सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ನಡೆಯುತ್ತಿರಲಿ ನಿರಂತರ ಸಾಧನೆ

ಶ್ರೀ ಗಿರಿಧರ್ ಉದ್ಯಾವರ | ದಕ್ಷಿಣ

parivartan-img

 ಒಂದೂವರೆ ವರ್ಷದ ಗೀತಾ ಮತ್ತು 6 ತಿಂಗಳ ಆಯುಷ್ ಲೋಹಾರ್ ಅವರ ಮನಸ್ಸಿನಿಂದ ಅಮ್ಮನ ನೆನಪಂತೂ ನಾಲ್ಕು ತಿಂಗಳ ಹಿಂದೆಯೇ ಮಾಸಿಹೋಗಿತ್ತು. ಲಾಕ್ಡೌನ್ ಪರಿಸ್ಥಿತಿಯು ರಿಕ್ಷಾ ಚಾಲಕನಾಗಿದ್ದ ಅಪ್ಪನ ಆದಾಯವನ್ನೇ ಕಸಿದುಕೊಂಡಿತ್ತು. ರಾಂಚಿಯ ಪಾಹನ್ಕೋಚಾದಲ್ಲಿ ದಿನದ ಆದಾಯದಲ್ಲೇ ಆಹಾರದ ವ್ಯವಸ್ಥೆ ಮಾಡಿಕೊಂಡಿದ್ದ ಈ ಪರಿವಾರವು ಎರಡು ಹೊತ್ತಿನ ರೊಟ್ಟಿಗೂ ಅಲ್ಲಿ ಇಲ್ಲಿ ಹಂಚಲಾಗುತ್ತಿದ್ದ ನುಚ್ಚಕ್ಕಿ ಮತ್ತು ಖಿಚಡಿಯನ್ನು ಅವಲಂಬಿಸಬೇಕಾಯಿತು. ವೃದ್ಧೆ ಅಜ್ಜಿ ಜೂಲಿಯಾ ಮಿಂಜ್ ಹಾಲುಗಲ್ಲದ ಆಯುಷ್ ಗಾಗಿ ಹಾಲಿನ ಬದಲು ಪಕ್ಕದ ಮನೆಯಿಂದ ಅಕ್ಕಿ ಬೇಯಿಸಿ ಗಂಜಿಯನ್ನು ತಂದು, ಅದಕ್ಕೆ ಸಕ್ಕರೆ ಬೆರೆಸಿ ಕುಡಿಸುವುದನ್ನು ಬಿಟ್ಟರೆ ಬೇರೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವಳ ಈ ಅಸಹಾಯಕ ಪರಿಸ್ಥಿತಿಯು ಸಂಘದ ಶಿವಾಜಿನಗರದ ಪ್ರಾಂತ ಕಾರ್ಯವಾಹರಾದ ವಿಜಯ್ ಜೀ ಅವರಿಗೆ ತಿಳಿದಾಗ, ಅವರು ಸಂಘದ ಸ್ವಯಂಸೇವಕರ ಮೂಲಕ ಆಯುಷ್ ಒಬ್ಬನಿಗೇ ಅಲ್ಲ, ರಾಂಚಿಯ ಲೋಹರಾ ಕೋಚಾ, ಭಾಭಾನಗರ, ಚಢರೀ, ರವಿದಾಸ್ ಮೊಹಲ್ಲಾ, ಮತ್ತು ವರ್ಧಮಾನ ಕಾಂಪೌಂಡ್ ಗಳ ಸುಮಾರು 300 ಮಕ್ಕಳಿಗೆ ಲಾಕ್ಡೌನ್ ನ ಎರಡೂ ತಿಂಗಳು ಸತತವಾಗಿ ಮನೆಮನೆಗೆ ಹೋಗಿ ಹಾಲನ್ನು ತಲುಪಿಸುವ ವ್ಯವಸ್ಥೆ ಮಾಡಿದರು.



ನಾಸಿಕದ ಕೋವಿಡ್ ಆಸ್ಪತ್ರೆಯಲ್ಲಿ ಲಗತ್ತಿಸಲಾದ ಒಂದು ಫಲಕ.. "ಕೊರೋನಾ ಪಾಸಿಟಿವ್ ವ್ಯಕ್ತಿಯ ಮರಣದ ನಂತರ ಅಂತಿಮ ಸಂಸ್ಕಾರಕ್ಕಾಗಿ ಪರಿವಾರದವರು ಸಂಘದ ಸ್ವಯಂಸೇವಕರನ್ನು ಸಂಪರ್ಕಿಸಿ"... ಕೊರೋನಾ ಪರಿಸ್ಥಿತಿಯಲ್ಲಿನ ವ್ಯಥೆಕಥೆಗಳು ಮತ್ತು ಸ್ವಯಂಸೇವಕರ ಅವಿರತ ಸೇವೆಯು ಒಂದು ವಿಸ್ಮಯ ವಿಷಯವೇ ಆಗಿದೆ. ತಮ್ಮ ಪ್ರಿಯ ಬಂಧುಗಳ ನಾಲ್ಕು ಹೆಗಲುಗಳಿಗಾಗಿ ತವಕಿಸುವ ಕೊರೋನಾ ಪಾಸಿಟಿವ್ ರೋಗಿಗಳ ಶವಗಳಿಗೆ ಕೆಲವೊಮ್ಮೆ ಸೋದರನಾಗಿ, ಕೆಲವೊಮ್ಮೆ ಮಗನಾಗಿ, ಕೆಲವೊಮ್ಮೆ ಮಗಳಾಗಿ ಹೆಗಲು ಕೊಟ್ಟವರು ನಾಸಿಕದ ಜಿಲ್ಲಾ ಸಹ ಕಾರ್ಯವಾಹರಾದ ಮಂಗೇಶಭಾಯಿ ಮತ್ತು ಅವರ ಸಹವರ್ತಿಗಳಾದ ಸ್ವಯಂಸೇವಕರು. ಪಿಪಿಇ ಕಿಟ್ ಧರಿಸಿ ಈ ಶವಗಳಿಗೆ ಅಗ್ನಿಸಂಸ್ಕಾರ ಮಾಡುವಲ್ಲಿ ಸಂಘಪರಿವಾರದ ಸೋನಾಲಿ ದಾಬಕ್, ಶುಭದಾ ದೇಸಾಯಿ, ದೀಪಾಲಿ ಗಡಾಖ್, ಮುಂತಾದ ಹೆಣ್ಣುಮಕ್ಕಳೂ ಸಕ್ರಿಯರಾಗಿದ್ದಾರೆ



ಕಷ್ಟಗಳು ಹೆಚ್ಚಿದಂತೆ ಸಂಘರ್ಷವೂ ಹೆಚ್ಚುತ್ತದೆ. ಸಾವಿರಾರು ಕಿಲೋಮೀಟರ್ ಕಾಲ್ನಡಿಗೆಯಿಂದಲೇ ತಮ್ಮ ತಮ್ಮ ಊರುಗಳಿಗೆ ಹೊರಟ ಲಕ್ಷಾಂತರ ಪ್ರವಾಸಿ ಕಾರ್ಮಿಕರಿಗಾಗಿ ಮಾಡಿದ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದ ಸಹಕಾರದ ಕೊರತೆ ಉಂಟಾದಾಗ, ಸೇವಾಭಾರತಿಯ ಕಾರ್ಯಕರ್ತರು ಮತ್ತು ಸಂಘದ ಸ್ವಯಂಸೇವಕರೇ ಎಲ್ಲವನ್ನೂ ನಿಭಾಯಿಸಿದರು. ದೇಶದಲ್ಲಿ 1778 ಸ್ಥಳಗಳಲ್ಲಿ 44 ಲಕ್ಷಕ್ಕೂ ಅಧಿಕ ಕಾರ್ಮಿಕರಿಗೆ ಭೋಜನ, ನೀರಿನ ಬಾಟಲಿಗಳು, ಔಷಧಿಗಳು ಮತ್ತು ಇತರ ಅಗತ್ಯ ಸಾಮಗ್ರಿಗಳು ಲಭಿಸುವಂತಾಯಿತು. ಸಂಘದ ಅಖಿಲ ಭಾರತೀಯ ಸಹ ಸೇವಾಪ್ರಮುಖರಾದ ರಾಜಕುಮಾರ್ ಜೀ ಮಠಾಳೆ ಹೇಳುತ್ತಾರೆ.. "ಈ ದೇಶ ಮತ್ತು ಸಮಾಜ ನಮ್ಮದೇ ಎಂಬ ಭಾವದಿಂದಲೇ, ಕಷ್ಟಗಳು ಹೆಚ್ಚಾದಷ್ಟೂ, ಸ್ವಯಂಸೇವಕರು ಹೆಚ್ಚೆಚ್ಚು ಜವಾಬ್ದಾರಿಗಳನ್ನು ಹೊತ್ತರು". ಆಸ್ಪತ್ರೆಗಳಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳಿಗೆ ರಕ್ತ ಎಂದೂ ಕಮ್ಮಿಯಾಗಬಾರದೆಂದು ಕೊರೋನಾ ಪರಿಸ್ಥಿತಿಯಲ್ಲಿ ಜೂನ್ 5, 2020 ರವರೆಗೆ 60,229 ಸ್ವಯಂಸೇವಕರು ರಕ್ತದಾನ ಮಾಡಿದರು. ಕೋವಿಡ್ 19 ನ್ನು ಆರೈಕೆ ಮಾಡುವ ಚಿಕಿತ್ಸಾಲಯದಿಂದ ಸೇವಾಬಸ್ತಿಯವರೆಗೆ ನೂರಾರು ಸ್ಥಳಗಳನ್ನು ಸ್ವಯಂಸೇವಕರು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಿದರು.



ಮೀರಠ್ ನ ಅಮರೋಹಾದಲ್ಲಿ ನಡೆಯುತ್ತಿರುವ ವೈದ್ಯಕೀಯ ಸಹಾಯವಾಣಿಯಾಗಲಿ, ಅಥವಾ ರಾಷ್ಟ್ರೀಯ ಸೇವಾಭಾರತಿಯ 24 ಗಂಟೆಯೂ ಕಾರ್ಯ ನಿರ್ವಹಿಸುವ ಸಹಾಯವಾಣಿಯಾಗಲಿ, ನೊಂದ ಪರಿವಾರಗಳ ಪ್ರತಿಯೊಂದು ಸಮಸ್ಯೆಯ ಪರಿಹಾರವನ್ನು ದಕ್ಷತೆಯಿಂದ ಮಾಡಿತು. ಸೂರತ್ ನಲ್ಲಿ ವಸ್ತ್ರಗಳನ್ನು ಮನೆ ಮನೆಗೆ ಕೊಂಡೊಯ್ದು ಮಾರುವ ನೂರ್ ಮೊಹಮ್ಮದ್ ಅವರಿಗೆ ಊಟಕ್ಕೂ ಕಷ್ಟವಾದಾಗ, ಮೂರು ವರ್ಷದ ಮಗು ಮತ್ತು ಗರ್ಭವತಿ ಪತ್ನಿಯನ್ನು ಕರೆದುಕೊಂಡು 1304 ಕಿ. ಮೀ. ದೂರದ ತಮ್ಮ ಸ್ಥಳ ಅಮೇಠಿಗೆ ಕಾಲ್ನಡಿಗೆಯಲ್ಲೇ ಹೊರಟುಬಿಟ್ಟರು. ಆದರೆ, ಜಲಗಾಂವ್ ಹೆದ್ದಾರಿಯಲ್ಲೇ ಪತ್ನಿ ಇಶರತ್ ಅವರಿಗೆ ಪ್ರಸವದ ವೇದನೆ ಪ್ರಾರಂಭವಾಯಿತು. ಹತ್ತಿರದಲ್ಲೇ ಪಡಿತರವನ್ನು ಹಂಚುತ್ತಿದ್ದ ಸ್ವಯಂಸೇವಕ ರವಿ ಕಾಸಾರ್ ಅವರು ತಮ್ಮ ಜೊತೆಗಾರರೊಂದಿಗೆ ಕೂಡಿ, ಇಶರತ್ ಅವರಿಗೆ ಸುಖಪ್ರಸವ ಆಗುವಂತೆ ಅವರ ಪತಿಗೆ ಸಹಾಯ ಮಾಡಿದರು. ನಗರದ ನಿಕಟಪೂರ್ವ ಸಂಘಚಾಲಕರಾದ ಡಾ. ವಿಕಾಸ್ ಭೋಲೇ ಅವರ ಮಾತೃಸೇವಾ ಆಸ್ಪತ್ರೆಯಲ್ಲಿ ಸಮಯೋಚಿತ ಆರೈಕೆಯನ್ನು ನೀಡಿಸುವಲ್ಲಿ ಯಶಸ್ವಿಯಾದರು.

ಕೊರೋನಾ ಕಾರಣದಿಂದ ಎಲ್ಲೆಡೆಯೂ ಹರಡಿರುವ ಭಯವನ್ನು ಹೋಗಲಾಡಿಸಿ, ಸ್ವಯಂಸೇವಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಅನೇಕ ಸೇವಾಯಾತ್ರೆಗಳನ್ನು ಪೂರೈಸಿದ್ದಾರೆ.

ಮುಂದಿನ ಸೇವಾಯಾತ್ರೆ - ಸೇವಾಗಾಥದ ಮುಂದಿನ ಅಂಕಣದಲ್ಲಿ.


584 Views
अगली कहानी