सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಪ್ರತಿ ಉಸಿರಿನಲ್ಲಿ 'ಸೇವಾ'.

ದಕ್ಷಿಣ

parivartan-img

ಕೋಣೆಯ ದೀಪ ಆನ್ ಆಗುತ್ತಿದ್ದಂತೆ, ಆ ಮಹಿಳೆ ಇದ್ದಕ್ಕಿದ್ದಂತೆ ಜೋರಾಗಿ ಕಿರುಚತೊಡಗಿದಳು. ಬ.... ಬ....ಬಂದ್ ಮಾಡಿ. ಆ.. ಆ... ಆ ಬೆಳಕನ್ನು ನಿಲ್ಲಿಸಿ… ..ಅದುಅದನ್ನು ತೆಗೆದುಹಾಕಿಇಲ್ಲಿಂದ ನನ್ನನ್ನು ಹೋಗಲು ಬಿಡಿ….…. ನಾನು ಇಲ್ಲಿರಬಾರದು. ನನ್ನ ಗಂಡನ ಮರಣದ ನಂತರ, ಈ ಮುದುಕನನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಮನೆಯ ವಿದ್ಯುತ್ ಸಂಪರ್ಕ ಕಡಿತ ಗೊಂಡು 9 ವರ್ಷಗಳ ಕಾಲ ಕತ್ತಲೆಯಲ್ಲೇ ಇದ್ದ ರಜನೀದೇವಿ ಅವರಿಗೆ ಈಗ ಬೆಳಕಿನಿಂದ ಭಯವಾಗುತ್ತಿತ್ತು. ಆಗ ವಿಜಯಾ ಪರಿವಾರವು ಅವರ ಕೈ ಹಿಡಿಯಿತು. ನಾಗಪುರದಿಂದ 60 ಕಿ.ಮೀ ದೂರದಲ್ಲಿರುವ ಡೊಂಗರಮೌದಾ ಎಂಬ ಸಣ್ಣ ಹಳ್ಳಿಯಲ್ಲಿರುವ ಈ ಸೇವಾಶ್ರಮವು ಗುಣಪಡಿಸಲಾಗದ ಕಾಯಿಲೆ ಇರುವ ರೋಗಿಗಳಿಗೆ ಆಜೀವಪರ್ಯಂತ ಸೇವೆ ಸಲ್ಲಿಸುತ್ತಿದೆ.


ಸ್ವತಃ ತಮ್ಮನ್ನು ಸಂಘದ ಹಿತೈಷಿ ಎಂದು ನಂಬಿರುವ ಡಾ. ಶಶಿಕಾಂತ್ ರಾಮ್‌ಟೆಕ್ ಅವರು ರಾಷ್ಟ್ರೀಯ ಸೇವಾ ಭಾರತಿಗೆ ಸಂಬಂಧಿಸಿದ ಈ ಸಂಸ್ಥೆಯನ್ನು ಸ್ಥಾಪಿಸಿದರು.1997 ರ ಫೆಬ್ರವರಿಯಲ್ಲಿ ನಾಗಪುರದಲ್ಲಿ (ಈಗಿನ ಡೋಂಗರಮೌದಾ) ಎರಡು ಕೋಣೆಗಳ ಬಾಡಿಗೆ ಮನೆಯಲ್ಲಿ ಈ ಸಂಸ್ಥೆಯು ಆರಂಭವಾಯಿತು.


ಕುಟುಂಬದ ಸದಸ್ಯರು ಮತ್ತು ವೈದ್ಯರು ಸಹ ಕೈಬಿಟ್ಟ, ಗುಣಮುಖರಾಗಲು ಸಾಧ್ಯವಿಲ್ಲದ ರೋಗಿಗಳನ್ನು ಇಲ್ಲಿಗೆ ಕರೆತಂದು ಗೌರವಯುತ ಜೀವನ ನಡೆಸಲು ವ್ಯವಸ್ಥೆ ಮಾಡುವುದು ಮತ್ತು ಗೌರವಾನ್ವಿತ ಅಂತಿಮ ವಿದಾಯ ನೀಡುವುದು ವಿಜಯಾ ಪರಿವಾರದ ಉದ್ದೇಶವಾಗಿದೆ. ಗರಿಮಾಜಿಯವರನ್ನು ಅವರ ಸಂಬಂಧಿಕರು ಹುಚ್ಚರೆಂದು ಘೋಷಿಸಿದ್ದರು. ಪರಿಸ್ಥಿತಿ ಹೇಗಿತ್ತು ಎಂದರೆ ಹುಚ್ಚು ಹೆಚ್ಚಾಗಿ ಅವರನ್ನು ನಿಯಂತ್ರಿಸಲು ಅಸಾಧ್ಯವಾದ ಸಂದರ್ಭದಲ್ಲಿ ಮಂಚಕ್ಕೆ ಕಟ್ಟಿಹಾಕುವ ಪರಿಸ್ಥಿತಿ ಬರುತ್ತಿತ್ತು. ಆಗ ಬೇರೆ ದಾರಿಯಿಲ್ಲದೆ ಅವರ ಕುಟುಂಬದವರು ವಿಜಯಾ ಆರೋಗ್ಯ ಮತ್ತು ಶಿಕ್ಷಣ ಸೊಸೈಟಿಯಾಗಿ ನೋಂದಾಯಿಸಲ್ಪಟ್ಟ ಈ ಸೇವಾ ಆಶ್ರಮದಲ್ಲಿ ಅವರನ್ನು ಬಿಟ್ಟು ಹೋದರು.ಇಲ್ಲಿ ಆಶ್ರಯ ಪಡೆಯಲು ವಯಸ್ಸು, ಜಾತಿ, ಧರ್ಮ ಯಾವುದೂ ಅಡ್ಡ ಬರುವುದಿಲ್ಲ. ಇದೊಂದು ಅನನ್ಯ ಸೇವಾ ಯಾತ್ರೆ. ಇದರಲ್ಲಿ ಮೂರು ವರ್ಷದಿಂದ 98 ವರ್ಷ ವಯಸ್ಸಿನ 301 ರೋಗಿಗಳು ತಮ್ಮ ಜೀವನದ ಕೊನೆಯ ಉಸಿರಿರುವವರೆಗೆ ಆಶ್ರಯ ಪಡೆದಿದ್ದಾರೆ. ಅನಾಥ ಮತ್ತು ದೈಹಿಕವಾಗಿ ಅಂಗವಿಕಲರಾದ 22 ವರ್ಷದ ಮುಖೇಶನನ್ನು ತೆಗೆದುಕೊಳ್ಳಿ. ಅಂಗವಿಕಲನೊಬ್ಬನ ಸಂಬಂಧಿಕರು ಯಾರೂ ಅವನ ಭಾರವನ್ನು ಹೊರಲು ಸಿದ್ಧರಿರಲಿಲ್ಲ. ಸೇವಾಶ್ರಮದಲ್ಲಿ ಆಶ್ರಯ ಸಿಗದಿದ್ದರೆ, ಈ ಯುವಕನ ಇಡೀ ಜೀವನವು ರಸ್ತೆಯಲ್ಲಿ ಭಿಕ್ಷೆ ಬೇಡಿ ಕಳೆಯಬೇಕಾಗುತ್ತಿತ್ತು. ಮುಖೇಶ್ ಅವರಂತಹ ಅದೆಷ್ಟೋ ನಿರ್ಗತಿಕ ಮತ್ತು ಮುಗ್ಧ ರೋಗಿಗಳು ಇಲ್ಲಿ ಆಶ್ರಯವನ್ನು ಪಡೆದು ಉಳಿದ ಜೀವನವನ್ನು ಸಮಸ್ಯೆಗಳಿಂದ ಪಾರಾಗಿ ನೆಮ್ಮದಿಯ ಜೀವನಾನುಭವವನ್ನು ಪಡೆಯುತ್ತಿದ್ದಾರೆ.



ಶಶಿಕಾಂತ್ ಜಿ ಹೇಳುತ್ತಾರೆ - ವಿಜಯಾ ಪರಿವಾರದ 22 ವರ್ಷಗಳ ಪ್ರಯಾಣ ಸುಲಭವಾಗಿರಲಿಲ್ಲ. ಆರಂಭದ ದಿನಗಳಲ್ಲಿ ಆಶ್ರಮಕ್ಕಾಗಿ ಹಣವನ್ನು ಸಂಗ್ರಹಿಸುವಾಗ ಅವಮಾನ ಮತ್ತು ನಿಂದೆಯನ್ನು ಸಹ ಅನುಭವಿಸಲಾಗಿದೆ. ಸರ್ಕಾರಿ ಕಛೇರಿಗಳ ಬಾಗಿಲುಗಳನ್ನು ತಟ್ಟಿದಾಗಲೂ ಸರ್ಕಾರವು ವೃದ್ಧಾಶ್ರಮವನ್ನು ಮೀರಿ ಬೇರೇನನ್ನು ಅರ್ಥ ಮಾಡಿಕೊಳ್ಳಲಿಲ್ಲ. ಮನಸ್ಸಿದ್ದಲ್ಲಿ ಮಾರ್ಗ ಎನ್ನುವಂತೆ ಲೆಕ್ಕವಿಲ್ಲದಷ್ಟು ಅಡೆತಡೆಗಳನ್ನು ದಾಟಿ ಬಾಡಿಗೆ ಕೋಣೆಯಿಂದ ಪ್ರಾರಂಭವಾದ ಸೇವಾಶ್ರಮವು ಇಂದು 13000 ಚದರ ಅಡಿ ಭೂಮಿಯಲ್ಲಿ 31 ರೋಗಿಗಳಿಗೆ ಅವಕಾಶವಿರುವ 20 ಆರಾಮದಾಯಕ ಕೊಠಡಿಗಳನ್ನು ಹೊಂದಿದೆ. ಗುಣಪಡಿಸಲಾಗುವ ಮತ್ತು ಗುಣಪಡಿಸಲಾಗದ ಎರಡೂ ವಿಧದ ರೋಗಿಗಳಿಗೆ ವಿಜಯಾ ಪರಿವಾರದ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದು ಶಶಿಕಾಂತ್ ಜೀ ಹೇಳುತ್ತಾರೆ.


ಅಸಾಧ್ಯವಾದ ಕಾಯಿಲೆಗಳಿಂದ ಬಳಲುತ್ತಿರುವ ಈ ರೋಗಿಗಳಿಗೆ 'ನಾವು ಭಾರತೀಯರು' ಎಂಬ ಭಾವನೆಗೆ ಧಕ್ಕೆ ಬಾರದಂತೆ ಸೇವಾಶ್ರಮದಲ್ಲಿ ವಿಶೇಷ ಕಾಳಜಿಯಿಂದ ನೋಡಿಕೊಳ್ಳಲಾಗುತ್ತಿದೆ. ರೋಗಿಗಳ ಮರಣದ ನಂತರ ಅವರ ಅಂತಿಮ ಸಂಸ್ಕಾರದ ಕ್ರಿಯೆಗಳನ್ನು ಗೌರವಯುತವಾಗಿ ಅವರವರ ಕುಟುಂಬದಂತೆಯೇ ನಡೆಸಲಾಗುತ್ತದೆ.  ಶಶಿಕಾಂತ್ ಜೀಯವರ ಈ ಸೇವೆಯಲ್ಲಿ, ಪ್ರತಿ ಹಂತದಲ್ಲೂ ಒಮ್ಮೆ ತಾಯಿಯಾಗುವ ಮೂಲಕ ಅಥವಾ ಕೆಲವೊಮ್ಮೆ ದಾದಿಯಾಗುವ ಮೂಲಕ ರೋಗಿಗಳಿಗೆ ಸೇವೆ ಸಲ್ಲಿಸುವ ಶ್ರೀಮತಿ ನಿಶಿಗಂಧ ರಾಮ್‌ಟೆಕ್, ತಮ್ಮ ಭಾವನೆಗಳನ್ನು ಈ ರೀತಿ ವ್ಯಕ್ತಪಡಿಸುತ್ತಾರೆ.... "ಆಶ್ರಮಕ್ಕೆ ಬರುವ ಮೊದಲು ರೋಗಿಗಳು ತಮ್ಮ ಜೀವನವನ್ನು ಹೇಗೆ ನಡೆಸಿದರೆಂಬುದು ನಮಗೆ ತಿಳಿದಿಲ್ಲ. ಆದರೆ ಇಲ್ಲಿಗೆ ಬಂದ ನಂತರ ಅವರನ್ನು ತಮ್ಮದೇ ಮಲಮೂತ್ರದಲ್ಲಿ ಬಿದ್ದು ಒದ್ದಾಡಲು ನಾವು ಬಿಡುವುದಿಲ್ಲ"




ಚಿಕಿತ್ಸೆಯ ಜೊತೆಗೆ ಒಂದು ದೀಪದಂತೆ ಸ್ವತಃ ಉರಿದು ಈ ರೋಗಿಗಳ ಶುಷ್ಕ ಜೀವನದಲ್ಲಿ ಮಾನವೀಯ ಗುಣಗಳಿಂದ ಸ್ಪಂದಿಸಿ ರೋಗಿಗಳ ಜೀವನವನ್ನು ಚೆನ್ನಾಗಿಡಲು ತಮ್ಮ ಜೀವನದ 22 ವರ್ಷಗಳನ್ನು ಹೋಮಿಸಿದರು. ಈ 22 ವರ್ಷಗಳಲ್ಲಿ ಸಂಘ ಪರಿವಾರವು ಕಾಲಕಾಲಕ್ಕೆ ಸೇವಾಶ್ರಮಕ್ಕೆ ಅಗತ್ಯವಿರುವ ಆರ್ಥಿಕ ನೆರವು ನೀಡಿದೆ.



(ಈ ಕಥೆಯಲ್ಲಿ ಪಾತ್ರಗಳ ಗೌರವಕ್ಕೆ ಧಕ್ಕೆ ಬಾರದಿರಲೆಂದು ಕಾಲ್ಪನಿಕ ಹೆಸರುಗಳನ್ನು ನೀಡಲಾಗಿದೆ.)
963 Views
अगली कहानी