सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

4 mins read

ಭರವಸೆಯ ಹೊಸ ಬೆಳಕು-ಸಾವಿತ್ರಿಬಾಯಿ ಫುಲೆ ಏಕಾತ್ಮ ಸಮಾಜ ಮಂಡಲಿ-ಔರಂಗಾಬಾದ್, ಮಹಾರಾಷ್ಟ್ರ

ದಕ್ಷಿಣ

parivartan-img

ಔರಂಗಾಬಾದ್ ಹತ್ತಿರದ ಒಂದು ಸಣ್ಣ ಹಳ್ಳಿ ಖಾಮಖೇಡಾದಲ್ಲಿ 65 ವರ್ಷದ ಭಾಮಾ ಆಜೀಗೆ ಇಂದು  ಹೃದಯ ತುಂಬಿ ಬಂದ ದಿನ.. ಇಂದು ಮೊದಲ ಬಾರಿಗೆ ಅವಳು ಸರ್ಕಾರಿ ಕಾಗದಗಳ ಮೇಲೆ ಹೆಬ್ಬೆಟ್ಟು ಒತ್ತುವುದರ ಬದಲಾಗಿ, ತನ್ನ ಪೆನ್ನಿನಿಂದ ಸಹಿ ಹಾಕುತ್ತಿದ್ದಾಳೆ. ಅನೇಕ ವರ್ಷಗಳಿಂದ ತನ್ನ ಗ್ರಾಮವಿಡೀ ಪರಿಚಯವಿದೆ ಅವಳಿಗೆ, ಆದರೆ ಇಂದು ಬಸ್ಸಿನ ಮೇಲೆ ಬರೆದಿರುವ ತನ್ನ ಗ್ರಾಮ "ಖಾಮಖೇಡಾ" ದ ಹೆಸರನ್ನು ಜೋರಾಗಿ ಓದುತ್ತ, ಗ್ರಾಮದವರಿಗೆಲ್ಲ ತನಗೀಗ ಓದಲು ಬರೆಯಲು ಬರುತ್ತದೆ ಎಂದು ಖುಷಿಯಿಂದ ಹೇಳುತ್ತಿದ್ದಾಳೆ. ತಾನು ಓದಲು ಬರೆಯಲು ಕಲಿತಿದ್ದೇನೆ ಎಂದು ಬಹುಶಃ ಅವಳಿಗೆ ಈಗಲೂ ನಂಬಿಕೆ ಬರುತ್ತಿಲ್ಲ, ಅಷ್ಟು ರೋಮಾಂಚಿತಳಾಗಿದ್ದಾಳೆ ಅವಳು.

ಇದು ಇಲ್ಲಿನ ಚಿತ್ರಣವಾದರೆ, ಅಲ್ಲಿ ಇನ್ನೊಂದೆಡೆ  ಔರಂಗಾಬಾದ್ ನ ಇಂದಿರಾನಗರದಲ್ಲಿರುವ ಆಶಾಳ ಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ. ಕುಡುಕ ಗಂಡನ ಸಹವಾಸದಿಂದ ತಿನ್ನಲೂ ಗತಿಯಿಲ್ಲದೆ, ಪರಿಸ್ಥಿತಿ ಸುಧಾರಿಸಬಹುದು ಎನ್ನುವ ಆಸೆಯನ್ನು ತೊರೆದುಬಿಟ್ಟಿದ್ದಳು ಅವಳು. ಆಗ, ಅವಳ  22ನೇ ವಯಸ್ಸಿನಲ್ಲಿ ಸಾವಿತ್ರಿಬಾಯಿ ಫುಲೆ ಏಕಾತ್ಮ ಸಮಾಜ ಮಂಡಲಿಯೊಂದಿಗೆ ಸಂಪರ್ಕವಾಯಿತು. ಈಗ ಆಶಾ ತಾಯಿ ತನ್ನ 42  ನೇ ವಯಸ್ಸಿನಲ್ಲಿ ಬಹಳಷ್ಟು ಜನರಿಗೆ ತನ್ನ ನರ್ಸಿಂಗ್ ಬ್ಯೂರೋದಲ್ಲಿ ಕೆಲಸ ಹೇಳಿಕೊಡುವುದಲ್ಲದೆ, ಅವರಿಗೆ ದಿನಗೂಲಿಯನ್ನೂ ಕೊಡುತ್ತಿದ್ದಾಳೆ.

 ಸಾಮಾಜಿಕ ಕಟ್ಟಳೆಗಳನ್ನು ಮೀರಿ, ನಿಂತುಹೋಗಿದ್ದ ಶಿಕ್ಷಣವನ್ನು ಪುನರಾರಂಭಿಸಿ, 10ನೇ ಮತ್ತು ವಿಜ್ಞಾನದಲ್ಲಿ 12ನೇ ಮತ್ತು ಪದವಿಯನ್ನು ಪಡೆದದ್ದು, ಅದೂ ಮೂರು ಮಕ್ಕಳ ಜವಾಬ್ದಾರಿಯೊಂದಿಗೆ.. ಖಂಡಿತ ಸುಲಭದ ಮಾತಾಗಿರಲಿಲ್ಲ. ಆದರೆ ಸಂಸ್ಥೆಯ "ಸಶಕ್ತ ನಾರಿ" "ಸಶಕ್ತ ಪರಿವಾರ" ಎಂಬ ಯೋಜನೆಗಳು ಅವಳಿಗೆ ಧೈರ್ಯವನ್ನು ನೀಡಿದವು, ಜೀವನದಲ್ಲಿ ಒಂದು ಹೊಸ ದಾರಿಯನ್ನು ತೋರಿಸಿದವು.

 ಮಂಡಳಿಯ ಅಧ್ಯಕ್ಷ ಮತ್ತು ಔರಂಗಾಬಾದ್ ನಗರದ ಮಾಜಿ ಕಾರ್ಯಕರ್ತರಾಗಿದ್ದ ಡಾ. ದಿವಾಕರ್ ಕುಲಕರ್ಣಿ ಜೀ ಹೇಳುತ್ತಾರೆ... "ಸಾವಿತ್ರಿಬಾಯಿ ಫುಲೆ ಏಕಾತ್ಮ ಸಮಾಜ ಮಂಡಲಿಯಿಂದ ಸ್ವಯಂಸೇವಿಕಾ ಮಹಿಳೆಯರ 302 (ಸ್ತ್ರೀ ಉದ್ಯಮಶೀಲತೆ) ಸ್ವಸಹಾಯ ಗುಂಪು ಮತ್ತು ವಿಭಿನ್ನ ಯೋಜನೆಗಳಿಂದ ಸುಮಾರು 2000ಕ್ಕೂ ಹೆಚ್ಚಿನವರು ಸ್ವಯಂ ಸೇವೆಯ ಕೈಂಕರ್ಯಕ್ಕೆ ಕೈ ಜೋಡಿಸಿದ್ದಾರೆ. ಇದರ ಮೂಲಕ ನಡೆಸುತ್ತಿರುವ ಸುಮಾರು 43ಕ್ಕೂ ಅಧಿಕ ಪ್ರಾಜೆಕ್ಟ್‌ಗಳಲ್ಲಿ ಕೆಲವು ಉಚಿತ ಮತ್ತು ಕೆಲವು ಹೆಸರಿಗಷ್ಟೇ ಸ್ವಲ್ಪವೇ ಶುಲ್ಕದ ಮೇಲೆ ಆಧಾರಿತವಾಗಿವೆ. ಇವುಗಳಲ್ಲಿ ನಿಸ್ವಾರ್ಥ ಸೇವೆಯ ದೃಷ್ಟಿಯಲ್ಲಿ ಪ್ರಾಥಮಿಕ ಆರೋಗ್ಯ, ಸೇವೆ, ಶಿಕ್ಷಣ, ಕೃಷಿ, ಸುರಕ್ಷಿತ ನೀರು, ಬಾಲಕರು, ವಿದ್ಯಾರ್ಥಿಗಳು ಮತ್ತು ಬಾಲಕಿಯರಿಗಾಗಿ ವ್ಯಕ್ತಿತ್ವ ವಿಕಸನ ಕೇಂದ್ರ, ಸ್ತ್ರೀ ಸಬಲೀಕರಣ ಮತ್ತು ಜೀವನವನ್ನು ಇನ್ನಷ್ಟು ಸುದೃಢ ಹಾಗೂ ಸಮೃದ್ಧವನ್ನಾಗಿ ಮಾಡಿಕೊಳ್ಳುವ ಕೌಶಲ್ಯ ವಿಕಾಸ ಕೇಂದ್ರ, ಈ ರೀತಿಯ ಯೋಜನೆಗಳ ಲಾಭವನ್ನು ಔರಂಗಾಬಾದ್ ನಗರದ 45 ಸೇವಾಬಸ್ತಿಗಳಲ್ಲಿ ಮತ್ತು ಅಕ್ಕಪಕ್ಕದ 270 ಗ್ರಾಮಗಳ ಸುಮಾರು 55 ಲಕ್ಷಕ್ಕೂ ಅಧಿಕ ಮಂದಿ ಯಾವುದಾದರೊಂದು ರೂಪದಲ್ಲಿ ಪಡೆದಿದ್ದಾರೆ.


 ಲಕ್ಷಾಂತರ ಜನರಿಗೆ ಜೀವನದ ಭರವಸೆ ಮತ್ತು ಉತ್ಸಾಹವನ್ನು ತುಂಬುವ ಈ ಮಂಡಳಿಯ ಸ್ಥಾಪನೆ ಯಾವಾಗ ಮತ್ತು ಹೇಗೆ ಆಯಿತು ಎಂಬ ಕಥೆ ತುಂಬ ರೋಚಕವಾದುದು.. ಒಬ್ಬ ಸಾಮಾನ್ಯ ಮನುಷ್ಯನಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಆರೋಗ್ಯವನ್ನು ನೀಡುವ ಮುಖ್ಯ ಉದ್ದೇಶದಿಂದ ಮಾತೃಸಂಸ್ಥೆಯು ಡಾ. ಬಾಬಾಸಾಹೇಬ ಅಂಬೇಡ್ಕರ್ ವೈದ್ಯಕೀಯ ಪ್ರತಿಷ್ಠಾನದ ಮೂಲಕ 7 ವೈದ್ಯರು ತಮ್ಮ ಉಳಿತಾಯದಿಂದ 1989ರಲ್ಲಿ ಡಾ. ಹೆಗಡೇವಾರ ಆಸ್ಪತ್ರೆ (ಔರಂಗಾಬಾದ್) ಯನ್ನು ಸ್ಥಾಪಿಸಿದರು. ಮೊಟ್ಟಮೊದಲಿಗೆ ಡಾ. ಹೆಗಡೇವಾರ ಆಸ್ಪತ್ರೆಯ ಮೂಲಕ ನಗರದ ಮೂರು ಹಿಂದುಳಿದ ಸೇವಾಬಸ್ತಿಗಳಲ್ಲಿ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಆದರೆ ಇಷ್ಟೇ ಸಾಕಾಗುತ್ತಿರಲಿಲ್ಲ, ಸೇವಾ ಕೇಂದ್ರಗಳ ಮಕ್ಕಳ ಶಿಕ್ಷಣ ಮತ್ತು ಮಹಿಳೆಯರ ಸಬಲೀಕರಣದ ಅವಶ್ಯಕತೆಯನ್ನು ಅರಿತು, 1994ರಲ್ಲಿ ಸಾವಿತ್ರಿಬಾಯಿ ಫುಲೆ ಮಹಿಳಾ ಏಕಾತ್ಮ ಸಮಾಜ ಮಂಡಳಿಯು (SPMESM) ಅಸ್ತಿತ್ವಕ್ಕೆ ಬಂದಿತು.

 ಸಾವಿತ್ರಿಬಾಯಿ ಫುಲೆ ಏಕಾತ್ಮ ಸಮಾಜ ಮಂಡಳಿಯ ಟ್ರಸ್ಟಿ ಮಾಧುರಿ ದೀದಿ ಹೇಳುತ್ತಾರೆ, ಹಣಕಾಸಿನ ಅಭಾವವೂ ಮತ್ತು ಬಾಲ್ಯವಿವಾಹ ನಡೆಸುವ ಮಾನಸಿಕತೆಯೂ ಈ ವರ್ಗಗಳಲ್ಲಿತ್ತು.

 16 ವರ್ಷದ ಪ್ರಿಯಾಂಕ ಬಹಳ ಶಾಂತ ಮತ್ತು ಸಂಕೋಚ ಸ್ವಭಾವದವಳಾಗಿದ್ದಳು. ಇಂಥ ಪರಿಸ್ಥಿತಿಯಲ್ಲಿ ಅವಳ ಮದುವೆ ಬಹಳ ಸಣ್ಣ ವಯಸ್ಸಿನಲ್ಲೇ ನಡೆದುಬಿಡುತ್ತಿತ್ತು. ಆದರೆ ಅವಳು ಶಿಕ್ಷಣದ ಜೊತೆಜೊತೆಗೆ ಮಂಡಳಿಯ ಸಹಯೋಗದಿಂದ ಮುಕುಂದವಾಡಿಯಲ್ಲಿ ಕರಾಟೆ ತರಬೇತಿಯನ್ನೂ ಪಡೆದಳು. ಇಂದು ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಹೊಂದಿರುವ ಪ್ರಿಯಾಂಕ ರಾಜ್ಯಮಟ್ಟದ ಚಾಂಪಿಯನ್ ಆಗಿದ್ದಾಳೆ. ಹಾಗೂ ಮುಕುಂದವಾಡಿಯ ಆರೋಗ್ಯ ಕೇಂದ್ರದಲ್ಲಿ ಎಲ್ಲ ಮಕ್ಕಳಿಗೂ ಉಚಿತವಾಗಿ ತರಬೇತಿ ನೀಡುತ್ತಿದ್ದಾಳೆ.


 ಹೀಗೆ ಬಾಲಕಿಯರು ತಾವೇ ಸಂಘಟಿತರಾಗಿ ತಮ್ಮ ಧ್ವನಿಗಳನ್ನು ಗಟ್ಟಿಗೊಳಿಸುತ್ತಿದ್ದಾರೆ. ಮಂಡಳಿಯ ಮೂಲಕ ನಡೆಸುತ್ತಿರುವ 18 ವಿದ್ಯಾರ್ಥಿ ವಿಕಾಸ ಕೇಂದ್ರಗಳಲ್ಲಿ ಮತ್ತು 19 ಕಿಶೋರಿ ವಿಕಾಸ ಕೇಂದ್ರಗಳಲ್ಲಿ, 10 ಇತರ ಕೇಂದ್ರಗಳಲ್ಲಿ 15000ಕ್ಕೂ ಅಧಿಕ ಬಾಲಕ ಬಾಲಕಿಯರಿಗೆ ಉನ್ನತ ಮಟ್ಟದ ಶಿಕ್ಷಣವನ್ನು ಕೊಡಿಸುವ ಕಾರ್ಯ ನಡೆಯುತ್ತಿದೆ. ಸಣ್ಣ ವಯಸ್ಸಿನಲ್ಲಿ ವಿವಾಹವಾಗುವ ಮತ್ತು ಓದನ್ನು ಬಿಟ್ಟುಬಿಡುವವರನ್ನು ಗಮನಿಸಿ, ಅದನ್ನು ತಡೆಯುವಲ್ಲಿ ವಿಭಿನ್ನ ಕಾರ್ಯವೈಖರಿಯ ಜೊತೆಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವುದು, ಕಿಶೋರಾವಸ್ಥೆಯಲ್ಲಿ ಜಾಗೃತರಾಗಿರುವುದು ಮತ್ತು ಬಾಲಕಿಯರ ಆರೋಗ್ಯದ ಕಡೆ ಗಮನ, ಹೀಗೆ ಎಲ್ಲರೊಂದಿಗೆ ಕಾರ್ಯ ನಡೆಸುತ್ತಿರುವ ಒಂದು ವಿಶೇಷ ಯೋಜನೆ ಜಾರಿಯಲ್ಲಿದೆ. ಇದರ ಪರಿಣಾಮ, ಈ ಯುವ ಪೀಳಿಗೆಯು ಸಾಕ್ಷರತೆ, ಕ್ಷಮತೆ, ಆತ್ಮನಿರ್ಭರತೆ ಮತ್ತು ಸ್ತ್ರೀ ಸಬಲೀಕರಣದ ಕಾರ್ಯಗಳಲ್ಲಿ ಭಾಗವಹಿಸಿ, ತಮ್ಮ ಆತ್ಮವಿಶ್ವಾಸವನ್ನು ಮತ್ತು ತಮ್ಮ ಭವಿಷ್ಯವನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆತ್ಮನಿರ್ಭರತೆಯನ್ನು ರೂಪಿಸುವಲ್ಲಿ ಕೌಶಲ್ಯ ತರಬೇತಿ ಕೇಂದ್ರವು ಗ್ರಾಮವಿರಲಿ ಅಥವಾ ನಗರವಿರಲಿ, ಎಲ್ಲರ ಜೀವನ ಮಟ್ಟವನ್ನು ಸುಧಾರಿಸುತ್ತಿದೆ. ನೀಲಿಮಾಳಿಗೆ ತಾನು ಔರಂಗಾಬಾದ್ ನ ಒಬ್ಬ ಖ್ಯಾತಿವೆತ್ತ ಬ್ಯೂಟಿಶಿಯನ್ ಆಗಬಹುದೆಂಬ ಕಲ್ಪನೆಯೇ ಇರಲಿಲ್ಲ. ಹಾಗೇ ಮೀನಾಕ್ಷಿಗೂ ತಾನು ಎಂದಾದರೂ ಒಂದು ಹಿಟ್ಟಿನ ಗಿರಣಿಯ ಮಾಲಿಕಳಾಗುತ್ತೇನೆ ಎಂಬ ಅರಿವೂ ಇರಲಿಲ್ಲ. ಐದನೇ ತರಗತಿಗೆ ಓದಲು ಬಂದ ಅವಿನಾಶ್ ಇಂದು ಜಲಶುದ್ಧೀಕರಣ ಕಾರ್ಖಾನೆಯ ಮಾಲಿಕನಾಗಿದ್ದಾನೆ, ತನ್ನ ಸೇವೆಯನ್ನು ಸಂಘಕ್ಕೆ ನೀಡುವಲ್ಲಿ ಸದಾ ತಯಾರಿರುತ್ತಾನೆ.

 ಮಂಡಳಿಯ ಸಮಸ್ತ ಕಾರ್ಯ ಕಲಾಪಗಳನ್ನು ಆರಂಭದಿಂದಲೂ ಗಮನಿಸುತ್ತ, ಒಂದು ಮಹತ್ವದ ಭೂಮಿಕೆಯನ್ನು ನಿಭಾಯಿಸುತ್ತಿರುವ ಸವಿತಾ ಕುಲಕರ್ಣಿ ಹೇಳುತ್ತಾರೆ -.. " ಮಕ್ಕಳಲ್ಲಿ ಉನ್ನತ ಸಂಸ್ಕಾರ ಮತ್ತು ಪೋಷಣೆಯ ಆಧಾರದ ಮೇಲೆ ದೇಶದ ಭವಿಷ್ಯ ನಿರ್ಧಾರಿತವಾಗುತ್ತದೆ."

 ಮಂಡಳಿಯ ಪ್ರಾಥಮಿಕ ಶಿಕ್ಷಣ ಕೇಂದ್ರವು ಕೇವಲ ಮಕ್ಕಳಿಗಷ್ಟೇ ಅಲ್ಲ, ಶಿಕ್ಷಕರಿಗೂ ಮತ್ತು ತಾಯ್ತಂದೆಯರಿಗೂ ಉಚಿತ ತರಬೇತಿಯನ್ನು ನೀಡುತ್ತಿದೆ. ವಿಹಂಗ ಶಿಕ್ಷಣ ಕೇಂದ್ರದಲ್ಲಿ ದಿವ್ಯಾಂಗ ಮಕ್ಕಳಿಗಾಗಿ ಬೇರೆ ಬೇರೆ ವಾಕ್ ಮತ್ತು ಶ್ರವಣ ಥೆರಪಿಗಳು, ಫಿಸಿಯೋಥೆರಪಿ, ಸಂಗೀತ ಥೆರಪಿಗಳ ಸಹಯೋಗಗಳು, ಪಾಲಕರ ಸಹಾಯ ಗುಂಪುಗಳು, ವಿಶೇಷ ಶಿಕ್ಷಣದಲ್ಲಿ ತರಬೇತಿ ಕೋರ್ಸ್ ಗಳು, ಹೀಗೆ ಎಲ್ಲ ನಡೆಯುತ್ತಿವೆ. ಸುಮಾರು 300ಕ್ಕೂ ಅಧಿಕ ದಿವ್ಯಾಂಗ ಮಕ್ಕಳಿಗಾಗಿ ಹೊಸ ಪರಿಸರದ ನಿರ್ಮಾಣವಾಗುತ್ತಿದೆ.

 ವೈದ್ಯರು ನಾರಾಯಣನ ರೂಪದಲ್ಲಿ ಬಂದಿರುತ್ತಾರೆ ಎಂದು ನಾವೆಲ್ಲ ಕೇಳಿದ್ದೇವೆ. ಆದರೆ ಈ ಸಂಸ್ಥೆಯ ಮೂಲಕ ನಡೆಯುತ್ತಿರುವ ವಿಭಿನ್ನ ಕಾರ್ಯಗಳು ನಮಗೆ ವೈದ್ಯರ ವಿಸ್ತ್ರತ ಯೋಜನೆ ಮತ್ತು ಅವರ ಅಭೂತಪೂರ್ವ ಕಾರ್ಯಕ್ಷೇತ್ರದ ಕ್ಷಮತೆಯನ್ನು ಪರಿಚಯಿಸುತ್ತದೆ.

1601 Views
अगली कहानी