नियमित अपडेट के लिए सब्सक्राईब करें।
5 mins read
ದಕ್ಷಿಣ
ತನ್ನ ತಂದೆಯ ಕೈ ಬೆರಳನ್ನು ಹಿಡಿದುಕೊಂಡು ಆ ಬಾಲಕ ತಂದೆಯ ಜೊತೆಗೆ ಆಗಾಗ್ಗೆ ಕಟ್ಟಡ ನಿರ್ಮಾಣ ಸೈಟ್ ಗೆ ಹೋಗುತ್ತಿದ್ದ. ಅಲ್ಲಿ ಅವನ ತಂದೆ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಅಂದಿನಿಂದ ಅವನ ಎಳೆಯ ಮನಸ್ಸಿನಲ್ಲಿ ಈ ಎತ್ತರದ ಕಟ್ಟಡಗಳ ಕಡೆಗೆ ವಿಚಿತ್ರ ಆಕರ್ಷಣೆ ಬೆಳೆಯಿತು. ಒಂದು ದಿನ ಅವನು ತನ್ನ ತಂದೆಯಲ್ಲಿ ಎಂಜಿನಿಯರ್ ಆಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದನು. ಆದರೆ ಅವನ ತಂದೆ ರಾಮ್ ಪ್ರಕಾಶ್ ಇದನ್ನು ಮಕ್ಕಳ ಬಾಲಿಶ ಬಯಕೆ ಎಂದು ಪರಿಗಣಿಸಿ ಪ್ರೀತಿಯಿಂದ ನಿರಾಕರಿಸಿದರು.
ಅನಕ್ಷರಸ್ಥ ರಾಮ್ ಪ್ರಕಾಶ್‌ಗೆ ತನ್ನ ಮೇಲಧಿಕಾರಿಗಳು ಇಂಗ್ಲಿಷ್ ನಲ್ಲಿ ಮಾತನಾಡುತ್ತ ನಕ್ಷೆಗಳನ್ನು ತಯಾರಿಸುವ ರೀತಿಯಲ್ಲಿ ತನ್ನ ಮಗನೂ ತಯಾರಾಗಬಹುದು ಎಂಬುದನ್ನು ಕಲ್ಪಸಿಕೊಳ್ಳುವುದು ಕಷ್ಟವಾಗಿತ್ತು. ಆದರೆ ಆ ಬಾಲಕ ಅತುಲ್ ತನ್ನ ಕನಸನ್ನು ನನಸು ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದ. ಅವನು ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಗಣಿತಶಾಸ್ತ್ರದಲ್ಲಿ 98% ರಷ್ಟು ಅಂಕಗಳೊಂದಿಗೆ ಉತ್ತೀರ್ಣನಾದಾಗ ಎಷ್ಟು ಸಂತೋಷ ಆ ತಂದೆಗೆ ಆಯಿತೋ ಆ ಏಕಲವ್ಯ ಪ್ರಕಲ್ಪದಲ್ಲಿ ಅತುಲ್ ನ ಮೇಲೆ ವರ್ಷಗಟ್ಟಲೆ ಶ್ರಮ ಹಾಕಿದ ಶಿಕ್ಷಕರಿಗೂ ಅಷ್ಟೇ ಹೆಮ್ಮೆಆಯಿತು.
ಉತ್ತರ ಪ್ರದೇಶದ ಮೀರತ್ ನಗರದ ಪಲ್ಲವಪುರಂನಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಸೇವಾ ಭಾರತಿ ಐದು ವರ್ಷಗಳಿಂದ ನಡೆಸುತ್ತಿರುವ ಈ ಉಚಿತ ಕೋಚಿಂಗ್ ಕೇಂದ್ರವು ಅತುಲ್ ನಂತಹ ನೂರಾರು ಮಕ್ಕಳ ಕನಸುಗಳನ್ನು ಈಡೇರಿಸಿದೆ. ಇಂದು ಅತುಲ್ ಪ್ರಸಿದ್ಧ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಕಲಿಯುತ್ತಿದ್ದಾನೆ.ಏಕಲವ್ಯ ಪ್ರಕಲ್ಪದಿಂದ ಹೊರಬರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದ ಪ್ರತಿಯೊಂದು ಕ್ಷೇತ್ರದಲ್ಲೂ ಮುಂದೆ ಸಾಗುತ್ತಿದ್ದಾರೆ. ಉತ್ತಮ ಅಂಕಗಳೊಂದಿಗೆ ಜೆಇಇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನೋಯ್ಡಾದ ಪ್ರಸಿದ್ಧ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಡಾಲಿ ಅಥವಾ ಮೀರತ್‌ನ ಎಂಐಇಟಿ ಕಾಲೇಜಿನಿಂದ ಬಿ.ಟೆಕ್ ಮಾಡಿದ ಎಲೆಕ್ಟ್ರಿಕ್ ಮೆಕ್ಯಾನಿಕ್‌ನ ಮಗ ಸದ್ದಾಂ ಇವರನ್ನೆಲ್ಲ ದಯಾರಾಮ್ ಜಿಯವರು ಕೈಹಿಡಿಯದಿದ್ದರೆ ಅವರು ಪರಿಸ್ಥಿತಿಯ ಬಲಿಪಶುಗಳಾಗಿ ಜನಸಮೂಹದಲ್ಲಿ ಕಳೆದುಹೋಗುತ್ತಿದ್ದರು.
ದಯಾರಾಮ ಶರ್ಮಾ ಅವರು ಮೀರತ್‌ನ ಲಾವಡದ ನ್ಯಾಷನಲ್ ಇಂಟರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು. ಬಡ ಮಕ್ಕಳಿಗೆ ಸಹಾಯ ಮಾಡಬೇಕೆಂಬ ಬಯಕೆ ಅವರನ್ನು ಸೇವಾ ಭಾರತಿಗೆ ಕರೆತಂದಿತು. ಅಂದಿನ ಮೀರತ್‌ನ ಪ್ರಾಂತ ಸೇವಾ ಪ್ರಮುಖ್ ಅನಿಲ್ ಜಿ ಮತ್ತು ಅಂದಿನ ಸಂಘಚಾಲಕರ ಪ್ರಯತ್ನದಿಂದಾಗಿ ಈ ಪ್ರಕಲ್ಪದ ಅಡಿಪಾಯವನ್ನು 2012 ರಲ್ಲಿ ಪಲ್ಲವಪುರಂನಲ್ಲಿ ಹಾಕಲಾಯಿತು. ದಯಾರಾಮ್ ಜಿಯವರು ಶಿಕ್ಷಣ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡರು ಮತ್ತು ಸ್ವಯಂಸೇವಕರು ಆರ್ಥಿಕ ಮತ್ತು ವ್ಯವಸ್ಥೆಯ ಜವಾಬ್ದಾರಿಯನ್ನು ಹೊತ್ತುಕೊಂಡರು.
ಇಂದು ಈ ಸಂಸ್ಥೆಯಲ್ಲಿ ಆಧುನಿಕ ಕಂಪ್ಯೂಟರ್ ಲ್ಯಾಬ್ ಇದೆ. ಇಲ್ಲಿ ವಿದ್ಯಾರ್ಥಿಗಳಿಗೆ ACCOUNTING, TALLY ಮೊದಲಾದ ಔದ್ಯೋಗಿಕ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ದೈನಂದಿನ ತರಗತಿಗಳ ಹೊರತಾಗಿ, ಭೌತಶಾಸ್ತ್ರ ಮತ್ತು ಗಣಿತದಂತಹ ವಿಷಯಗಳ ಪರಿಣಿತ ಶಿಕ್ಷಕರು ಸಹ ಇಲ್ಲಿ ಉಚಿತ ಸೇವೆಗಳನ್ನು ಒದಗಿಸುತ್ತಾರೆ. ವೃತ್ತಿ ಸಮಾಲೋಚನೆಯ ಮೂಲಕ ವಿದ್ಯಾರ್ಥಿಗಳಿಗೆ ಸರಿಯಾದ ದೃಷ್ಟಿ ನೀಡಲಾಗುತ್ತದೆ. ಇಲ್ಲಿನ ವಿದ್ಯಾರ್ಥಿಗಳ ಅತ್ಯುತ್ತಮ ಪ್ರದರ್ಶನದಿಂದ ಪ್ರಭಾವಿತರಾದ ಮೀರತ್‌ನಲ್ಲಿ ಪ್ರಖ್ಯಾತರಾದ ಡಾ.ಭರತ್ ಕುಮಾರ್ ಅವರು ತಮ್ಮ ಖಾಸಗಿ ಕಟ್ಟಡವನ್ನು ಸಂಸ್ಥೆಗೆ ದಾನ ಮಾಡಿದರು.
ದಯಾರಾಮ್ ಜಿಯವರು ಇಂದಿಗೂ ಮಕ್ಕಳಿಗೆ ಸ್ವತಃ ಕಲಿಸುತ್ತಾರೆ. ಕಳೆದ ನಾಲ್ಕು ಸಾಲಿನಲ್ಲಿ (ವರ್ಷಗಳಲ್ಲಿ) 2012-13ರಲ್ಲಿ 109, 2013-14ರಲ್ಲಿ 113 ಮತ್ತು ನಂತರದ ಎರಡು ಸಾಲಿನಲ್ಲಿ (ವರ್ಷಗಳಲ್ಲಿ) 136 ಮತ್ತು 169 ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡಿ ಉತ್ತಮ ಕಾಲೇಜುಗಳಲ್ಲಿ ಓದುತ್ತಿದ್ದಾರೆ ಎಂದು ಅವರು ಹೇಳುತ್ತಾರೆ.ಇಲ್ಲಿ ಅಧ್ಯಯನ ಮಾಡಿ ಇಲ್ಲಿಯೇ ಕಲಿಸುತ್ತಿರುವ ಪ್ರಿಯಾ ಸೈನಿ ಹೇಳುವಂತೆ ಏಕಲವ್ಯ ಸಂಸ್ಥೆಯು ಕೇವಲ ಒಂದು ಕೋಚಿಂಗ್ ಕೇಂದ್ರ ಮಾತ್ರವಲ್ಲ. ವಿದ್ಯಾರ್ಥಿಗಳು ಜೀವನಪರ್ಯಂತ ಸಂಪರ್ಕದಲ್ಲಿರಲು ಬಯಸುವ ಕುಟುಂಬವಾಗಿದೆ.
नियमित अपडेट के लिए सब्सक्राईब करें।