सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಶಿಕ್ಷಣವೆಂಬ ಎಳೆಗಳನ್ನು ನೇಯ್ದು ಗಳಿಸಿದ ಸಫಲತೆ.

ಶ್ರೀ ಸುಬ್ರಾಯ ನಂದೋಡಿ | ದಕ್ಷಿಣ

parivartan-img

ಅವರೆಲ್ಲರೂ ಅನಕ್ಷರಸ್ಥರಾಗಿದ್ದರು, ದಿನವಿಡೀ ತಮ್ಮ ಮಕ್ಕಳನ್ನು ತಮ್ಮೊಂದಿಗೆ ಕೆಲಸ ಮಾಡಲು ಇಟ್ಟುಕೊಳ್ಳುಬೇಕಾದ ಅಸಹಾಯಕ ಸ್ಥಿತಿ ಅವರದಾಗಿತ್ತು. ಇಡೀ ಪರಿವಾರ ಕೆಲಸ ಮಾಡಿದರೆ ಮಾತ್ರ ಎರಡು ಹೊತ್ತಿನ ಆಹಾರ ಅವರಿಗೆ ದೊರಕುತ್ತಿತ್ತು. ವಿಪರ್ಯಾಸವೆಂದರೆ ರೇಷ್ಮೆ ನೇಯ್ಗೆಯಂತಹ ಕೆಲಸದಲ್ಲಿ ತಿಂಗಳುಗಟ್ಟಲೆ ದಿನವಿಡೀ ದುಡಿದ ನಂತರವೂ ವೇತನ ತೆಗೆದುಕೊಳ್ಳುವ ಸರದಿ ಬಂದಾಗ ಈ ನೇಕಾರರು ಹೆಚ್ಚಾಗಿ ಮೋಸ ಹೋಗುತ್ತಿದ್ದರು. ಸಹಿ ಮಾಡುವುದು ಹೇಗೆಂದು ತಿಳಿಯದವರು. ಆದಾಯದ ಲೆಕ್ಕಾಚಾರ ಹೇಗೆ ಇಟ್ಟುಕೊಳ್ಳಲು ಸಾಧ್ಯ ?


ಕಾಂಚೀಪುರಂನ ನೇಕಾರ ಸಮಾಜದಲ್ಲಿ ಇದು ಹಲವಾರು ತಲೆಮಾರುಗಳಿಂದ ಹೀಗೇ ನಡೆಯುತ್ತಿತ್ತು. ಅನಕ್ಷರತೆಯು ಅವರ ಅಭಿವೃದ್ಧಿಯ ಎಲ್ಲಾ ಬಾಗಿಲುಗಳನ್ನು ಮುಚ್ಚಿತ್ತು.ತಿರುವಲ್ಲಾವೂರ್ ರಾತ್ರಿ ಶಾಲೆ ಆರಂಭವಾದಾಗ ಆ ಬಾಗಿಲು ತೆರೆಯಿತು.

1981 ರಲ್ಲಿ ಸಂಘದ ಸೇವಾ ವಿಭಾಗ ಕೂಡ ರಚನೆಯಾಗದಿದ್ದಾಗ, ತಮಿಳುನಾಡಿನ ಕಾಂಚೀಪುರಂ ವಿಭಾಗ ಪ್ರಚಾರಕ್ ಧನುಷ್ ಜಿಯವರ ಪ್ರಯತ್ನದಿಂದಾಗಿ ನೇಕಾರರ ಸಮಾಜಕ್ಕೆ ಸಂಜೆ 6.30 ರಿಂದ ರಾತ್ರಿ 9.30 ರವರೆಗೆ ರಾತ್ರಿ ಶಾಲೆಗಳನ್ನು ಪ್ರಾರಂಭಿಸಲಾಯಿತು. 35 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದ ತರಗತಿಗಳು ಈ ಕುಟುಂಬಗಳ 4000 ನೇಕಾರರಿಗೆ ಅಧ್ಯಯನ ಮಾಡಲು ಮತ್ತು ಬೆಳೆಯಲು ಸಹಾಯ ಮಾಡಿತು. ಅಷ್ಟೇ ಅಲ್ಲ, ಸ್ವಯಂಸೇವಕರ ಈ ಅಕ್ಷರ ಅಭಿಯಾನದಿಂದ ಪ್ರೇರಿತವಾದ ತಮಿಳುನಾಡು ಸರ್ಕಾರವು ಈ ಸೇವಾಬಸ್ತಿಗಳಿಗಾಗಿ 33 ರಾತ್ರಿ ಶಾಲೆಗಳನ್ನೂ ಪ್ರಾರಂಭಿಸಿತು.

ಚಿನ್ನಾ ಕಾಂಚೀಪುರಂನಲ್ಲಿ ವಾಸಿಸುವ ಪ್ರಕಾಶ್, ಅವರಿಗೆ ರಾತ್ರಿ ಶಾಲೆಗೆ ಬಂದ ಆ ಮೊದಲನೇ ದಿನ ಈಗಲೂ ನೆನಪಿದೆ. 11 ವರ್ಷದ ಪ್ರಕಾಶ್ ಅವರು ತನ್ನ ಇಬ್ಬರು ಸಹೋದರರಾದ ರಮೇಶ್ ಮತ್ತು ಬಾಲಾಜಿ ಜೊತೆಗೆ ಕಲಿಯಲು ಇಲ್ಲಿಗೆ ಬರುತ್ತಿದ್ದರು. ಈ ರಾತ್ರಿ ಶಾಲೆಗೆ ಬರುವ ಮೊದಲು, ಈ ಮೂವರು ಸಹೋದರರು ಅಂದಿನದವರೆಗೂ ಶಾಲೆಗೆ ಹೋಗಿರಲೇ ಇಲ್ಲ.


ಈ ತರಗತಿಗಳಲ್ಲಿ ಅಲ್ಲಿನ ಶಾಖೆಯ ಕಾರ್ಯವಾಹರಾದ ಮೂರ್ತಿಜೀಯವರು ತಮಿಳು, ಇಂಗ್ಲಿಷ್ ಮತ್ತು ಗಣಿತವನ್ನು ಕಲಿಸುತ್ತಿದ್ದರು. ಇದರ ಜೊತೆಗೆ ಹಾಡು, ಪ್ರಾರ್ಥನೆ, ಮಂತ್ರ ಮತ್ತು ಕೆಲವೊಮ್ಮೆ ನೀತಿ ಕಥೆಗಳನ್ನು ಸಹ ಹೇಳುತ್ತಿದ್ದರು. ಮೂರ್ತಿಯವರು ತಮ್ಮ ಜೀವನದ 20 ಅಮೂಲ್ಯ ವರ್ಷಗಳನ್ನು ಈ ಕೆಲಸಕ್ಕಾಗಿ ನೀಡಿದರು. ಅವರಂತಹ ಸ್ವಯಂಸೇವಕರ ಕಠಿಣ ಪರಿಶ್ರಮದ ಪರಿಣಾಮವಾಗಿ ಇಲ್ಲಿನ ನೇಕಾರ ಸಮಾಜವು ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆಯುತ್ತಿದೆ. ಪ್ರಕಾಶ್ ಮತ್ತು ಅವರ ಇಡೀ ಕುಟುಂಬವು ವ್ಯವಹಾರದಲ್ಲಿ ಮಾತ್ರವಲ್ಲದೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಮುಂದೆ ಸಾಗಿದೆ. ಹಿಂದೆ, ಅವರು ಇತರರಿಗಾಗಿ ನೇಯ್ಗೆ ಮಾಡುತ್ತಿದ್ದರು. ಈಗ ಅವರು ಸ್ವತಃ ಮಾಲಿಕರಾಗಿದ್ದಾರೆ ಮತ್ತು ಅವರ ವ್ಯವಹಾರದಿಂದ ಪ್ರತಿ ತಿಂಗಳು 30 ರಿಂದ 35 ಸಾವಿರ ರೂಪಾಯಿಗಳನ್ನು ಗಳಿಸುತ್ತಾರೆ. ಪ್ರಕಾಶ್ ರಾಧಾಕೃಷ್ಣನ್ ಅವರು ಈಗ ಸಂಘದ ಉತ್ತರ ತಮಿಳುನಾಡು ಪ್ರಾಂತದ ಸಹಸೇವಾ ಪ್ರಮುಖ್ ಆಗಿ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಈ ಸಣ್ಣ ಸೇವೆಯು ನೂರಾರು ಕುಟುಂಬಗಳ ಜೀವನವನ್ನೇ ಬದಲಿಸಿದೆ ಎಂದು ಅವರು ನಂಬುತ್ತಾರೆ.


ಚೆನ್ನೈನಿಂದ ಕೇವಲ 72 ಕಿಲೋಮೀಟರ್ ದೂರದಲ್ಲಿರುವ ಈ ನಗರದಲ್ಲಿ ಯಾವಾಗ ಈ ಸಾಕ್ಷರ ಅಭಿಯಾನ ಪ್ರಾರಂಭವಾಯಿತೋ ಆಗ ಈ ಪ್ರದೇಶದ ಸಾಕ್ಷರತೆಯ ಪ್ರಮಾಣ ಕೇವಲ 15 ಪ್ರತಿಶತದಷ್ಟಿತ್ತು, ಅಂದರೆ ಇಲ್ಲಿನ 85 ಪ್ರತಿಶತದಷ್ಟು ಜನರು ಸಾಕ್ಷರರಾಗಿರಲಿಲ್ಲ. ಇಂದು ಇಲ್ಲಿ ಶೇ.60 ಜನರು ಸಾಕ್ಷರರಾಗಿದ್ದಾರೆ.

ಈ ಅಭಿಯಾನದ ಸಮಯದಲ್ಲಿ, ತಮಿಳುನಾಡಿನ ಪ್ರಾಂತ ಸೇವಾ ಪ್ರಮುಖರಾಗಿದ್ದ ಮತ್ತು ಪ್ರಸ್ತುತ

ಸಂಘದ ಅಖಿಲ ಭಾರತೀಯ ಅಧಿಕಾರಿಗಳಾಗಿರುವ ಸುಂದರ್‌ ಲಕ್ಷ್ಮಣ್ ಜಿಯವರ ಪ್ರಕಾರ ನೇಕಾರರ ಸಮಾಜದ ಎರಡನೇ ತಲೆಮಾರಿನಲ್ಲಿ ಅನೇಕ ಯುವಕರು ಈಗ ಪದವೀಧರರಾಗಿದ್ದಾರೆ ಎಂದು ಹೇಳುತ್ತಾರೆ. ಈಗ ಈ ಜನರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ ಎಂದು ಅವರು ಸಂತೋಷ ವ್ಯಕ್ತಪಡಿಸುತ್ತಾರೆ.


ಸಂಪರ್ಕ: ಪ್ರಕಾಶ್ ರಾಧಾಕೃಷ್ಣನನ್

094440 87778


950 Views
अगली कहानी