सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ರೈತರ ನಿಜವಾದ ಮಿತ್ರ – ಕೃಷಿಕರ ಅಭಿವೃದ್ಧಿ ಯೋಜನೆ.

ದಕ್ಷಿಣ

parivartan-img

ಕೃಷಿ ಎಂದಿಗೂ ತಮಾಶೆಯ ಆಟವಲ್ಲ, ಶತಮಾನಗಳಿಂದ ರೈತನು ಅರೆಹೊಟ್ಟೆಯ ಜೀವನ ನಡೆಸುತ್ತಿದ್ದಾನೆ. ಸಣ್ಣ ಪ್ರಮಾಣದ ರೈತರಿಗಂತು ಕೃಷಿಯ ಮೂಲಕ ಬದುಕು ಸಾಗಿಸುವುದು ಕಷ್ಟವೇ ಆಗಿದೆ. ಮಾನ್ಸೂನ್ ಮಳೆಯ ಅನಿಶ್ಚಿತತೆ ಹಾಗು ಬೆಳೆಗಳಿಗೆ ತಗಲುವ ರೋಗಗಳಿಂದ ಸರಿಯಾದ ಆದಾಯವು ಇಲ್ಲವಾಗುತ್ತದೆ. ಇಂತಹ ವಾಸ್ತವಿಕತೆಯು ಮಹಾರಾಷ್ಟ್ರದ ಕೊಂಘಾರಾ ಹಳ್ಳಿಯ ಸುನೀತಾ ಜಾಧವ್ ಅವರಿಗಿಂತ ಚೆನ್ನಾಗಿ ಬೇರೆ ಯಾರು ಅರ್ಥಮಾಡಿಕೊಳ್ಳಬಲ್ಲರು. ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಕೊಂಘಾರಾ ಹಳ್ಳಿಯ ಈ ಯುವತಿಯ ಪತಿಯು ಕೃಷಿಕನಾಗಿದ್ದು ತನ್ನ ವ್ಯವಸಾಯದ ದುಃಸ್ಥಿತಿಯನ್ನು ಕಂಡು ಬಳಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅದೇ ಸಮಯದಲ್ಲಿ ಸುನೀತಾಳು ತನ್ನ ಮೂರನೇ ಹೆಣ್ಣುಮಗಳಿಗೆ ಜನ್ಮ ನೀಡಿದ್ದಳು. 


ಭಾರತದಲ್ಲಿ ನೂರಾರು ರೈತರು ವರ್ಷದಿಂದ ವರ್ಷಕ್ಕೆ ಜೀವಿಸುವ ಆಸೆಯನ್ನು ತೊರೆಯಲು ಕಾರಣ, ಅವರು ಬೆಳೆದ ಬೆಳೆಯ ಫಸಲು ಎಂದಿಗು ಅವರ ಕುಟುಂಬದ ಹಸಿವನ್ನು ಹಾಗು ಕೃಷಿಗೆ ತಗಲುವ ವೆಚ್ಚವನ್ನು ಸರಿದೂಗಿಸಲು ಸಾಧ್ಯವಾಗದಿರುವುದೆ ಆಗಿದೆ. ರೈತರ ಆತ್ಮಹತ್ಯೆಯ ಏರುತ್ತಿರುವ ಗ್ರಾಫ್ ನಿಂದ ಚಿಂತಿತರಾಗಿ ಶೇತಕಾರಿ ವಿಕಾಸ್ ಪ್ರಕಲ್ಪವು (ಕೃಷಿಕರ ಅಭಿವೃದ್ಧಿ ಯೋಜನೆ) ಜಾರಿಗೆ ಬಂದಿತು. 


ಯವತ್ಮಾಲ್ ಜಿಲ್ಲೆಯಲ್ಲಿ ಆಗಿನ ವಿಭಾಗ ಪ್ರಚಾರಕರಾಗಿದ್ದ ಶ್ರೀ ಸುನೀಲ್ ದೇಶಪಾಂಡೆ ಜೀಯವರ (ಈಗ ಅಖಿಲ ಭಾರತೀಯ ಸಹ ಸಂಪರ್ಕ ಪ್ರಮುಖ್) ಪ್ರಯತ್ನದಿಂದ 1997ನೇ ಇಸವಿಯಲ್ಲಿ  ಆರಂಭವಾದ ಈ ಯೋಜನೆಯ ಮೂಲಕ ಸಂಸ್ಥೆಯು ರೈತರಿಗೆ ಶೂನ್ಯ ಬಜೆಟ್ ಕೃಷಿಯ ಪ್ರಶಿಕ್ಷಣವನ್ನು ನೀಡಿ ಮಧ್ಯಮ ಹಂತದ ರೈತರ ಆದಾಯವನ್ನು ಹೆಚ್ಚಿಸಿತು. ಹಾಗೆಯೆ ಇನ್ನೊಂದು ಕಡೆ ಆತ್ಮಹತ್ಯೆ ಮಾಡಿಕೊಂಡಿದ್ದ ರೈತರ ಪರಿವಾರಗಳಿಗೆ ಉದ್ಯೋಗವನ್ನು ದೊರಕಿಸಿಕೊಡುವ ಮೂಲಕ ಅವರನ್ನು ಆತ್ಮನಿರ್ಭರರನ್ನಾಗಿ ಮಾಡಿತು. ಪೀಡಿತ ರೈತ ಪರಿವಾರದ ಮಕ್ಕಳ ಶಿಕ್ಷಣಕ್ಕಾಗಿ ಸಂಸ್ಥೆಯು ಉಚಿತ ವಿದ್ಯಾರ್ಥಿ ನಿಲಯಗಳನ್ನೂ ನಡೆಸುತ್ತಿದೆ. ಈಗ ಈ ವಿದ್ಯಾರ್ಥಿ ನಿಲಯದಲ್ಲಿ 65 ಮಕ್ಕಳು ಇದ್ದು ಅವರಲ್ಲಿ ಮೊದಲ ಬ್ಯಾಚ್ ನ ಕೆಲವು ಮಕ್ಕಳು ಎಂಜಿನಿಯರಿಂಗ್ ಶಿಕ್ಷಣವನ್ನು ಮುಗಿಸಿದ್ದಾರೆ.


ಸಂಸ್ಥೆಯ ಪೂರ್ಣ ಹೆಸರು ದೀನದಯಾಳ್ ವಿವಿಧೋದ್ದೇಶ ಪ್ರಸಾರ ಮಂಡಳಿ. ಇದರ ಒಂದು ಯೋಜನೆಯೆ- ಶೇತಕಾರೀ ವಿಕಾಸ ಪ್ರಕಲ್ಪ ಅಂದರೆ ಕೃಷಿಕರ ಅಭಿವೃದ್ಧಿ ಯೋಜನೆ. ಸಂಸ್ಥೆಯ ಸಂಯೋಜಕರಾದ ಶ್ರೀ ಗಜಾನನಜೀ ಪರಸೋಡ್ಕರ್ ಹೇಳುತ್ತಾರೆ.. ಇಲ್ಲಿಯ ತನಕ ವಿವಿಧ ಹಂತಗಳಲ್ಲಿ ಸುಮಾರು 400 ಬಡ ಕೃಷಿಕ ಕುಟುಂಬಗಳನ್ನು ಆತ್ಮನಿರ್ಭರರನ್ನಾಗಿಸಿದೆ. ಈಗ ಕೊಂಘಾರಾ ಹಳ್ಳಿಯ ಸುನೀತಾ ಜಾಧವರನ್ನೆ ನೋಡಿ, ಪತಿಯ ಆತ್ಮಹತ್ಯೆಯಿಂದ ಮೂರು ಹೆಣ್ಣುಮಕ್ಕಳ ಪಾಲನೆ ಪೋಷಣೆಯ ಜವಾಬ್ದಾರಿಯನ್ನು ಹೊತ್ತಿದ್ದ ಸುನೀತಾಳ ಜೀವನದಲ್ಲಿ ಎಲ್ಲಾ ಬಾಗಿಲುಗಳು ಮುಚ್ಚಿದ್ದವು. ಆಗ ಶೇತಕಾರೀ ಪರಿವಾರವು ಅವಳ ಸಹಾಯಕ್ಕೆ ಮುಂದೆ ಬಂದಿತು. ಇಂದು ಅವಳು ಸಂಸ್ಥೆಯ ಸಹಾಯದಿಂದ ತನ್ನದೇ ಆದ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದಾಳೆ. ಸುನೀತಾಳ ಮೂವರು ಮಕ್ಕಳು ಸಂಸ್ಥೆಯ ನೆರವಿನಿಂದ ಒಳ್ಳೆಯ ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ.


ಗಜಾನನಜೀ ಅವರು ಹೇಳುವಂತೆ ರೈತರ ಪರಿಸ್ಥಿತಿ ಸುಧಾರಿಸಲು ಹಲವು ಹಂತಗಳಲ್ಲಿ ಕೆಲಸವನ್ನು ಮಾಡುತ್ತಿದ್ದೇವೆ. ಸಂಸ್ಥೆಯು ಉಚಿತವಾಗಿ ಉತ್ತಮವಾದ ಬೀಜಗಳ ವಿತರಣೆ, ಸಾವಯವ ಕೃಷಿ ಪ್ರಶಿಕ್ಷಣ, ಸ್ವ-ಸಹಾಯ ಗುಂಪುಗಳ ರಚನೆ ಹಾಗು ಜಲ ಸಂರಕ್ಷಣೆಗಳ ಮೂಲಕ ಸಮಗ್ರ ಬದಲಾವಣೆಗಳಿಗೆ ಅಡಿಪಾಯ ಹಾಕಿದೆ. 


ಹಾಗೆಯೆ ಆತ್ಮಹತ್ಯೆ ಮಾಡಿಕೊಂಡಿದ್ದ ರೈತರ ಮಕ್ಕಳನ್ನು ಓದಿಸುವುದರೊಂದಿಗೆ ಕುಟುಂಬದ ಜವಾಬ್ದಾರಿಯನ್ನು ಹೊತ್ತ ಸದಸ್ಯನಿಗೆ ಉದ್ಯೋಗವನ್ನು ನೀಡಿ ಸ್ವಾವಲಂಬಿಯನ್ನಾಗಿಸುವಲ್ಲಿ ಈ ಸಂಸ್ಥೆಯು ಸಹಾಯ ಮಾಡಿದೆ. ಪ್ರತೀ ವರ್ಷ ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರಿಗೆ ಈ ಸಂಸ್ಥೆಯ ಮೂಲಕ ಸೆಪ್ಟೆಂಬರ್ 25ರಂದು ದೀನದಯಾಳ್ ಉಪಾಧ್ಯಾಯ ಪುರಸ್ಕಾರವನ್ನು ನೀಡಲಾಗುತ್ತಿದೆ.


 ಸಂಪರ್ಕಿಸಿ:

ಶ್ರೀ ಗಜಾನನ ಪರಸೋಡ್ಕರ್ 8605542650

712 Views
अगली कहानी