सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಈ ಅಂಗಳದಲ್ಲಿ ಪುಟ್ಟ ಜೀವಗಳ ಜೀವನ ಅರಳುತ್ತವೆ.

ದಕ್ಷಿಣ

parivartan-img

ಹಳದಿ, ನೀಲಿ, ಕೆಂಪು, ಬಣ್ಣಗಳು ನಾಲ್ದೆಸೆಗಳಲ್ಲಿಯೂ ಹರಡಿಕೊಂಡಿತ್ತು.ಬಾಲಗೋಪಾಲರು ಬಣ್ಣಗಳನ್ನು ಕೈಯಲ್ಲಿ ಹಿಡಿದು ಯಶೋದೆಯರ ಜೊತೆಗೆ ಹೋಳಿ ಹಬ್ಬದ ಆನಂದವನ್ನು ಸವಿಯುತ್ತಿದ್ದರು. ಎಲ್ಲಾ ಕಡೆಯ ಸಂತೋಷವೂ ಮಾತೃಛಾಯಾದ ಅಂಗಳದಲ್ಲಿಯೇ ಸೀಮಿತವಾಗಿದ್ದಂತೆ ತೋರುತ್ತಿತ್ತು. ಆಗ ಆ ಮಕ್ಕಳೊಂದಿಗೆ ಹೋಳಿ ಆಚರಿಸಲು ಬಂದ ಸೇವಾ ಭಾರತಿ ಮಾತೃಮಂಡಳಿಯ ಸಹೋದರಿಯರ ದೃಷ್ಟಿ ಬಾಗಿಲಲ್ಲಿ ಇರಿಸಲಾಗಿರುವ ವಾರಸುದಾರರಿಲ್ಲದ ಚೀಲದ ಮೇಲೆ ಬಿತ್ತು. ಅದರಲ್ಲಿ ಯಾವುದೇ ಬಾಂಬ್ ಇರಲಾರದಲ್ಲವೇ ಎಂಬ ಸಂಶಯ ಕಾಡುತ್ತಿರುವಾಗ, ಅವರಲ್ಲಿ ಒಬ್ಬರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಆ ಚೀಲವನ್ನು ಆವರಣದಿಂದ ಹೊರಗೆಸೆಯಲು ಓಡಲಾರಂಭಿಸಿದಾಗ ಚೀಲದೊಳಗಿನಿಂದ ಮುಗ್ಧ ಅಳು ಕೇಳಿ ಎಲ್ಲರ ಕಾಲು ಹಿಂದೆ ಸರಿಯಿತು.

ಇದೇನಿದು? ಆ ಸಂಶಯಿಸಲ್ಪಟ್ಟ ಚೀಲದಲ್ಲಿ, ಅಸಹಾಯಕ ತಾಯಿಯ ಪುಟ್ಟ ಜೀವ ಇತ್ತು. ಎರಡು ದಿನಗಳ ಈ ಪುಟ್ಟ ದೇವತೆಯ ಜೊತೆಗೆ ಹಾಲಿನ ಬಾಟಲಿಯೂ ಇತ್ತು. ಮಾತೃಛಾಯಾ ಕುಟುಂಬಕ್ಕೆ ಹೊಸ ವಿಶಿಷ್ಟ ಸದಸ್ಯರ ಸೇರ್ಪಡೆಯಿಂದಾಗಿ ಎಲ್ಲರ ಹೋಳಿಯ ಸಂತೋಷ ದ್ವಿಗುಣಗೊಂಡಿತು.ಭೋಪಾಲದಲ್ಲಿ ನಿರಾಶ್ರಿತ ಮಕ್ಕಳಿಗಾಗಿ ಸೇವಾ ಭಾರತಿ ನಡೆಸುತ್ತಿರುವ ಈ ಶಿಶುಪಾಲನಾ ಕೇಂದ್ರಕ್ಕೆ ಬಂದ ಆ ಹುಡುಗಿ ಈಗ ಅಲ್ಲಿದ್ದಳು, ಇಲ್ಲಿಂದ ಅವಳು ಹೊಸ ಜೀವನವನ್ನು ಪಡೆಯ ಬೇಕಾಗಿತ್ತು. ಈ ಪ್ರಕಲ್ಪವು 1997 ರಲ್ಲಿ ಸಂಘದ ಪ್ರಚಾರಕ ಮತ್ತು ಸೇವಾ ಭಾರತಿಯ ಸ್ಥಾಪಕ ದಿವಂಗತ ವಿಷ್ಣುಜಿಯವರ ಪ್ರೇರಣೆಯಿಂದ ಪ್ರಾರಂಭವಾಯಿತು. ಇದು ಮಧ್ಯಪ್ರದೇಶದಲ್ಲಿ ಮಾನ್ಯತೆ ಪಡೆದ ಮೊದಲ ಅಂತಾರಾಷ್ಟ್ರೀಯ ದತ್ತು ಸ್ವೀಕಾರ ಕೇಂದ್ರವಾಗಿದೆ. ಅಂಕಿಅಂಶಗಳ ಪ್ರಕಾರ, ಕೇಂದ್ರಕ್ಕೆ ಭೇಟಿ ನೀಡುವ 400 ಮಕ್ಕಳ ಪೈಕಿ 350 ಮಕ್ಕಳು ಈಗ ದೇಶದ ವಿವಿಧ ಭಾಗಗಳಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸುತ್ತಿದ್ದಾರೆ.


ಸಮರ್ಪಿತ ಭಾವದಿಂದ ಮಗುವಿನ ಆರೈಕೆಗಾಗಿ ಇಲ್ಲಿ ಯಶೋದೆಯರು (ಅಯಾ) ಇದ್ದಾರೆ. ಈ ಕೇಂದ್ರದಲ್ಲಿರುವ ಜನರು ಮತ್ತು ಸೇವಾ ಭಾರತಿ ಮಾತೃ ಮಂಡಳಿಯ ಸಹೋದರಿಯರೂ ಸಹ ಈ ಮಕ್ಕಳೊಂದಿಗೆ ಉತ್ತಮ ಆತ್ಮೀಯ ಸಂಬಂಧ ಹೊಂದಿದ್ದಾರೆ. ಕೆಲವರು ಚಿಕ್ಕಮ್ಮ, ಕೆಲವರು ದೊಡ್ಡಮ್ಮ ಮತ್ತೆ ಕೆಲವರು ಅತ್ತೆ. ತಮ್ಮ ಜೀವನದ ಹದಿನೈದು ವರ್ಷಗಳನ್ನು ಮಾತೃಛಾಯಾ ಸಂಸ್ಥೆಗೆ ನೀಡಿದ ಪಾಂಚ್'ಖೇಡೆ ದಂಪತಿಗಳು ಎಲ್ಲಿಯವರೆಗೆ ಇಲ್ಲಿದ್ದರೋ ಅಲ್ಲಿಯವರೆಗೂ ಅವರು ಸಂತರಂತೆ ಇದ್ದರು. ಸುಧಾತಾಯಿ ಪಾಂಚಖೇಡೆಯ ಪ್ರಕಾರ, ಅವರಿಬ್ಬರೂ ಈ ಮಕ್ಕಳ ವ್ಯಾಮೋಹದಲ್ಲಿ ಸಿಲುಕಿದ್ದರು. ಒಂದು ಮಗುವನ್ನು ದತ್ತು ಪಡೆಯಲು ಅವರ ಕುಟುಂಬವು ಬಂದಾಗಲೆಲ್ಲಾ ಇವರಿಗಿದು ಬಹಳ ಕಠಿಣವಾದ ಕ್ಷಣಗಳಾಗಿರುತ್ತಿತ್ತು. ಒಂದೆಡೆ ಈ ಮಕ್ಕಳ ಸುಂದರ ಭವಿಷ್ಯವನ್ನು ಕಲ್ಪಿಸಿಕೊಂಡು ಸಂತೋಷಪಟ್ಟರೆ ಮತ್ತೊಂದೆಡೆ ಅವರನ್ನು ಬೀಳ್ಕೊಡುವ ದುಃಖದಲ್ಲಿ ಕಣ್ಣುಗಳು ಒದ್ದೆಯಾಗುತ್ತಿದ್ದವು. ಮೂರು ವರ್ಷಗಳ ಬಾಲಕ ಅವಿನಾಶ್ ತನ್ನ ಹೆತ್ತವರೊಂದಿಗೆ ಆಸ್ಟ್ರೇಲಿಯಾಕ್ಕೆ ಹೋಗುವವಾಗ ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವನು ಪ್ರತಿಯೊಂದು ಮಗುವಿಗೂ ತನ್ನ ಕೊಠಡಿಯಲ್ಲಿ ಅಲಂಕರಿಸಿಟ್ಟಿದ್ದ ಫೋಟೋಗಳನ್ನು ತೋರಿಸುತ್ತಿದ್ದ ಎಂದು ಸುಧಾತಾಯಿ ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಾರೆ.


ಈಗ ಕಾವೇರಿಯ ಬಗ್ಗೆ ಮಾತನಾಡೋಣ, ಇವಳು ಸ್ಪ್ಯಾನಿಷ್ ಭಾಷೆಯಲ್ಲಿ ಶುಭಾಶಯ ಕೋರಿ ಪೋಷಕರನ್ನು ಅಚ್ಚರಿಗೊಳಿಸಿದಳು. ಈ ಐದು ವರ್ಷದ ಬಾಲಕಿ ಕಾವೇರಿಯ ದತ್ತು ಸ್ವೀಕಾರದ ಪ್ರಕ್ರಿಯೆ ಪೂರ್ಣವಾಗುವವರೆಗೆ ಎರಡು ತಿಂಗಳ ಕಾಲ ಸ್ಪ್ಯಾನಿಷ್ ಭಾಷೆಯನ್ನು ಕಲಿಸಲಾಗುತ್ತಿತ್ತು. ಹಿಂದಿನ ಪುಟಗಳನ್ನು ತಿರುವಿದಾಗ; ಎರಡು ದಿನಗಳ ಅವಿನಾಶ್'ನ್ನು ಆ ರಾತ್ರಿ ಹಮೀದಿಯಾ ಆಸ್ಪತ್ರೆಯ ಕಸದ ಬುಟ್ಟಿಯಿಂದ ಇಲ್ಲಿಗೆ ತಂದಾಗ, ಈ ಪ್ರಿಮೆಚೂರ್ ಮಗುವಿನ ಜೀವವನ್ನು ಉಳಿಸಲು ವಹಿಸಿದ ಜಾಗ್ರತೆ ಮಾತೃಛಾಯಾ ಸಂಸ್ಥೆಯ ನಿರ್ವಹಣೆ ಮಾಡುತ್ತಿರುವವರಿಗೆ ಇನ್ನೂ ನೆನಪಿದೆ. ಮಧ್ಯಪ್ರದೇಶದ ಮೊದಲ ಲೀಗಲ್ ಎಡಾಪ್ಶನ್ ಸೆಂಟರ್ ಆಗಿರುವ ಮಾತೃಛಾಯಾ ಇದೊಂದು ಮಗುವಿನ ಮನೆ, ಮಾತ್ರವಲ್ಲ, ಹಿಂದೂ ಸಂಸ್ಕೃತಿಯ ಪ್ರಕಾರ ಮಗುವಿನ ಎಲ್ಲಾ ಸಂಸ್ಕಾರಗಳನ್ನೂ ನೆರವೇರಿಸಲಾಗುತ್ತದೆ. ಮಕ್ಕಳ ಅನ್ನಪ್ರಾಶನದಿಂದ ಹಿಡಿದು ಕಿವಿ ಚುಚ್ಚುವ ಮತ್ತು ನಾಮಕರಣ ಮಾಡುವ ಎಲ್ಲಾ ಆಚರಣೆಗಳನ್ನು ಇಲ್ಲಿ ಅದ್ಧೂರಿಯಿಂದ ಆಚರಿಸಲಾಗುತ್ತದೆ. ಭದ್ರತೆಯ ದೃಷ್ಟಿಯಿಂದ ಕ್ಯಾಂಪಸ್‌ನಲ್ಲಿ ಎಲ್ಲೆಡೆ ಸಿಸಿ ಟಿವಿ ಕ್ಯಾಮೆರಾಗಳಿವೆ.


ಮಕ್ಕಳ ಎಲ್ಲಾ ಅವಶ್ಯಕತೆಗಳನ್ನು ಸಂಪೂರ್ಣವಾಗಿ ನೋಡಿಕೊಳ್ಳಲಾಗುತ್ತದೆ ಎಂದು ಮಾತೃಛಾಯಾ ಸಮಿತಿಯ ಉಪಾಧ್ಯಕ್ಷೆ ಮತ್ತು ಸೇವಾ ಭಾರತಿಯ ರಾಷ್ಟ್ರೀಯ ಉಪಾಧ್ಯಕ್ಷೆ ಅಮಿತಾ ಜೈನ್ ಹೇಳುತ್ತಾರೆ. ಚಿಕ್ಕ ಮಕ್ಕಳಿಗೆ ನಿಯಮಿತವಾಗಿ ಮಸಾಜ್ ಮಾಡಲಾಗುತ್ತದೆ ಮತ್ತು ಸರಿಯಾದ ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ, ಹಿರಿಯ ಮಕ್ಕಳಿಗೆ ಶಾಲೆಯ ನಂತರ ಕಲಿಸಲು ಶಿಕ್ಷಕರನ್ನಿಡಲಾಗಿದೆ. ಸಂಜೆ ಹೊತ್ತಿನಲ್ಲಿ ಅವರಿಗೆ ಚಿತ್ರಕಲೆ, ಕಾರ್ಡ್ ಡ್ರಾಯಿಂಗ್, ಕಾರ್ಡ್ ಮೇಕಿಂಗ್ ಮತ್ತು ಕೆಲವೊಮ್ಮೆ ಸಂಗೀತವನ್ನು ಸಹ ಕಲಿಸಲಾಗುತ್ತದೆ. ಇಲ್ಲಿಗೆ ಬರುವ ಅಂಗವಿಕಲ ಮಕ್ಕಳ ಪ್ರತಿಯೊಂದು ಅಗತ್ಯವನ್ನೂ ಪೂರೈಸಲಾಗುತ್ತಿದೆ. ಸೇವಾ ಭಾರತಿ ಕುಟುಂಬದವರು ಪ್ರತಿ ಹಬ್ಬವನ್ನು ಮಕ್ಕಳೊಂದಿಗೆ ಆಚರಿಸಲು ಮಾತೃಛಾಯಾ ಅಂಗಳಕ್ಕೆ ಆಗಮಿಸುತ್ತಾರೆ.

ತಿಂಗಳಿಗೊಮ್ಮೆ ಮಕ್ಕಳನ್ನು ನಗರದ ಎಲ್ಲೆಡೆ, ಕೆಲವೊಮ್ಮೆ ಮೃಗಾಲಯ, ಕೆಲವೊಮ್ಮೆ ವಸ್ತುಸಂಗ್ರಹಾಲಯ, ಕೆಲವೊಮ್ಮೆ ಶಾಪಿಂಗ್ ಮಾಲ್‌ನಲ್ಲಿ ತಿರುಗಾಡಿಸಲಾಗುತ್ತದೆ. ಇಲ್ಲಿಂದ ಮಕ್ಕಳು ಹೊರಟುಹೋದ ನಂತರವೂ ಪ್ರತಿ ಮಗುವಿನ ಅನುವರ್ತೀ ಕಾರ್ಯವನ್ನು (ಫಾಲೋ ಅಪ್ ವರ್ಕ್) ಸಮಿತಿಯ ಪದಾಧಿಕಾರಿಗಳು ಮಾಡುತ್ತಾರೆ. ಖಾಲಿ ಇದ್ದ ಕೆಲವರ ಮನೆ ಮನಗಳು ಈಗ ಮಕ್ಕಳ ಕಲರವದಿಂದ ಪ್ರತಿಧ್ವನಿಸುತ್ತಿರುವಾಗ ಎಲ್ಲಾ ಪೋಷಕರು ಇಂದಿಗೂ ಮಾತೃಛಾಯಾದೊಂದಿಗೆ ಅವರ ಸ್ವಂತ ಕುಟುಂಬ ಎಂಬ ರೀತಿಯಲ್ಲಿ ಜೋಡಿಕೊಂಡಿದ್ದಾರೆ. ಅವರು ಮಕ್ಕಳ ಪ್ರತಿಯೊಂದು ಯಶಸ್ಸನ್ನು ಇಲ್ಲಿಯ ನಿರ್ವಹಣಾಧಿಕಾರಿಗಳೊಂದಿಗೆ ಹಂಚಿಕೊಳ್ಳುತ್ತಾರೆ.

ಇಲ್ಲಿ ಹೊರಗೆ ಇಟ್ಟಿರುವ ತೊಟ್ಟಿಲಲ್ಲಿ ಪ್ರತಿ ಮಗುವಿಗೆ ಸ್ವಾಗತವಿದೆ, ಆದರೂ ಕೆಲವರು ಮಕ್ಕಳನ್ನು ಯಾಕೋ ಏನೋ ಆವರಣದಲ್ಲಿರುವ ಪೊದೆಗಳಲ್ಲಿ, ಕೆಲವೊಮ್ಮೆ ಚೀಲದಲ್ಲಿ ಬಿಡುತ್ತಾರೆ. ಇದರಿಂದಾಗಿ ಕೆಲವೊಮ್ಮೆ ಮಗುವಿನ ಜೀವವನ್ನು ಉಳಿಸುವುದು ಕಷ್ಟವಾಗುತ್ತದೆ. ಮಾತೃಛಾಯಾ ಪರಿವಾರದ ಈ ಪ್ರಶ್ನೆಗಳು ಸಮಾಜದಲ್ಲಿ ಬಹಳ ದೊಡ್ಡ ವಿಚಿತ್ರ ಸಂಗತಿ.

1111 Views
अगली कहानी