೋರಿಸಿದ್ದು ಸೂರತ್ ಅಂಬೇಡ್ಕರ್ ವನವಾಸಿ ಕಲ್ಯಾಣ ಸಂಸ್ಥೆ.



ರಾಷ್ಟ್ರೀಯ ಸೇವಾಭಾರತಿಯ ಸಹಯೋಗದೊಂದಿಗೆ ಸಂಸ್ಥೆಯು ಡಾಂಗ್ ಮತ್ತು ತಾಪೀ ಜಿಲ್ಲೆಯಲ್ಲಿ 130 ಮಾತೃಮಂಡಲಿಗಳನ್ನು ರಚಿಸಿ, 1600 ಮಹಿಳೆಯರಲ್ಲಿ ಸ್ವಾವಲಂಬನೆ, ಸ್ವಾಭಿಮಾನ ಮತ್ತು ನೇತೃತ್ವದ ಭಾವನೆಗಳನ್ನು ಜಾಗೃತಗೊಳಿಸಿತು.  250 ಗ್ರಾಮಗಳಲ್ಲಿ ರೈತರ ಆದಾಯ ಹೆಚ್ಚಿಸಲು ಅವರಿಗೆ ಜೈವಿಕ ಸಾಗುವಳಿ ಮತ್ತು ಬೀಜ ಉತ್ಪನ್ನದ ಕೌಶಲ್ಯವನ್ನು ಕಲಿಸಿಕೊಟ್ಟಿತು. ಮಾತ್ರವಲ್ಲದೆ ಸಂಸ್ಥೆಯು ಸೂರತ್ ನಲ್ಲಿ ಕಳೆದ 9 ವರ್ಷಗಳಿಂದ ಮೇಧಾವಿ ಬಡ ವಿದ್ಯಾರ್ಥಿಗಳಿಗೆ ಕೇವಲ 15,000/- ರೂ. ಶುಲ್ಕ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುತ್ತಿದೆಸಂಭವ್ ಟ್ಯೂಷನ್ ಸೆಂಟರ್ ಪರಿಣಾಮವಾಗಿ ಗುಜರಾತ್ ವಾಪಿಯಲ್ಲಿ ಸರ್ಕಾರದ ತೆರಿಗೆ ಇಲಾಖೆಯ ಉನ್ನತ ಅಧಿಕಾರಿಯಾಗಿರುವ ಸುನೀಲ್ ಗಾವಿತ್ ಸೇರಿದಂತೆ 50 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉಚ್ಛ ಸರ್ಕಾರಿ ಪದವಿಗಳನ್ನು ಹೊಂದಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ ಶ್ರೀ ನರೇಂದ್ರ ಪಂಚಾಸರ ಅವರ ಶ್ರಮದಿಂದ 1999ರಲ್ಲಿ ಪ್ರಾರಂಭವಾದ ಅಂಬೇಡ್ಕರ್ ಸಂಸ್ಥೆಯು ಸಂಸ್ಕಾರ ಕೇಂದ್ರ, ಯುವ ಮಂಡಲಿ, ಭಜನಾ ಮಂಡಲಿ ಮತ್ತು ಮಾತೃಮಂಡಲಿ (ಮಾತೆಯರ ಸ್ವಸಹಾಯ ಸಂಘ) ಇತ್ಯಾದಿಗಳನ್ನು ಆರಂಭಿಸಿ ವನವಾಸಿ ಗ್ರಾಮಗಳಲ್ಲಿ ವಿಕಾಸದ ಒಂದು ಹೊಸ ಯುಗದ ಸಂಚಲನವನ್ನು ಮೂಡಿಸಿದೆ.




 ಸರಳ, ನಿರ್ಮಲ ಹೃದಯವಂತರಾದ ಅಮಾಯಕ ವನವಾಸಿ ಜನರ ಮೇಲೆ, ಕೆಲವು ವ್ಯಕ್ತಿಗಳು ಅಥವಾ ಕಂಪೆನಿಗಳು ಹೈಬ್ರಿಡ್ ತಳಿಯ ಹೆಸರಿನಲ್ಲಿ, ಕೆಲವು ಸಣ್ಣ ಉದ್ಯಮಗಳ ಹೆಸರಿನಲ್ಲಿ, ಆಮಿಷ ಒಡ್ಡಿ ಮೋಸ ಮಾಡಿದ  ಪರಿಣಾಮವಾಗಿ ಸಮುದಾಯದವರು ಯಾರ ಮೇಲೂ ಭರವಸೆ ಇಡುವುದನ್ನು ನಿಲ್ಲಿಸಿಬಿಟ್ಟಿದ್ದರು.ಈಗ ಸೇವಾಧಾಮದ ಸುದ್ದಿ ಎಲ್ಲಿ ಕಂಡರೂ ಎಷ್ಟೋ ಗ್ರಾಮಗಳ ಜನರು ಕೌತುಕದಿಂದ ಸುದ್ದಿ ಫಲಕದ ಮುಂದೆ ಒಂದಾಗಿ ನಿಲ್ಲುತ್ತಾರೆ. ಸಫಲತೆ ಕೆಲವೇ ತಿಂಗಳಲ್ಲಿ ಅಥವಾ ಕೆಲವೇ ದಿನಗಳಲ್ಲಿ ಆದುದಲ್ಲ. ಸರಿಸುಮಾರು 20 ವರ್ಷಗಳ ಕಠಿಣ ಪರಿಶ್ರಮದ ಫಲ ಇದು. ಟ್ರಸ್ಟ್ ಅಧ್ಯಕ್ಷ ತುಲಸೀ ಭಾಯಿಭವಾನಿ ಹೇಳುತ್ತಾರೆ, "ಸಂಸ್ಥೆಯು ಗ್ರಾಮಗಳಲ್ಲಿ ಸೇವಾಧಾಮ ಎಂಬ ಹೆಸರಿನಿಂದಲೇ ಎಲ್ಲರಿಗೂ ಪರಿಚಿತವಾಗಿದೆ. ಸೇವಾಧಾಮದ ವತಿಯಿಂದ 2003ರಲ್ಲಿ ಆಹವಾ ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಿದ್ಯಾರ್ಥಿನಿಲಯ ಪ್ರಾರಂಭವಾಯಿತುಹಾಗೆಯೇ 2005 ರಲ್ಲಿ 9 ರಿಂದ 12 ವರ್ಷಗಳವರೆಗಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೋಸ್ಕರ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಲಾಯಿತು".




ಸಂಸ್ಥೆಯಲ್ಲಿ ಸೇವಾ ಮನೋಭಾವದ ಕಾರ್ಯಕರ್ತರ ಪರಿಶ್ರಮದಿಂದ 2006ರಲ್ಲಿ ತಾಪೀ ಜಿಲ್ಲೆಯಲ್ಲಿ ಸೋನಗಡ ತಾಲೂಕಿನ ಗತಾಡೀ ಗ್ರಾಮದಲ್ಲಿ ಗ್ರಾಮವಿಕಾಸ ಕಾರ್ಯವು ಪ್ರಾರಂಭವಾಯಿತು. ಆಧುನಿಕ ಕೃಷಿ, ಬೀಜಗಳ ಉತ್ಪಾದನೆ, ಜಲ ಸಂರಕ್ಷಣೆಗೆ ಕಟ್ಟಗಳ ನಿರ್ಮಾಣ, ದೇಸೀ ಉತ್ಪನ್ನ ಮತ್ತು ಜೀವಾಮೃತ  ತಯಾರಿ ಮುಂತಾದ ಪ್ರಭಾವಿ ಮಾದರಿಗಳ ಉದಾಹರಣೆಯನ್ನು ಕೃಷಿಕರಿಗೆ ನೀಡಲಾಯಿತು. ಕಾರ್ಯಕರ್ತರ ಪ್ರಯತ್ನಗಳು 14 ವರ್ಷಗಳಲ್ಲಿ ಗತಾಡೀ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿವೆ. ಕೃಷ್ಯುತ್ಪನ್ನಗಳಿಗೆ ಯೋಗ್ಯವಾದ ಬೆಲೆ ಸಿಗುವ ಸಲುವಾಗಿ ಕೃಷಿಮೇಳಗಳನ್ನೂ  ಆಯೋಜಿಸಲಾಯಿತು.


ಮಾತೃಮಂಡಲಿಗಳು (ಮಾತೆಯರ ಸ್ವಸಹಾಯ ಸಂಘಗಳು) ಪಾನಮತ್ತ ಗಂಡಂದಿರಿಗೆ ಚಿಕಿತ್ಸೆಯನ್ನೂ ಪ್ರಾರಂಭ ಮಾಡಿವೆ. "ನಾವು ನಮ್ಮ ಗ್ರಾಮದಲ್ಲಿ ಮದ್ಯದ ಅಂಗಡಿಯನ್ನು ಮುಚ್ಚಿಸಿ, ಗ್ರಾಮವನ್ನು ಅಮಲಿನ ಗ್ರಹಣದಿಂದ ಮುಕ್ತವಾಗಿಸಿದ್ದೇವೆ" ಎಂದು ಸುಂದಾ ಗ್ರಾಮದ ಸಹೋದರಿ ಅನಿತಾ ಬೆನ್ ಹೇಳುತ್ತಾರೆ ಡಾಂಗ್ ಜಿಲ್ಲೆಯ ಜಾಮಲಾಪಾಡಾ ಗ್ರಾಮದಲ್ಲಂತೂ ಪುಷ್ಪಾ ಬೆನ್ ಪವಾರ್ ಅವರ ನೇತೃತ್ವದಲ್ಲಿ, 10 ಮಹಿಳೆಯರು 25,000 ರೂಪಾಯಿಗಳ ಸಾಲ ತೆಗೆದುಕೊಂಡು ಅಕ್ಕಿಯ ಮಂಡಿಯನ್ನು ಶುರುಮಾಡಿದರು ಮತ್ತು ಒಂದೇ ವರ್ಷದಲ್ಲಿ ಅವರು ತಮ್ಮದೇ ಗಳಿಕೆಯಿಂದ ಸಾಲವನ್ನು ತೀರಿಸಿದರು.ಇಂದಿಗೂ ಸಂಘದ ಕಾರ್ಯಕರ್ತರು ಭೂಪೇಂದ್ರ ಪಟೇಲ ಮತ್ತು ಲಲಿತ್ ಬನ್ಸಲ್ ಅವರೊಂದಿಗೆ ಕೈಜೋಡಿಸಿ, ಗ್ರಾಮಗಳ ಚಿತ್ರಣವನ್ನು ಬದಲಾಯಿಸುವುದರಲ್ಲಿ ತಮ್ಮ ನಿರಂತರ ಪರಿಶ್ರಮವನ್ನು ಹಾಕುತ್ತಲೇ ಇದ್ದಾರೆ.


ಸಂಪರ್ಕ - ತುಲಸೀ ಭಾಯಿಭವಾನಿ

ಮೊಬೈಲ್ - 09724443311
500 Views
अगली कहानी